ಒಣ ಹಣ್ಣುಗಳು ಅಥವಾ ಒಣ ಬೀಜಗಳು ಅಂದ್ರೆ ನಾವು ಸಾಮಾನ್ಯವಾಗಿ ಕರೆಯುವ ಡ್ರೈ ಫ್ರೂಟ್ಸ್ ಇವುಗಳ ಬೆಲೆಯಲ್ಲಿ ಸ್ವಲ್ಪ ಹೆಚ್ಚು ಇದ್ದರೂ ಸಹ ನಮ್ಮ ಆರೋಗ್ಯದ ದೃಷ್ಟಿಯಲ್ಲಿ ನೋಡಿದರೆ ಬಹಳವೇ ಒಳ್ಳೆಯದು. ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದವರು ಸಹ ತಿನ್ನಬಹುದಾದ ಈ ಡ್ರೈ ಫ್ರೂಟ್ಸ್ ನಿಂದ ಯಾವುದೆ ಅಡ್ಡಪರಿಣಾಮಗಳು ಉಂಟಾಗುವುದಿಲ್ಲ.
ಈಗಂತೂ ಸಿಹಿ ಖಾದ್ಯಗಳಿಂದ ಹಿಡಿದು, ಕೆಲವು ವಿಶೇಷ ಆಹಾರ ಪದಾರ್ಥಗಳಲ್ಲಿ ಸಹ ಇವುಗಳ ಬಳಕೆ ಇದ್ದೇ ಇರುತ್ತದೆ. ಇದನ್ನು ಹೊರತುಪಡಿಸಿ ಪ್ರತೀದಿನ ನಿಯಮಿತ ಪ್ರಮಾಣದಲ್ಲಿ ಡ್ರೈ ಫ್ರೂಟ್ಸ್ ಸೇವನೆ ಮಾಡುವುದರಿಂದ ಉತ್ತಮ ಆರೋಗ್ಯ ನಮ್ಮದಾಗುತ್ತದೆ. ಹಾಗಾದರೆ ನಾವು ಈ ಲೇಖನದ ಮೂಲಕ ಯಾವ ಯಾವ ಡ್ರೈ ಫ್ರೂಟ್ಸ್ ಗಳನ್ನಿ ಹೆಗೆ ಎಷ್ಟು ತಿನ್ನಬೇಕು ಎನ್ನುವುದನ್ನು ನೋಡೋಣ.
ಡ್ರೈ ಫ್ರೂಟ್ಸ್ ಆರೋಗ್ಯಕ್ಕೆ ಬಹಳ ಒಳ್ಳೆಯದು ಎನ್ನಲು ಸಾಕಷ್ಟು ಕಾರಣಗಳು ಇವೆ. ಅವುಗಳಲ್ಲಿ ಮುಖ್ಯವಾಗಿ, ಡ್ರೈಫ್ರೂಟ್ಸ್ ನಲ್ಲಿ ಆಂಟಿಆಕ್ಸಿಡೆಂಟ್ ಅಂಶಗಳ ಪ್ರಮಾಣ ನಾವೆಲ್ಲರೂ ಅಂದುಕೊಂಡಿದ್ದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಸಿಗುತ್ತದೆ. ಇದು ನಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚು ಮಾಡುವಲ್ಲಿ ಕೆಲಸ ಮಾಡುತ್ತದೆ. ಸಣ್ಣಪುಟ್ಟ ಕಾಯಿಲೆಗಳಿಂದ ಮತ್ತು ಸೋಂಕುಗಳಿಂದ ನಮ್ಮನ್ನು ನಾವು ರಕ್ಷಣೆ ಮಾಡಿಕೊಳ್ಳಲು ಇದು ನೆರವಾಗುತ್ತದೆ. ನೆನೆಸಿದ ಬಾದಾಮಿ ಬೀಜಗಳು ಹಾಗೂ ಗೋಡಂಬಿ ಬೀಜಗಳನ್ನು ಅಥವಾ ಪಿಸ್ತಾ ಬೀಜಗಳನ್ನು ಸೇವನೆ ಮಾಡುತ್ತಿದ್ದರೆ, ದೇಹದ ಯಾವುದೇ ಭಾಗದಲ್ಲಿ ಗಂಟುಗಳು ಕಂಡುಬರುವ ಸಾಧ್ಯತೆ ಇರುವುದಿಲ್ಲ. ಅಷ್ಟೇ ಅಲ್ಲದೆ ಕ್ಯಾನ್ಸರ್ ಜೀವಕೋಶಗಳನ್ನು ಹೆಚ್ಚಾಗದಂತೆ ತಡೆದು ಉಳಿದ ಜೀವಕೋಶಗಳನ್ನು ರಕ್ಷಣೆ ಮಾಡುವಲ್ಲಿ ಕೂಡ ಇದು ಪ್ರಮುಖ ಪಾತ್ರ ವಹಿಸುತ್ತದೆ.
ಮಧುಮೇಹ ನಿಯಂತ್ರಣ ಮತ್ತು ರಕ್ತದಲ್ಲಿ ಸಕ್ಕರೆಯ ಪ್ರಮಾಣವನ್ನು ಕಾಯ್ದುಕೊಳ್ಳಲು ಇವು ಸಹಾಯಕಾರಿ. ಮಧುಮೇಹ ಸಮಸ್ಯೆ ಇರುವಂತಹ ವ್ಯಕ್ತಿಗಳು ಯಾವೆಲ್ಲ ಡ್ರೈ ಫ್ರೂಟ್ಸ್ ಸೇವನೆ ಮಡಬಹುದು ಎಂದು ನೋಡುವುದಾದರೆ ಬಾದಾಮಿ. ಅಧ್ಯಯನದ ಪ್ರಕಾರ ರಕ್ತದ ಒತ್ತಡ ಸಮಸ್ಯೆ ಇರುವವರು ಹಾಗೂ ಹೃದಯದ ಕಾಯಿಲೆಯ ಸಮಸ್ಯೆ ಇರುವವರು ಪ್ರತೀ ದಿನ ನೆನೆಸಿಟ್ಟ ಬಾದಾಮಿ ಬೀಜಗಳನ್ನು ಸೇವನೆ ಮಾಡುವುದರಿಂದ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತದೆ. ಬಾದಾಮಿ ದರ ಸ್ವಲ್ಪ ಹೆಚ್ಚಾದರೂ ಈ ಬೀಜಗಳನ್ನು ನಿಯಮಿತ ಪ್ರಮಾಣದಲ್ಲಿ ಸೇವನೆ ಮಾಡುವುದರಿಂದ ಮಧುಮೇಹಿಗಳಿಗೆ ಇನ್ಸುಲಿನ್ ಸೂಕ್ಷ್ಮತೆಯನ್ನು ಸಹ ನಿಯಂತ್ರಿಸುತ್ತದೆ. ಹೊಟ್ಟೆ ಹಸಿವನ್ನು ನಿಯಂತ್ರಿಸತ್ತದೆ ಮತ್ತು ಈ ಮೂಲಕ ದೇಹದ ತೂಕ ಇಳಿಸಲು ಕೂಡಾ ಇದು ಸಹಾಯಕಾರಿ ಆಗಿದೆ.
ಇನ್ನೂ ವಾಲ್ನಟ್ ಬೀಜಗಳ ಸೇವನೆ. ಬಾದಾಮಿ ಗೋಡಂಬಿ ಇಂತಹ ಡ್ರೈ ಫ್ರೂಟ್ಸ್ ಗಳ ಹಾಗೆಯೇ ಈ ವಾಲ್ನಟ್ ಬೀಜ ಕೂಡಾ ತನ್ನಲ್ಲಿ ಸಾಕಷ್ಟು ಆರೋಗ್ಯಕರ ಅಂಶಗಳನ್ನು ಒಳಗೊಂಡಿದೆ. ನೋಡಲೂ ಮಾನವನ ಮೆದುಳಿನ ಆಕಾರದಲ್ಲಿ ಇರುವ ಈ ವಾಲ್ನಟ್ ಬೀಜ ಮಧುಮೇಹ, ರಕ್ತದ ಒತ್ತಡ ಮತ್ತು ತೂಕ ಇಳಿಸಲು ಬಹಳ ಸಹಾಯಕಾರಿ. ತಜ್ಞರ ಪ್ರಕಾರ, ವಾರದಲ್ಲಿ ಕನಿಷ್ಟ ಎರಡು ಬಾರಿ ಆದರೂ ವಾಲ್ನಟ್ ಬೀಜ ಸೇವನೆ ಮಾಡುವುದರಿಂದ ಮಧುಮೇಹ ಬರುವುದನ್ನು ತಡೆಯಬಹುದು ಎನ್ನುತ್ತಾರೆ. ಇನ್ನೂ ಗೋಡಂಬಿ ಬೀಜಗಳು. ಇವುಗಳನ್ನಂತೂ ಮಧುಮೇಹಿ ರೋಗಿಗಳ ಸ್ನೇಹಿ ಎಂದೇ ಹೇಳಬಹುದು.
ಇವು ಮಧುಮೇಹ ವ್ಯಕ್ತಿಗಳ ದೇಹದ ರಕ್ತದಲ್ಲಿ ಇರುವಂತಹ ಸಕ್ಕರೆಯ ಪ್ರಮಾಣವನ್ನು ತಗ್ಗಿಸಿ ಮಧುಮೇಹವನ್ನು ನಿಯಂತ್ರಣಕ್ಕೆ ತರಲು ಸಹಾಯಕಾರಿ. ಇದರಲ್ಲಿ ಕೊಬ್ಬಿನ ಅಂಶ ಕಡಿಮೆ ಇದ್ದು, ನಾರಿನ ಅಂಶ ಹೆಚ್ಚಾಗಿದೆ. ಇದರಿಂದಾಗಿ ರಕ್ತದಲ್ಲಿ ಸಕ್ಕರೆಯ ಪ್ರಮಾಣ ನಿಧಾನವಾಗಿ ಸಾಗುತ್ತದೆ. ಅಷ್ಟೆ ಅಲ್ಲದೆ ಗೋಡಂಬಿಯಲ್ಲಿ ಒಮೆಗಾ3 ಕೊಬ್ಬಿನ ಅಂಶ ಮತ್ತು ಪೋಲಿಕ್ ಆಸಿಡ್ ಇರುವುದರಿಂದ ಇದು ಹೃದಯದ ಆರೋಗ್ಯಕ್ಕೆ ಬಹಳ ಉತ್ತಮ ಎಂದು ವೈದ್ಯರು ಸಲಹೆ ನೀಡುತ್ತಾರೆ.
ಇದೂ ತಿನ್ನಲೋ ಸಹ ಬಹಳ ರುಚಿಯಾಗಿದೆ ಇರುವುದರಿಂದ ಮಧುಮೇಹ ರೋಗಿಗಳು ಯಾವುದೇ ಅನುಮಾನವಿಲ್ಲದೇ ಗೋಡಂಬಿ ಹಾಗೂ ಅದರಿಂದ ತಯಾರಿಸಿದ ಆಹಾರಗಳನ್ನು ಸೇವನೆ ಮಾಡಬಹುದು. ಇನ್ನೂ ಕೊನೆಯದಾಗಿ ಪಿಸ್ತಾ ಇದರಲ್ಲಿ ನಾರಿನ ಅಂಶ ಹೆಚ್ಚಾಗಿ ಇದ್ದು ಕಡಿಮೆ ಕ್ಯಾಲೋರಿ ಹೊಂದಿದ ಡ್ರೈ ಫ್ರೂಟ್ ಆಗಿದೆ. ಪಿಸ್ತಾ ಸೇವನೆಯಿಂದ ಕೂಡಾ ಮಧುಮೇಹ ಕಾಯಿಲೆಯನ್ನು ದೂರ ಮಾಡಿಕೊಳ್ಳಬಹುದು.