ನೋಡಲು ಹಸಿರಾಗಿ ಕಾಣುವ, ತಿಂದರೆ ಸಿಹಿಯಾಗಿರುವ, ಒಣಗಿದರೂ, ಹಸಿ ಇದ್ದರು ಪ್ರಯೋಜನಕ್ಕೆ ಬರುವ ಪ್ರಮುಖವಾದ ಹಣ್ಣು ದ್ರಾಕ್ಷಿ ಹಣ್ಣು. ದ್ರಾಕ್ಷಿ ಬೆಳೆಯನ್ನು ಬೆಳೆಯಲು ಎಷ್ಟು ಖರ್ಚಾಗುತ್ತದೆ, ಅದರ ನಿರ್ವಹಣೆ ಹಾಗೂ ಲಾಭದ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.
ಮೊದಲು ದ್ರಾಕ್ಷಿ ಸಸಿಗಳನ್ನು ತರಬೇಕು ನಂತರ ಕ್ರಾಸಿಂಗ್ ಮಾಡಬೇಕು ಆಗ ಬೇರು ಶಕ್ತಿಯುತವಾಗಿ ದ್ರಾಕ್ಷಿ ಬೆಳೆ ಬೆಳೆಯುತ್ತದೆ. ದ್ರಾಕ್ಷಿ ಬೆಳೆಯನ್ನು ಬೆಳೆಯಲು ಎಕರೆಗೆ ಕನಿಷ್ಠ 5 ಲಕ್ಷ ಖರ್ಚು ಬರುತ್ತದೆ. ದ್ರಾಕ್ಷಿ ಬೆಳೆಯು 2 ವರ್ಷದ ನಂತರ ಬರುತ್ತದೆ 2 ವರ್ಷದವರೆಗೂ ನಿರ್ವಹಣೆ ಮಾಡಬೇಕು. 5 ಎಕರೆಗೆ 31 ಲಕ್ಷರೂ ಹಣ ಖರ್ಚಾಗುತ್ತದೆ. ವರ್ಷದಿಂದ ವರ್ಷಕ್ಕೆ ಬೆಳೆ ಚೆನ್ನಾಗಿ ಬರುತ್ತದೆ. 5 ಎಕರೆಯಲ್ಲಿ ಸಾಲಿನಿಂದ ಸಾಲಿಗೆ 10 ಫೀಟ್ ಅಂತರವಿರಬೇಕು. ಗಿಡದಿಂದ ಗಿಡಕ್ಕೆ 5 ಫೀಟ್ ಇರಬೇಕು. ಒಂದು ಎಕರೆಗೆ 800 ರಿಂದ 900 ಗಿಡಗಳನ್ನು ಬೆಳೆಸಬಹುದು. ಒಂದು ಸಾಲಿನಲ್ಲಿ 50-60 ಗಿಡಗಳನ್ನು ಬೆಳೆಸುವುದರಿಂದ ಒಂದು ಟನ್ ದ್ರಾಕ್ಷಿ ಬೆಳೆ ಬರುತ್ತದೆ. ಇತ್ತೀಚಿನ ದಿನಗಳಲ್ಲಿ ದ್ರಾಕ್ಷಿಗೆ ಯಾವ ರೀತಿಯ ರೋಗ ಬಂದರೂ ಔಷಧಿಗಳು ಲಭ್ಯವಿರುವುದರಿಂದ ಪರಿಹಾರವಾಗುತ್ತದೆ.
ದ್ರಾಕ್ಷಿ ಬೆಳೆಯನ್ನು ಬೆಳೆಯಬೇಕಾದರೆ ಮೊದಲು ಅದರ ಬಗ್ಗೆ ಮಾಹಿತಿಯನ್ನು ಹೊಂದಿದವರ ಬಳಿ ಕೇಳಿ ತಿಳಿದುಕೊಳ್ಳಬೇಕು. ಬಂಡವಾಳ ಕಡಿಮೆ ಇದ್ದರೆ ಒಂದು ಎಕರೆಯಲ್ಲಿ ಮಾಡಬಹುದು 3 ಲಕ್ಷ ಹಣ ಖರ್ಚಾಗುತ್ತದೆ. ಅಕ್ಟೋಬರ್ ತಿಂಗಳಿನಿಂದ ಕಾಯಿ ಚಾಟ್ನಿ ಮಾಡಬೇಕು ಪ್ರತಿದಿನ ಔಷಧಿ ಸಿಂಪಡಿಸಬೇಕು. ಹವಾಗುಣದಿಂದ ಮಳೆ ಬಂದಾಗ ರೋಗ ಬರುತ್ತದೆ, ಬಿಸಿಲಿದ್ದರೆ ಸಮಸ್ಯೆ ಇಲ್ಲ. ಡೌನ್ ಮೆಲ್ಡಿ ಎಂಬ ರೋಗ ದ್ರಾಕ್ಷಿ ಬೆಳೆಗೆ ಬರುತ್ತದೆ. ಅಕ್ಟೋಬರ್ ತಿಂಗಳಲ್ಲಿ ಕಾಯಿ ಕಟ್ ಮಾಡಿ 65 ದಿನದ ನಂತರ ಈ ರೋಗ ಬರುವುದಿಲ್ಲ. ಎಣ್ಣೆಯನ್ನು ಸರಿಯಾಗಿ ಸ್ಪ್ರೆ ಮಾಡದೆ ಇದ್ದರೆ ಕಾಯಿಗಳು ಉದುರಿ ಹೋಗುತ್ತವೆ. ದ್ರಾಕ್ಷಿ ಬೆಳೆಗಳನ್ನು ಡ್ರೈ ಮಾಡಿದರೆ 3 ಟನ್ ದ್ರಾಕ್ಷಿ ಬೆಳೆ ಬರುತ್ತದೆ. ದ್ರಾಕ್ಷಿಯನ್ನು ಡ್ರೈ ಮಾಡದೇ ಇದ್ದರೆ 7-8 ಟನ್ ಬೆಳೆ ಬರುತ್ತದೆ.
ದ್ರಾಕ್ಷಿ ಬೆಳೆಯನ್ನು ಡ್ರೈ ಮಾಡಿ ಮಾರುವುದೇ ಉತ್ತಮ, ಡ್ರೈ ಮಾಡಿದರೆ ಕೋಲ್ಡ್ ಸ್ಟೋರೇಜ್ ನಲ್ಲಿ ಇಟ್ಟು ಬೆಲೆ ಹೆಚ್ಚು ಇದ್ದಾಗ ಮಾರಬಹುದು. 5 ಎಕರೆಗೆ ದ್ರಾಕ್ಷಿಯನ್ನು ಡ್ರೈ ಮಾಡಿದರೆ 24 ಟನ್ ದ್ರಾಕ್ಷಿ ಬರುತ್ತದೆ. 5 ಎಕರೆಗೆ 32 ಲಕ್ಷ ಆದಾಯ ಬರುತ್ತದೆ ಖರ್ಚು ತೆಗೆದರೆ 25 ಲಕ್ಷ ಆದಾಯ ಬರುತ್ತದೆ. ದ್ರಾಕ್ಷಿ ಬೆಳೆಯನ್ನು ಬೆಳೆಸಬೇಕಾದರೆ ಕೆಲಸದವರನ್ನು ಇಟ್ಟುಕೊಂಡರೆ ಲಾಭ ಆಗುವುದರಲ್ಲಿ ಕಡಿಮೆಯಾಗುತ್ತದೆ ಆದ್ದರಿಂದ ಮನೆಯವರೇ ಕೆಲಸ ಮಾಡುವುದರಿಂದ ಲಾಭ ಪಡೆಯಬಹುದು. ದ್ರಾಕ್ಷಿ ಬೆಳೆಯನ್ನು ಬೆಳೆಯುವಾಗ ಮಣ್ಣು ಮತ್ತು ನೀರನ್ನು ಪರೀಕ್ಷಿಸಿ ಬೆಳೆ ಬೆಳೆಯುವುದು ಉತ್ತಮ. ಬಿಜಾಪುರ ಜಿಲ್ಲೆಯಲ್ಲಿ ಹೆಚ್ಚಿನ ದ್ರಾಕ್ಷಿಯನ್ನು ಬೆಳೆಯುತ್ತಾರೆ. ಈ ರೀತಿಯ ವಿಧಾನಗಳನ್ನು ಅನುಸರಿಸಿ ದ್ರಾಕ್ಷಿ ಬೆಳೆದರೆ ಗೊಂಚಲು ಗೊಂಚಲು ದ್ರಾಕ್ಷಿಯನ್ನು ಬೆಳೆದು ಹೆಚ್ಚು ಲಾಭ ಗಳಿಸುವುದರಲ್ಲಿ ಯಾವುದೇ ಸಂದೇಹವಿಲ್ಲ. ಒಟ್ಟಿನಲ್ಲಿ ದ್ರಾಕ್ಷಿ ಬೆಳೆ ಸೂಕ್ಷ್ಮವಾದ ಬೆಳೆಯಾಗಿದೆ. ಈ ಮಾಹಿತಿಯನ್ನು ರೈತ ಬಾಂಧವರಿಗೆ ತಪ್ಪದೇ ತಿಳಿಸಿ.