Dogs Howl at night: ಆತ್ಮೀಯ ಓದುಗರೇ ನಾಯಿಗಳು ರಾತ್ರಿ ಅಳುವುದನ್ನು (Dogs Howl at night) ನೀವು ಗಮನಿಸಿರುತ್ತೀರಾ, ಆದ್ರೆ ಇದರ ಹಿಂದಿನ ಅಸಲಿ ವಿಚಾರವೇನು ಅನ್ನೋದನ್ನ ಇಲ್ಲಿ ಗಮನಿಸಿ. ಮನುಷ್ಯನು ದ್ರೋಹ ಮಾಡಬಹುದು ಆದರೆ ನಾಯಿಯೂ ನಿಯತ್ತಿನ ಪ್ರಾಣಿ ಯಾವತ್ತೂ ಕೂಡ ತನ್ನ ಮಾಲೀಕನಿಗೆ ತನ್ನ ಕೊನೆ ಉಸಿರು ಇರುವವರೆಗೂ ಮೋಸ ಮಾಡುವುದಿಲ್ಲ ಮತ್ತು ಅವರನ್ನು ಕಚ್ಚುವುದಿಲ್ಲ, ನಾಯಿಯ ಈ ಗುಣ ಎಲ್ಲರಿಗೂ ಇಷ್ಟ ಆಗುತ್ತದೆ ಆದ್ದರಿಂದ ಎಲ್ಲರು ಮನೆಯಲ್ಲಿ ನಾಯಿಯನ್ನು ಖುಷಿಯಿಂದ ಪ್ರೀತಿಯಿಂದ ಸಾಕುತ್ತಾರೆ. ನಾಯಿಗಳು ಪ್ರೀತಿಗೆ ಶಿಸ್ತಿಗೆ ನಿಯತ್ತಿಗೆ ಹೆಸರಾದ ಪ್ರಾಣಿ. ನಾಯಿಯನ್ನು ಸಾಕಿದವರು ತಮ್ಮ ಖಿನ್ನತೆ ಮತ್ತು ಒತ್ತಡವನ್ನು ನಾಯಿಯು ತೋರುವ ಪ್ರೀತಿಯಿಂದ ಕಳೆದುಕೊಳ್ಳುತ್ತಾರೆ.. ಒಂದು ನಾಯಿ ಇದ್ದರೆ ಸಾಕು ಯಾವತ್ತಿಗೂ ನಾವು ಒಂಟಿ ಎನ್ನುವ ಭಾವ ಮನದಲ್ಲಿ ಮೂಡುವುದಿಲ್ಲ.

ನಾರಾಯಣ (Narayana God) ದೇವರ ವಾಹನ ಎಂದು ನಾಯಿಯನ್ನ ಪರಿಗಣಿಸಿರುವುದರಿಂದ ನಾಯಿಯಲ್ಲೂ ಕೂಡ ದೈವಿಕ ಅಂಶಗಳು ಅಡಕವಾಗಿರುತ್ತವೆ. ಮಾನವನಿಗೆ ತಿಳಿಯದೆ ಇರೋ ಎಷ್ಟೋ ಸಂಗತಿಗಳನ್ನ ನಾಯಿಗಳು ಗ್ರಹಿಸುತ್ತವೆ.ನಾಯಿಗಳು ರಾತ್ರಿ ಉಳಿಟ್ಟರೆ ಅಥವಾ ಅತ್ತರೆ ಅದು ಅಶುಭ ಎಂದರ್ಥ.ನಾಯಿಗಳು ಅಳುತ್ತಿದ್ದರೆ ಅದು ಯಾರಾದರೂ ಸಾಯುವ ಸಂಕೇತವನ್ನು ತೋರುತ್ತದೆ, ಅಂದರೆ ಕುಟುಂಬದಲ್ಲಿ ಯಾರದ್ದಾದರೂ ಸಾವು ಆಗುವ ಮುನ್ಸೂಚನೆ ಅಥವಾ ತೊಂದರೆ ಆಗುವ ಸಾಧ್ಯತೆ ಇದೆ ಎನ್ನುತ್ತಾರೇ. .

ರಾತ್ರಿ ಸಮಯದಲ್ಲಿ ನಾಯಿ ಅಳುವುದಕ್ಕೆ ಮುಖ್ಯ ಕಾರಣವೇನೆಂದರೆ ಅವುಗಳಿಗೆ ಆತ್ಮಗಳು ಗೋಚರಿಸುತ್ತವೇಯಂತೆ.. ಇವುಗಳ ಅಕ್ಕ ಪಕ್ಕದಲ್ಲಿ ನೆಡೆಯುವ ಘಟನೆಗಳು ಮೊದಲೇ ತಿಳಿಯುತ್ತದಂತೆ ಆದ್ದರಿಂದ ಏರು ಧ್ವನಿಯಲ್ಲಿ ಕೂಗುವ ಮೂಖಾಂತರ ಉಳಿದ ನಾಯಿಗಳಿಗೆ ಎಚ್ಚರಿಕೆ ನೀಡುತ್ತದೆ.ವಿಜ್ಞಾನಿಗಳು ಕೂಡ ಈ ವಿಚಾರವಾಗಿ ಹಲವಾರು ಸಂಶೋಧನೆಗಳನ್ನು ಕೂಡ ಮಾಡಿದ್ದಾರೆ,ನಾಯಿಗಳು ಅಳುವುದಕ್ಕೆ ವೈಜ್ಞಾನಿಕವಾಗಿ ನೋಡುವುದಾದರೆ ಅದನ್ನ ಹೌಲಾ (houl)ಎಂದು ಕರೆಯುತ್ತಾರೆ

ಹಾಗೆ ನಾಯಿಗಳ ಮನಸ್ಸಿಗೆ ನೋವ್ ಅದಾಗಲೂ ಕೂಡ ನಾಯಿಗಳು ಆ ರೀತಿ ಉಳಿಡುತ್ತವೆ ಮತ್ತು ಅಳುತ್ತವೆ. ನಾಯಿಗಳು ತಮ್ಮ ಭಾವನೆಗಳನ್ನು ಆ ರೀತಿ ವ್ಯಕ್ತ ಪಡಿಸುತ್ತವೆ. ಹಾಗೆ ಶಾಸ್ತ್ರದಲ್ಲಿ ಹೇಳುವ ಪ್ರಕಾರ ನಾಯಿಗಳು ಯಾವಾಗ ಅಳುತ್ತವೆಯೋ ಆಗ ಯಮರಾಜನು ಭೂಮಿಮೇಲೆ ಬರುತ್ತಾನೆ ಅಂದರೆ ಇದರ ಸಂಕೇತದಿಂದ ತಿಳಿಯುವುದೇನೆಂದರೆ ಯಾವುದಾದರು ವ್ಯಕ್ತಿಯ ಸಾವಾಗುತ್ತದೆ. ಹಾಗೆ ನಾಯಿಗಳು ನೆಲದ ಮೇಲೆ ಬಿದ್ದು ಹೊರಳಾಡಿದರೆ ಅದು ಅಶುಭ ಸೂಚನೆಯನ್ನು ನೀಡುತ್ತದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!