ಕನಸುಗಳು ಎಲ್ಲರಿಗೂ ಬಂದೆ ಬರುತ್ತವೆ. ಇದು ಕೆಲವರಿಗೆ ಕೆಟ್ಟ ಕನಸು ಬಂದರೆ ಇನ್ನು ಕೆಲವರಿಗೆ ಒಳ್ಳೆಯ ಕನಸುಗಳು ಬೀಳುತ್ತವೆ. ಆದರೆ ಇವುಗಳ ಅರ್ಥ ಕೂಡಾ ಬೇರೆ ಬೇರೆ ರೀತಿಯಲ್ಲಿ ಇರುತ್ತವೆ. ಈ ಕನಸುಗಳ ಹಿಂದೆ ಏನಾದರೂ ಒಂದು ಸಂಕೇತ ನಮಗೆ ಇದ್ದೆ ಇರುತ್ತದೆ. ನಾವು ನಮಗೆ ಬಿದ್ದ ಕನಸುಗಳ ಬಗ್ಗೆ ಇನ್ನೊಬ್ಬರ ಬಳಿ ಹೇಳಿಕೊಳ್ಳುತ್ತೇವೆ. ಆದರೆ ಎಲ್ಲಾ ಕನಸುಗಳನ್ನು ನಾವು ಇನ್ನೊಬ್ಬರ ಬಳಿ ಹಂಚಿಕೊಳ್ಳಬಾರದು. ಯಾವ ಯಾವ ರೀತಿಯ ಕನಸುಗಳನ್ನು ಇನ್ನೊಬ್ಬರ ಬಳಿ ಎಂದಿಗೂ ಹಂಚಿಕೊಳ್ಳಬಾರದ ಎನ್ನುವುದನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ಮೊದಲಿಗೆ ನಮ್ಮ ಕನಸಿನಲ್ಲಿ ದೇವರು ಬರುವುದು. ಬಹಳಷ್ಟು ಜನರು ಕನಸಿನಲ್ಲಿ ದೇವರು ಬಂದರೆ ಮನೆಯಲ್ಲಿ ಎಲ್ಲರಿಗೂ ಈ ವಿಷಯವನ್ನು ತಿಳಿಸಿಯೆ ತಿಳಿಸಿರುತ್ತಾರೆ. ಈ ಕನಸಿನ ಹಿಂದೆ ಏನಾದರೂ ಒಳ್ಳೆಯ ಅರ್ಥ ಇರಬಹುದು ಒಳ್ಳೆಯ ಲಾಭ ಇರಬಹುದು ಎನ್ನುವುದನ್ನು ತಿಳಿದುಕೊಂಡು ಮನೆಯಲ್ಲಿ ಹೇಳುತ್ತೀರಿ. ಆದರೆ ನಾವು ಈ ರೀತಿಯಲ್ಲಿ ಮನೆಯಲ್ಲಿ ಹೇಳುವುದರಿಂದ ಕನಸಿನ ಹಿಂದಿನ ಅರ್ಥ ಅಥವಾ ಅದರಿಂದ ಆಗುವ ಲಾಭ ನಮಗೆ ಸಂಪೂರ್ಣವಾಗಿ ದೊರೆಯುವುದೇ ಇಲ್ಲ. ಹಾಗಾಗಿ ಕನಸಿನಲ್ಲಿ ದೇವರು ಬಂದಂತಹ ವಿಶೇಷವಾದ ಕನಸು ಏನಾದರೂ ಇದ್ದರೆ ವಿಷಯವನ್ನು ಯಾರ ಬಳಿಯು ಹೇಳಲೇಬಾರದು.
ಇನ್ನು ಎರಡನೆಯದಾಗಿ ನಿಮ್ಮ ಕನಸಿನಲ್ಲಿ ನಿನಗೆ ಏನಾದರೂ ತೀರ್ಥಕ್ಷೇತ್ರಗಳು ಅಥವಾ ದೇವರ ಸ್ಥಳಗಳು ಕಾಣಿಸಿಕೊಂಡರೆ ಈ ವಿಷಯವನ್ನು ಕೂಡ ಇನ್ನೊಬ್ಬರ ಬಳಿ ಯಾವುದೇ ಕಾರಣಕ್ಕೂ ಹಂಚಿಕೊಳ್ಳಬಾರದು. ಕನಸಿನಲ್ಲಿ ಕಂಡಂತಹ ಜಾಗ ಒಂದು ವೇಳೆ ನಿಮಗೆ ಚಿರಪರಿಚಿತವಾಗಿದ್ದರೆ ಆ ಜಾಗಕ್ಕೆ ಭೇಟಿ ನೀಡಿ ಆದರೆ ಯಾರ ಬಳಿಯು ಕೂಡ ಈ ರೀತಿಯಾಗಿ ಕನಸು ಬಿದ್ದಿರುವ ವಿಷಯವನ್ನು ಹೇಳಬಾರದು.
ಇನ್ನು ಮೂರನೆಯದಾಗಿ ನಿಮ್ಮ ಕನಸಿನಲ್ಲಿ ಹರಿಯುವ ನೀರು ಅಥವಾ ಜಲಪಾತಗಳು ಕಾಣಿಸಿಕೊಂಡರೆ ಇದು ಕೂಡ ತುಂಬಾ ಒಳ್ಳೆಯದು ಎಂದು ಹೇಳಬಹುದು. ಈ ರೀತಿಯ ಕನಸು ಬಿದ್ದರೆ ನಿಮಗೆ ಧನಾಗಮನ ಆಗುವ ಸಾಧ್ಯತೆ ಹೆಚ್ಚಿದೆ ಎಂದು ಅರ್ಥ ಆದರೆ ಈ ಕನಸನ್ನು ಕೂಡ ಇನ್ನೊಬ್ಬರ ಬಳಿ ಹೇಳಿಕೊಂಡರೆ ಧನಾಗಮನ ಆಗುವ ಸಾಧ್ಯತೆ ಕಡಿಮೆ ಇದರ ಲಾಭ ಸಂಪೂರ್ಣವಾಗಿ ನಿಮಗೆ ದೊರೆಯುವುದಿಲ್ಲ.
ಏನು ನಾಲ್ಕನೆಯದು ನಿಮ್ಮ ಕನಸಿನಲ್ಲಿ ನೀವು ನಿಮ್ಮ ತಂದೆ-ತಾಯಿಯರಿಗೆ ನೀರು ಕುಡಿಸುತ್ತಿರುವ ಕನಸು ಏನಾದರೂ ಬಿದ್ದರೆ ಇದನ್ನು ಕೂಡ ನೀವು ಇನ್ನೊಬ್ಬರ ಯಾರದೇ ಬಳಿ ಹಂಚಿಕೊಳ್ಳಬಾರದು. ಇದರಿಂದ ಕೂಡಾ ಉತ್ತಮ ಲಾಭವಾಗಲಿದೆ ಆದರೆ ಈ ವಿಷಯಗಳನ್ನು ಯಾರದಾದರೂ ಬಳಿ ಹಂಚಿಕೊಂಡರೆ ಯಾವುದೇ ರೀತಿಯ ಲಾಭಗಳನ್ನು ನಾವು ಪಡೆಯಲು ಸಾಧ್ಯವಿಲ್ಲ
ಇನ್ನು ಕೊನೆಯದಾಗಿ, ನಿಮಗೆ ಏನಾದರೂ ಎತ್ತರದ ಜಲಪಾತದಿಂದ ನೀರು ಬರುತ್ತಿರುವುದು ಅಥವಾ ನೀರನ್ನು ನೀವು ಕುಡಿಯುತ್ತಿರುವ ಕನಸು ಏನಾದರೂ ಬಂದರೆ, ಇದು ಕೂಡ ಒಳ್ಳೆಯ ಕನಸು ಆಗಿದ್ದು ಇದನ್ನು ಕೂಡ ಯಾರ ಬಳಿಯು ನಾವು ಹಂಚಿಕೊಳ್ಳಬಹುದು ಯಾರದಾದರೂ ಹಂಚಿಕೊಂಡರು ಇದರಿಂದ ದೊರೆಯುವ ಒಳ್ಳೆಯ ಲಾಭಗಳು ಅಥವಾ ಫಲಿತಾಂಶಗಳು ನಮಗೆ ದೊರೆಯುವುದಿಲ್ಲ.