ಭಾರತೀಯ ಕ್ರಿಕೆಟರ್ಸ್ ವಿದೇಶಿ ಟಿ-20 ಲೀಗ್ ಗಳಲ್ಲಿ ಏಕೆ ಆಟವಾಡುವುದಿಲ್ಲ, ಹಾಲು ಸಸ್ಯಾಹಾರಿಯೋ ಮಾಂಸಾಹಾರಿಯೋ, ಡಾಕ್ಟರ್ಸ್ ಬರೆಯುವ ಹ್ಯಾಂಡ್ ರೈಟಿಂಗ್ ಏಕೆ ನಮಗೆ ಅರ್ಥವಾಗುವುದಿಲ್ಲ. ಇಂತಹ ಆಸಕ್ತಿಕರ ಪ್ರಶ್ನೆ ಒಂದಲ್ಲ ಒಂದು ಸಲ ನಿಮ್ಮ ಮನಸ್ಸಿನಲ್ಲಿ ಮೂಡಿರಬಹುದು. ಇಂತಹ ಪ್ರಶ್ನೆಗಳಿಗೆ ಆಸಕ್ತಿಕರವಾಗಿ ಹಾಗೂ ಜ್ಞಾನ ಆಧಾರಿತ ಉತ್ತರಗಳನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ.
ಡಾಕ್ಟರ್ಸ್ ಬರೆಯುವ ಹ್ಯಾಂಡ್ ರೈಟಿಂಗ್ ಯಾರಿಗೂ ಅರ್ಥವಾಗುವುದಿಲ್ಲ, ಕೇವಲ ಭಾರತದಲ್ಲಷ್ಟೇ ಅಲ್ಲದೆ ಇಡೀ ಪ್ರಪಂಚದ ಯಾವುದೇ ಡಾಕ್ಟರ್ ಬರೆಯುವ ಹ್ಯಾಂಡ್ ರೈಟಿಂಗ್ ಹಾಗೆ ಇರುತ್ತದೆ. ಇದಕ್ಕೆ ಮೂರು ಕಾರಣಗಳಿವೆ, ಮೊದಲನೆಯದು ಮೆಡಿಕಲ್ ಓದುವಾಗ ಅವರಿಗೆ ಕಡಿಮೆ ಸಮಯದಲ್ಲಿ ಹೆಚ್ಚು ಅಂಕದ ಪರೀಕ್ಷೆಗಳು ಇರುತ್ತದೆ ಅವರು ಫಾಸ್ಟ್ ಆಗಿ ಬರೆಯುವುದನ್ನು ರೂಢಿ ಮಾಡಿಕೊಳ್ಳಬೇಕು. ಆನ್ಸರ್ ಶೀಟ್ ಕರೆಕ್ಷನ್ ಮಾಡುವವರು ಹ್ಯಾಂಡ್ ರೈಟಿಂಗ್ ಗಿಂತ ನೋಲೆಜಿಗೆ ಹೆಚ್ಚು ಪ್ರಾಧಾನ್ಯತೆ ಕೊಡುತ್ತಾರೆ. ಎರಡನೇ ಕಾರಣವೆಂದರೆ ಕಡಿಮೆ ಸಮಯದಲ್ಲಿ ಅವರು ಹೆಚ್ಚು ಪೇಷಂಟ್ ಗಳನ್ನು ಪರೀಕ್ಷಿಸಬೇಕಾಗುತ್ತದೆ ಆದ್ದರಿಂದ ಅವರು ಹ್ಯಾಂಡ್ ರೈಟಿಂಗ್ ಸ್ಪೀಡ್ ಮಾಡುತ್ತಾರೆ. ಮೂರನೇಯದಾಗಿ ಡಾಕ್ಟರ್ಸ್ ಬರೆಯುವ ಔಷಧಿ ಚೀಟಿ ಸಾಮಾನ್ಯರಿಗೆ ಅರ್ಥವಾಗುವುದಿಲ್ಲ. ಅರ್ಥವಾದರೆ ವೈದ್ಯರ ಬಳಿ ಹೋಗದೆ ತಾವೇ ಮಿಸ್ಟೇಕ್ ಮಾಡಿಕೊಂಡು ಯಾವುದೋ ಟ್ಯಾಬ್ಲೆಟ್ ತೆಗೆದುಕೊಳ್ಳುತ್ತಾರೆ.
ಕೆಲವು ಟ್ಯಾಬ್ಲೆಟ್ ಇಂದ ಪ್ರಾಣಕ್ಕೆ ಹಾನಿಯಾಗುತ್ತದೆ. ಈ ಮೂರು ಕಾರಣಗಳಿಂದ ಡಾಕ್ಟರ್ಸ್ ಹಾಂಡ್ ರೈಟಿಂಗ್ ಯಾರಿಗೂ ಅರ್ಥವಾಗುವುದಿಲ್ಲ. ಯಾರನ್ನಾದರೂ ನಗಿಸಲು ನಾವು ಕಚಗಳಿ ಇಡುತ್ತೇವೆ. ಇತಿಹಾಸದಲ್ಲಿ ಚೈನಾ ದೇಶದಲ್ಲಿ ಸತ್ಯವನ್ನು ಬಾಯಿ ಬಿಡಿಸಲು ಕೈಕಾಲುಗಳನ್ನು ಕಟ್ಟಿ, ಶಿಕ್ಷೆಯ ರೂಪದಲ್ಲಿ ನಿರಂತರವಾಗಿ ಕಚಗುಳಿ ಇಡುತ್ತಿದ್ದರು. ಇದರಿಂದ ದೈಹಿಕವಾಗಿ ಹಾನಿ ಆಗದಿದ್ದರೂ ಮಾನಸಿಕವಾಗಿ ಹಾನಿಯಾಗುತ್ತದೆ. ನಂತರ ಈ ಶಿಕ್ಷೆಯನ್ನು ನಿಷೇಧಿಸಲಾಯಿತು ಏಕೆಂದರೆ ಈ ಶಿಕ್ಷೆಯಿಂದ ಮೆಂಟಲ್ ಸ್ಟ್ರೆಸ್ ನಿಂದ ಅಪರಾಧಿಗಳು ಸತ್ತು ಹೋಗುತ್ತಿದ್ದರು. ಟಕ್ಸಾಲ್ ಎನ್ನುವುದು ಒಂದು ಜನಪ್ರಿಯ ಆಪ್ ಆಗಿದೆ. ಇದು ಒಂದು ಗೇಮಿಂಗ್ ಆಪ್ ಆಗಿದ್ದು, ಬುದ್ಧಿವಂತಿಕೆ ಹೆಚ್ಚಿದ್ದರೆ ಆಟವನ್ನು ಆಡಿ ಹಣವನ್ನು ಗಳಿಸಬಹುದು. ಯಾವುದೇ ಕಟ್ಟಡದ ಮೇಲೆ ಬಿಸಿಲು ಬಿದ್ದಾಗ ಅದರ ನೆರಳು ಕಾಣಿಸುತ್ತದೆ ಆದರೆ ಒರಿಸ್ಸಾದಲ್ಲಿರುವ ಜಗನ್ನಾಥ ಮಂದಿರದ ಪ್ರಧಾನ ಗೋಪುರವು ಅದರ ನೆರಳನ್ನು ಉಂಟುಮಾಡುವುದಿಲ್ಲ. ಈ ಗೋಪುರವನ್ನು ಅದರ ನೆರಳು ಅದರ ಮೇಲೆ ಬೀಳುವಂತೆ ಕಟ್ಟಿದ್ದಾರೆ.
ಯಾವುದೇ ಒಂದು ಗಿಡದ ಎಲೆಯು ಬೆಂಕಿ ಹಚ್ಚಿದಾಗ ಉರಿಯಬೇಕೆಂದರೆ ಒಣಗಿರಬೇಕು ಆದರೆ ಪಾಂಡವರ ಬಟ್ಟಿ ಎಂಬ ಗಿಡದ ಎಲೆಯು ಬೆಂಕಿ ಹಚ್ಚಿದಾಗ ಉರಿಯುತ್ತದೆ. ಪಾಂಡವರು ವನವಾಸದಲ್ಲಿದ್ದಾಗ ಈ ಎಲೆಗಳನ್ನು ಬಳಸಿ ದೀಪ ಉರಿಸುತ್ತಿದ್ದರಂತೆ ಅದಕ್ಕಾಗಿ ಈ ಗಿಡಕ್ಕೆ ಪಾಂಡವರ ಬಟ್ಟಿ ಎಂದು ಹೆಸರು ಬಂದಿದೆ. ಟಾಮ್ ಅಂಡ್ ಜೆರ್ರಿ ಶೋ ಏಳು ಬಾರಿ ಆಸ್ಕರ್ ಅವಾರ್ಡ್ ಅನ್ನು ಗೆದ್ದಿದೆ. ನಮಗೆ ರಾತ್ರಿ ಮಲಗಿದಾಗ ಕನಸು ಬೀಳುತ್ತದೆ ಆದರೆ ಬೆಳಗ್ಗೆ ಅದು ಮರೆತುಹೋಗುತ್ತದೆ. ಜಪಾನದಲ್ಲಿ ಡ್ರೀಮ್ಸ್ ರೀಡಿಂಗ್ ಮಷೀನ್ ಅನ್ನು ಕಂಡು ಹಿಡಿದಿದ್ದಾರೆ. ಈ ಮಷೀನ್ ಅನ್ನು ಮಲಗುವ ಮುನ್ನ ಅಳವಡಿಸಿಕೊಂಡು ಮಲಗಿದರೆ ನಿದ್ರೆಯಲ್ಲಿ ನಾವು ಕಂಡ ಕನಸುಗಳನ್ನು ಮಷೀನ್ ನೋಟ್ ರೂಪದಲ್ಲಿ ಟೈಪ್ ಮಾಡಿಕೊಡುತ್ತದೆ.
ಕೆಲವರು ಸಂತೋಷದಲ್ಲಿದ್ದಾಗ ಅಥವಾ ಟ್ರೆಸ್ ನಲ್ಲಿದ್ದಾಗ ಡ್ಯಾನ್ಸ್ ಮಾಡುತ್ತಾರೆ. ಬರ್ಡ್ ಆಫ್ ಪ್ಯಾರಡೈಸ್ ಎಂಬ ಪಕ್ಷಿ ಸಂತೋಷದಲ್ಲಿದ್ದಾಗ ಡಾನ್ಸ್ ಮಾಡುತ್ತದೆ. ನಾರ್ವೆ ದೇಶದ ಟೆಕ್ನಾಲಜಿಯನ್ನು ಮೆಚ್ಚಿ ಭಾರತ ದೇಶದಲ್ಲಿ ಹೈವೆಗಳಲ್ಲಿ ಆಟೋ ಡೀಮಿಂಗ್ ಸ್ಟ್ರೀಟ್ ಲೈಟ್ ಗಳನ್ನು ಹಾಕಿದೆ. 2017ರಲ್ಲಿ ನಾರ್ವೆ ದೇಶವು ಆಟೊ ಡೀಮಿಂಗ್ ಸ್ತ್ರೀಟ್ ಲೈಟ್ ಟೆಕ್ನಾಲಜಿಯನ್ನು ಕಂಡುಹಿಡಿದಿದ್ದು. ರಸ್ತೆ ಮೇಲೆ ರಾತ್ರಿ ಟ್ರಾಫಿಕ್ ಕಡಿಮೆ ಇದ್ದು ಸ್ತ್ರೀಟ್ ಲೈಟ್ ಆನ್ ಇದ್ದರೆ ಕರೆಂಟ್ ವೇಸ್ಟ್ ಆಗುತ್ತದೆ ಹೀಗಾಗಿ ಕರೆಂಟ್ ದುರ್ಬಳಕೆಯನ್ನು ತಡೆಯಲು ಈ ಟೆಕ್ನಾಲಜಿ ಕಂಡುಹಿಡಿದಿದ್ದಾರೆ. ರಸ್ತೆಯಲ್ಲಿ ಯಾವುದೇ ವಾಹನ ಬರುತ್ತಿದ್ದರು ಸೆನ್ಸಾರದಿಂದ ಲೈಟ್ ಆನ್ ಆಗುತ್ತದೆ ನಂತರ ಆಟೋಮೆಟಿಕ್ ಲೈಟ್ ಆಫ್ ಆಗುತ್ತದೆ.
1980 ರಲ್ಲಿ ಇತಿಹಾಸದಲ್ಲಿ ಮೊದಲ ಬಾರಿಗೆ 16 ಟನ್ ಇರುವ ಬಿಲ್ಡಿಂಗ್ ಅನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ಸ್ಥಳಾಂತರಿಸಲಾಯಿತು. ಈ ಬಿಲ್ಡಿಂಗ್ ರೊಮಾನಿಯಾ ದೇಶದಲ್ಲಿದೆ. ಬಿಲ್ಡಿಂಗ್ ಅನ್ನು ಮೇಲೆಕ್ಕೆ ಎತ್ತಿ ಕೆಳಗಡೆ ಚಕ್ರಗಳನ್ನು ಅಳವಡಿಸಿ ಹಳಿಗಳ ಮೂಲಕ ಬೇರೆ ಸ್ಥಳಕ್ಕೆ ಸ್ಥಳಾಂತರಿಸಲಾಯಿತು. ಪ್ರಾಚೀನ ಕಾಲದಲ್ಲಿ ಹಾಲನ್ನು ಬಿಳಿರಕ್ತ ಎಂದು ಭಾವಿಸುತ್ತಿದ್ದರು. ಹಾಲಿನಲ್ಲಿ ಕ್ಯಾಲ್ಸಿಯಂ, ಪೊಟ್ಯಾಷಿಯಂ, ಅಯೋಡಿನ್, ಪ್ರೊಟೀನ್, ವಿಟಮಿನ್ ಇರುತ್ತದೆ. ಪ್ರೊಟೀನ್ ಇರುವ ಪದಾರ್ಥವನ್ನು ಮಾಂಸಹಾರಿ ಎಂದು ಹೇಳುತ್ತಾರೆ ಆದರೆ ಹಾಲಿನಲ್ಲಿರುವ ಪ್ರೊಟೀನ್ ಮಾಂಸಹಾರದಲ್ಲಿರುವ ಪ್ರೊಟೀನ್ ಆಗಿಲ್ಲ. ಕೆಲವರು ಹಾಲು ಜೀವ ಇರುವ ಪ್ರಾಣಿಯಿಂದ ಉತ್ಪತ್ತಿಯಾಗುವುದರಿಂದ ಅದು ಮಾಂಸಾಹಾರಿ ಎಂದು ಹೇಳುತ್ತಾರೆ. ಇದರ ಬಗ್ಗೆ ಅನ್ವೇಷಣೆ ನಡೆಸಿದಾಗ ತರಕಾರಿಗಳು ಸಹ ಗಿಡದಲ್ಲಿ ಇದ್ದಾಗ ಉಸಿರಾಡುತ್ತವೆ ಹಾಗೆಂದು ತರಕಾರಿಗಳು ಮಾಂಸಹಾರಿಯಲ್ಲ ಹಾಗಾಗಿ ಹಾಲು ಸಸ್ಯಹಾರಿ.
1950ರಲ್ಲಿ ವಿಲಿಯಂ ಹೈಜಿನ್ ಬೋತಂ ಎಂಬ ವ್ಯಕ್ತಿ ಪ್ರಪಂಚದ ಮೊಟ್ಟ ಮೊದಲ ವಿಡಿಯೊಗೇಮ್ ಅನ್ನು ಕಂಡುಹಿಡಿದಿದ್ದಾರೆ. ಯಾವುದೇ ಒಂದು ದೇಶದ ಕ್ರಿಕೆಟರ್ ವಿದೇಶದ ಕ್ರಿಕೆಟ್ ಲೀಗ್ ನಲ್ಲಿ ಭಾಗವಹಿಸಬೇಕೆಂದರೆ ನಮ್ಮ ದೇಶದಿಂದ ಎನ್ಒಸಿ ಸರ್ಟಿಫಿಕೇಟ್ ಪಡೆಯಬೇಕಾಗುತ್ತದೆ. ಬಿಸಿಸಿಐ ನಮ್ಮ ದೇಶದ ಕ್ರಿಕೆಟರ್ಸ್ ಗೆ ಸರ್ಟಿಫಿಕೇಟನ್ನು ಕೊಡುವುದಿಲ್ಲ. ಏಕೆಂದರೆ ಇಂಡಿಯನ್ ಕ್ರಿಕೆಟರ್ಸ್ ಗೆ ಎಲ್ಲಾ ದೇಶಗಳಲ್ಲಿ ಫ್ಯಾನ್ಸ್ ಇದ್ದಾರೆ. ಭಾರತೀಯ ಕ್ರಿಕೆಟರ್ಸ್ ವಿದೇಶದಲ್ಲಿ ಆಡಿದರೆ ಐಪಿಎಲ್ ತನ್ನ ಸ್ಥಾನವನ್ನು ಕಳೆದುಕೊಳ್ಳುತ್ತದೆ ಹಾಗೂ ವಿದೇಶಿ ಲೀಗ್ ಪ್ರಾಮುಖ್ಯತೆಯನ್ನು ಗಳಿಸುತ್ತದೆ ಆದ್ದರಿಂದ ಬಿಸಿಸಿಐ ಸರ್ಟಿಫಿಕೇಟನ್ನು ಕೊಡುವುದಿಲ್ಲ. ಆದರೂ ಬಿಸಿಸಿಐ ಕೆಲವರಿಗೆ ವಿದೇಶಿ ಕ್ರಿಕೆಟ್ ಲೀಗ್ ನಲ್ಲಿ ಆಡಲು ಪರ್ಮಿಷನ್ ಕೊಡುತ್ತದೆ ಆದರೆ ಅವರು ಅಂತರರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿ ಪಡೆದಿರಬೇಕು ಹಾಗೂ ಬಿಸಿಸಿಐ ಸಂಸ್ಥೆಯ ಯಾವುದೇ ಟೂರ್ನಿಯಲ್ಲಿ ಭಾಗವಹಿಸುವಂತಿಲ್ಲ.