ಭಾರತೀಯರು ಪಾಶ್ಚಿಮಾತ್ಯರ ಅನುಕರಣೆ ಮಾಡಿದಾಗ ನಗು ಬರುತ್ತದೆ. ಸಿಂಧೂ ನದಿಯ ತೀರದಲ್ಲಿ ಹರಪ್ಪ ನಾಗರಿಕತೆ ಇತ್ತು ಎಂದು ಎಲ್ಲರಿಗೂ ತಿಳಿದಿತ್ತು. ಆದರೆ ಅಲ್ಲಿಯೇ ಇದ್ದ ಧೋಲಾವಿರಾ ಎಂಬ ನಾಗರಿಕತೆಯ ಬಗ್ಗೆ ಯಾರಿಗೂ ಗೊತ್ತಿಲ್ಲ. ಅದರ ಬಗ್ಗೆ ನಾವು ಇಲ್ಲಿ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಅದೊಂದು ದೊಡ್ಡ ವ್ಯವಸ್ಥಿತ ನಗರವಾಗಿತ್ತು. ನೂರಾರು ಎಕರೆ ವಿಸ್ತೀರ್ಣದಲ್ಲಿ ಇದ್ದು ಕೋಟೆಗಳು, ಅಲ್ಲೊಂದು ಅರಮನೆಯಂತಹ ಪ್ರಮುಖ ಕಟ್ಟಡ, ಅಲ್ಲಿ ಕೆಲಸ ಮಾಡುವವರಿಗಾಗಿ ನಿರ್ಮಿಸಿದ್ದ ಪ್ರಮುಖ ಸಣ್ಣ ಸಣ್ಣ ಮನೆಗಳು, ಆ ಎಲ್ಲಾ ಮನೆಗಳಿಗೆ ನೀರುಣಿಸಲು ಇದ್ದ ಹತ್ತಾರು ಕೊಳಗಳು, ಓಡಾಡಲು ನಿರ್ಮಿಸಿದ್ದ ರಸ್ತೆಗಳು, ರಸ್ತೆಯ ಪಕ್ಕಕ್ಕೆ ನಿರ್ಮಿಸಿದ್ದ ಗೋಡೆಗಳು, ಪಕ್ಕದಲ್ಲಿ ಇಟ್ಟಿಗೆಯಿಂದ ನಿರ್ಮಾಣ ಮಾಡಿದ ಚರಂಡಿ ವ್ಯವಸ್ಥೆ ಇವೆಲ್ಲಾ ಸುಮಾರು 4ವರೆ ಸಾವಿರ ವರ್ಷಗಳ ಹಿಂದಿನ ಇಂತಹ ಅದ್ಭುತ ನಗರವನ್ನು ಕಾಣಲು ಸಾಧ್ಯವಾಗುವುದು ಗುಜರಾತಿನ ಧೋಲಾವಿರಾ.

ಇದು ಸಿಂಧೂ ನಾಗರಿಕತೆಯ ನಗರಗಳಲ್ಲಿ ಒಂದು. ಇದರ ಬಗ್ಗೆ ತಿಳಿದಿದ್ದು 1968 ಹಾಗೂ 1967ರಲ್ಲಿ. ಜಗತ್ತಿನ ಮೊಟ್ಟ ಮೊದಲ ಸೈನ್ ಬೋರ್ಡ್ ಇಲ್ಲಿ ಸಿಕ್ಕಿದೆ. ಆಗ ಈ ನಗರವು ನೀರಿನಿಂದ ಮತ್ತು ಸಂಪದ್ಭರಿತವಾಗಿತ್ತು. ಅದರ ಉತ್ತರ ಭಾಗದಲ್ಲಿ ಮನ್ಸೂರ್ ಎನ್ನುವ ನದಿ ಇದೆ. ಹಾಗೆಯೇ ದಕ್ಷಿಣ ಭಾಗದಲ್ಲಿ ಮನ್ಹಾರ್ ಎನ್ನುವ ನದಿ ಇದೆ. ನದಿಗಳಿಂದ ಬಾವಿಗಳಿಗೆ ನೀರಿನ ಸಂಪರ್ಕ ಮಾಡಿಕೊಳ್ಳಲಾಗಿತ್ತು. ವರ್ಷವಿಡೀ ನೀರಿನ ಸಮಸ್ಯೆ ಆಗದ ಹಾಗೇ ನೀರನ್ನು ಅಲ್ಲಿಯ ಜನ ಸಂಗ್ರಹ ಮಾಡಿಕೊಳ್ಳುತ್ತಿದ್ದರು. ಇಲ್ಲಿ ಚಿನ್ನ, ಬೆಳ್ಳಿ ಮತ್ತು ಮಣ್ಣಿನ ಮಡಕೆಗಳು ದೊರೆತಿವೆ.

ಇಲ್ಲಿ ಮೀನನ್ನು ಹಿಡಿಯಲು ಬಳಸುವ ಗಾಳದಂತಹ ವಸ್ತು ಪತ್ತೆಯಾಗಿದೆ. ಅವತ್ತಿನ ಕಾಲಕ್ಕೆ ಮೀನನ್ನು ಹಿಡಿಯಲು ಗಾಳ ಬಳಸುತ್ತಿದ್ದರು ಎನ್ನುವುದಕ್ಕೆ ಇದೇ ಸಾಕ್ಷಿ. ಅಲ್ಲದೇ ಸಿಂಧೂ ನದಿಯ ನಾಗರಿಕತೆಯಲ್ಲಿ ಬಳಸಲಾಗುತ್ತಿದ್ದ ಪ್ರಾಣಿಗಳ ಚಿತ್ರಗಳು ಸಿಕ್ಕಿವೆ. ಇಲ್ಲಿಯ ಅಕ್ಷರಗಳು ಸುಮಾರು 15ಸೆಂಟಿಮೀಟರ್ ನಷ್ಟು ದೊಡ್ಡದಾಗಿದೆ. ಆ ಅಕ್ಷರಗಳನ್ನು 3ಮೀಟರ್ ಹಲಗೆಯ ಮೇಲೆ ಜೋಡಿಸಲಾಗಿದೆ. ಹಾಗೆಯೇ ಇವರು ಸತ್ತವರಿಗೆ ಅತ್ಯಂತ ಶ್ರದ್ಧೆಯಿಂದ ಅಂತ್ಯಸಂಸ್ಕಾರ ಮಾಡುತ್ತಿದ್ದರು. ಇತ್ತೀಚಿನವರೆಗೂ ಸಂಶೋಧನೆಗಳು ಈ ಪ್ರದೇಶದಲ್ಲಿ ನಡೆಯುತ್ತಲೇ ಇವೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!