ಇಡೀ ಜಗತ್ತಿನಲ್ಲಿ ಕೊರೊನಾ ಒಂದು ದೊಡ್ಡ ಮಹಾಮಾರಿ ಆಗಿದ್ದು ದಿನದಿಂದ ದಿನಕ್ಕೆ ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತಿದೆ. ಇದು ಶುರುವಾಗಿ ಸುಮಾರು ಒಂದು ವರ್ಷದ ಮೇಲೆ ಬಂದರೂ ಇನ್ನೂ ಯಾರಿಗೂ ಸಹ ಇದಕ್ಕೆ ಸರಿಯಾದ ಔಷಧಿಯನ್ನು ಕಂಡು ಹಿಡಿಯಲಾಗಲಿಲ್ಲ. ಏಕೆಂದರೆ ಇದು ದಿನದಿಂದ ದಿನಕ್ಕೆ ತನ್ನ ಗುಣಲಕ್ಷಣಗಳನ್ನು ಬದಲಾಯಿಸಿಕೊಳ್ಳುತ್ತಿದೆ. ಹಾಗಾಗಿ ಇದು ಬರಬಾರದು ಎಂದರೆ ಮೊದಲೇ ಒಂದಿಷ್ಟು ಕ್ರಮಗಳನ್ನು ತೆಗೆದುಕೊಳ್ಳಬೇಕು. ಆದ್ದರಿಂದ ನಾವು ಇಲ್ಲಿ ಕೊರೊನಾ ಬಂದಾಗ ಏನು ಮಾಡಬಾರದು ಎನ್ನುವುದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಮನೆಯಲ್ಲಿ ಓಬ್ಬರಿಗೆ ಕೊರೊನಾ ಬಂದರೆ ಸಾಕು. ಎಲ್ಲರಿಗೂ ಇದು ಹರಡುತ್ತಿದೆ. ಹಾಗಾಗಿ ಕೆಲವೊಮ್ಮೆ ಮನೆಯಲ್ಲಿ ಎಲ್ಲರಿಗೂ ಬಂದರೂ ಒಬ್ಬರಿಗೆ ಬರದಿರಬಹುದು. ಅಂತಹವರು ಕೊರೊನಾ ಮಾತ್ರೆಗಳನ್ನು ತೆಗೆದುಕೊಳ್ಳಬಾರದು. ಏಕೆಂದರೆ ಇದರಿಂದ ಅಶಕ್ತತೆ ಆಗುತ್ತದೆ. ಹಾಗೆಯೇ ಸ್ಟೀಮ್ ತೆಗೆದುಕೊಳ್ಳಬೇಕು. ಕೇವಲ ನೆಗಡಿ ಇದ್ದರೆ ಮಾತ್ರ ಸ್ಟೀಮ್ ತೆಗೆದುಕೊಳ್ಳಬೇಕು. ಒಂದು ಬಾರಿ ಸ್ಟೀಮ್ ತೆಗೆದುಕೊಂಡು ಕೆಮ್ಮು ಶುರು ಆದರೆ ಅಂತಹವರು ಸ್ಟೀಮ್ ತೆಗೆದುಕೊಳ್ಳಬಾರದು. ಹಾಗೆಯೇ ತಣ್ಣ ನೀರನ್ನು ಕುಡಿಯುವ ರೂಢಿ ಇರುವವರು ತಣ್ಣ ನೀರನ್ನೇ ಕುಡಿಯಬೇಕು.
ಆದರೆ ಫ್ರಿಜ್ ನಲ್ಲಿ ಇರುವ ನೀರನ್ನು ಕುಡಿಯಬಾರದು. ಮೊದಲಿನಿಂದಲೂ ಪ್ರಾಣಾಯಾಮ ಮಾಡುವ ರೂಢಿ ಇದ್ದರೆ ಮಾಡಬೇಕು. ಕೆಮ್ಮು ಮತ್ತು ಶ್ವಾಸನಾಳದ ತೊಂದರೆ ಇದ್ದರೆ ಪ್ರಾಣಾಯಾಮ ಮಾಡಬಾರದು. ಇದರಿಂದ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಕೆಮ್ಮು ಇದ್ದಾಗ ನಿಂಬೆರಸವನ್ನು ಮೂಗಿಗೆ ಹಾಕಿಕೊಳ್ಳಬಾರದು. ಕೆಮ್ಮು ಇದ್ದು ಹೀಗೆ ಮಾಡಿದರೆ ಮತ್ತೆ ಕೆಮ್ಮು ಜಾಸ್ತಿಯಾಗುತ್ತದೆ. ಕೊರೊನಾದ ಗುಣಲಕ್ಷಣಗಳು ಕಂಡು ಬಂದಲ್ಲಿ ಅದಕ್ಕೆ ಬೇಕಾದ ಕ್ರಮಗಳನ್ನು ಕೈಗೊಳ್ಳಬೇಕು. ಯಾರಾದರೂ ಏನಾದರೂ ತಿಳಿದುಕೊಳ್ಳುತ್ತಾರೆ ಎನ್ನುವ ಚಿಂತೆ ಮಾಡಬಾರದು. ಬಹಳ ಬಿಸಿ ಬಿಸಿಯಾದ ನೀರನ್ನು ಸ್ನಾನ ಮಾಡಬಾರದು.
ಅತಿಯಾದ ಬಿಸಿ ನೀರಿನ ಹವೆ ಉಸಿರಾಟದ ತೊಂದರೆ ಉಂಟು ಮಾಡಬಹುದು. ಹಾಗೆಯೇ ಕೊರೊನಾ ಇದ್ದವರ ಜೊತೆ ಮಾತನಾಡಬೇಕು. ಅವರ ಮನಸ್ಸಿನಲ್ಲಿ ಹೆದರಿಕೆ ಇರಬಾರದು ಹಾಗೆ ಧೈರ್ಯವನ್ನು ತುಂಬಬೇಕು. ಹೆಚ್ಚಿನ ಕೆಮ್ಮು ಇದ್ದರೆ ಮಾತನಾಡದಂತೆ ನೋಡಿಕೊಳ್ಳಿ. ಏನೇ ಆದರೂ ಕೊರೊನಾ ಗೆಲ್ಲಬೇಕು ಎಂದರೆ ಮನಸ್ಸಿನಲ್ಲಿ ಆತ್ಮವಿಶ್ವಾಸ ಇರಬೇಕು. ಏಕೆಂದರೆ ಆತ್ಮವಿಶ್ವಾಸ ಇರದ ಯುವಕರು ಸತ್ತು ಆತ್ಮವಿಶ್ವಾಸ ಇಟ್ಟುಕೊಂಡು ಸಾಯದೇ ಬದುಕಿರುವ ಕೊರೊನಾ ಕೇಸಸ್ ಗಳು ಬಹಳ ಇವೆ. ಹೊರಗೆ ಹೋಗುವಾಗ ಮಾಸ್ಕ್ ನ್ನು ಧರಿಸಲೇಬೇಕು. ಇಲ್ಲವಾದಲ್ಲಿ ಅಪಾಯ ಕಟ್ಟಿಟ್ಟಬುತ್ತಿ ಎಂದು ಹೇಳಬಹುದು.