ಮಲೆನಾಡಿನ ಹಳ್ಳಿಗಳಲ್ಲಿ ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಕಂಡುಬರುವ ಪಪ್ಪಾಯ ಹಣ್ಣಿನ ಉಪಯೋಗ ಹೆಚ್ಚಿನ ಜನರಿಗೆ ತಿಳಿದಿಲ್ಲ. ಪಪ್ಪಾಯ ಹಣ್ಣನ್ನು ಸೇವಿಸುವುದರಿಂದ ಆಗುವ ಪ್ರಯೋಜನಗಳನ್ನು ಈ ಲೇಖನದ ಮೂಲಕ ತಿಳಿಯೋಣ.
ಕಡಿಮೆ ಬೆಲೆಗೆ ಸಿಗುವ ಪಪ್ಪಾಯ ಹಣ್ಣು ಹೆಚ್ಚು ಪೌಷ್ಟಿಕಾಂಶವನ್ನು ಹೊಂದಿದೆ. ಈ ಹಣ್ಣು ಮಲಬದ್ಧತೆಯನ್ನು ಕಡಿಮೆ ಮಾಡುತ್ತದೆ. 6-7 ಪಪ್ಪಾಯ ಬೀಜಗಳನ್ನು ಒಂದು ವಾರ ತಿಂದರೆ ಹೊಟ್ಟೆಯಲ್ಲಿರುವ ಹುಳುಗಳನ್ನು ಕಡಿಮೆ ಮಾಡುತ್ತದೆ. ಪಪ್ಪಾಯ ಹೀಟ್ ಎಂಬ ಪರಿಕಲ್ಪನೆ ಇದೆ ಆದರೆ ಅದು ಸುಳ್ಳು ಪ್ರತಿದಿನ ಒಂದು ಬೌಲ್ ಪಪ್ಪಾಯ ಹಣ್ಣು ತಿಂದರೆ ಹೀಟ್ ಆಗುವುದಿಲ್ಲ ಕಾಯಿ ತಿನ್ನಬಾರದು ಹಣ್ಣನ್ನು ತಿನ್ನಬೇಕು. ಎಲ್ಲ ಕಾಲದಲ್ಲಿ ಸಿಗುವ ಹಣ್ಣು ಇದಾಗಿದೆ. ಈ ಹಣ್ಣಿನಲ್ಲಿ ನಾರಿನ ಅಂಶ ಇರುವುದರಿಂದ ಇದು ಜೀರ್ಣ ಶಕ್ತಿಯನ್ನು ಹೆಚ್ಚಿಸುತ್ತದೆ. ಈ ಹಣ್ಣಿನಲ್ಲಿ ಅಧಿಕ ಪ್ರಮಾಣದಲ್ಲಿ ಕೆರೋಟಿನೈಡ್ ಇದ್ದು ಹೃದಯ ರೋಗ ಮತ್ತು ಕ್ಯಾನ್ಸರ್ ವಿರುದ್ಧ ಹೋರಾಡುತ್ತದೆ. ಈ ಹಣ್ಣಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಿಟಮಿನ್ ಎ, ಸಿ.ಇ ಇದೆ.
ಪ್ರೋಟಿನ್, ಕ್ಯಾಲ್ಶಿಯಂ, ರಂಜಕ ಈ ಎಲ್ಲ ಅಂಶಗಳನ್ನು ಈ ಪಪ್ಪಾಯ ಒಳಗೊಂಡಿದೆ. ಈ ಹಣ್ಣು ಜಠರದಲ್ಲಿ ಉಂಟಾಗುವ ಅಲ್ಸರ್ ನಿವಾರಣೆ ಮಾಡಲು ಸಹಾಯಕವಾಗಿದೆ. ಈ ಹಣ್ಣನ್ನು ತಿನ್ನುವುದರಿಂದ ಶುಗರ್ ಹೆಚ್ಚಾಗುವುದಿಲ್ಲ ಕಾರಣ ಇದರಲ್ಲಿ ಕಡಿಮೆ ಪ್ರಮಾಣದಲ್ಲಿ ಸಕ್ಕರೆ ಅಂಶವಿದೆ. ಪಪ್ಪಾಯಿ ಎಲೆಯ ರಸ ಡೆಂಗ್ಯೂವನ್ನು ನಿಯಂತ್ರಿಸಲು ಸಹಾಯಕವಾಗಿದೆ. ಮಕ್ಕಳಿಂದ ಹಿಡಿದು ವೃದ್ದರವರೆಗೆ ಈ ಹಣ್ಣನ್ನು ತಿನ್ನಬಹುದು ಯಾವುದೇ ಅಡ್ಡ ಪರಿಣಾಮ ಇಲ್ಲ. ಪಪ್ಪಾಯ ತಿನ್ನುವುದರಿಂದ ಆರೋಗ್ಯ ವೃದ್ದಿಸಿಕೊಳ್ಳಬಹುದಾಗಿದೆ. ಒಟ್ಟಿನಲ್ಲಿ ಎಲ್ಲರೂ ತಿನ್ನಬಹುದಾದ ರುಚಿಯಾದ, ಆರೋಗ್ಯಕರವಾದ ಹಣ್ಣು ಪಪ್ಪಾಯ. ಈ ಮಾಹಿತಿಯನ್ನು ಎಲ್ಲರಿಗೂ ತಪ್ಪದೆ ತಿಳಿಸಿ ಆರೋಗ್ಯವನ್ನು ವೃದ್ಧಿಸಿಕೊಳ್ಳಿ.