ಬೆಳ್ಳುಳ್ಳಿ ಒಂದು ಸಹಜ ಸಿದ್ಧವಾದ ಔಷಧೀಯ ಪದಾರ್ಥ. ಇದು ನಮ್ಮ ದೇಹಕ್ಕೆ ಹೆಚ್ಚಿನ ಉಪಕಾರವನ್ನು ಮಾಡುತ್ತದೆ. ನಮ್ಮ ಶರೀರದಲ್ಲಿ ಯಾವುದೇ ಬಗೆಯ ತೊಂದರೆಗಳು ಅಥವಾ ಸಮಸ್ಯೆಗಳು ಇರಲೀ , ಯಾವುದೇ ರೀತಿಯ ಮೈ ಕೈ ನೋವು ಇರಲಿ, ನಾವು ಒಂದೇ ಒಂದು ಎಸಳು ಬೆಳ್ಳುಳ್ಳಿಯನ್ನು ತಿನ್ನುವ ಮೂಲಕ ಈ ಎಲ್ಲಾ ಸಮಸ್ಯೆಗಳನ್ನೂ ನಿವಾರಿಸಿಕೊಳ್ಳಬಹುದು. ಬೆಳ್ಳುಳ್ಳಿ ಕೇವಲ ನಮ್ಮ ಆಹಾರದಲ್ಲಿ ರುಚಿ ಮತ್ತು ಸುವಾಸನೆ ಹೆಚ್ಚಿಸುವುದು ಮಾತ್ರ ಅಲ್ಲದೇ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಬೆಳ್ಳುಳ್ಳಿಯ ಸೇವನೆಯಿಂದ ನಮಗೆ ಆಗುವ ಕೆಲವು ಪ್ರಯೋಜನಗಳ ಬಗ್ಗೆ ಇಲ್ಲಿ ತಿಳಿದುಕೊಳ್ಳೋಣ.
ಕೆಲವರಿಗೆ ಕಿವಿಯಲ್ಲಿ ಸೋರುವುದರಿಂದ ದುರ್ಗಂಧ ಬರುತ್ತದೆ. ಇದರಿಂದ ಅತಿಯಾಗಿ ಕಿವಿನೋವು ಕೂಡಾ ಬರುತ್ತದೆ. ಈ ರೀತಿ ಆದಾಗ ಒಂದು ಬೆಳ್ಳುಳ್ಳಿ ಎಸಳನ್ನು ಕಿವಿಯಲ್ಲಿ ಇಟ್ಟುಕೊಳ್ಳುವುದರಿಂದ ದುರ್ಗಂಧ ಮತ್ತು ನೋವನ್ನು ಕಡಿಮೆ ಮಾಡಿಕೊಳ್ಳಬಹುದು. ಅಷ್ಟೇ ಅಲ್ಲದೆ ಮೈ ಕೈ ನೋವು ಇರುವವರೂ ಕೂಡಾ ಕಿವಿಯಲ್ಲಿ ಒಂದು ಬೆಳ್ಳುಳ್ಳಿ ಎಸಳನ್ನು ಇಟ್ಟುಕೊಳ್ಳುವುದರಿಂದ ಮೈ ಕೈ ನೋವು ಕೂಡಾ ಕಡಿಮೆ ಆಗುವುದು. ಈ ರೀತಿ ಕಿವಿಯಲ್ಲಿ ಬೆಳ್ಳುಳ್ಳಿ ಇಟ್ಟುಕೊಳ್ಳುವುದರಿಂದ ದೇಹದ ಒಳಗೆ ಶಾಕ ಉತ್ಪತ್ತಿ ಆಗಿ ಮೈ ಕೈ ನೋವು, ಕಿವಿ ನೋವು ಕಡಿಮೆ ಆಗುವುದು. ಕೆಮ್ಮಿನಿಂದ ಬಳಲುತ್ತಾ ಇರುವವರು ಬೆಳ್ಳುಳ್ಳಿ ಎಸಳನ್ನು ಜಜ್ಜಿ ಅದಕ್ಕೆ ಜೇನುತುಪ್ಪ ಬೆರೆಸಿ ಎರಡು ಗಂಟೆಗೆ ಒಮ್ಮೆ ಸೇವಿಸುವುದರಿಂದ ಕೆಮ್ಮು ಕಡಿಮೆ ಆಗುವುದು.
ರಕ್ತ ಸಂಚಾರ ಸರಿಯಾಗಿ ಆಗಲೂ ಹಾಗೂ ದೇಹದ ಕೊಬ್ಬು ಇಳಿಸಲು ಕೂಡಾ ಬೆಳ್ಳುಳ್ಳಿ ಸಹಾಯಕಾರಿ ಆಗಿದೆ. ಹೃದಯ ಸಂಬಂಧಿತ ಕಾಯಿಲೆಗಳು ಹಾಗೂ ಹೃದಯ ಸರಿಯಾಗಿ ಕೆಲಸ ಮಾಡಲು ಬೆಳ್ಳುಳ್ಳಿ ಉಪಯೋಗ ಆಗುವುದು. ಪ್ರತೀ ದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದೆರಡು ಬೆಳ್ಳುಳ್ಳಿ ಸೇವನೆ ಮಾಡುವುದರಿಂದ ಹೃದಯ ಸಂಬಂಧಿತ ಯಾವುದೇ ಕಾಯಿಲೆಗಳೂ ಗುಣವಾಗುವುದು. ಅಷ್ಟೇ ಅಲ್ಲದೇ ಇದರಿಂದ ಅಧಿಕ ರಕ್ತದ ಒತ್ತಡ ಕಡಿಮೆ ಮಾಡಿಕೊಳ್ಳಲು ಸಾಧ್ಯ. ತುರಿಕೆ ಕಜ್ಜಿ ಮುಂತಾದ ಚರ್ಮ ರೋಗಗಳಿಗೆ ಬೆಳ್ಳುಳ್ಳಿ ಉತ್ತಮ ರಾಮ ಬಾಣ ಎನ್ನಬಹುದು. ಬೆಳ್ಳುಳ್ಳಿಯನ್ನು ಜಜ್ಜಿ ಸೋಂಕು ಹರಡಿದ ಜಾಗಕ್ಕೆ ಹಚ್ಚುವುದರಿಂದ ಕ್ರಮೇಣ ಕಡಿಮೆ ಆಗುವುದು. ಕೆಲವು ಅಂಟು ನೋವಿಗೂ ಉತ್ತಮ ಔಷಧ. ಬೆನ್ನು ನೋವು , ಕೀಳು ನೋವು, ಕುತ್ತಿಗೆ ನೋವು ಮುಂತಾದ ನೋವುಗಳಿಗೆ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಬೆಳ್ಳುಳ್ಳಿ ಎಸಳು ಸೇವಿಸುವುದರಿಂದ ನೋವುಗಳು ಕಡಿಮೆ ಆಗುವುದು. ಬೆಳ್ಳುಳ್ಳಿ ಆಂಟಿ ಆಕ್ಸಿಡೆಂಟ್ ಗುಣವನ್ನು ಅತಿಯಾಗಿ ಹೊಂದಿರುವುದರಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಶೀತ ಕೆಮ್ಮು ಬಂದಾಗ ಕೂಡಾ ಬೆಳ್ಳುಳ್ಳಿ ಬಹಾಸುವುದರಿಂದ ಶೀಘ್ರವೇ ಗುಣವಾಗಬಹುದು. ಚರ್ಮದ ಮೇಲೆ ಏನಾದರೂ ಸೊಳ್ಳೆಗಳು ಕಚ್ಚಿದ್ದರೆ ಸಣ್ಣ ಸಣ್ಣ ಗುಳ್ಳೆಗಳು ಆದಾಗ ಅಥವಾ ಗಾಯಗಳು ಆದಾಗ ಬೆಳ್ಳುಳ್ಳಿಯನ್ನು ಜಜ್ಜಿ ಹಚ್ಚುವುದರಿಂದ ತಕ್ಷಣವೇ ಪರಿಣಾಮ ಬೀರುತ್ತದೆ. ಬೆಳ್ಳುಳ್ಳಿಯನ್ನು ಸರಿಯಾದ ರೀತಿಯಲ್ಲಿ ಸರಿಯಾದ ಪ್ರಮಾಣದಲ್ಲಿ ನಾವು ಬಳಕೆ ಮಾಡುವುದರಿಂದ ಇದರಿಂದ ಆಗುವ ಲಾಭಗಳು ಸಾಕಷ್ಟು ಇವೆ. ನಿಮಗೆ ಈ ಆರೋಗ್ಯಕರ ಮಾಹಿತಿ ಇಷ್ಟವಾದಲ್ಲಿ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ ಇದರ ಸದುಪಯೋಗವನ್ನು ಪಡೆದುಕೊಳ್ಳಲಿ ಆರೋಗ್ಯವೇ ಭಾಗ್ಯ ಧನ್ಯವಾದಗಳು.