ರಾತ್ರಿ ಸಮಯದಲ್ಲಿ ಗಡದ್ದಾಗಿ ಹೊಟ್ಟೆ ತುಂಬಾ ಊಟ ಮಾಡಿ ನಂತರ ಒಂದೆರಡು ಬಾರಿ ತೇಗು ಬರಿಸಿಕೊಂಡು ಸ್ವಲ್ಪ ಹೊತ್ತು ಆಕಳಿಸಿ ನೆಮ್ಮದಿಯಾಗಿ ನಿದ್ರೆ ಮಾಡುವುದು ಕೆಲವರ ಅಭ್ಯಾಸ. ಆದರೆ ಇದು ಕೆಲವೊಮ್ಮೆ ನಮ್ಮ ಆರೋಗ್ಯದ ವಿಚಾರದಲ್ಲಿ ಸ್ವಲ್ಪ ತೊಂದರೆಯನ್ನೂ ಉಂಟು ಮಾಡುವುದು. ಆರೋಗ್ಯವಂತ ವ್ಯಕ್ತಿಗಳ ಅನುಭವ ಮತ್ತು ಆರೋಗ್ಯ ತಜ್ಞರು ಹೇಳುವ ಪ್ರಕಾರ ಊಟದ ನಂತರ ಸ್ವಲ್ಪ ಹೊತ್ತು ವಾಕ್ ಮಾಡುವುದರಿಂದ ದೇಹಕ್ಕೆ ಸಾಕಷ್ಟು ಅನುಕೂಲವಿದೆ. ಕೆಲವು ವಿಶೇಷ ಬಗೆಯ ಆರೋಗ್ಯ ಸಮಸ್ಯೆಗಳು ಎದುರಾಗುವುದಿಲ್ಲ ಎಂದು ಹೇಳಬಹುದು. ಅದರಲ್ಲೂ ಪ್ರತಿ ದಿನ ಕಚೇರಿ ಕೆಲಸದಲ್ಲಿ ನಿರತರಾಗಿರುವವರು, ಬೆಳಗ್ಗೆಯಿಂದ ಸಂಜೆಯವರೆಗೆ ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡುವವರು ಕನಿಷ್ಠ ರಾತ್ರಿ ಊಟ ಆದ ಮೇಲೆ ಸ್ವಲ್ಪ ಹೊತ್ತು ವಾಕಿಂಗ್ ಮಾಡಿ ನಂತರ ಮಲಗಿಕೊಳ್ಳುವ ಅಭ್ಯಾಸ ಮಾಡಿಕೊಂಡರೆ ತುಂಬಾ ಒಳ್ಳೆಯದು. ಆದರೆ ಇದು ನಿಜಕ್ಕೂ ಒಳ್ಳೆಯದಾ? ಊಟವಾದ ನಂತರ ಎಷ್ಟು ಹೊತ್ತು ವಾಕಿಂಗ್ ಮಾಡಬೇಕು ನಾವು ತಿಂದ ಆಹಾರ ಜೀರ್ಣ ಆಗಲು ಹೇಗೆ ಎಷ್ಟು ಸಮಯ ವಾಕ್ ಮಾಡುವುದು ಉತ್ತಮ? ಇದರಿಂದ ನಮಗೇನು ಲಾಭ ಎನ್ನುವುದನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ಅಜೀರ್ಣ ಸಾಮಾನ್ಯವಾಗಿ ಎಲ್ಲರಲ್ಲಿಯೂ ಕಂಡು ಬರುವ ತೊಂದರೆಯಾಗಿದೆ. ಎಲ್ಲರನ್ನೂ ಒಂದಲ್ಲ ಒಂದು ದಿನ ಈ ತೊಂದರೆ ಕಾಡಿಸಿಯೇ ಕಾಡಿಸಿರುತ್ತದೆ. ಹೊಟ್ಟೆಯ ಸಮಸ್ಯೆಗಳು ಯಾರನ್ನು ತಾನೇ ಬಿಟ್ಟಾವು? ಆಗಾಗ ಹೊಟ್ಟೆನೋವು, ಅಜೀರ್ಣ, ವಾಂತಿ, ಹೊಟ್ಟೆಉರಿ, ಗ್ಯಾಸ್, ಎದೆಯುರಿ ಮುಂತಾದ ಸಮಸ್ಯೆಗಳು ಬಹುತೇಕ ಎಲ್ಲರನ್ನೂ ಬಿಟ್ಟೂ ಬಿಡದೆ ಕಾಡುತ್ತವೆ. ಯಾವುದೋ ಆಹಾರ ಇಷ್ಟವೆಂದು ಸಿಕ್ಕಾಪಟ್ಟೆ ತಿಂದರೂ ಸಮಸ್ಯೆ, ಕಡಿಮೆ ತಿಂದರೂ ಸಮಸ್ಯೆ, ತಿನ್ನದಿದ್ದರೂ ಸಮಸ್ಯೆ, ಕೆಲವೊಂದು ತಿಂದರೆ ಗ್ಯಾಸ್- ಹೀಗೆ ಆಹಾರ ಸಂಬಂಧಿ ಹೊಟ್ಟೆಯ ಸಮಸ್ಯೆಗಳು ಬಹಳ ಸಾಮಾನ್ಯ.
ನಾವು ತಿಳಿದುಕೊಂಡಿದ್ದೇವೆ ಊಟವಾದ ನಂತರ ನಾವು ವಾಕಿಂಗ್ ಇಲ್ಲವೇ ವ್ಯಾಯಾಮ ಮಾಡುವುದರಿಂದ ನಾವು ತಿಂದಂತಹ ಆಹಾರ ಜೀರ್ಣ ಆಗುತ್ತದೆ ಎಂದು. ಆದರೆ ನಾವು ಈ ರೀತಿಯಾಗಿ ತಿಳಿದುಕೊಂಡಿರುವುದು ನಮ್ಮ ತಪ್ಪು ಕಲ್ಪನೆ. ನಾವು ಪ್ರತೀ ದಿನ ರಾತ್ರಿ ಊಟವಾದ ನಂತರ ವಾಕಿಂಗ್ ಮಾಡುವುದರಿಂದ ನಾವು ತಿಂದ ಆಹಾರ ಜೀರ್ಣ ಆಗುವುದಿಲ್ಲ ಹಾಗೆಯೇ ಉಳಿದುಕೊಳ್ಳುತ್ತದೆ ಅಜೀರ್ಣ ಆಗುತ್ತದೆ ಇದರಿಂದ ಸಾಕಷ್ಟು ಸಮಸ್ಯೆಗಳು ಉಂಟಾಗುತ್ತದೆ. ಹೇಗೆ ಎಂದು ನೋಡುವುದಾದರೆ , ನಾವು ರಾತ್ರಿ ಊಟದ ಬಳಿಕ ವಾಕ್ ಮಾಡುವುದರಿಂದ ನಮ್ಮೆಲ್ಲ ದೇಹದ ಶಕ್ತಿ ಹಾಗೂ ಗಮನ ನಾವು ಮಾಡುತ್ತಿರುವ ವಾಕ್ ಮೇಲೆ ಹೋಗುತ್ತದೆ. ನಮ್ಮ ದೇಹದ ಶಕ್ತಿ ವಾಕಿಂಗ್ ಸಮಯದಲ್ಲಿ ವ್ಯಯ ಆಗುತ್ತದೆ. ಹೀಗಿದ್ದಾಗ ನಾವು ತಿಂದ ಆಘಾತವನ್ನು ಜೀರ್ಣ ಮಾಡಲು ಶಕ್ತಿ ಇರುವುದಿಲ್ಲ.
ನಮ್ಮ ದೇಹದ ಎಲ್ಲಾ ಎನರ್ಜಿ ನಾವು ಊಟವಾದ ನಂತರ ತಿಂದ ಆಹಾರ ಜೀರ್ಣ ಆಗಲಿ ಎಂದು ಮಾಡುವ ವಾಕಿಂಗ್ , ಎಕ್ಸರ್ಸೈಜ್ , ಜಿಮ್ , ಏರೋಬಿಕ್ ಇವುಗಳನ್ನು ಮಾಡುವುದರಿಂದ ಶಕ್ತಿ ಸಂಪೂರ್ಣವಾಗಿ ಇವುಗಳ ಕಡೆಗೆ ಹೋಗುತ್ತದೆ. ಆದ್ರೆ ನಮ್ಮ ದೇಹದಲ್ಲಿ ನಾವು ತಿಂದ ಆಹಾರ ಅಜೀರ್ಣ ಆಗದೇ ಜೀರ್ಣ ಆಗಬೇಕು ಎಂದರೆ ನಮಗೆ ಶಕ್ತಿ ಅತೀ ಮುಖ್ಯ. ಹಾಗಾಗಿ ನಾವು ಅನಾವಶ್ಯಕವಾಗಿ ನಮ್ಮ ಶಕ್ತಿಯನ್ನು ವ್ಯಯ ಮಾಡದೇ ನಾವು ಸೇವಿಸಿದ ಆಹಾರ ಜೀರ್ಣ ಆಗಲು ಬಿಡಬೇಕು. ಇದರಿಂದ ನಾವು ತಿಂದ ಆಹಾರ ಸರಿಯಾಗಿ ಜೀರ್ಣ ಆದರೆ, ಅಜೀರ್ಣದ ಸಮಸ್ಯೆಯಿಂದ ಉಂಟಾಗುವ ಮಲಬದ್ಧತೆ , ತೂಕ ಹೆಚ್ಚಾಗುವುದು ಇಂತಹ ಸಮಸ್ಯೆಗಳು ಕಾಡುವುದಿಲ್ಲ. ಹಾಗಾಗಿ ಊಟವಾದ ನಂತರ ನಾವು ವಾಕಿಂಗ್ ಹಾಗೂ ಎಕ್ಸರ್ಸೈಜ್ ಮಾಡುವುದರಿಂದ ಅಜೀರ್ಣ ಸಮಸ್ಯೆ ನಮ್ಮನ್ನು ಕಾಡುವುದು.