ಮನುಷ್ಯನ ದೇಹದ ನವರಂದ್ರಗಳಲ್ಲಿ ಕಿವಿ ಕೂಡ ಒಂದು. ಇರುವ ಎಲ್ಲಾ ನವರಂದ್ರಗಳಲ್ಲಿ ನೈಸರ್ಗಿಕವಾಗಿ ಒಂದೊಂದು ಬಗೆಯ ವಸ್ತುಗಳು ಉತ್ಪತ್ತಿ ಆಗುತ್ತಲೇ ಇರುತ್ತವೆ. ಮನುಷ್ಯರಾದ ನಾವು ಅವುಗಳ ಸ್ವಚ್ಛತೆಯ ಕಡೆಗೆ ಗಮನ ಕೊಡಬೇಕು. ಇಲ್ಲವೆಂದರೆ ಸೋಂಕಿನಿಂದ ನಮ್ಮ ಆರೋಗ್ಯಕ್ಕೆ ತೊಂದರೆಯಾಗುವ ಸಾಧ್ಯತೆ ಇರುತ್ತದೆ. ಗುಗ್ಗೆಯ ವಿಚಾರದಲ್ಲೂ ನಾವು ಸಾಕಷ್ಟು ಜಾಗರೂಕತೆ ವಹಿಸಬೇಕು. ಇಲ್ಲದಿದ್ದರೆ ಕೆಲವರಿಗೆ ಕಿವಿಯ ಗುಗ್ಗೆ ಕಿವಿಯಲ್ಲಿ ಕಲ್ಲಿನಂತೆ ಆಗಿ ಮುಂದಿನ ದಿನಗಳಲ್ಲಿ ತುಂಬಾ ತೊಂದರೆ ಕೊಡುತ್ತದೆ. ಅದಕ್ಕಾಗಿ ಸಾವಿರಾರು ರೂಪಾಯಿ ಹಣ ಖರ್ಚು ಮಾಡುವ ಪ್ರಮೇಯ ಎದುರಾಗುತ್ತದೆ. ಕಿವಿ ಸ್ವಚ್ಛಗೊಳಿಸಲು ಮನೆಯಲ್ಲಿ ಮಾಡಬಹುದಾದ ಈ ಸರಳ ಉಪಾಯಗಳು ಒಮ್ಮೆ ಮಾಡಿ ನೋಡಿ ಕೇಳುವ ಶಕ್ತಿಯಲ್ಲಿ ನಾಲ್ಕು ಪಟ್ಟು ವೃದ್ಧಿಯಾಗುತ್ತದೆ.
ಜಳಕ ಮಾಡುವಾಗ ದೇಹವನ್ನು ಸ್ವಚ್ಛಗೊಳಿಸುವ ಹಾಗೆ ಕಿವಿಯನ್ನು ಸಹಿತ ಸ್ವಚ್ಛಗೊಳಿಸಬೇಕು. ಸ್ನಾನ ಮಾಡುವಾಗ ಎಷ್ಟೋ ಸಲ ಕಿವಿಯಲ್ಲಿ ಸಾಬೂನಿನ ನೀರು ಹೋಗಿ ಅದು ಅಲ್ಲಿಯೇ ಕುಳಿತುಕೊಳ್ಳುವುದು. ಹೀಗಾಗಿ ನಿಧಾನವಾಗಿ ಕಿವಿಯಲ್ಲಿ ಕಲ್ಮಶ ತಯಾರಾಗುವದು. ಮೇಲಿಂದ ಮೇಲೆ ಕಿವಿಯನ್ನು ಸ್ವಚ್ಛಗೊಳಿಸದೆ ಇದ್ದರೆ ಗಂಭೀರಸ್ವರೂಪದ ಸಮಸ್ಯೆಗೆ ಒಳಗಾಗುವ ಸಂಭವವು ನಿರ್ಮಾಣವಾಗುತ್ತದೆ. ಕೆಲವೊಮ್ಮೆ ಕಿವಿಯಲ್ಲಿ ತುರಿಕೆ ಉಂಟಾಗಿ ಅಸಹ್ಯವಾದ ವೇದನೆ ಆಗುವುದು. ಇವುಗಳಿಂದ ಬಚಾವಾಗಲು ಕಿವಿಯನ್ನು ಸ್ವಚ್ಛ ಮಾಡುವ ಈ 4 ಪ್ರಕಾರದ ಅತಿಸರಳವಾದ ಮನೆಮದ್ದುಗಳನ್ನು ಇಲ್ಲಿ ಹೇಳಲಾಗಿದೆ.
ಮೊದಲಿನ ಅತಿಸರಳವಾದ ಉಪಾಯವೇನೆಂದರೆ ಸ್ನಾನ ಮಾಡಿಕೊಳ್ಳುವಾಗ ಕಿವಿಯಲ್ಲಿ ಸ್ವಲ್ಪ ಉಗುರುಬೆಚ್ಚಗಿನ ನೀರನ್ನು ಹಾಕಬೇಕು. ಆನಂತರ ದೇಹವನ್ನು ಒರೆಸಿಕೊಳ್ಳುವ ಟವೆಲ್ ನ ಒಂದು ಕೋಣೆ ಅಥವಾ ಮೂಲೆಯನ್ನು ಹಿಡಿದು ಕಿವಿಯಲ್ಲಿ ಒತ್ತಿ ಸ್ವಚ್ಛ ಮಾಡಿಕೊಳ್ಳಬಹುದು, ಅಥವಾ ಮನೆಯಲ್ಲಿರುವ ಇಯರ್ ಬಡ್ಸ್ ಗಳಿಂದಲೂ ಕಿವಿಯನ್ನು ಸ್ವಚ್ಛಗೊಳಿಸಬಹುದಾಗಿದೆ.
ಎರಡನೆಯದಾಗಿ ಅರ್ಧ ಕಪ್ ಉಗುರುಬೆಚ್ಚಗಿನ ನೀರಿನೊಳಗೆ ಅರ್ಧ ಚಮಚ ಉಪ್ಪು ಬೆರೆಸಿದ ನೀರಿನಲ್ಲಿ ಹತ್ತಿಯನ್ನು ಅದ್ದಿ ಅದರ ಮುಖಾಂತರ ಕಿವಿಯಲ್ಲಿ ಹನಿಹನಿಯಾಗಿ ಆ ನೀರನ್ನು ಹಾಕಿಕೊಳ್ಳಬೇಕು. ನೀರು ಸರಿಯಾಗಿ ಒಳಗೆ ಹೋದನಂತರ ಒಂದು ನಿಮಿಷದ ಮೇಲೆ ತಲೆಯನ್ನು ಬದಗೆ ವಾಲಿಸಿ ಆ ನೀರನ್ನು ಹೊರ ತೆಗೆಯುವುದರಿಂದಲೂ ಕಿವಿಗಳು ಸ್ವಚ್ಛವಾಗುವವು.
ಬೇಬಿ ಆಯಿಲ್ ಸಹಾಯದಿಂದಲೂ ಸಹಿತ ಕಿವಿಯಲ್ಲಿ ತಯಾರಾದ ಕಲ್ಮಶವನ್ನು ತೆಗೆಯಲು ಸಾಧ್ಯವಾಗುತ್ತದೆ. ಹೇಗೆಂದರೆ ಬೇಬಿ ಆಯಿಲ್ ದ ಕೆಲವು ಹನಿಗಳನ್ನು ಕಿವಿಯಲ್ಲಿ ಹಾಕಿ ಕಿವಿಯ ಹತ್ತಿಯಿಂದ ಸ್ವಲ್ಪ ಹೊತ್ತು ಮುಚ್ಚಬೇಕು. ಹೀಗೆ ಮಾಡುವುದರಿಂದ ಕಿವಿಯಲ್ಲಿ ತಯಾರಾಗಿರತಕ್ಕಂತ ಕಲ್ಮಶ ಮೆತ್ತಗಾಗುವದು. ಈ ರೀತಿಯಿಂದಲೂ ಕಿವಿಗಳನ್ನು ಕ್ಲೀನ್ ಮಾಡಬಹುದು.
ಆಲಿವ್ ಆಯಿಲ್ ಮುಖಾಂತರವೂ ನಮ್ಮ ಕಿವಿಗಳನ್ನು ಸ್ವಚ್ಛ ಮಾಡಬಹುದಾಗಿದೆ. ಇದಕ್ಕಾಗಿ ರಾತ್ರಿ ಮಲಗುವ ಮುನ್ನ ಆಲಿವ್ ಆಯಿಲ್ ನ ಕೆಲವು ಹನಿಗಳನ್ನು ಕಿವಿಯಲ್ಲಿ ಹಾಕಬೇಕು. ಈ ರೀತಿಯಾಗಿ 3-4 ದಿವಸಗಳವರೆಗೆ ಮಾಡುವುದರಿಂದ ಕಿವಿಯಲ್ಲಿ ಕಲ್ಮಶ ಮೆತ್ತಗಾಗಿ ಹೊರಬರಲು ಸಾಧ್ಯವಾಗುತ್ತದೆ, ಅಥವಾ ಅದನ್ನು ಇಯರ್ ಬಡ್ಸ್ ಗಳಿಂದ ತೆಗೆಯಬಹುದು.