ಮನುಷ್ಯನಿಗೆ ಜೀವನದಲ್ಲಿ ಎಲ್ಲಕ್ಕಿಂತ ಆರೋಗ್ಯ ಮುಖ್ಯ. ಏಕೆಂದರೆ ಹಣ ಮತ್ತು ಆಯಸ್ಸು ಇದ್ದು ಆರೋಗ್ಯ ಇಲ್ಲದಿದ್ದರೆ ಜೀವನ ವ್ಯರ್ಥ. ಆದ್ದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಆರೋಗ್ಯ ಇದ್ದರೆ ಮಾತ್ರ ದುಡಿಯಲು ಸಾಧ್ಯ. ಹಾಗೆಯೇ ದುಡಿದರೆ ಮಾತ್ರ ಹಣವನ್ನು ಗಳಿಸಲು ಸಾಧ್ಯ. ಆದ್ದರಿಂದ ನಾವು ಇಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳುವ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಪ್ರಿವೆನ್ಶನ್ ಇಸ್ ಅಲ್ವೇಸ್ ಬೆಟರ್ ದೇನ್ ಕ್ಯೂರ್ ಎಂಬ ಇಂಗ್ಲೀಷ್ ನಾಣ್ಣುಡಿ ಇದೆ. ಅಂದರೆ ರೋಗ ಬಂದಾಗ ಔಷದಿ ಮಾಡಿಕೊಳ್ಳುವುದಕ್ಕಿಂತ ರೋಗ ಬರದಂತೆ ನೋಡಿಕೊಳ್ಳುವುದು ಒಳ್ಳೆಯದು. ಹಾಗೆ ಕನ್ನಡದಲ್ಲಿ ಆರೋಗ್ಯವೇ ಭಾಗ್ಯ ಎನ್ನುವ ನಾಣ್ಣುಡಿಯಿದೆ. ಆದ್ದರಿಂದ ಆರೋಗ್ಯಕ್ಕಿಂತ ಮೊದಲು ಯಾವುದೂ ಮುಖ್ಯವಲ್ಲ. ಆರೋಗ್ಯವನ್ನು ಕಾಪಾಡಿಕೊಳ್ಳುವುದೇ ಮೊದಲ ಹೆಜ್ಜೆಯಾಗಬೇಕು.
ಈಗಿನ ದಿನಗಳಲ್ಲಿ ದುಡಿಯುವುದೊಂದೇ ಎಲ್ಲರ ಗುರಿಯಾಗಿದೆ. ಕೇವಲ ಹಣಕ್ಕೆ ಮಾತ್ರ ಪ್ರಾಮುಖ್ಯತೆಯನ್ನು ನೀಡುತ್ತಿದ್ದಾರೆ. ಆದರೆ ಸುಮಾರು ಮೂರರಲ್ಲಿ 50 ಶೇಕಡದಷ್ಟು ಜನರಿಗೆ ಆರೋಗ್ಯದ ಕೊರತೆಯಿದೆ. ಕಾರಣ ಆರೋಗ್ಯದ ಬಗ್ಗೆ ನಿರ್ಲಕ್ಷ ಕೊಡುವುದು. ಸರಿಯಾದ ಸಮಯಕ್ಕೆ ಯಾವ ಆಹಾರವನ್ನು ತೆಗೆದುಕೊಳ್ಳಬೇಕೋ ಆಹಾರವನ್ನು ತೆಗೆದುಕೊಳ್ಳಬೇಕು. ಹಾಗೆಯೇ ಪೌಷ್ಟಿಕಾಂಶಯುಕ್ತ ಆಹಾರಗಳನ್ನು ಸೇವನೆ ಮಾಡಬೇಕು.
ಹಾಗೆಯೇ ಬೇಳೆಕಾಳುಗಳು ಸೇವನೆಯನ್ನು ಮಾಡಬೇಕು. ಇವುಗಳನ್ನು ನೆನೆಸಿ ತಿನ್ನಬೇಕು. ಇಲ್ಲವೇ ಬೇಯಿಸಿಕೊಳ್ಳಬೇಕು. ಬೆಳೆಕಾಳುಗಳನ್ನು ಸೇವನೆ ಮಾಡುವುದರಿಂದ ದೇಹದ ಮೂಳೆಗಳು ಗಟ್ಟಿಯಾಗುತ್ತವೆ. ಹಾಗೆ ಇದರ ಜೊತೆಗೆ ಮಾಂಸಖಂಡಗಳು ಸಹ ಗಟ್ಟಿಯಾಗುತ್ತದೆ. ಹಾಗೆಯೇ ಕೂದಲುಗಳ ಬೆಳವಣಿಗೆ ಉತ್ತಮ. ಆದ್ದರಿಂದ ದಿನನಿತ್ಯ ಬೇಳೆಕಾಳುಗಳ ಸೇವನೆಯನ್ನು ಮಾಡಬೇಕು.