ದುಬೈ ಯುನೈಟೆಡ್‌ ಅರಬ್ ಎಮಿರೇಟ್ಸ್‌‌ ನ ಏಳು ಎಮಿರೇಟ್‌ಗಳಲ್ಲಿ ಒಂದಾಗಿದ್ದು ಅವುಗಳಲ್ಲೇ ಒಂದಾದ ರಾಜ್ಯವಾಗಿದೆ. ಇದು ಅರೇಬಿಯನ್ ದ್ವೀಪಕಲ್ಪದಲ್ಲಿರುವ ಪರ್ಷಿಯನ್‌ ಕೊಲ್ಲಿಯ ದಕ್ಷಿಣ ಕರಾವಳಿಯುದ್ದಕ್ಕೂ ಹರಡಿದೆ. ಎಮಿರೇಟ್‌ನಿಂದ ದುಬೈ ಮುನಿಸಿಪಾಲಿಟಿ ಅಥವಾ ಪೌರಸಂಸ್ಥೆಯನ್ನು ಪ್ರತ್ಯೇಕಿಸಲು ಕೆಲವು ಬಾರಿ ದುಬೈ ರಾಜ್ಯ ಎಂದೂ ಕರೆಯಲಾಗುತ್ತದೆ. ಯು ಎ ಈ ರಚನೆಯ 150 ವರ್ಷಗಳ ಮುಂಚೆಯೇ ನಗರವು ಅಸ್ತಿತ್ವದಲ್ಲಿತ್ತು ಎಂದು ಲಿಖಿತ ದಾಖಲೆಗಳು ಉಲ್ಲೇಖಿಸುತ್ತವೆ. ಆದ್ದರಿಂದ ನಾವು ಇಲ್ಲಿ ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಕಾನೂನು, ರಾಜಕೀಯ, ಸೈನ್ಯ ಹಾಗೂ ಆರ್ಥಿಕ ಚಟುವಟಿಕೆಗಳು ಇತರೆ ಎಮಿರೇಟ್‌‌ಗಳೊಡನೆ ಒಕ್ಕೂಟ ಸಂರಚನೆಯಂತೆಯೇ ನಡೆದರೂ ಪ್ರತಿ ಎಮಿರೇಟ್‌ ತನ್ನದೇ ಆದ ಪ್ರತ್ಯೇಕ ವ್ಯಾಪ್ತಿಯನ್ನು ಹೊಂದಿದೆ. ಅಂದರೆ ಸ್ಥಳೀಯ ನಾಗರಿಕ ಸೌಲಭ್ಯಗಳು ಹಾಗೂ ಮತ್ತದರ ಉಸ್ತುವಾರಿಗಳು ಹಾಗೂ ನಾಗರಿಕ ಕಾನೂನುಗಳ ಜಾರಿ ಕ್ರಿಯೆ ಆಯಾ ಪ್ರದೇಶಗಳಿಗೆ ಅನುಗುಣವಾಗಿರುತ್ತವೆ. ದುಬೈ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವುದಲ್ಲದೇ, ವಿಸ್ತೀರ್ಣದಲ್ಲಿ ಎರಡನೆಯ ಅತಿ ದೊಡ್ಡ ಪ್ರದೇಶವಾಗಿದ್ದು ಅಬುಧಾಬಿಯ ನಂತರದ ಸ್ಥಾನ ಹೊಂದಿದೆ.

ಎಮಿರೇಟ್‌ನ ಪ್ರಮುಖ ಆದಾಯದ ಮೂಲಗಳೆಂದರೆ ಪ್ರವಾಸೋದ್ಯಮ, ಸ್ಥಿರಾಸ್ತಿ ಮಾರಾಟ ಉದ್ಯಮ ಮತ್ತು ಹಣಕಾಸು ಸೇವೆಗಳು. ದುಬೈನ ಆರ್ಥಿಕತೆಯು ಬಹುಮುಖ್ಯವಾಗಿ ತೈಲೋದ್ಯಮವನ್ನು ಅವಲಂಬಿಸಿದ್ದರೂ, ಪ್ರಸ್ತುತ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲಗಳ ಪೂರೈಕೆಯ ಆದಾಯವು ಒಟ್ಟು ಆರ್ಥಿಕತೆಯಾದ 2005ರಲ್ಲಿ ಶತಕೋಟಿಗಳ ಮೊತ್ತದ ಶೇಕಡಾ 6ಕ್ಕಿಂತ ಕಡಿಮೆ ಇದೆ. ದುಬೈ ತನ್ನ ಸ್ಥಿರಾಸ್ತಿ ನಿರ್ಮಾಣ ಯೋಜನೆಗಳು ಮತ್ತು ಕ್ರೀಡಾಕೂಟಗಳ ಆಯೋಜನೆಯಿಂದ ಗಮನ ಸೆಳೆಯಿತು. ದುಬೈ ಪ್ರವಾಸಿಗರ ಮೆಚ್ಚಿನ ತಾಣವು ಹೌದು.

ದುಬೈನಲ್ಲಿ ಅತ್ಯಂತ ಸುಂದರವಾದ ನ್ಯಾಚುರಲ್ ಹೂವಿನ ಗಾರ್ಡನ್ ಅನ್ನು 2013ರಲ್ಲಿ ನಿರ್ಮಾಣ ಮಾಡಿದ್ದಾರೆ. ಇದು ಪ್ರಪಂಚದ ಅತಿ ದೊಡ್ಡ ಗಾರ್ಡನ್ ಆಗಿದೆ. ಸುಮಾರು 72000 ಸ್ಕ್ವೇರ್ ಮೀಟರ್ ಜಾಗದಲ್ಲಿ ನಿರ್ಮಾಣ ಮಾಡಿದ್ದಾರೆ. ಸರಿಸುಮಾರು 500 ಮಿಲಿಯನ್ ಗಿಂತಲೂ ಹೆಚ್ಚು ಬಗೆಯ ಹೂವಿನ ಗಿಡಗಳು ಇವೆ. ಈ ಗಾರ್ಡನ್ ಅನ್ನು 2013ರ ಪ್ರೇಮಿಗಳ ದಿನದಂದು ಆರಂಭಿಸಲಾಗಿದೆ. ಈ ಗಾರ್ಡನ್ ಗೆ 2015ರಲ್ಲಿ  ನ್ಯೂ ಗಾರ್ಡನ್ ಎಕ್ಸ್ಪೀರಿಯನ್ಸ್ ಒಫ್ ದ ಇಯರ್ ಎಂಬ ಗಾರ್ಡನ್ ಟುರಿಸಮ್ ಅವಾರ್ಡ್ ನೀಡಿದ್ದಾರೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!