ಅನ್ನಕ್ಕೆ ಮದ್ದು ಹಾಕುವುದು ಯಾವಾಗ ಅದರಿಂದಾಗುವ ಸಮಸ್ಯೆಗಳೇನು ಹಾಗೂ ಈ ಪದ್ಧತಿಯ ಬಗ್ಗೆ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.
ಸಾಮಾನ್ಯವಾಗಿ ಕೈ ಮದ್ದು ಅಂದರೇನು ಎಂಬುದಾಗಿ ಗ್ರಾಮೀಣ ಪ್ರದೇಶದ ಜನರಿಗೆ ಗೊತ್ತಿರುತ್ತದೆ, ಇದನ್ನು ಹಳ್ಳಿ ಕಡೆ ಬಳಸುವಂತ ಒಂದು ವಿಧಾನವಾಗಿದೆ. ಆದ್ರೆ ಈ ಕೈ ಮದ್ದು ಯಾವುದರಲ್ಲಿ ಹಾಕುತ್ತಾರೆ ಹಾಗೂ ಈ ಕೈ ಮದ್ದು ನಮಗೇನಾದ್ರು ಹಾಕಿದ್ದಾರಾ? ಅನ್ನೋದನ್ನ ಹೇಗೆ ತಿಳಿಯೋದು ಅನ್ನೋದನ್ನ ಮುಂದೆ ನೋಡಿ. ಇನ್ನು ಈ ಕೈ ಮದ್ದು ಏನಾದ್ರು ಊಟದಲ್ಲಿ ಹಾಕಿದ್ರೆ ಆ ವ್ಯಕ್ತಿ ಸರಿಯಾಗಿ ಊಟ ಸೇವನೆ ಮಾಡೋದಿಲ್ಲ ಹಾಗೂ ಅಂತಹ ವ್ಯಕ್ತಿ ಊಟದ ಕಡೆ ಹೆಚ್ಚು ಗಮನ ಹರಿಸೋದಿಲ್ಲ ದೈಹಿಕ ಸಮಸ್ಯೆಗಳು ಕಾಡುತ್ತವೆ.
ಅನ್ನಕ್ಕೆ ಮದ್ದು ಹಾಕುವುದು ಈ ಪದ್ಧತಿಯನ್ನು ಹಳ್ಳಿಗಳಲ್ಲಿ ಅನಾದಿಕಾಲದಿಂದಲೂ ರೂಢಿಸಿಕೊಂಡು ಬಂದಿದ್ದಾರೆ. ಇದು ವೈಜ್ಞಾನಿಕ ಪದ್ಧತಿಯಲ್ಲ ಇದನ್ನು ಸಂಪ್ರದಾಯವೆಂದು ಹಳ್ಳಿಗಳಲ್ಲಿ ಪಾಲಿಸುತ್ತಿದ್ದಾರೆ. ಈ ಮದ್ದನ್ನು ಅಮಾವಾಸ್ಯೆ ಮತ್ತು ಹುಣ್ಣಿಮೆ ದಿನಗಳಲ್ಲಿ ಹಾಕುತ್ತಾರೆ ಆದ್ದರಿಂದ ಹಿರಿಯರು ಅಮಾವಾಸ್ಯೆ ಮತ್ತು ಹುಣಿಮೆ ದಿನದಂದು ಹೊರಗಡೆ ಜಾಸ್ತಿ ಸಮಯ ಇರಬಾರದು, ಊಟ ಮಾಡಬಾರದು ಎಂದು ಹೇಳುತ್ತಾರೆ. ಮದ್ದು ಹಾಕಿದ ಊಟವನ್ನು ಮಾಡಿದ ತಕ್ಷಣ ಪರಿಣಾಮ ತಿಳಿಯುವುದಿಲ್ಲ 3 ತಿಂಗಳ ನಂತರ ಹಸಿವಾಗದಿರುವುದು, ಊಟ ಮಾಡಿದ ನಂತರ ವಾಂತಿಯಾಗುವುದು, ಅಡುಗೆ ಮಾಡುವ ವಾಸನೆಯಿಂದ ವಾಕರಿಕೆ ಬರುವುದು ಹೀಗೆ ಆಗುತ್ತದೆ.
ಮದ್ದು ಹಾಕಿರುವುದು ತಿಳಿದುಕೊಳ್ಳಬೇಕಾದರೆ ಮನೆಯ ಇತರೆ ಸದಸ್ಯರಿಂದ ನುಗ್ಗೆ ಸೊಪ್ಪಿನ ರಸವನ್ನು ತೆಗೆಸಿಕೊಳ್ಳಬೇಕು. ನಂತರ ಅದನ್ನು ಎಡಗೈಗೆ ಹಚ್ಚಿಕೊಳ್ಳಬೇಕು ನೊರೆ ಬರುವುದು, ಬಣ್ಣ ಬದಲಾದರೆ ಮದ್ದು ಹಾಕಿದ್ದಾರೆ ಅಂತ ಅರ್ಥ. ನೀರಾಗಿಯೆ ಕೈ ಮೇಲೆ ಇದ್ದರೆ ಮದ್ದು ಹಾಕಿಲ್ಲ ಎಂದರ್ಥ. ಅದಲ್ಲದೆ ಮದ್ದನ್ನು ತೆಗೆಯುವ ಔಷಧಿಯನ್ನು ಕೊಡುವವರಿದ್ದಾರೆ. ಒಂದು ವರ್ಷದವರೆಗೂ ಮದ್ದನ್ನು ತೆಗೆಯದಿದ್ದರೆ ಪ್ರಾಣಕ್ಕೆ ಅಪಾಯವಾಗುತ್ತದೆ. ಹೀಗಾಗಿ ಹಿರಿಯರ ಮಾತನ್ನು ಕೇಳಬೇಕು. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.