ನಾವು ದಿನನಿತ್ಯ ಉಪಯೋಗಿಸುವ ತರಕಾರಿಗಳ ಪೈಕಿ ಬೆಂಡೇ ಕಾಯಿಯೂ ಕೂಡ ಒಂದಾಗಿದೆ ನೋಡಲು ಸಣ್ಣಗೆ ಚೂಪಾಗಿರುವ ಈ ಹಸಿರು ಬಣದ ತರಕಾರಿಯನ್ನು ಇಂಗ್ಲೀಷ್ ನಲ್ಲಿ ಲೇಡಿ ಫಿಂಗರ್ ಅಂತಲೂ ಕರೆಯಲಾಗುತ್ತದೆ, ಅಲ್ಲದೇ ಬೆಂಡೇಕಾಯಿಯಲ್ಲಿ ನಾರಿನಾಂಶ ಸತು ಕ್ಯಾಲ್ಸಿಯಮ್ ವಿಟಮಿನ್ ಎ ವಿಟಮಿನ್ ಬಿ6 ವಿಟಮಿನ್ ಸಿ ಸೇರಿದಂತೆ ಇನ್ನೂ ಹತ್ತು ಹಲವಾರು ದೇಹಕ್ಕೆ ಬೇಕಾದ ಅವಶ್ಯಕ ಪೋಷಕಾಂಶಗಳಿವೆ ಆದ್ದರಿಂದಲೇ ಬೆಂಡೆಕಾಯಿಯು ಹಲವಾರು ರೋಗಗಳಿಗೆ ಮನೆಮದ್ಧು ಎಂಬುದು ತಜ್ಞರ ಸಲಹೆ ಈ ಕಾರಣ ಬೆಂಡೆಕಾಯಿಯನ್ನು ನಾವು ದಿನನಿತ್ಯದ ಆಹಾರದಲ್ಲಿ ಸೇವಿಸುವುದು ಒಳಿತು ಬೆಂಡೆಕಾಯಿಯನ್ನು ನಾವು ಪ್ರತಿನಿತ್ಯದ ಅಡುಗೆಯಲ್ಲಿ ಬಳಸುವುದರಿಂದ ಮತ್ತು ಸೇವಿಸುವುದರಿಂದ ನಮ್ಮ ದೇಹಕ್ಕೆ ಆಗುವ ಅನೇಕ ಆರೋಗ್ಯಕಾರಿ ಲಾಭಗಳನ್ನೊಮ್ಮೆ ತಿಳಿದುಕೊಳ್ಳೋಣ ಬನ್ನಿ.
ರಾತ್ರಿ ಸಮಯದಲ್ಲಿ ಒಂದಷ್ಟು ಬೆಂಡೆಕಾಯಿಗಳನ್ನು ಕತ್ತರಿಸಿ ಒಂದು ಗ್ಲಾಸ್ ನೀರಿನಲ್ಲಿ ನೆನೆಸಿಟ್ಟು ಆ ನೀರನ್ನು ಬೆಳಿಗ್ಗೆ ಎದ್ದ ತಕ್ಷಣ ಕುಡಿಯುವದರಿಂದ ನಿಮ್ಮ ದೇಹದಲ್ಲಿನ ಮೂತ್ರಪಿಂಡದ ಸಮಸ್ಯೆ ಏನೇ ಇದ್ದರೂ ಸಹ ಗುಣವಾಗುತ್ತದೆ ಮತ್ತು ಇದು ಮನುಷ್ಯನ ದೇಹದಲ್ಲಿನ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ಯಾವುದೇ ಸೋಂಕು ಅಥವಾ ಮಹಾಮಾರಿ ರೋಗಗಳು ದೇಹಕ್ಕೆ ತಗುಲದಂತೆ ನೋಡಿಕೊಳ್ಳುವಲ್ಲಿ ಉಪಯುಕ್ತವಾಗಿದೆ, ಅಲ್ಲದೇ ದೇಹದಲ್ಲಿ ಅತಿ ಹೆಚ್ಚು ಕೊಬ್ಬು ಶೇಖರಣೆಯಾಗಿರುವವರು ತಮ್ಮ ತೂಕವನ್ನು ಕಡಿಮೆ ಮಾಡಿಕೊಳ್ಳಲು ಇಚ್ಚಿಸುವವರಿಗೆ ಈ ನೀರು ರಾಮಬಾಣದಂತೆ ಕೆಲಸ ಮಾಡುತ್ತದೆ.
ಬೆಂಡೆಕಾಯಿಯನ್ನು ನಿಯಮಿತವಾಗಿ ಸೇವಿಸುವುದರಿಂದ ದೇಹಕ್ಕೆ ಬೇಕಾದ ಒಳ್ಳೆಯ ಬ್ಯಾಕ್ಟೀರಿಯಾಗಳನ್ನು ಕರುಳಿನಲ್ಲಿ ಉತ್ಪತ್ತಿ ಮಾಡುತ್ತದೆ ಇದರಲ್ಲಿರುವ ವಿಟಮಿನ್ ಸಿ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ, ಬೆಂಡೆಕಾಯಿಯನ್ನು ಹಸಿಯಾಗಿ ತಿನ್ನುವುದರಿಂದ ಅದು ದೇಹದಲ್ಲಿನ ರಕ್ತಪರಿಚಲನೆಯನ್ನು ನಿಯಂತ್ರಿಸುತ್ತದೆ ಅಲ್ಲದೇ ನಮ್ಮ ಉತ್ತಮ ಕಣ್ಣು ದೃಷ್ಟಿ ಹೊಂದಲೂ ಸಹ ಬೆಂಡೆಕಾಯಿಯು ಸಹಕಾರಿಯಾಗಿದೆ.
ಬೆಂಡೇಕಾಯಿಯಲ್ಲಿ ಯಾವುದೇ ರೀತಿಯ ಕೊಬ್ಬಿನ ಅಂಶಗಳು ಇರುವುದಿಲ್ಲ ಬೆಂಡೆಕಾಯಿ ಕಡಿಮೆ ಪ್ರಮಾಣದ ಕ್ಯಾಲರಿಗಳನ್ನು ಮತ್ತು ಹೆಚ್ಚು ಪ್ರಮಾಣದ ಕರಗುವ ನಾರಿನ ಅಂಶವನ್ನು ಹೊಂದಿರುತ್ತದೆ ಹಾಗಾಗಿ ಬೆಂಡೆಕಾಯಿಯನ್ನು ಸೇವಿಸುವುದರಿಂದ ಇದು ದೇಹದಲ್ಲಿನ ಕೊಬ್ಬಿನಾಂಶವನ್ನು ಮತ್ತು ಯಾವುದೇ ವಿಷಕಾರಿ ಅಂಶವನ್ನು ದೇಹದಿಂದ ಹೊರಹಾಕುತ್ತದೆ, ಅಲ್ಲದೇ ಬೆಂಡೆಕಾಯಿಯು ಚರ್ಮಕ್ಕೆ ಒಳಗಿನಿಂದಲೇ ಪುಷ್ಟಿಯನ್ನು ಒದಗಿಸುವುದರಿಂದ ಚರ್ಮ ತನ್ನ ನೈಸರ್ಗಿಕ ಕಾಂತಿಯನ್ನು ಹೆಚ್ಚಿಸಿಕೊಳ್ಳುತ್ತದೆ ಎಳೆಯ ಬೆಂಡೆಕಾಯಿಯು ಮುಖದ ಕಾಂತಿಯನ್ನು ಮತ್ತಷ್ಟು ಹೆಚ್ಚು ಮಾಡಿಕೊಳ್ಳಲು ಬಳಸಬಹುದಾಗಿದೆ ಅಲ್ಲದೇ ಇನ್ನೂ ಹತ್ತು ಹಲವು ರೋಗಗಳಿಗೆ ಇದು ರಾಮಬಾಣವಾಗಿದೆ ಎಂದರೆ ಸುಳ್ಳಲ್ಲ.