ಶೇಂಗಾವನ್ನು ಬಡವರ ಬಾದಾಮಿ ಎಂದು ಕರೆಯಲಾಗುತ್ತದೆ. ಏಕೆಂದರೆ ಇದನ್ನೇ ಬಡವರು ಖರೀದಿವುದು ಬಹಳ ಸುಲಭ. ನಿಜವಾದ ಬಾದಾಮಿಯನ್ನು ಬಡವರು ಖರೀದಿ ಮಾಡುವುದು ಬಹಳ ಕಷ್ಟ ಎಂದು ಹೇಳಬಹುದು. ಹಾಗೆಯೇ ಶೇಂಗಾವನ್ನು ತಿನ್ನುವುದರಿಂದ ಆರೋಗ್ಯಕ್ಕೆ ಬಹಳ ಒಳ್ಳೆಯದು. ಕೆಲವರು ಇದು ಆರೋಗ್ಯಕ್ಕೆ ಹಾನಿಕರ ಎಂದು ತಿಳಿದುಕೊಂಡಿರುತ್ತಾರೆ. ಆದ್ದರಿಂದ ನಾವು ಇಲ್ಲಿ ಶೇಂಗಾದ ಪ್ರಯೋಜನಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಶೇಂಗಾದಲ್ಲಿ ಕಾಪರ್, ಮ್ಯಾಂಗನೀಸ್, ವಿಟಮಿನ್ ಇ, ವಿಟಮಿನ್ ಬಿ1 ಇನ್ನು ಹಲವಾರು ರೀತಿಯ ಅಂಶಗಳನ್ನು ಇದು ಹೊಂದಿದೆ. ಅಕ್ಕಿ ಮತ್ತು ಗೋಧಿಗಳಲ್ಲಿ ಒಂದು ಶೇಕಡಾದಷ್ಟು ಪ್ರೋಟೀನ್ ಸಿಗುತ್ತದೆ. ಆದರೆ ಶೇಂಗಾದಲ್ಲಿ ಹತ್ತು ಶೇಕಡಾದಷ್ಟು ಪ್ರೋಟಿನ್ ಸಿಗುತ್ತದೆ. ಇದನ್ನು ತಿನ್ನುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಹಾಗೆಯೇ ಅದೇ ರೀತಿ ಹೃದಯದ ತೊಂದರೆಗಳಿದ್ದರೂ ನಿವಾರಣೆಯಾಗುತ್ತದೆ. ಹೃದಯದ ತೊಂದರೆಗಳು ಬರದಂತೆ ಕೂಡ ಇದು ನೋಡಿಕೊಳ್ಳುತ್ತದೆ.
ಇದು ಒಳ್ಳೆಯ ಕೊಲೆಸ್ಟ್ರಾಲ್ ಗಳನ್ನು ಹೆಚ್ಚು ಮಾಡುತ್ತದೆ. ಹಾಗೆಯೇ ಕೆಟ್ಟ ಕೊಲೆಸ್ಟ್ರಾಲ್ ಗಳನ್ನು ಕಡಿಮೆ ಮಾಡುತ್ತದೆ. ಹಾಗೆಯೇ ಉಳಿದ ಡ್ರೈ ಫ್ರೂಟ್ಸ್ ಗಳಿಗಿಂತ ಇದೆ ಇದು ಸಹ ಪರಿಣಾಮಕಾರಿ. ಬಾದಾಮಿ ಎಷ್ಟು ಪ್ರಯೋಜನಗಳನ್ನು ನೀಡುತ್ತದೆಯೋ ಅಷ್ಟೇ ಪ್ರಯೋಜನಗಳನ್ನು ಶೇಂಗಾ ಸಹ ನೀಡುತ್ತದೆ. ದೇಹದಲ್ಲಿ ಕಾರ್ಬೋಹೈಡ್ರೇಟ್ ಗಳನ್ನು ಹೆಚ್ಚು ಮಾಡಿಕೊಳ್ಳಬೇಕು ಎಂದಾದರೆ ಬಾದಾಮಿ, ಗೋಡಂಬಿ ಮತ್ತು ಶೇಂಗಾವನ್ನು ತಿನ್ನಬೇಕು.
ಹಾಗೆಯೇ ಇದನ್ನು ತಿನ್ನುವುದರಿಂದ ದೇಹದ ತೂಕವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು. ಹಾಗೆಯೇ ಇದನ್ನು ದಿನಕ್ಕೆ 30 ರಿಂದ 40 ಗ್ರಾಂಗಳಷ್ಟು ಮಾತ್ರ ತಿನ್ನಬೇಕು. ಇದನ್ನು ಅತಿಹೆಚ್ಚಾಗಿ ಸಹ ತಿನ್ನಬಾರದು. ದಿನವೂ ಒಂದೇ ರೀತಿಯಾಗಿ ತಿನ್ನಬಾರದು. ಒಂದು ದಿನ ಬೇಯಿಸಿಕೊಂಡು ತಿನ್ನಬೇಕು. ಒಂದು ದಿನ ಹಸಿಯಾಗಿ ತಿನ್ನಬೇಕು. ಹಾಗೆ ಇನ್ನೊಂದು ದಿನ ಹುರಿದುಕೊಂಡು ತಿನ್ನಬೇಕು. ಹಾಗೆಯೇ ಎಣ್ಣೆಯಲ್ಲಿ ಕರಿದು ಇದನ್ನು ತಿನ್ನಬಾರದು. ಏಕೆಂದರೆ ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ಇದನ್ನು ದಿನನಿತ್ಯ ತಿಂದು ಪ್ರಯೋಜನ ಪಡೆದುಕೊಳ್ಳಿ.