ಪ್ರತಿಯೊಂದು ರಾಶಿಯಲ್ಲಿ ಜನಿಸಿದವರು ತಮ್ಮದೆ ಆದ ಗುಣ ಸ್ವಭಾವ, ಭವಿಷ್ಯವನ್ನು ಹೊಂದಿರುತ್ತಾರೆ. ಧನು ರಾಶಿಯಲ್ಲಿ ಜನಿಸಿದವರಿಗೆ ಸಾಡೆಸಾತ್ ನಡೆಯುತ್ತಿದ್ದು ಇದೀಗ ಮುಕ್ತರಾಗಿದ್ದಾರೆ. ನಂತರದ ದಿನಗಳು ಧನು ರಾಶಿಯವರಿಗೆ ಹೇಗಿರಲಿದೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ದಿಢೀರ್ ಹಣ ಬರುವುದು, ಸಮಾಜದಲ್ಲಿ ಉತ್ತಮ ಸ್ಥಾನಮಾನ ಸಿಗುವುದು, ವೃತ್ತಿಯಲ್ಲಿ ಉನ್ನತ ಸ್ಥಾನ ಪಡೆಯುವುದು. ಇಂತಹ ಒಳ್ಳೆಯ ಸುದ್ದಿ ಯಾರಿಗೆ ಬೇಡ. ಧನು ರಾಶಿಯವರಿಗೆ ಶನಿ ಸುತ್ತಾಡುತ್ತಾ ಕಷ್ಟ ಕೊಟ್ಟ ಇದೀಗ ಶನಿ ದೂರ ಆಗುವ ಸಮಯ ಬಂದಿದೆ. ಕತ್ತಲು ಕಳೆದು ಬೆಳಕು ಬರಲೇಬೇಕು 29 ಏಪ್ರಿಲ್ 2022 ರಂದು ಶನಿ ಮಕರದಿಂದ ಕುಂಭ ರಾಶಿಗೆ ಪ್ರವೇಶ ಮಾಡಿದನು,

ಧನು ರಾಶಿಯವರಿಗೆ ಸಾಡೆಸಾತ್ ಮುಗಿಯಿತು, ಇಷ್ಟು ದಿನಗಳ ಕಾಲ ಕಳೆದುಕೊಂಡ ಖುಷಿ ಈಗ ಸಿಕ್ಕಿದೆ. ಕೆಲಸ ಸಿಕ್ಕರೂ ಧನು ರಾಶಿಯವರ ಶ್ರಮಕ್ಕೆ ಸರಿಯಾದ ಫಲ ಸಿಗುವುದಿಲ್ಲ. ಧನು ರಾಶಿಯವರಿಗೆ ಇನ್ನುಮುಂದೆ ಉತ್ತಮ ಜೊಬ್ ನಿಮ್ಮದಾಗುತ್ತದೆ. ಪ್ರಮೋಷನ್ ಸಿಗುತ್ತದೆ ಇದರಿಂದ ಫೈನಾನ್ಶಿಯಲ್ ಸ್ಥಾನ ಉತ್ತಮವಾಗುತ್ತದೆ. ಮನೆಯಲ್ಲಿ ಸಂಬಂಧಿಕರ ನಡುವೆ ಉತ್ತಮ ಅಟ್ಯಾಚಮೆಂಟ್ ಸಿಗುತ್ತದೆ.

12 ಜುಲೈ 2022 ರಂದು ಶನಿ ಮತ್ತೆ ಮಕರ ರಾಶಿಗೆ ಹೋಗುತ್ತಾನೆ. ಧನು ರಾಶಿಯವರು ಸಾಡೆಸಾತ್ ಮುಗಿಯಿತು ಎಂದು ಸಂತೋಷ ಪಡದೆ ಮೈ ಮರೆಯಬಾರದು, ಯಾರಾದರೂ ಸಹಾಯ ಕೇಳಿ ನಿಮ್ಮ ವಸ್ತುಗಳನ್ನು ದೋಚುವ ಸಾಧ್ಯತೆ ಇದೆ. ಫ್ರೆಂಡ್ಸ್ ಜೊತೆ ಸೇರಿ ಕುಡಿಯುವ ಅಭ್ಯಾಸ ಆಗಬಹುದು. ಕೆಲವು ದಿನಗಳವರೆಗೆ ಧನು ರಾಶಿಯವರಿಗೆ ಅನಾವಶ್ಯಕ ಹಣ ಖರ್ಚು ಆಗಬಹುದು. ಮಕ್ಕಳು ನಿಮ್ಮ ಮಾತು ಕೇಳುವುದಿಲ್ಲ, ಕಂಡಿದ್ದೆಲ್ಲ ಬೇಕು ಎನ್ನುತ್ತಾರೆ. ಸಣ್ಣಪುಟ್ಟ ಮನಸ್ತಾಪ ಕಂಡುಬರುತ್ತದೆ. 17 ಜನವರಿ 2023 ರಂದು ಶನಿ ಮಕರ ರಾಶಿಯಿಂದ ಕುಂಭ ರಾಶಿಗೆ ಮತ್ತೆ ಹೋಗುತ್ತಾನೆ.

ಇಷ್ಟು ದಿನ ಅವಮಾನಗಳನ್ನು ಅನುಭವಿಸಿ ಈಗ ಉತ್ತರ ಕೊಡುವ ಸಮಯ. ಸಮಾಜದಲ್ಲಿ ಉನ್ನತ ಹೆಸರನ್ನು ಗಳಿಸುತ್ತಾರೆ. ಧನು ರಾಶಿಯವರು ಎಕ್ಸಿಡೆಂಟ್ ಆದರೆ ಮಾನವೀಯತೆಯಿಂದ ಸಹಾಯ ಮಾಡುವ ಗುಣವಿದೆ, ಈ ಗುಣವನ್ನು ಮರೆಯದಿರಿ. ಕಿರಿ ಕಿರಿ ಜೀವನ ಆಗಿತ್ತು, ಇವರನ್ನು ನೋಡಿ ನಕ್ಕವರೆ ಹೆಚ್ಚಾಗಿತ್ತು. ಧನು ರಾಶಿಯ ವ್ಯಾಪಾರ ಮಾಡುವವರಿಗೆ ಒಳ್ಳೆಯದಾಗುತ್ತದೆ. ಉದ್ಯೋಗ, ವ್ಯವಹಾರದಲ್ಲಿ ಬರುವ ಅಡೆ ತಡೆ ನಿವಾರಣೆಯಾಗುತ್ತದೆ. ಯಾವುದೆ ಕೆಲಸಕ್ಕೆ ಮುಂದಿಟ್ಟ ಹೆಜ್ಜೆಯನ್ನು ಹಿಂದೆ ಇಡಬೇಡಿ. ಸತತ ಪ್ರಯತ್ನದಿಂದ ಯಶಸ್ಸು ಸಿಗುತ್ತದೆ. ಸಾಹಸ ಪರಾಕ್ರಮದ ಗುಣ ಹೆಚ್ಚಾಗುತ್ತದೆ.

29 ಮಾರ್ಚ್ 2025 ರಂದು ಶನಿ ಕುಂಭ ರಾಶಿಯಿಂದ ಮೀನ ರಾಶಿಗೆ ಹೋಗುತ್ತಾನೆ. ಈ ರಾಶಿಯವರಿಗೆ ಶನಿಯ ಚಲನೆ ಅವರ ಮೇಲೆ ಪರಿಣಾಮ ಬೀರುತ್ತದೆ. ಜಗಳಗಳು, ಮಾನಸಿಕ ಒತ್ತಡ, ಕೌಟುಂಬಿಕ ಕಲಹಗಳು ಕಂಡುಬರುತ್ತದೆ. ಪರ್ಸ್ ಬಿಟ್ಟುಬರುವುದು ಕೀ ಎಲ್ಲೊ ಇಟ್ಟು ಬರುವುದು ಇಂಥಹ ಸಮಸ್ಯೆಗಳು ಬರುವ ಸಾಧ್ಯತೆಗಳಿವೆ. ಸಮಾಜದಲ್ಲಿ ಏಳ್ಗೆಯನ್ನು ಕಂಡರೆ ಅಸೂಯೆಪಡುವ ಸಾಕಷ್ಟು ಜನರು ಇರುತ್ತಾರೆ. ನಿಮ್ಮ ಜೊತೆಯೆ ಇದ್ದು ನಿಮ್ಮ ಜೊತೆಯೆ ಓಡಾಡಿಕೊಂಡು ನಿಮಗೆ ಚೂರಿ ಹಾಕುವ ಜನರು ಸಿಗುತ್ತಾರೆ.

ಮನೆಯಲ್ಲಿ ಇರುವವರಿಗೆ ಸಣ್ಣಪುಟ್ಟ ಆರೋಗ್ಯ ಸಮಸ್ಯೆ ಕಂಡುಬರುತ್ತದೆ. ವಿದ್ಯಾರ್ಥಿಗಳು ಪರೀಕ್ಷೆಗೆ ಬರುವಾಗ ಕಾಫಿ ಚೀಟಿ ತಮ್ಮ ಬಳಿ ಇಲ್ಲವೆನ್ನುವುದನ್ನು ಕಂಡುಕೊಂಡು ಕುಳಿತುಕೊಳ್ಳಬೇಕು. 3 ಜೂನ್ 2027 ರಂದು ಶನಿ ಮೀನ ರಾಶಿಯಿಂದ ಮೇಷ ರಾಶಿಗೆ ಹೋಗುತ್ತಾನೆ. ಆಗ ಧನುರಾಶಿಯವರಿಗೆ ಐದನೆ ಮನೆಯಲ್ಲಿ ಶನಿ ಇರುತ್ತಾನೆ, ಈ ಸಂದರ್ಭದಲ್ಲಿ ಸಂಪತ್ತು ನಾಶವಾಗುವುದು, ಬಿಸಿನೆಸ್ ನಲ್ಲಿ ನಷ್ಟ ಅನುಭವಿಸುವುದು, ಹಠಾತ್ತಾಗಿ ಖರ್ಚು ಹೆಚ್ಚುವುದು.

ಧನು ರಾಶಿಯವರು ಯಾರ ಬಳಿಯೂ ತಮ್ಮ ಮುಂದಿನ ಯೋಜನೆ ಬಗ್ಗೆ ತಿಳಿಸಬಾರದು. 29 ಏಪ್ರಿಲ್ 2022ರಿಂದ 29 ಮಾರ್ಚ್ 2025 ರ ವರೆಗಿನ ಸಮಯ ಧನುರಾಶಿಯವರಿಗೆ ಉತ್ತಮವಾಗಿದೆ. ಈ ಸಮಯದಲ್ಲಿ ಧನು ರಾಶಿಯವರು ಸಾಕಷ್ಟು ಲಾಭ ಹಾಗೂ ಅದೃಷ್ಟವನ್ನು ಪಡೆಯುತ್ತಾರೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.

Leave a Reply

Your email address will not be published. Required fields are marked *