ತುಂಬ ತೆಳ್ಳಗಿರುವವರಿಗೆ ದಪ್ಪ ಆಗಬೇಕೆಂದು ಇರುತ್ತದೆ. ಸುಲಭವಾಗಿ ದಪ್ಪ ಆಗುವ ಮನೆ ಮದ್ದುಗಳನ್ನು ಈ ಲೇಖನದ ಮೂಲಕ ತಿಳಿಯೋಣ
ಪ್ರತಿದಿನ ಒಂದು ಹಿಡಿಯಷ್ಟು ಕಡಲೆ ಬೀಜವನ್ನು ರಾತ್ರಿ ನೀರಿನಲ್ಲಿ ನೆನೆಸಿ ಬೆಳಗ್ಗೆ ತಿನ್ನಬೇಕು. ಪ್ರತಿದಿನ ಬೆಳಗ್ಗೆ ಎರಡು ಬಾಳೆಹಣ್ಣು ತಿನ್ನಬೇಕು ನಂತರ ಒಂದು ಗ್ಲಾಸ್ ಹಾಲಿಗೆ ಸ್ವಲ್ಪ ಜೇನುತುಪ್ಪ ಸೇರಿಸಿ ಕುಡಿಯಬೇಕು ನಂತರ ಎರಡು ಸ್ಪೂನ್ ಒಣದ್ರಾಕ್ಷಿ ತಿನ್ನಬೇಕು ನಂತರ ಎರಡು ಏಲಕ್ಕಿ ತಿನ್ನಬೇಕು. ಹೀಗೆ ಒಂದು ತಿಂಗಳು ಮಾಡಿದರೆ ಆರೋಗ್ಯಯುತವಾಗಿ ದಪ್ಪ ಆಗುತ್ತಾರೆ. ಪ್ರತಿದಿನ ತೆಂಗಿನಕಾಯಿಯ ಅರ್ಧ ಹೋಳಿನೊಂದಿಗೆ ಒಣ ಖರ್ಜೂರ ಅಥವಾ ಹಸಿ ಖರ್ಜೂರ ಸೇರಿಸಿ ತಿನ್ನಬೇಕು. ಬಾರ್ಲಿ ಪಾಯಸ ಸೇವಿಸುವುದರಿಂದ ದಪ್ಪ ಆಗುತ್ತಾರೆ ಪಾಯಸವನ್ನು ಮಾಡುವುದು ಹೇಗೆಂದರೆ ಬಾರ್ಲಿಯನ್ನು ಎರಡು ಸ್ಪೂನ್ ತುಪ್ಪದಲ್ಲಿ ಪ್ರೈ ಮಾಡಿಟ್ಟುಕೊಂಡಿರಬೇಕು. ಪಾಯಸ ಮಾಡುವಾಗ 50-100 ಗ್ರಾಂ ಬಾರ್ಲಿಯನ್ನು ಒಂದು ಪಾತ್ರೆಯಲ್ಲಿ ಒಂದು ಗ್ಲಾಸ್ ನೀರು ಹಾಕಿ ಬೇಯಿಸಿ ನಂತರ 250 ml ಹಾಲು ಹಾಗೂ ಸಕ್ಕರೆ ಹಾಕಿ ಮಿಕ್ಸ್ ಮಾಡಿ ತುಪ್ಪದಲ್ಲಿ ಡ್ರೈ ಫ್ರೂಟ್ಸ್ 5-6 ಒಣದ್ರಾಕ್ಷಿ, 3-4 ಬಾದಾಮಿ, 5-6 ಗೋಡಂಬಿ, 2 ಖರ್ಜೂರ ಹುರಿದು ಹಾಕಿ ಮಿಕ್ಸ್ ಮಾಡಬೇಕು ಕೊನೆಯದಾಗಿ ತಿನ್ನುವಾಗ 2 ಸ್ಪೂನ್ ತುಪ್ಪ ಸೇರಿಸಿ ಪ್ರತಿದಿನ ಸಂಜೆ ಒಂದು ತಿಂಗಳು ತಿನ್ನಬೇಕು ಆಗ ದಪ್ಪ ಆಗುತ್ತಾರೆ ಅಲ್ಲದೇ ಮಕ್ಕಳಿಗೆ ಇದು ಒಳ್ಳೆಯ ಆಹಾರ.
ಪ್ರತಿದಿನ 15-20 ಗೋಡಂಬಿ, 8-10 ಬಾದಾಮಿ ತಿನ್ನಬೇಕು. ಬಾದಾಮಿಯನ್ನು ರಾತ್ರಿ ನೆನೆಸಿಟ್ಟು ಬೆಳಗ್ಗೆ ಸಿಪ್ಪೆ ತೆಗೆದು ತಿನ್ನಬೇಕು. ದಪ್ಪ ಆಗಬೇಕಾದರೆ ಆಹಾರ ಪದ್ಧತಿ ಹೇಗಿರಬೇಕೆಂದರೆ ಪ್ರತಿದಿನ 2 ಬೇಯಿಸಿದ ಮೊಟ್ಟೆ, ವಾರಕ್ಕೆ 2 ಸಲ ಚಿಕನ್ ಪ್ರತಿದಿನ ಬೆಣ್ಣೆ, ಆಲೂಗಡ್ಡೆ ಹೆಚ್ಚು ಬಳಸಿ, ಅನ್ ಫಾಲಿಷ್ಡ ರೈಸ್ ಬಳಸಿ. ಅಡುಗೆಯಲ್ಲಿ ಸೊಯಾಬೀನ್ ಹೆಚ್ಚು ಬಳಸಿ. ಹಣ್ಣುಗಳಲ್ಲಿ ಮಾವು, ಹಲಸು, ಸಪೋಟ, ಸೀತಾಫಲ ಹಣ್ಣುಗಳನ್ನು ತಿನ್ನಬೇಕು. ಪ್ರತಿದಿನ ಬಾಳೆಹಣ್ಣು ತಿನ್ನಬೇಕು, ಹಾಲು ಕುಡಿಯಬೇಕು, ಮೊಟ್ಟೆ ತಿನ್ನಬೇಕು ಮೊಟ್ಟೆ ತಿನ್ನದೆ ಇದ್ದವರು ಡ್ರೈ ಫ್ರೂಟ್ಸ್ ತಿನ್ನಬೇಕು. ಹೀಗೆ ಮಾಡುವುದರಿಂದ ಆರೋಗ್ಯವಾಗಿ ಹಾಗೂ ನ್ಯಾಚುರಲ್ ಆಗಿ ದಪ್ಪ ಆಗುತ್ತಾರೆ.