ಆರೋಗ್ಯವೇ ಭಾಗ್ಯ ಆರೋಗ್ಯವೇ ಸರಿ ಇಲ್ಲ ಎಂದರೆ ಎಷ್ಟು ಹಣ, ಐಶ್ವರ್ಯ ಇದ್ದರೂ ಪ್ರಯೋಜನವಿಲ್ಲ. ಆರೋಗ್ಯಕ್ಕೆ ಮೂಲ ನೀರು. ನೀರು ಕುಡಿಯುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ, ಆರೋಗ್ಯವಂತರಾಗಿ ಇರಬಹುದು. ಒಂದು ವೇಳೆ ನೀರನ್ನು ಸರಿಯಾಗಿ ಕುಡಿಯದೇ ಇದ್ದರೆ ಕೆಲವು ಲಕ್ಷಣಗಳು ಕಂಡುಬರುತ್ತವೆ ಆ ಲಕ್ಷಣಗಳು ಯಾವುವು ಎಂಬ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.
ಆರೋಗ್ಯವಾಗಿರಬೇಕು ಎಂದೇ ಎಲ್ಲರೂ ಇಷ್ಟಪಡುತ್ತಾರೆ. ಆರೋಗ್ಯವಂತರಾಗಿ, ಶಕ್ತಿವಂತರಾಗಿ, ಫಿಟ್ ಆಗಿರಲು ದೇಹವನ್ನು ಸರಿಯಾಗಿ ಇಟ್ಟುಕೊಳ್ಳಬೇಕು. ನೀರು ಕುಡಿಯುವುದರಿಂದ ದೇಹದಲ್ಲಿ ನಿರ್ವಶಿಕರಣ ಪ್ರಕ್ರಿಯೆಗೆ ಸಹಾಯ ಮಾಡುವ ಮೂಲಕ ಆರೋಗ್ಯ ಸಮಸ್ಯೆಯನ್ನು ದೂರವಿಡುತ್ತದೆ. ನಾವು ಸಾಕಷ್ಟು ನೀರು ಕುಡಿಯದೆ ಇದ್ದಾಗ ಕೆಲವು ಲಕ್ಷಣಗಳು ಕಂಡುಬರುತ್ತವೆ.
ನೀರು ಕುಡಿಯದೆ ಇದ್ದರೆ ಪದೇ ಪದೇ ಹಸಿವಾಗುತ್ತದೆ. ಸಾಕಷ್ಟು ನೀರು ಕುಡಿಯದೆ ಇದ್ದರೆ ನಮ್ಮ ದೇಹ ನಿರ್ಜಲೀಕರಣ ಉಂಟಾಗಿ ಅದು ತುರ್ತು ಕ್ರಮದ ಸ್ಥಿತಿಯಲ್ಲಿ ಕೆಲಸ ಮಾಡಲು ಪ್ರಾರಂಭಿಸುತ್ತದೆ ಆಗ ಪದೇ ಪದೇ ಹಸಿವಾಗುತ್ತದೆ. ನೀರು ಕುಡಿಯದೆ ಇದ್ದಾಗ ಡೀ ಹೈಡ್ರೇಷನ್ ನ ಒಂದು ಸಾಮಾನ್ಯ ಲಕ್ಷಣವಾದ ಮೂತ್ರ ಹಳದಿಯಾಗುವುದು ಕಂಡುಬರುತ್ತದೆ.
ದೇಹದಲ್ಲಿ ನೀರು ಕಡಿಮೆಯಾದಾಗ ಕಿಡ್ನಿಯಿಂದ ಬರುವ ತ್ಯಾಜ್ಯ ಮೂತ್ರದ ರೂಪದಲ್ಲಿ ಹೊರ ಹೋಗುತ್ತದೆ. ಜೀವಾಣುಗಳ ಸಾಂದ್ರತೆಯ ಹೆಚ್ಚಳದಿಂದ ಮೂತ್ರ ಹಳದಿಯಾಗುತ್ತದೆ. ನೀರು ಸರಿಯಾಗಿ ಕುಡಿಯದೆ ಇದ್ದರೆ ಉಸಿರಾಟದ ಸಮಸ್ಯೆ ಕಂಡುಬರುತ್ತದೆ. ಉಸಿರಾಟಕ್ಕೆ ಸಮಸ್ಯೆ ತಂದೊಡ್ಡಬಲ್ಲ ಬ್ಯಾಕ್ಟೀರಿಯಾವನ್ನು ಬಾಯಿಯಲ್ಲಿರುವ ಸಲೈವಾ ತಡೆಯುತ್ತದೆ. ನೀರನ್ನು ಕಡಿಮೆ ಕುಡಿದಾಗ ಬಾಯಿಯಲ್ಲಿ ಸಲೈವಾ ಪ್ರಮಾಣ ಕಡಿಮೆಯಾಗಿ ಉಸಿರಾಟದ ಸಮಸ್ಯೆ ಕಾಣಿಸಿಕೊಳ್ಳುತ್ತದೆ.
ನೀರನ್ನು ಕಡಿಮೆ ಕುಡಿದಾಗ ತಲೆ ನೋವು ಬರುತ್ತದೆ. ನೀರು ಕಡಿಮೆಯಾದಾಗ ನಮ್ಮ ದೇಹದ ರಕ್ತ ಸಂಚಾರ ಕೂಡ ಕಡಿಮೆಯಾಗುತ್ತದೆ ಆಗ ಮೆದುಳಿಗೆ ಸಾಕಷ್ಟು ಆಮ್ಲಜನಕ ತಲುಪುವುದಿಲ್ಲ ಆದ್ದರಿಂದ ತಲೆನೋವು ಮತ್ತು ಆಲಸ್ಯ ಕಂಡುಬರುತ್ತದೆ. ದೇಹದಲ್ಲಿ ನೀರು ಕಡಿಮೆಯಾದಾಗ ಆಕಳಿಕೆ, ಆಯಾಸ ಉಂಟಾಗುತ್ತದೆ. ದೇಹದಲ್ಲಿ ನೀರು ಕಡಿಮೆಯಾದಾಗ ದೇಹ ರಕ್ತದಲ್ಲಿರುವ ನೀರನ್ನು ತೆಗೆದುಕೊಂಡು ತನ್ನ ಅಗತ್ಯವನ್ನು ಪೂರೈಸಿಕೊಳ್ಳುತ್ತದೆ ಇದರಿಂದ ಹೃದಯ ಬಹಳ ವೇಗವಾಗಿ ಕೆಲಸ ಮಾಡುತ್ತದೆ ಪರಿಣಾಮವಾಗಿ ಆಯಾಸ ಕಾಣಿಸಿಕೊಳ್ಳುತ್ತದೆ.
ಈ ಲಕ್ಷಣಗಳು ಕಾಣಿಸಿಕೊಂಡರೆ ನೀರನ್ನು ನೀವು ಸರಿಯಾಗಿ ಕುಡಿಯುತ್ತಿಲ್ಲ ಎಂದು ಅರ್ಥ. ಇವುಗಳಲ್ಲಿ ಯಾವುದೇ ಒಂದು ಲಕ್ಷಣ ಕಂಡುಬಂದರೂ ನೀರನ್ನು ಸಾಕಷ್ಟು ಪ್ರಮಾಣದಲ್ಲಿ ದಿನಕ್ಕೆ 3-4 ಲೀಟರ್ ಕುಡಿಯಬೇಕು. ನೀರನ್ನು ಕುಡಿಯುವುದರಿಂದ ಆರೋಗ್ಯವಂತರಾಗಿ ಇರಬಹುದು ಆರೋಗ್ಯಕ್ಕೆ ಮೂಲ ನೀರು. ಈ ಮಾಹಿತಿಯನ್ನು ಎಲ್ಲರಿಗೂ ತಿಳಿಸಿ.