Diabetes Health about Almonds: ಬಾದಾಮಿಯಲ್ಲಿ ಅನೇಕ ಪೋಷಕಾಂಶಗಳು ಇರುತ್ತದೆ ಹಾಗೆಯೇ ಚಿಕ್ಕವರಿಂದ ಹಿಡಿದು ವಯಸ್ಸಾದವರವರೆಗೂ ಸಹ ಬಾದಾಮಿ ಎಂದರೆ ಇಷ್ಟ ಪಡುತ್ತಾರೆ ಅನೇಕ ಪೋಷಕಾಂಶವನ್ನು ಹೊಂದಿದ ಬಾದಾಮಿಯನ್ನು ಸಿಹಿ ತಿಂಡಿಗಳಲ್ಲಿ ರುಚಿಗಾಗಿ ಬಳಸುತ್ತಾರೆ ಒಣ ಬಾದಾಮಿಯ ಸೇವನೆಗಿಂತಲೂ ರಾತ್ರಿ ನೆನೆಸಿಟ್ಟು ಬೆಳಿಗ್ಗೆ ತಿನ್ನುವುದು ಒಳ್ಳೆಯದು ಹಾಗೆಯೇ ಬಾದಾಮಿಯನ್ನು ನೆನೆಸಿ ಹಾಗೂ ಸಿಹಿ ಪದಾರ್ಥಗಳಲ್ಲಿ ಹಾಗೂ ಒಣಗಿದ ಬಾದಾಮಿಯನ್ನು ಹೀಗೆ ಮೂರು ರೀತಿಯಾಗಿ ಸೇವನೆ ಮಾಡುತ್ತಾರೆ
ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಹಿಂದಿನ ಕಾಲದಿಂದಲೂ ಸಹ ಬಾದಾಮಿ ತಿನ್ನುವುದು ಸಂಪ್ರದಾಯದಂತೆ ಆಗಿದೆ. ಹಾಗಾಗಿ ಹಿರಿಯರು ತುಂಬಾ ಗಟ್ಟಿಯಾಗಿ ಇದ್ದರು ಬಾದಾಮಿಯಲ್ಲಿ ಉತ್ತಮ ಪ್ರಮಾಣದ ಕರಗುವ ನಾರು ಪ್ರೋಟೀನ್ ಮತ್ತು ವಿಟಮಿನ್ ಇ ಮೆಗ್ನೀಶಿಯಂ ಹಾಗೂ ಇತರ ಪೋಷಕಾಂಶಗಳನ್ನು ಒಳಗೊಂಡಿದೆ ಕೂದಲಿನ ಸಮಸ್ಯೆಗಳ ವಿರುದ್ಧ ಹೋರಾಡಲು ಸಹಾ ಬಾದಾಮಿ ನೆರವಾಗುತ್ತದೆ. ವಿಶೇಷವಾಗಿ ಕೂದಲು ಉದುರುವಿಕೆಯ ತೊಂದರೆ ಇರುವ ವ್ಯಕ್ತಿಗಳಿಗೆ ಬಾದಾಮಿ ಎಣ್ಣೆ ಹೆಚ್ಚಿನ ನೆರವು ನೀಡುತ್ತದೆ ನಾವು ಈ ಲೇಖನದ ಮೂಲಕ ನೆನೆಸಿದ ಬಾದಾಮಿಯ ಉಪಯೋಗವನ್ನು ತಿಳಿದುಕೊಳ್ಳೋಣ.
ಬಾದಾಮಿಯು ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದ ವರ ವರೆಗೆ ಪ್ರತಿಯೊಬ್ಬರೂ ತಿನ್ನಲು ಇಷ್ಟ ಪಡುತ್ತಾರೆ ಬಾದಾಮಿ ಸೇವನೆ ಮಾಡುವುದರಿಂದ ಅನೇಕ ಪೋಷಕಾಂಶಗಳು ಸಿಗುತ್ತದೆ ಬಾದಾಮಿ ಆರೋಗ್ಯಕರ ಕೊಬ್ಬು ಹಾಗೂ ಉತ್ಕರ್ಷಣ ನಿರೋಧಕಗಳು ಮತ್ತು ಜೀವಸತ್ವಗಳು ಹಾಗೂ ಖನಿಜಗಳಿಂದ ಸಂವೃದ್ದವಾಗಿದೆ ಬಾದಾಮಿಯಲ್ಲಿ ಫೈಬರ್ ಪ್ರೋಟೀನ್ ಕೊಬ್ಬು ಹಾಗೂ ವಿಟಮಿನ್ ಈ ಅಂಶವನ್ನು ಹೊಂದಿರುತ್ತದೆ
ಹಾಗೆಯೇ ಪ್ರೊಟೀನ್ ಕಬ್ಬಿಣಾಂಶ ತಾಮ್ರ ರಂಜಕ ವಿಟಮಿನ್ ಬಿ ಟು ಗಳ ಉತ್ತಮ ಮೂಲವಾಗಿರುತ್ತದೆ ಬಾದಾಮಿಯನ್ನು ಹಲವಾರು ವಿಧಾನಗಳಲ್ಲಿ ಸೇವನೆ ಮಾಡಲಾಗುತ್ತದೆ .ಬಾದಾಮಿಯನ್ನು ಹಸಿಯಾಗಿ ಹುರಿದು ಹಾಗೂ ನೆನೆಸಿ ಹಾಗೂ ಸಿಹಿ ಪದಾರ್ಥಗಳಲ್ಲಿ ಸೇರಿಸಿ ತಿನ್ನಲಾಗುತ್ತದೆ ಬಾದಾಮಿ ಪೌಡರ್ ಹಾಗೂ ಬಾದಾಮಿ ಹಾಲು ರೂಪದಲ್ಲಿ ಸಹ ಸೇವನೆ ಮಾಡಲಾಗುತ್ತದೆ
ಬಾದಾಮಿಯು ಉತ್ಕರ್ಷಣ ನಿರೋಧಕಗಳ ಉಗ್ರಾಣವಾಗಿದೆ ಬಾದಾಮಿಯಲ್ಲಿ ಕಾರ್ಬೋಹೈಡ್ರೇಡ್ ಗಳು ಕಡಿಮೆ ಪ್ರಮಾಣದಲ್ಲಿ ಇರುತ್ತದೆ ಹೀಗಾಗಿ ಮಧುಮೇಹಿ ರೋಗಿಗಳಿಗೆ ಉತ್ತಮ ಆಯ್ಕೆಯಾಗಿದೆ ಹಾಗೆಯೇ ಬಾದಾಮಿ ಮ್ಯಾಗನ್ನಿಷಿಯಂನಿಂದ ಸಮೃದ್ದವಾಗಿರುತ್ತದೆ .
ಬಾದಾಮಿಯಲ್ಲಿರುವ ಪೋಷಕಾಂಶಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ ಹಾಗೆಯೇ ಇನ್ಸುಲಿನ್ ಕಾರ್ಯವನ್ನು ಸುಧಾರಿಸುತ್ತದೆ ಬಾದಾಮಿಯು ಉತ್ತಮ ಪ್ರಮಾಣದ ಮ್ಯಾಂಗನೀಷಿಯಂ ಹೊಂದಿದ್ದು ಈ ಪೋಷಕಾಂಶವು ರಕ್ತದ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಅಧಿಕ ರಕ್ತದ ಒತ್ತಡ ಹೃದಯ ಸಮಸ್ಯೆ ಪಾರ್ಶ್ವ ವಾಯು ಹಾಗೂ ಮೂತ್ರಪಿಂಡದ ವೈಫಲ್ಯಕ್ಕೆ ಕಾರಣ ಆಗುತ್ತದೆ ಬಾದಾಮಿಯನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಆಗುತ್ತದೆ
ಹೃದಯದ ಖಾಯಿಲೆಯ ಅಪಾಯವನ್ನು ಕಡಿಮೆ ಮಾಡಲು ಸಹಾಯಕವಾಗಿದೆ. ಬಾದಾಮಿಯು ರಕ್ತದಲ್ಲಿನ ಎಲ್ ಡಿ ಎಲ್ ಅನ್ನು ಪರಿಣಾಮಕಾರಿಯಾಗಿ ಕಡಿಮೆ ಮಾಡುತ್ತದೆ ವಿಟಮಿನ್ ಈ ಹೊಂದಿರುವ ಕಾರಣ ಬಾದಾಮಿ ಸೇವನೆಯಿಂದ ವೃದ್ದರೋಗ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಲು ಸಹಾಯಕವಾಗಿದೆ ಬಾದಾಮಿಗಳಲ್ಲಿ ವಿಟಮಿನ್ ಇ ಸಮೃದ್ದ ಪ್ರಮಾಣದಲ್ಲಿದೆ
ಈ ವಿಟಮಿನ್ ಇ ನಮ್ಮ ಚರ್ಮ ಮತ್ತು ಕೂದಲಿನ ಪೋಷಣೆಗೆ ಅಗತ್ಯವಾಗಿ ಬೇಕಾಗಿರುವ ಪೋಷಕಾಂಶವಾಗಿದೆ ಹೀಗೆ ಬಾದಾಮಿಯಲ್ಲಿ ಹೆಚ್ಚಿನ ಪೋಷಕಾಂಶವನ್ನು ಒಳಗೊಂಡಿದ್ದು ನಮ್ಮ ಆರೋಗ್ಯಕ್ಕೆ ಬಾದಾಮಿ ಸೇವನೆ ತುಂಬಾ ಒಳ್ಳೆಯದು ಹಾಗೆಯೇ ಅನೇಕ ಖಾಯಿಲೆಗಳು ಬರದಂತೆ ತಡೆಗಟ್ಟುತ್ತದೆ.