ಕೆಲವರಿಗೆ ಮೊಟ್ಟೆ ಎಂದರೆ ಇಷ್ಟವಾಗುತ್ತದೆ ಅದರಿಂದ ಮಾಡುವ ಆಮ್ಲೆಟ್, ಎಗ್ಗರೈಸ್ ಎಂದರೆ ತುಂಬಾ ಇಷ್ಟಪಟ್ಟು ತಿನ್ನುವವರಿದ್ದಾರೆ. ಮೊಟ್ಟೆಯನ್ನು ಎಲ್ಲರೂ ತಿನ್ನುತ್ತಾರೆ ಆದರೆ ಹೇಗೆ ತಿನ್ನಬೇಕು, ಅದರಲ್ಲಿ ದೇಹಕ್ಕೆ ಬೇಕಾದ ಯಾವ ಅಂಶಗಳು ಇವೆ. ದಪ್ಪ ಆಗಲು ಎಗ್ಗ್ ನ ಯಾವ ಭಾಗ ತಿನ್ನಬೇಕು. ಸ್ಲಿಮ್ ಆಗಲು ಎಗ್ಗ್ ನ ಯಾವ ಭಾಗ ತಿನ್ನಬೇಕು, ಮೊಟ್ಟೆಯನ್ನು ಯಾವ ಸಮಯದಲ್ಲಿ ತಿನ್ನಬೇಕು ಎಂಬ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ಎಗ್ಗ್ ನಲ್ಲಿ ಸಾಕಷ್ಟು ವಿಟಮಿನ್ಸ್ ಇದೆ ವಿಟಮಿನ್ ಎ, ವಿಟಮಿನ್ ಡಿ, ವಿಟಮಿನ್ ಬಿ 5 ಹಾಗೂ ವಿಟಮಿನ್ ಬಿ 12 ಇರುತ್ತದೆ. ಇದು ಬೋನ್ಸ್ ಸ್ಟ್ರಾಂಗ್ ಮಾಡಲು ಮತ್ತು ಬ್ರೇನ್ ಶಾರ್ಪ್ ಮಾಡಲು ಸಹಾಯಕವಾಗುತ್ತದೆ ಅಲ್ಲದೇ ನರ್ವ್ ಸಿಸ್ಟಮ್ ಅನ್ನು ಅಭಿವೃದ್ಧಿ ಮಾಡುತ್ತದೆ, ರಕ್ತ ಸಂಚಾರವನ್ನು ಸರಿಯಾಗಿ ನಿರ್ವಹಿಸುತ್ತದೆ. ಎಲಿಕ್ ಆಸಿಡ್, ಒಮೆಗಾ ತ್ರಿ ಹೀಗೆ ಹಲವು ಅಂಶಗಳು ಮೊಟ್ಟೆಯಲ್ಲಿ ಇದೆ. ಒಂದು ಎಗ್ಗ್ ನಲ್ಲಿ 6 ಗ್ರಾಂ ಪ್ರೋಟೀನ್ ಇರುತ್ತದೆ. ಎಗ್ಗ್ ನ ಹಳದಿ ಭಾಗದಲ್ಲಿ ವಿಟಮಿನ್ಸ್ ಹಾಗೂ ಬಿಳಿ ಭಾಗದಲ್ಲಿ ಪ್ರೊಟೀನ್ಸ್ ಇರುತ್ತದೆ. ಪ್ರತಿದಿನ ಎರಡು ಮೊಟ್ಟೆಯನ್ನು ಸೇವಿಸಬೇಕು. ಎರಡು ಮೊಟ್ಟೆಯಿಂದ 300 mg ಕೊಲೆಸ್ಟ್ರಾಲ್ ಸಿಗುತ್ತದೆ. ಮೊಟ್ಟೆಯಲ್ಲಿ ರೋಗ ನಿರೋಧಕ ಶಕ್ತಿ ಇರುವುದರಿಂದ ಎರಡು ಮೊಟ್ಟೆ ತಿನ್ನುವುದರಿಂದ ಆಕ್ಟೀವ್ ಆಗಿ ಇರಬಹುದು. ಹೃದಯ ಸಂಬಂಧಿ ಸಮಸ್ಯೆ ಇದ್ದವರು ಪ್ರತಿದಿನ ಒಂದು ಮೊಟ್ಟೆ ತಿಂದರೆ ಆರೋಗ್ಯಕ್ಕೆ ಒಳ್ಳೆಯದು.

ಮೊಟ್ಟೆಯ ಹಳದಿ ಭಾಗವನ್ನು ತಿನ್ನುವುದರಿಂದ ದಪ್ಪ ಆಗಲು ಸಹಾಯಕವಾಗಿದೆ. ಇದರಲ್ಲಿ ವಿಟಮಿನ್ಸ್ ಇರುವುದರಿಂದ ಫ್ಯಾಟ್ ಅಂಶವನ್ನು ಹೆಚ್ಚಿಸುತ್ತದೆ. ಮೊಟ್ಟೆಯ ಬಿಳಿ ಭಾಗವನ್ನು ತಿನ್ನುವುದರಿಂದ ಸ್ಲಿಮ್ ಆಗುತ್ತಾರೆ ಇದರಲ್ಲಿ ಪ್ರೊಟೀನ್ಸ್ ಇರುವುದರಿಂದ ಸ್ಲಿಮ್ ಆಗುತ್ತಾರೆ. ದಪ್ಪ ಆಗಬೇಕು ಎಂದು ಪ್ರಯತ್ನಿಸುವವರು ಪ್ರತಿದಿನ 4 ಮೊಟ್ಟೆಯನ್ನು ಸೇವಿಸಬೇಕು. ಬೆಳಗಿನ ಸಮಯದಲ್ಲಿ ಮೊಟ್ಟೆ ತಿನ್ನುವುದರಿಂದ ಅದರಲ್ಲಿರುವ ವಿಟಮಿನ್ಸ್ ಹಾಗೂ ಪ್ರೋಟೀನ್ಸ್ ಸಿಗುತ್ತದೆ. ಬೆಳಗ್ಗೆ ಎದ್ದ ತಕ್ಷಣ 45 ಮಿನಿಟ್ಸ್ ಆದ ನಂತರ ಖಾಲಿಹೊಟ್ಟೆಯಲ್ಲಿ ಮೊಟ್ಟೆ ತಿನ್ನಬಹುದು ಅಥವಾ ಒಂದು ಗ್ಲಾಸ್ ನೀರು ಕುಡಿದು ಮೊಟ್ಟೆ ತಿನ್ನಬಹುದು.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!