ನಾವಿಂದು ನಿಮಗೆ ಈ ಸ್ವತ್ತು ಎಂದರೇನು ಇದರಿಂದ ಜನರಿಗೆ ಯಾವ ರೀತಿಯ ಉಪಯೋಗ ಆಗುತ್ತದೆ ಜೊತೆಗೆ ನಮೂನೆ-ಒಂಬತ್ತು ನಮೂನೆ-ಹನ್ನೊಂದು ಎಂದರೇನು ಇದರಲ್ಲಿ ಯಾವ ಅಂಶಗಳು ಇರುತ್ತವೆ ಮತ್ತು ಅವುಗಳನ್ನು ಪಡೆಯುವುದಕ್ಕೆ ಯಾವೆಲ್ಲ ದಾಖಲೆಗಳನ್ನು ಒದಗಿಸಬೇಕು ಅದರ ಲಕ್ಷಣಗಳೇನು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿಸಿಕೊಡುತ್ತೇವೆ.

ಮೊದಲನೆಯದಾಗಿ ಈ ಸ್ವತ್ತು ಎಂದರೇನು ಎಂಬುದನ್ನು ತಿಳಿದುಕೊಳ್ಳೋಣ ಇ ಸ್ವತ್ತು ಕರ್ನಾಟಕ ಸರ್ಕಾರದ ಡಿಜಿಟಲ್ ಇಂಡಿಯಾ ಇನ್ ಸೆಟಿವ್ ನಲ್ಲಿ ಪ್ರತಿಯೊಂದು ಗ್ರಾಮಪಂಚಾಯಿತಿಗಳಲ್ಲಿ ಎಲ್ಲೆಲ್ಲಿ ಕೃಷಿಯೇತರ ಜಮೀನುಗಳು ಇರುತ್ತದೆಯೋ ಅದನ್ನು ಸಂಪೂರ್ಣವಾಗಿ ಗಣಕೀಕೃತ ಮಾಡಿರುತ್ತಾರೆ ಅದನ್ನು ಇ ಸ್ವತ್ತು ಎಂದು ಕರೆಯುತ್ತಾರೆ. ಇ ಸ್ವತ್ತು ಇಲ್ಲಿ ಗ್ರಾಮೀಣ ಪ್ರದೇಶದ ಯಾವುದೇ ಆಸ್ತಿ ಜಮೀನು ಗಳಿರಬಹುದು ಅದರ ಮಾಲಿಕತ್ವದ ಸಂಪೂರ್ಣ ಮಾಹಿತಿಯನ್ನು ನಾವು ಇ ಸ್ವತ್ತು ಮೂಲಕ ಆನ್ಲೈನ್ನಲ್ಲಿ ಪಡೆದುಕೊಳ್ಳಬಹುದು.

ಇ ಸ್ವತ್ತಿನಿಂದಾಗಿ ಜನರಿಗೆ ಯಾವೆಲ್ಲ ರೀತಿಯ ಪ್ರಯೋಜನ ಆಗುತ್ತದೆ ಎಂಬುದನ್ನು ನೋಡುವುದಾದರೆ ಫೋರ್ಜರಿ ನಡೆಯುವಂಥದ್ದು ನಕಲಿ ದಾಖಲೆಗಳನ್ನು ತಯಾರಿಸುವುದು ಇವುಗಳನ್ನು ಈ ಸ್ವತ್ತಿನ ಮೂಲಕ ಕಡಿಮೆ ಮಾಡಬಹುದು. ಅದೇ ರೀತಿಯಾಗಿ ಕಾನೂನುಬಾಹಿರವಾಗಿ ಲೇಔಟ್ಸ್ ಗಳನ್ನು ಮಾಡುವುದು ಆಸ್ತಿಗಳನ್ನು ಮಾರಾಟ ಮಾಡುವುದು ಇವುಗಳನ್ನು ತಡೆಯಬಹುದು ಎಂಬ ಉದ್ದೇಶದಿಂದ ಕರ್ನಾಟಕ ಸರ್ಕಾರ ಈ ಒಂದು ಇ ಸ್ವತ್ತು ಎಂಬುದನ್ನು ಜಾರಿಗೆ ತಂದಿದೆ.

ಈ ಸ್ವತ್ತಿನಲ್ಲಿ ಯಾವೆಲ್ಲ ದಾಖಲೆಗಳನ್ನು ನಾವು ನೋಡಬಹುದು ಎಂಬುದನ್ನು ತಿಳಿಯುವುದಾದರೆ ಮೊದಲನೆಯದಾಗಿ ನಮೂನೆ-ಒಂಬತ್ತು ನೋಡಬಹುದು ಎರಡನೆಯದಾಗಿ ನಮೂನೆ-ಹನ್ನೊಂದನ್ನು ನೋಡಬಹುದು. ಹಾಗಾದರೆ ನಮೂನೆ ಒಂಬತ್ತು ಹಾಗೂ ನಮೂನೆ-ಹನ್ನೊಂದು ಎಂದರೆ ಏನು ಎಂಬುದನ್ನು ತಿಳಿದುಕೊಳ್ಳೋಣ. ನಮೂನೆ-ಒಂಬತ್ತು ಇದನ್ನು ಏಕತಾ ಡಾಕ್ಯುಮೆಂಟ್ ಎಂದು ಕರೆಯುತ್ತಾರೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಯಾವುದೇ ಖಾಲಿ ಜಾಗ ಅಥವಾ ಆಸ್ತಿಗೆ ನಮೂನೆ-ಒಂಬತ್ತು ಬೇಕಾಗುತ್ತದೆ.

ಇದರಲ್ಲಿ ಕೆಲವೊಂದು ನಿಯಮಗಳಿರುತ್ತವೆ ಅದೇನೆಂದರೆ ನೀವು ತೆಗೆದುಕೊಳ್ಳುವ ಅಥವಾ ಮಾರುವ ಜಾಗವನ್ನು ಕಾನೂನುಬದ್ಧವಾಗಿ ಕೃಷಿಯೇತರ ಆಸ್ತಿಯನ್ನಾಗಿ ಪರಿವರ್ತಿಸಬೇಕು. ಪರಿವರ್ತನೆ ಆಗಿರುವ ಜಮೀನಿನಲ್ಲಿ ಲೇಔಟ್ ಅಥವಾ ಸೈಟ್ಗಳನ್ನು ಅಥವಾ ನೀವು ಒಂದು ಮನೆಯನ್ನು ಕಟ್ಟಿಸಿಕೊಂಡಿದ್ದರೆ ಅದು ಅಪ್ರೊಪ್ರಿಯೆಟೆ ಅಥಾರಿಟಿ ಕಡೆಯಿಂದ ಅದಕ್ಕೆ ಒಪ್ಪಿಗೆ ಇರಬೇಕು ಎಂದರೆ ಪಿಡಿಒ ಇರಬಹುದು ಬಿ ಎಂ ಆರ್ ಡಿ ಇರಬಹುದು ಈ ರೀತಿ ಆರ್ಥ ರೈಸ್ಡ್ ಪ್ಲಾನಿಂಗ್ ಅಥಾರಿಟಿ ಯ ಒಪ್ಪಿಗೆ ನೀಡಿದರೆ ಅಂತಹ ಜಾಗಗಳಿಗೆ ನಮೂನೆ-ಒಂಬತ್ತು ನೀಡಲಾಗುತ್ತದೆ. ಆ ಒಂದು ಜಮೀನು ಒಂದು ಗ್ರಾಮ ಪಂಚಾಯಿತಿಗೆ ಒಳಪಟ್ಟಿದ್ದರೆ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಇದೆ ಎಂಬುದನ್ನು ತಹಶೀಲ್ದಾರರು ನಕ್ಷೆಯನ್ನು ಪರಿಶೀಲನೆ ಮಾಡಿ ಅದಕ್ಕೆ ಒಪ್ಪಿಗೆ ನೀಡಬೇಕು. ಆ ಸಮಯದಲ್ಲಿ ನಿಮಗೆ ನಮೂನೆ-ಒಂಬತ್ತು ಸಿಗುತ್ತದೆ.

ಅದೇ ರೀತಿಯಲ್ಲಿ ಸರ್ಕಾರದ ವಸತಿ ಯೋಜನೆ ಅಡಿಯಲ್ಲಿ ನಿಮಗೆ ಮನೆಗಳು ಸಿಕ್ಕಿದ್ದರೆ ಅಂತಹ ಸಮಯದಲ್ಲಿ ನಮೂನೆ-ಒಂಬತ್ತು ಸಿಗುತ್ತದೆ. ಈ ರೀತಿಯಾಗಿ ನಮೂನೆ ಒಂಬತ್ತರಲ್ಲಿ ಜಾಗಕ್ಕೆ ಸಂಬಂಧಿಸಿದಂತೆ ಸಂಪೂರ್ಣ ಮಾಹಿತಿ ಇರುತ್ತದೆ ಅದು ಖಾಲಿ ಜಾಗ ಅಥವಾ ಮನೆಯೇ, ಅದರ ಅಳತೆ ಅದರ ಅಕ್ಕಪಕ್ಕದಲ್ಲಿ ಏನಿದೆ ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿ ನಮೂನೆ ಒಂಬತ್ತರಲ್ಲಿ ಇರುತ್ತದೆ. ಅದೇ ರೀತಿಯಾಗಿ ಈ ಆಸ್ತಿ ಯಾವ ಗ್ರಾಮ ಪಂಚಾಯಿತಿಗೆ ಸೇರಿದೆ ಎಂಬುದರ ಬಗ್ಗೆ ಮಾಹಿತಿ ಇರುತ್ತದೆ ನಮೂನೆ ಒಂಬತ್ತು ತೆಗೆದುಕೊಳ್ಳುವುದಕ್ಕೆ ಯಾವೆಲ್ಲ ದಾಖಲೆಗಳನ್ನು ಒದಗಿಸಲಾಗಿದೆ ಎಂಬುದರ ಬಗ್ಗೆ ಮಾಹಿತಿ ಇರುತ್ತದೆ.

ಅದೇ ರೀತಿಯಲ್ಲಿ ನಿಮ್ಮ ಹೆಸರು ಮಾಲೀಕರ ಹೆಸರು ವಿಳಾಸ ಭಾವಚಿತ್ರದ ಸಮೇತ ನಿಮಗೆ ದೊರೆಯುತ್ತದೆ. ಈ ದಾಖಲೆ ಮೂಲಕ ನೀವು ಆಸ್ತಿಯ ಮಾಲೀಕರು ಯಾರು ಎಂಬುದನ್ನು ಆನ್ಲೈನಲ್ಲಿ ತಿಳಿದುಕೊಳ್ಳಬಹುದು. ಇ ಸ್ವತ್ತಿನಲ್ಲಿ ನಮೂನೆ-ಒಂಬತ್ತನ್ನು ನೋಡಿ ನೀವು ಆಸ್ತಿಯನ್ನು ಖರೀದಿ ಮಾಡಿದರೆ ನಿಮಗೆ ಇದರಿಂದ ಯಾವುದೇ ರೀತಿಯ ಹಾನಿ ಉಂಟಾಗುವುದಿಲ್ಲ.

ಇನ್ನು ನಮೂನೆ ಒಂಬತ್ತನ್ನು ಪಡೆಯುವುದಕ್ಕೆ ಯಾವೆಲ್ಲ ದಾಖಲೆಗಳನ್ನು ಒದಗಿಸಬೇಕು ಎಂಬುವುದನ್ನು ನೋಡುವುದಾದರೆ, ಮೊದಲಿಗೆ ಆಸ್ತಿಗಳು ಗ್ರಾಮ ಠಾಣಾ ವ್ಯಾಪ್ತಿಯಲ್ಲಿ ಇದ್ದಾಗ ನೀವು ಯಾವ ದಾಖಲೆಗಳನ್ನು ಸಲ್ಲಿಸಬೇಕು ಎಂದರೆ ಮೊದಲಿಗೆ ಮಾಲೀಕತ್ವದ ದಾಖಲೆಗಳನ್ನು ಸಲ್ಲಿಸಬೇಕು ನೀವೇ ಅದರ ಮಾಲೀಕರು ಎಂಬುದನ್ನು ಖಾತರಿಪಡಿಸುವುದಕ್ಕೆ ದಾಖಲೆಗಳನ್ನು ಸಲ್ಲಿಸಬೇಕು. ಅದರ ಜೊತೆಗೆ ಗ್ರಾಮಠಾಣ ನಕ್ಷೆಯನ್ನು ಕೂಡ ಸಲ್ಲಿಸಬೇಕು

ಆ ನಕ್ಷೆಯಲ್ಲಿ ನಿಮ್ಮ ಆಸ್ತಿ ಇರಬೇಕು. ಗ್ರಾಮಠಾಣ ನಕ್ಷೆಯನ್ನು ತಹಶೀಲ್ದಾರರು ಪರಿಶೀಲನೆ ಮಾಡಿ ಅವರು ನಿಮಗೆ ಒಂದು ಪ್ರಮಾಣಪತ್ರವನ್ನು ಕೊಡಬೇಕು. ಜೊತೆಗೆ ಅರ್ಜಿದಾರರು ನಿಮ್ಮ ಭಾವಚಿತ್ರ ಮತ್ತು ಪಡಿತರ ಚೀಟಿ, ಪ್ಯಾನ್ ಕಾರ್ಡ್ ಆಧಾರ್ ಕಾರ್ಡ್ ನಂತಹ ಗುರುತು ವಿಳಾಸ ಇರುವ ದಾಖಲೆಗಳನ್ನು ನೀಡಬೇಕು ಈ ರೀತಿಯಾಗಿ ನೀವು ದಾಖಲೆಗಳನ್ನು ಸಲ್ಲಿಸಿದಾಗ ನಿಮಗೆ ನಮೂನೆ-9 ಸಿಗುತ್ತದೆ.

ಕೃಷಿಯೇತರ ಆಸ್ತಿ ಆಗಿದ್ದಾಗ ಅಂದರೆ ಕೆಲವೊಂದು ಕಡೆ ಸೈಟ್ಗಳನ್ನು ಮಾಡಿರುತ್ತಾರೆ ಲೇಔಟ್ ಗಳನ್ನು ಮಾಡಿರುತ್ತಾರೆ ಕೃಷಿ ಭೂಮಿಯಿಂದ ಕೃಷಿಯೇತರ ಭೂಮಿಯಾಗಿ ಪರಿವರ್ತನೆ ಆಗಿದ್ದಾಗ ನಮೂನೆ-ಒಂಬತ್ತನ್ನು ನೀಡುತ್ತಾರೆ. ಇದನ್ನು ಪಡೆಯಲು ನೀವು ಮಾಲೀಕತ್ವದ ದಾಖಲೆಗಳನ್ನು ನೀಡಬೇಕು ಕಂದಾಯ ಇಲಾಖೆಯಿಂದ ನೀಡುವ ಪರಿವರ್ತನೆ ಆದೇಶವನ್ನು ಸಲ್ಲಿಸಬೇಕಾಗುತ್ತದೆ. ನಗರಾಭಿವೃದ್ಧಿ ಇಲಾಖೆಯಡಿಯಲ್ಲಿ ಯೋಜನೆಗೆ ಅನುಮತಿ ಸಿಕ್ಕರೆ ಅನುಮೋದನೆ ಪ್ರತಿಯನ್ನು ಸಲ್ಲಿಸಬೇಕು ಅದೇ ರೀತಿಯಲ್ಲಿ ಅರ್ಜಿದಾರರು ನಿಮ್ಮ ಭಾವಚಿತ್ರ ಮತ್ತು ಪಡಿತರ ಚೀಟಿ, ಪ್ಯಾನ್ ಕಾರ್ಡ್ ಆಧಾರ್ ಕಾರ್ಡ್ ನಂತಹ ಗುರುತು ವಿಳಾಸ ಇರುವ ದಾಖಲೆಗಳನ್ನು ನೀಡಬೇಕು.

ಒಂದು ವೇಳೆ ನಿಮಗೆ ಸರ್ಕಾರಿ ವಸತಿ ಯೋಜನೆ ಅಡಿಯಲ್ಲಿ ಆಸ್ತಿಯನ್ನು ನೀಡಿದ್ದರೆ ನೀವು ನಮೂನೆ-ಒಂಬತ್ತು ಪಡೆಯುವುದಕ್ಕೆ ಯಾವ ಯೋಜನೆ ಅಡಿಯಲ್ಲಿ ನಿಮಗೆ ಜಾಗವನ್ನು ನೀಡಲಾಗಿ ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ನೀಡಬೇಕು ಜೊತೆಗೆ ಅರ್ಜಿದಾರರು ನಿಮ್ಮ ಭಾವಚಿತ್ರ ಮತ್ತು ಪಡಿತರ ಚೀಟಿ, ಪ್ಯಾನ್ ಕಾರ್ಡ್ ಆಧಾರ್ ಕಾರ್ಡ್ ನಂತಹ ಗುರುತು ವಿಳಾಸ ಇರುವ ದಾಖಲೆಗಳನ್ನು ನೀಡಬೇಕು.

ಇನ್ನು ನಮೂನೆ-ಹನ್ನೊಂದು ಎಂದರೆ ಏನು ಎಂಬುದನ್ನು ತಿಳಿದುಕೊಳ್ಳೋಣ. ಈ ಸ್ವತ್ತು ನಮೂನೆ ಹನ್ನೊಂದನ್ನೂ ಕೂಡ ಕೃಷಿಯೇತರ ಆಸ್ತಿ ಗಳಿಗೋಸ್ಕರ ಕೊಡುತ್ತಾರೆ. ಇಲ್ಲಿ ಭೂಮಿ ಇರಬಹುದು ಕಟ್ಟಡ ಇರಬಹುದು ಎಲ್ಲಾ ಆಸ್ತಿಗಳಿಗೆ ತೆರಿಗೆಯನ್ನು ಸಂಗ್ರಹಿಸುವುದಕ್ಕೆ ನಮೂನೆ ಹನ್ನೊಂದನ್ನು ನೀಡುತ್ತಾರೆ ಕೆಲವೊಂದು ಬಾರಿ ನಮೂನೆ-ಒಂಬತ್ತು ಸಿಗದಿದ್ದಾಗ ನಮೂನೆ ಹನ್ನೊಂದು ನಿಮಗೆ ಸಿಗುತ್ತದೆ. ಇದರಲ್ಲಿಯೂ ಕೂಡ ಆಸ್ತಿಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ಇರುತ್ತದೆ.

ನಮೂನೆ ಒಂಬತ್ತು ಮತ್ತು ನಮೂನೆ-ಹನ್ನೊಂದರ ಉಪಯೋಗಗಳು ಏನು ಎಂಬುದನ್ನು ನೋಡುವುದಾದರೆ ಸರ್ಕಾರದವರು ಖಾಲಿ ಜಾಗ ಅಥವಾ ಕಟ್ಟಡದ ತೆರಿಗೆಯನನ್ನು ನಮೂನೆ ಒಂಬತ್ತು ಮತ್ತು ಹನ್ನೊಂದರ ಮೂಲಕ ಸಂಗ್ರಹಿಸುತ್ತಾರೆ. ಅದೇ ರೀತಿಯಾಗಿ ನೀವು ಕೃಷಿಯೇತರ ಆಸ್ತಿಯನ್ನ ಮಾರಾಟ ಮಾಡಬೇಕು ಅಥವಾ ತೆಗೆದುಕೊಳ್ಳಬೇಕು ಎಂದರೆ ಅದಕ್ಕೆ ನಮೂನೆ-ಒಂಬತ್ತು ಮತ್ತು ನಮೂನೆ-ಹನ್ನೊಂದು ಬೇಕಾಗುತ್ತದೆ.

ಈ ದಾಖಲೆಗಳು ಇಲ್ಲದಿದ್ದಾಗ ನೀವು ಆಸ್ತಿಯನ್ನು ನೊಂದಣಿ ಮಾಡಿಸಿಕೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲ. ಈ ರೀತಿಯಾಗಿ ನಮೂನೆ-ಒಂಬತ್ತು ಮತ್ತು ನಮೂನೆ-ಹನ್ನೊಂದು ಕೃಷಿಯೇತರ ಭೂಮಿಗಳ ಮಾರಾಟ ಮತ್ತು ಖರೀದಿ ಗೆ ತುಂಬಾ ಅಗತ್ಯವಾಗಿ ಬೇಕಾಗಿರವಂತದ್ದಾಗಿದೆ. ನೋಡಿದಿರಲ್ಲ ಸ್ನೇಹಿತರೆ ಇ ಸ್ವತ್ತು ಎಂದರೇನು ಅದರಿಂದ ಯಾವ ರೀತಿಯ ಪ್ರಯೋಜನ ಆಗುತ್ತವೆ ಅದೇ ರೀತಿಯಾಗಿ ನಮೂನೆ-ಒಂಬತ್ತು ಮತ್ತು ನಮೂನೆ-ಹನ್ನೊಂದು ಯಾವ ರೀತಿಯಾಗಿ ಪಡೆದುಕೊಳ್ಳಬಹುದು ಅದರಿಂದ ಯಾವ ಪ್ರಯೋಜನವಾಗುತ್ತದೆ ಎಂಬುದರ ಬಗ್ಗೆ ನೀವು ತಿಳಿದುಕೊಂಡಿದ್ದೀರಿ ಈ ಮಾಹಿತಿಯನ್ನು ನಿಮ್ಮ ಪರಿಚಿತರಿಗು ತಿಳಿಸಿರಿ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!