ನಮ್ಮ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು ಆಹಾರ ಪದಾರ್ಥಗಳಲ್ಲಿ ಇರುತ್ತವೆ. ಅವುಗಳನ್ನು ದಿನವೂ ತಿನ್ನಬೇಕಾಗುತ್ತದೆ. ಇಲ್ಲದಿದ್ದರೆ ಪೋಷಕಾಂಶಗಳು ನಮ್ಮ ದೇಹಕ್ಕೆ ಸೇರುವುದಿಲ್ಲ. ಹಾಗಾಗಿ ನಾವು ಇಲ್ಲಿ ದಿನವೂ ಏನನ್ನು ತಿನ್ನಬೇಕು ಎನ್ನುವುದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ದಿನಾಲೂ ಒಂದು ಮೊಟ್ಟೆಯನ್ನು ತಿನ್ನಬೇಕು. ಯಾರು ಮೊಟ್ಟೆ ತಿನ್ನುವುದಿಲ್ಲವೋ ಅವರು ಅಗಸೆ ಬೀಜವನ್ನು ತಿಂದು ಮೊಟ್ಟೆಯ ಪೋಷಕಾಂಶಗಳನ್ನು ಪಡೆದುಕೊಳ್ಳಬಹುದು. ಮೊಟ್ಟೆಯನ್ನು ತಿನ್ನುವುದರಿಂದ ಪ್ರೊಟೀನ್, ಕಬ್ಬಿಣ ಮತ್ತು ವಿವಿಧ ರೀತಿಯ ವಿಟಮಿನ್ಸ್ ಗಳು ಸಿಗುತ್ತವೆ. ಇದು ರಕ್ತಹೀನತೆ ಬರದಂತೆ ನೋಡಿಕೊಳ್ಳುತ್ತದೆ. ಸ್ನಾಯುಗಳು ಗಟ್ಟಿಯಾಗುವಂತೆ ಮಾಡುತ್ತದೆ. ಹಾಗೆಯೇ ದಿನವೂ ತಿನ್ನುವ ಆಹಾರಪದಾರ್ಥಗಳಲ್ಲಿ ಹಸಿರು ತರಕಾರಿಗಳನ್ನು ಸೇರಿಸಿಕೊಳ್ಳಬೇಕು. ಆದಷ್ಟು ಮಧ್ಯಾಹ್ನದ ಊಟದಲ್ಲಿ ಹಸಿರುಪಲ್ಯಗಳನ್ನು ಸೇವಿಸಬೇಕು.
ಪಾಲಕ್ ಸೊಪ್ಪು, ಬೀನ್ಸ್, ಮೂಲಂಗಿ ಸೊಪ್ಪುಗಳನ್ನು ಇನ್ನು ಮುಂತಾದವುಗಳನ್ನು ತಿನ್ನಬೇಕು. ಇದರಿಂದ ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯಕವಾಗುತ್ತದೆ. ಕಣ್ಣಿನ ಆರೋಗ್ಯಕ್ಕೆ ಸೊಪ್ಪುಗಳು ಬಹಳ ಒಳ್ಳೆಯದು. ದೇಹದಲ್ಲಿ ಇರುವ ವಿಷಕಾರಿ ಅಂಶಗಳನ್ನು ಇದು ಹೊರಹಾಕುತ್ತದೆ. ಬೇಡವಾದ ಕೊಲೆಸ್ಟ್ರಾಲ್ ಗಳನ್ನು ತೆಗೆದು ಹಾಕುತ್ತದೆ. ದಿನನಿತ್ಯ ಯಾವುದಾದರೂ ಒಂದು ರೀತಿಯ ಹಣ್ಣುಗಳನ್ನು ತಿನ್ನಲೇಬೇಕು. ಅದರಲ್ಲೂ ದಿನಕ್ಕೆ ಎರಡು ಅಥವಾ ಒಂದು ಬಾಳೆಹಣ್ಣನ್ನು ತಿನ್ನಬೇಕು. ಊಟವಾದ ಬಳಿಕ ನೀರನ್ನು ಕುಡಿಯಬಾರದು.
ಹಾಗೆಯೇ ಅದರ ಜೊತೆ ದಿನವೂ ಡ್ರೈ ಫ್ರೂಟ್ಸ್ ಗಳನ್ನು ತಿನ್ನಬೇಕು. ಒಂದು ದಿನ ಬಾದಾಮಿ ತಿಂದರೆ ಇನ್ನೊಂದು ದಿನ ಖರ್ಜೂರವನ್ನು ತಿನ್ನಬೇಕು. ಅದೇ ಇನ್ನೊಂದು ದಿನ ದ್ರಾಕ್ಷಿಯನ್ನು ತಿನ್ನಬೇಕು. ಹಾಗೆಯೇ ಗೋಡಂಬಿ, ಪಿಸ್ತಾ ಇವುಗಳನ್ನು ಸೇರಿಸಿಕೊಳ್ಳಬೇಕು. ಅನಾರೋಗ್ಯಕರ ಫುಡ್ ಗಳನ್ನು ಆದಷ್ಟು ದೂರವಿಡಬೇಕು. ಊಟಾದ ತಕ್ಷಣ ಹಣ್ಣುಗಳನ್ನು ತಿನ್ನಬಾರದು. ಕೆಲವರು ಹೇಳುತ್ತಾರೆ ಊಟಾದ ತಕ್ಷಣ ಹಣ್ಣುಗಳನ್ನು ತಿನ್ನಬೇಕು ಎಂದು. ಆದರೆ ಊಟಾದ ತಕ್ಷಣ ಹಣ್ಣುಗಳನ್ನು ತಿನ್ನುವುದರಿಂದ ಜೀರ್ಣಕ್ರಿಯೆಗೆ ಅಡೆತಡೆ ಉಂಟಾಗುತ್ತದೆ.