ರುಚಿ ರುಚಿಯಾದ ಅಡುಗೆಗೆ MDH ಮಸಾಲೆ ಇರಲೇಬೇಕು ಅನ್ನೋದು ಭಾರತೀಯರ ಬಹುತೇಕ ಮನೆಗಳಲ್ಲಿನ ಅಘೋಷಿತ ವಾಕ್ಯ. ಅಷ್ಟರ ಮಟ್ಟಿಗೆ MDH ಮಸಾಲೆ ಭಾರತೀಯರ ಜನ ಜೀವನ ಹಾಸು ಹೊಕ್ಕಿದೆ. ಎಂಡಿಹೆಚ್ ಮಸಾಲೆ ಕಂಪನಿಯ ಮಾಲೀಕರು ಹಾಗೂ ಸಂಸ್ಥಾಪಕರಾದ ಮಹಾಶಯ್ ಧರ್ಮಪಾಲ್ ಗುಲಾಟಿ ಅವರು ಭಾರತದ ಜನಪ್ರಿಯ ವ್ಯಕ್ತಿಗಳಲ್ಲಿ ಒಬ್ಬರು. ಭಾರತದಲ್ಲಿ ಅವರನ್ನು ಮಸಾಲೆಗಳ ರಾಜ ಎಂದೂ ಸಹ ಕರೆಯಲಾಗುತ್ತದೆ. ಸಾವಿರಾರು ಕೋಟಿ ರೂಪಾಯಿ ಉದ್ಯಮ ಕಟ್ಟಿದ ಧರ್ಮಪಾಲ್ ಗುಲಾಟಿ ಬಿಟ್ಟು ಹೋದ ಐಷಾರಾಮಿ ಕಾರುಗಳ ಲಿಸ್ಟ್ ಇಲ್ಲಿದೆ.

ಮಸಾಲೆಗಳ ರಾಜ ಮಹಾಶಯ್ ಧರ್ಮಪಾಲ್ ಗುಲಾಟಿ ಕಳೆದ ವಾರ ನಿಧನರಾದರು. ಮಸಾಲೆಗಳ ರಾಜ, ಮಸಾಲೆಗಳನ್ನು ಮಾತ್ರವಲ್ಲದೇ ಮತ್ತಷ್ಟು ವಸ್ತುಗಳನ್ನು ಪ್ರೀತಿಸುತ್ತಿದ್ದರು. ಮಹಾಶಯ್ ಧರ್ಮಪಾಲ್ ಯಾವುದರ ಬಗ್ಗೆ ಒಲವನ್ನು ಹೊಂದಿದ್ದರು ಎಂಬುದನ್ನು ಈ ಲೇಖನದಲ್ಲಿ ನೋಡೋಣ. ಮಸಾಲೆಗಳ ರಾಜ ಧರ್ಮಪಾಲ್ ಗುಲಾಟಿ ವಾಹನಗಳನ್ನು ಪ್ರೀತಿಸುತ್ತಿದ್ದರು ಎಂಬುದು ಸಾಕಷ್ಟು ಜನರಿಗೆ ತಿಳಿದಿಲ್ಲ. ಇದಕ್ಕೆ ಅವರ ಬಳಿಯಿರುವ ಹಲವಾರು ಕಾರುಗಳ ಸಂಗ್ರಹವೇ ಸಾಕ್ಷಿ. ಅವರು ತಮ್ಮ ಕಾರುಗಳೊಂದಿಗಿರುವ ಹಲವಾರು ಚಿತ್ರಗಳು ಬಹಿರಂಗಗೊಂಡಿವೆ. ಅವರು ಹೆಚ್ಚಾಗಿ ತಮ್ಮ ನೆಚ್ಚಿನ ಕಾರುಗಳಲ್ಲಿ ಸಂಚರಿಸುತ್ತಿದ್ದರು. ಇದಕ್ಕೆ ಸಂಬಂಧಿಸಿದ ಹಲವಾರು ಚಿತ್ರಗಳು ಹಾಗೂ ವೀಡಿಯೊಗಳು ಲಭ್ಯವಾಗಿವೆ.

ಧರ್ಮಪಾಲ್ ಗುಲಾಟಿ ಅವರ ಗ್ಯಾರೇಜ್‌ನಲ್ಲಿ ರೋಲ್ಸ್ ರಾಯ್ಸ್ ಘೋಸ್ಟ್, ಕ್ರಿಸ್ಲರ್ 300 ಸಿ ಲಿಮೋಸಿನ್, ಮರ್ಸಿಡಿಸ್ ಬೆಂಝ್ ಎಂ-ಕ್ಲಾಸ್ ಎಂಎಲ್ 500 ಸೇರಿದಂತೆ ಹಲವಾರು ಐಷಾರಾಮಿ ಕಾರುಗಳಿವೆ. ಇದರ ಜೊತೆಗೆ ಅವರು ತಮ್ಮ ನೆಚ್ಚಿನ ಟೊಯೊಟಾ ಇನೋವಾ ಕ್ರಿಸ್ಟಾದಲ್ಲಿಯೂ ಹಲವಾರು ಬಾರಿ ಕಾಣಿಸಿಕೊಂಡಿದ್ದರು. ಇವು ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಿರುವ ಕೆಲವು ಕಾರುಗಳು ಮಾತ್ರ. ಅವರು ಟೊಯೋಟಾ ಫಾರ್ಚೂನರ್, ಹೋಂಡಾ ಡಬ್ಲ್ಯುಆರ್-ವಿ ಕಾರುಗಳಲ್ಲಿಯೂ ಕೆಲ ಬಾರಿ ಕಾಣಿಸಿಕೊಂಡಿದ್ದಾರೆ.

ಭಾರತದ ಮಸಾಲೆ ಉದ್ಯಮದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದ ಧರ್ಮಪಾಲ್ ಗುಲಾಟಿ ತಮ್ಮ 98ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಎಂಡಿಹೆಚ್ ಕಂಪನಿಯ ಸಿಇಒ ಆಗಿದ್ದ ಅವರಿಗೆ ಭಾರತದ ವ್ಯಾಪಾರ ಹಾಗೂ ಉದ್ಯಮಕ್ಕೆ ನೀಡಿದ ಕೊಡುಗೆಗಾಗಿ ಕಳೆದ ವರ್ಷ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್’ರವರು ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿದ್ದರು.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!