ಚಿಕ್ಕ ಮಕ್ಕಳು ಕನಸಿನಲ್ಲಿ ಬಂದ್ರೆ ಏನರ್ಥ ನೋಡಿ

0 150

ಕನಸು ಇದು ಹೆಚ್ಚಾಗಿ ಎಲ್ಲರಿಗೂ ಮಲಗಿದಾಗ ಬೀಳುತ್ತದೆ. ಕೆಲವರಿಗೆ ಕನಸೇ ಬೀಳುವುದಿಲ್ಲ. ಆದರೆ ಇನ್ನೂ ಕೆಲವರಿಗೆ ಕನಸು ಬೀಳುತ್ತದೆ. ಆದರೆ ಕನಸು ಬೀಳದೇ ನಿದ್ದೆ ಬಂದರೆ ಅದು ಆರೋಗ್ಯಕರ ನಿದ್ರೆ ಎಂದು ಹಿರಿಯರು ಹೇಳುತ್ತಾರೆ. ಆದರೆ ಸುಮಾರು 80ಶೇಕಡಾದಷ್ಟು ಜನರಿಗೆ ಕನಸು ಬಿದ್ದೇ ಬೀಳುತ್ತದೆ. ಹಾಗೆಯೇ ಕೆಲವರಿಗೆ ರಾತ್ರಿಯೂ ಕನಸು ಬೀಳುತ್ತದೆ. ಆದ್ದರಿಂದ ನಾವು ಇಲ್ಲಿ ಚಿಕ್ಕ ಮಕ್ಕಳು ಕನಸಿನಲ್ಲಿ ಬಂದರೆ ಏನಾಗುತ್ತದೆ ಎನ್ನುವುದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಕನಸುಗಳು ಕೆಲವೊಮ್ಮೆ ನಾವು ವಿಚಾರ ಮಾಡುವ ವಿಷಯದ ಮೇಲೆ ಬೀಳುತ್ತದೆ. ಹಾಗೆಯೇ ಕೆಲವೊಮ್ಮೆ ಸಂಬಂಧಿಕರು ಕನಸಿನಲ್ಲಿ ಬರುತ್ತಾರೆ. ವಿಚಿತ್ರವೆಂದರೆ ಕೆಲವೊಮ್ಮೆ ಸತ್ತು ಹೋದವರು ಬದುಕಿದ್ದಂತೆ ಅಥವಾ ಮಾತನಾಡಿದಂತೆ ಕನಸಿನಲ್ಲಿ ಬರುತ್ತಾರೆ. ಆದರೆ ಕೆಲವೊಮ್ಮೆ ಕನಸಿನಲ್ಲಿ ಚಿಕ್ಕ ಮಕ್ಕಳು ಬರುತ್ತಾರೆ. ಹೀಗೆ ಚಿಕ್ಕ ಮಕ್ಕಳು ಕನಸಿನಲ್ಲಿ ಬಂದರೆ ಕೆಲವೊಂದು ನಂಬಿಕೆಗಳು ಇವೆ. ಗಂಡು ಮಕ್ಕಳಿಗೆ ಕನಸಿನಲ್ಲಿ ಚಿಕ್ಕ ಮಕ್ಕಳು ಎಂದರೆ 5ವರ್ಷದ ಒಳಗಿನ ಮಗು ಕನಸಿನಲ್ಲಿ ಬರುತ್ತದೆ. ಆಗ ಚಿಕ್ಕ ಮಕ್ಕಳು ಅಳಬಾರದು.

ಹಾಗೆಯೇ ಸಾಯಲೂ ಬಾರದು. ಈತರಹ ಕನಸುಗಳು ಬಿದ್ದರೆ ದರಿದ್ರ ಎನ್ನುವುದು ಇವರಿಗೆ ಆರಂಭವಾಗುತ್ತದೆ. ಇದರಿಂದ ವಾಮಾಚಾರ ಉಂಟಾಗಬಹುದು. ಹಾಗೆಯೇ ಮನೆಯಲ್ಲಿ ಇರುವ ಮಕ್ಕಳಿಗೆ ಏನಾದರೂ ತೊಂದರೆ ಉಂಟಾಗುತ್ತದೆ. ಮನೆಯ ಹಿರಿಯರಿಗೆ ಕಂಟಕವಾಗಬಹುದು. ಮನೆಯ ಯಜಮಾನನಿಗೆ ಯಾವುದಾದರೂ ರೀತಿಯಲ್ಲಿ ಹಾನಿ ಉಂಟಾಗುತ್ತದೆ. ಕುಲದೇವತೆ ಮಕ್ಕಳ ರೂಪದಲ್ಲಿ ಬಂದು ಸೂಚನೆಯನ್ನು ನೀಡುತ್ತದೆ.

ಹಾಗೆಯೇ ಗರ್ಭಿಣಿಯರಿಗೆ ಕನಸಿನಲ್ಲಿ ಚಿಕ್ಕ ಮಕ್ಕಳು ಬರಬಾರದು. ಮಕ್ಕಳು ಅಳುವುದು ಅಥವಾ ಮರಣ ಆಗುವುದು ಕನಸಿನಲ್ಲಿ ಬರಬಾರದು. ಅಕಸ್ಮಾತ್ತಾಗಿ ಈ ರೀತಿಯ ಕನಸು ಬಿದ್ದರೆ ಗರ್ಭಪಾತ ಉಂಟಾಗುತ್ತದೆ. ಹಾಗೆಯೇ ರಕ್ತಹೀನತೆ ಮತ್ತು ಸಂತಾನದೋಷ ಆರಂಭವಾಗುತ್ತದೆ. ಮನೆಯ ಒಳಗೆ ಹಂದಿ ಪ್ರವೇಶ ಆದಂತೆ ಕನಸು ಬಿದ್ದರೆ ಒಳ್ಳೆಯದು. ಹಾಗೆಯೇ ಹಾವು ಕಚ್ಚಿದಂತೆ ಅಥವಾ ಬೆನ್ನಟ್ಟಿ ಬಂದಂತೆ ಕನಸು ಬೀಳಬಾರದು.

Leave A Reply

Your email address will not be published.