ಕಡಲೆ ಬೀಜ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ ಕಡಲೆ ಬೀಜವನ್ನು ಬಡವರ ಬಾದಾಮಿ ಎಂದೇ ಕರೆಯಲಾಗುತ್ತದೆ. ನಮ್ಮ ಹಿರಿಯರು ಕಡಲೆ ಬೀಜವನ್ನು ಸುಮ್ಮನೆ ಬಡವರ ಬಾದಾಮಿ ಎಂದು ಹೇಳಲಿಲ್ಲ. ಕಡಲೆ ಬೀಜದಲ್ಲಿ ಬಾದಾಮಿಯಲ್ಲಿ ಇರುವಷ್ಟೇ ಪೋಷಕಾಂಶಗಳು ಹಾಗೂ ಬಾದಾಮಿಯಲ್ಲಿ ಇರುವುದಕ್ಕೂ ಹೆಚ್ಚು ಶಕ್ತಿಯನ್ನು ಕಡಲೇ ಬೀಜ ನಮ್ಮ ದೇಹಕ್ಕೆ ನೀಡುತ್ತದೆ. ಆದರೆ ಇದನ್ನು ಸರಿಯಾದ ಪ್ರಮಾಣದಲ್ಲಿ ತೆಗೆದುಕೊಂಡರೆ ಮಾತ್ರ ನಾವು ಇದರ ಸಂಪೂರ್ಣ ಲಾಭವನ್ನು ಪಡೆದುಕೊಳ್ಳಬಹುದು. ಈ ಲೇಖನದಲ್ಲಿ ನಾವು ಕಡಲೆಬೀಜವನ್ನು ತಿನ್ನೋದಕ್ಕೂ ಮೊದಲು ಏನೆಲ್ಲಾ ಆಗುತ್ತದೆ ಎನ್ನುವುದನ್ನು ತಿಳಿದುಕೊಳ್ಳೋಣ.

ಬಲಹೀನತೆ ಮತ್ತು ಮತ್ತು ಕೆಲವು ರೋಗಗಳ ನಿವಾರಣೆಗಾಗಿ ಬಾದಾಮಿ ಹಾಗೂ ಮಾಂಸದ ಸೇವನೆ ಮಾಡಿ ಎಂದು ಅನೇಕರು ತಿಳಿಸುತ್ತಾರೆ. ಆದರೆ ಈ ಕಡಲೆ ಬೀಜವನ್ನು ನಾವು ಸರಿಯಾದ ರೀತಿಯಲ್ಲಿ ಸರಿಯಾದ ಪ್ರಮಾಣದಲ್ಲಿ ಸೇವನೆ ಮಾಡಿದರೆ ಇದು ಮಾಂಸ ಹಾಗೂ ಬಾದಾಮಿ ಗಿಂತಲೂ ಹೆಚ್ಚಿನ ಲಾಭವನ್ನು ನಮ್ಮ ದೇಹಕ್ಕೆ ನೀಡುತ್ತದೆ. ಮಾಂಸಗಳಲ್ಲಿ ಹತ್ತು ಪರ್ಸೆಂಟ್ ಪ್ರೋಟಿನ್ ಇದ್ದರೆ ಕಡಲೇಬೀಜದ 25 ಪರ್ಸೆಂಟ್ ಪ್ರೋಟಿನ್ ಇರುತ್ತದೆ. ನಮ್ಮ ದೇಹಕ್ಕೆ ಸಾಕಷ್ಟು ರೀತಿಯಲ್ಲಿ ಪ್ರಯೋಜನಕಾರಿ ಆಗಿರುವ ಕಡಲೆ ಬೀಜವನ್ನು ಹೇಗೆ ಸೇವಿಸಬೇಕು ಯಾವಾಗ ಸೇವಿಸಬೇಕು? ಯಾವ್ಯಾವ ರೀತಿ ಕಡಲೇ ಬೀಜವನ್ನು ಸೇರಿಸಬೇಕು ಅಂತ ನೋಡುವುದಾದರೆ, ದೇಹಕ್ಕೆ ಸಂಪೂರ್ಣ ಲಾಭ ಸಿಗಬೇಕು ಅಂತ ಇದ್ದಲ್ಲಿ ಕಡಲೆ ಬೀಜವನ್ನು ಈ ರೀತಿಯಾಗಿ ಸೇವಿಸಬೇಕಾಗುತ್ತದೆ. ರಾತ್ರಿ ಮಲಗುವ ಮುನ್ನ ಒಂದು ಬೌಲಿನಲ್ಲಿ ಒಂದು ಹಿಡಿ ಕಡಲೇಬೀಜವನ್ನು ಹಾಕಿ ನೀರು ಹಾಕಿ ನೆನೆಸಿಟ್ಟು ಬೆಳಿಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ಒಂದು ಚೂರು ಬೆಲ್ಲದ ಜೊತೆಗೆ ಕಡಲೆ ಬೀಜವನ್ನು ಸೇವಿಸಬೇಕು. ಹೀಗೆ ಬೆಲ್ಲದ ಜೊತೆ ಕಡಲೆ ಬೀಜವನ್ನು ಸೇವಿಸುವುದರಿಂದ ಹೆಚ್ಚಿನ ಲಾಭವನ್ನು ಪಡೆಯಬಹುದು ಹಾಗೂ ಸ್ವಲ್ಪ ದಿನದಲ್ಲೇ ಪರಿಣಾಮವನ್ನು ಕೂಡ ಕಾಣಬಹುದು. ನಮ್ಮ ದೇಹಕ್ಕೆ ಪ್ರಯೋಜನಕಾರಿ ಆಗಬೇಕು ಅಂದರೆ ಹಸಿ ಕಡಲೆ ಬೀಜವನ್ನು ನೆನೆಸಿ ಸೇವಿಸುವುದು ಒಳ್ಳೆಯದು.

ನೆನೆಸಿಟ್ಟ ಕಡಲೆಯ ಬೀಜವನ್ನು ಪ್ರತಿನಿತ್ಯ ಸೇವಿಸುವುದರಿಂದ ನಮ್ಮ ದೇಹಕ್ಕೆ ಆಗುವ ಲಾಭಗಳು ಏನು ಅಂತ ನೋಡೋಣ.. ರಾತ್ರಿಯಲ್ಲಿ ನೆನೆಸಿದ ಕಡಲೆ ಬೀಜವನ್ನು ಬೆಳಗ್ಗೆ ತಿನ್ನುವುದರಿಂದ ಆಸಿಡಿಟಿ ಹಾಗೂ ಗ್ಯಾಸ್ಟ್ರಿಕ್ ಸಮಸ್ಯೆ ಕಡಿಮೆಯಾಗುತ್ತದೆ. ಶ್ವಾಸಕೋಶದ ಸಮಸ್ಯೆ ಇದ್ದರೆ ಅದು ಕೂಡ ದೂರವಾಗುತ್ತದೆ. ಅಥವಾ ಯಾರಿಗಾದರೂ ಉಸಿರಾಟದ ಸಮಸ್ಯೆ ಇದ್ದಲ್ಲಿ ಅಥವಾ ಧೂಮಪಾನ ಮಾಡುವ ಅಭ್ಯಾಸವಿದ್ದರೆ ಪ್ರತಿನಿತ್ಯ ನೆನೆಸಿಟ್ಟ ಕಡಲೇ ಬೀಜವನ್ನು ತಿನ್ನುವುದರಿಂದ ಶ್ವಾಸಕೋಶ ವನ್ನು ಆರೋಗ್ಯವಾಗಿಟ್ಟು ಕೊಳ್ಳಬಹುದು. ಇನ್ನು ಕೆಲವರಿಗೆ ಹಸಿವೆಯೇ ಆಗುವುದಿಲ್ಲ ಅಂತಹವರು ಬೆಳಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ನೆನೆಸಿಟ್ಟ ಕಡಲೇ ಬೀಜವನ್ನು ತಿನ್ನುವುದರಿಂದ ಬಹಳಷ್ಟು ಹಸಿವಾಗುತ್ತದೆ. ಕೂದಲ ಹಾಗೂ ಮುಖದ ಸೌಂದರ್ಯಕ್ಕೆ ಕೂಡ ನೆನೆಸಿಟ್ಟ ಕಡಲೆಬೀಜ ತುಂಬಾ ಒಳ್ಳೆಯದು ಎನ್ನಬಹುದು. ಕಡಲೆಬೀಜ ದಲ್ಲಿ ಒಮೆಗಾ6 ಫ್ಯಾಟಿ ಆಸಿಡ್ ಇರುವುದರಿಂದ ಇದು ಯಾವುದೇ ಸಮಯದಲ್ಲಿ ಆದರೂ ಸೇವಿಸುವುದರಿಂದ ಮುಖದಲ್ಲಿ ಒಳ್ಳೆಯ ಹೊಳಪು ಬರುತ್ತದೆ ಹಾಗು ಮುಖದಲ್ಲಿರುವ ನೆರಿಗೆಗಳು ಕೂಡ ಕಡಿಮೆಯಾಗುತ್ತದೆ. ಕಡಲೆ ಬೀಜವನ್ನು ಸೇವಿಸುವುದರಿಂದ ಹೃದಯ ಸಂಬಂಧಿ ಕಾಯಿಲೆಗಳು ಕೂಡ ಕಡಿಮೆಯಾಗುತ್ತದೆ. ಕಡಲೆಬೀಜ ದಲ್ಲಿ ಹೇರಳವಾದ ಕ್ಯಾಲ್ಸಿಯಂ ಹಾಗೂ ವಿಟಮಿನ್ ಡಿ ಇರುವುದರಿಂದ ಇದು ಮೂಳೆಗಳ ಆರೋಗ್ಯದ ದೃಷ್ಟಿಯಿಂದಲೂ ಕೂಡ ಒಳ್ಳೆಯದು. ಕಡಲೆ ಬೀಜವನ್ನು ವಯಸ್ಸಾದರೂ ಸೇವಿಸುವುದರಿಂದ ಮೂಳೆಗಳ ನೋವು ಕಾಣಿಸಿಕೊಳ್ಳುವುದಿಲ್ಲ. ನೆನೆಸಿಟ್ಟ ಕಡಲೆ ಬೀಜಗಳನ್ನು ಸೇವಿಸುವುದರಿಂದ ಇನ್ನೂ ಹತ್ತು ಹಲವಾರು ಲಾಭಗಳು ನಮ್ಮ ದೇಹಕ್ಕೆ ಸಿಗುತ್ತದೆ. ಈ ರೀತಿಯಾಗಿ ನಾವು ನೆನೆಸಿಟ್ಟ ಕಡಲೇಬೀಜವನ್ನು ಪ್ರತಿನಿತ್ಯ ಬೆಳಗ್ಗೆ ಕಾಳಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಹಲವಾರು ಆರಂಭಿಕರ ಲಾಭಗಳನ್ನು ನಾವು ಪಡೆದುಕೊಳ್ಳಬಹುದು ಹಾಗೂ ಚಿಕ್ಕ ಮಕ್ಕಳು ಕೂಡ ನೀಡಬಹುದು.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!