ಒಬ್ಬ ವ್ಯಕ್ತಿಯ ಮರಣವಾಗಿ ಹೆಚ್ಚಿನ ದಿನಗಳು ಕಳೆದು ಹೋದರೆ. ಸತ್ತ ವ್ಯಕ್ತಿಯ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ಪಡೆಯುವುದು ಅಷ್ಟು ಸುಲಭದ ವಿಚಾರವಲ್ಲ. ಒಂದು ವೇಳೆ ಮರಣವಾದ ವ್ಯಕ್ತಿಯ ಹೆಸರಿನಲ್ಲಿ ವೋಟರ್ ಐಡಿ ಅಥವಾ ಆಧಾರ್ ಕಾರ್ಡ್ ಇಲ್ಲದೆ ಹೋದರೆ ಮರಣ ಪ್ರಮಾಣ ಪತ್ರ ಪಡೆಯುವುದು ಕಷ್ಟ ಆಗುತ್ತದೆ. ಮರಣ ಪ್ರಮಾಣ ಪತ್ರ ಪಡೆಯುವುದು ಹೇಗೆ?, ಅರ್ಜಿಯನ್ನು ಯಾವ ರೀತಿ ಸಲ್ಲಿಕೆ ಮಾಡಬೇಕು?, ಯಾವ ರೀತಿ ದಾಖಲೆ ಇಲ್ಲದೆ ಅರ್ಜಿಯನ್ನು ಹೇಗೆ ಸಲ್ಲಿಕೆ ಮಾಡಿದ್ರೆ ಮರಣ ಪ್ರಮಾಣ ಪತ್ರ ಸಿಗುತ್ತದೆ ಎಂದು ನೋಡೋಣ ಬನ್ನಿ ;
ಮರಣ ಪ್ರಮಾಣ ಪತ್ರ ಪಡೆಯುವುದಕ್ಕೆ 3 ವಿಧಾನಗಳು ಇರುತ್ತದೆ :-
- ವ್ಯಕ್ತಿಯ ಮರಣವಾಗಿ ತುಂಬ ವರ್ಷಗಳು ಕಳೆದು ಹೋಗಿರುತ್ತದೆ ಯಾವುದೇ, ರೀತಿಯ ದಾಖಲೆಗಳು ಇಲ್ಲದೆ ಯಾವ ರೀತಿ ಪ್ರಮಾಣ ಪತ್ರ ಪಡೆಯುವುದು.
- ವ್ಯಕ್ತಿಯ ಮರಣವಾಗಿ ತುಂಬ ವರ್ಷಗಳು ಕಳೆದು ಹೋಗಿರುತ್ತದೆ ಆದರೆ, ದಾಖಲೆಗಳು ಇದ್ದರೇ ಯಾವ ರೀತಿ ಪ್ರಮಾಣ ಪತ್ರ ಪಡೆಯುವುದು.
- ವ್ಯಕ್ತಿಯ ಮರಣವಾಗಿ 21 ದಿನಗಳ ಒಳಗೆ ನೋಂದಣಿ ಪ್ರಕ್ರಿಯೆ ಇರುತ್ತದೆ ಇದು ಬೇರೆ ರೀತಿ ಆಗಿರುತ್ತದೆ.
ಆದರೆ ಇಲ್ಲಿ ಮೊದಲಿಗೆ ನಾವು ತಿಳಿಯಬೇಕಿರುವ ವಿಚಾರ ಎಂದರೆ ವ್ಯಕ್ತಿಯ ಮರಣವಾಗಿ ತುಂಬ ವರ್ಷಗಳೇ ಕಳೆದು ಹೋಗಿರುತ್ತದೆ. ಆದರೆ, ಯಾವುದು ದಾಖಲೆಗಳು ಆ ವ್ಯಕ್ತಿಯ ಹೆಸರಿನಲ್ಲಿ ಇರುವುದಿಲ್ಲ.
ಪ್ರಥಮವಾಗಿ ತಾಲ್ಲೂಕಿನ ತಹಶೀಲ್ದಾರ್ ಕಚೇರಿಗೆ ಹೋಗಿ ಜನನ ಮತ್ತು ಮರಣ ಶಾಖೆಗೆ ಮರಣ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಕೆ ಮಾಡಬೇಕು. ಒಂದು ವೇಳೆ ಜನನ ಮರಣ ಪ್ರಮಾಣ ಪತ್ರ ಲಭ್ಯ ಇಲ್ಲದೆ ಹೋದರೆ ಹಿಂಬರಹ ಪತ್ರವನ್ನು ಅಲ್ಲಿಂದ ಪಡೆಯಬೇಕು.
ಕೋರ್ಟ್ ಪ್ರಕ್ರಿಯೆ ಹೇಗೆ ಇರುತ್ತದೆ ಎಂದರೆ ಹಿಂಬರಹ ಪತ್ರ, ನಮೂನೆ ಅರ್ಜಿ ಮತ್ತು ಲಭ್ಯವಿರುವ ದಾಖಲೆಗಳ ಜೊತೆಗೆ ಸ್ಥಳೀಯ ಕೋರ್ಟ್’ನಲ್ಲಿ ವಕೀಲರ ಮುಖಾಂತರ ತಡ – ನೋಂದಣಿಗಾಗಿ ಅರ್ಜಿ ಸಲ್ಲಿಕೆ ಮಾಡಬೇಕು. ಇಲ್ಲದೆ ಹೋದರೆ ಸ್ವತಃ ಕೋರ್ಟ್ಗೆ ಹೋಗಿ ತಡೆ ನೋಂದಣಿ ಆದೇಶಕ್ಕೆ ಅರ್ಜಿ ಸಲ್ಲಿಕೆ ಮಾಡಬೇಕು.
ಈ ವಿಷಯದ ಕುರಿತಾಗಿ ಜೆರಾಕ್ಸ ಅಂಗಡಿಯಲ್ಲಿ ನಮ್ಮೂನೆ ಸಿಗುತ್ತದೆ ಅದನ್ನು, ಪಡೆದು ಭರ್ತಿ ಮಾಡಿ ಅರ್ಜಿ ಜೊತೆಗೆ ಲಗತ್ತಿಸಿ ಸಲ್ಲಿಕೆ ಮಾಡಬೇಕು.
ನಂತರ ಕೋರ್ಟ್’ನಲ್ಲಿ ನಡೆಯುವ ಪ್ರಕ್ರಿಯೆ :- ನಿಗದಿಪಡಿಸಿರುವ ದಿನಾಂಕದ ಒಳಗೆ ಅರ್ಜಿದಾರರು ಮತ್ತು ಸಾಕ್ಷಿದರರು ಕೋರ್ಟ್ಗೆ ಹೋಗಿ ಸಾಕ್ಷಿ ಹೇಳಬೇಕಾಗುತ್ತದೆ. ಇದಾದ ನಂತರ ನ್ಯಾಯಾಧೀಶರು ತಡ ನೋಂದಾಣೆ ಆದೇಶ ಪತ್ರವನ್ನು ನೀಡುವರು. ಕೋರ್ಟ್ನಿಂದ ಈ ಪತ್ರವನ್ನು ಪಡೆದ ಮೇಲೆ ತಹಶೀಲ್ದಾರ್ ಕಚೇರಿಗೆ ಭೇಟಿ ನೀಡಿ ಜನನ ಮರಣ ಶಾಖೆಗೆ ಹೋಗಿ ಈ ಪತ್ರವನ್ನು ನೀಡಬೇಕು ಮತ್ತು ನೂತನ ಮರಣ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಕೆ ಮಾಡಬೇಕು. ಇದಕ್ಕೆ ಒಂದು ಮಾಸದ ಸಮಯ ಹಿಡಿಯಬಹುದು ಆದರೆ, ಮರಣವಾದ ವ್ಯಕ್ತಿಯ ಹೆಸರಿನಲ್ಲಿ ಯಾವುದೇ ದಾಖಲೆಗಳು ಇಲ್ಲದೆ ಹೋದರು ಮರಣ ಪ್ರಮಾಣ ಪತ್ರ ಎನ್ನುವುದು ಸಿಗುತ್ತದೆ.
ಮರಣ ಪ್ರಮಾಣ ಪತ್ರದ ಕುರಿತಾಗಿ ಕೆಲವು ಮುಖ್ಯ ಮಾಹಿತಿಯನ್ನು ತಿಳಿಯೋಣ ;
1) ಜನನ ಅಥವಾ ಮರಣ ಪ್ರಮಾಣ ಪತ್ರವನ್ನು 21 ದಿನಗಳ ಒಳಗೆ ಮಾಡಿಸಿಕೊಳ್ಳುವುದು ಉತ್ತಮ.
2) ಒಂದು ವೇಳೆ ವ್ಯಕ್ತಿಯ ಮರಣದ ನಂತರ ಒಂದು ವರ್ಷದ ತನಕ ಮರಣ ಪ್ರಮಾಣ ಪತ್ರವನ್ನು ಪಡೆಯದೆ ಹೋದರೆ ದಂಡ ಕಟ್ಟಿ ನಂತರ ಪ್ರಮಾಣ ಪತ್ರವನ್ನು ಪಡೆಯಬಹುದು.
3)ಒಂದು ವರ್ಷಕ್ಕಿಂತ ಇನ್ನೂ ಹೆಚ್ಚಿನ ಸಮಯವಾಗಿ ಮರಣ ಪ್ರಮಾಣ ಪತ್ರ ಇಲ್ಲದೆ ಹೋದರೆ ಕೋರ್ಟ್ ಮುಖಾಂತರ ಆದೇಶ ಪ್ರಮಾಣ ಪತ್ರ ಅರ್ಜಿ ಸಲ್ಲಿಕೆ ಮಾಡಿ ಮರಣ ಪ್ರಮಾಣ ಪತ್ರವನ್ನು ಮೇಲೆ ತಿಳಿಸಿರುವ ರೀತಿಯಲ್ಲಿ ಪಡೆದುಕೊಳ್ಳಬಹುದು.