ದಾವಣಗೆರೆಯಲ್ಲಿ ಅತ್ಯದ್ಭುತವಾಗಿ ರೈಲು ನಿಲ್ದಾಣ ನವೀಕೃತಗೊಂಡಿದೆ. ನವೀಕೃತಗೊಂಡ ದಾವಣಗೆರೆ ನಗರದ ರೈಲು ನಿಲ್ದಾಣದ ಕಟ್ಟಡ ಉದ್ಘಾಟನೆಗೆ ಸಿದ್ಧವಾಗಿದೆ. ಸುಮಾರು 18.45 ಕೋಟಿ ವೆಚ್ಚದಲ್ಲಿ ರೈಲು ನಿಲ್ದಾಣವನ್ನು ನವೀಕರಣ ಮಾಡಲಾಗಿದೆ. ಮಧ್ಯ ಕರ್ನಾಟಕ ಭಾಗದ ದಾವಣಗೆರೆ ರೈಲು ನಿಲ್ದಾಣ ನೈಋತ್ಯ ರೈಲ್ವೆ ವಲಯದ ಮೈಸೂರು ವಿಭಾಗಕ್ಕೆ ಸೇರುತ್ತದೆ. ಸ್ವಾತಂತ್ರ್ಯ ಪೂರ್ವದಲ್ಲಿ ನಿರ್ಮಾಣಗೊಂಡಿದ್ದ ರೈಲು ನಿಲ್ದಾಣದಲ್ಲಿ ಆಧುನಿಕ ಸೌಲಭ್ಯಗಳನ್ನು ಒದಗಿಸಿ ನವೀಕರಿಸಲಾಗಿದೆ. ಆದ್ದರಿಂದ ನಾವು ಇಲ್ಲಿ ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಎಸ್ಕಲೇಟರ್ ಸೌಲಭ್ಯವನ್ನು ನಿಲ್ದಾಣದಲ್ಲಿ ಒದಗಿಸಲಾಗಿದೆ. ಕರ್ನಾಟಕದ 5 ರೈಲು ನಿಲ್ದಾಣದಲ್ಲಿ ಎಸ್ಕಲೇಟರ್ ಸೌಲಭ್ಯವಿದ್ದು ಇದರಲ್ಲಿ ದಾವಣಗೆರೆ ಸಹ ಒಂದಾಗಿದೆ. ಬೆಂಗಳೂರು, ಹುಬ್ಬಳ್ಳಿ, ಮೈಸೂರು, ಬಳ್ಳಾರಿ ನಿಲ್ದಾಣದಲ್ಲಿ ಈ ಸೌಲಭ್ಯವಿದೆ. ರೈಲು ನಿಲ್ದಾಣದ ಕಟ್ಟಡ, ಪಾರ್ಕಿಂಗ್ ವ್ಯವಸ್ಥೆ, ಲಿಫ್ಟ್, ಎರಡು ಕಡೆ ಎಸ್ಕಲೇಟರ್, ಟಿಕೆಟ್ ವಿತರಣಾ ಕೊಠಡಿ ಸೇರಿ ಸುಮಾರು 18.45 ಕೋಟಿ ರೂ. ವೆಚ್ಚದಲ್ಲಿ ನಿಲ್ದಾಣವನ್ನು ನವೀಕರಣ ಮಾಡಲಾಗಿದೆ. ಮೈಸೂರು ವಿಭಾಗದಲ್ಲಿ ಅತಿ ಹೆಚ್ಚು ಆದಾಯ ತಂದು ಕೊಡುವ ಎರಡನೇ ನಿಲ್ದಾಣ ದಾವಣಗೆರೆಯಾಗಿದೆ.

ನಿಲ್ದಾಣ ನವೀಕರಣಗೊಂಡಿದ್ದು ನಿಲ್ದಾಣದಲ್ಲಿ ಈಗ 23 ಕೊಠಡಿಗಳು ನಿರ್ಮಾಣಗೊಂಡಿವೆ. ಗಣ್ಯವ್ಯಕ್ತಿಗಳ ವಿಶ್ರಾಂತಿ ಕೊಠಡಿ ಸೇರಿದಂತೆ ವಿವಿಧ ಕೊಠಡಿಗಳನ್ನು ನಿರ್ಮಿಸಲಾಗಿದೆ. ಸೆಲ್ಫೀ ಸ್ಪಾಟ್, ನವೀಕರಣಗೊಂಡ ರೈಲು ನಿಲ್ದಾಣದ ಮುಂದೆ ಐ ಲವ್ ಡಿವಿಜಿ ಎಂದು ಕೆಂಪು ಬಣ್ಣದಲ್ಲಿ ಬರೆದ ಫಲಕವಿದ್ದು ಇದು ನಿಲ್ದಾಣದ ಸೆಲ್ಫೀ ಸ್ಟಾಟ್ ಆಗಿದೆ. 100 ಅಡಿ ಎತ್ತರದ ಧ್ವಜ ಸ್ತಂಭವನ್ನು ಸಹ ನಿರ್ಮಾಣ ಮಾಡಲಾಗಿದೆ. ಏಪ್ರಿಲ್ ತಿಂಗಳಿನಲ್ಲಿ ರೈಲು ನಿಲ್ದಾಣ ಉದ್ಘಾಟನೆಗೊಳ್ಳುವ ನಿರೀಕ್ಷೆ ಇದೆ.

ಕೋವಿಡ್ ಲಾಕ್ ಡೌನ್‌ಗೂ ಮೊದಲು 44 ರೈಲುಗಳು ದಾವಣಗೆರೆ ರೈಲು ನಿಲ್ದಾಣದಿಂದ ಸಂಚಾರ ನಡೆಸುತ್ತಿದ್ದವು. ಈಗ ವಿಶೇಷ ರೈಲುಗಳು ಮಾತ್ರ ಸಂಚಾರ ನಡೆಸುತ್ತಿದ್ದು ದಿನಕ್ಕೆ 22 ರೈಲು ಸಂಚರಿಸುತ್ತಿವೆ. ಏಪ್ರಿಲ್ ಬಳಿಕ ಪ್ರತಿದಿನ 36 ರೈಲುಗಳು ಸಂಚಾರ ನಡೆಸುವ ಸಾಧ್ಯತೆ ಇದೆ ಎಂಬ ಮಾಹಿತಿಯನ್ನು ಅಧಿಕಾರಿಗಳು ನೀಡುತ್ತಿದ್ದಾರೆ. ಇದೇ ರೀತಿ ಹಲವಾರು ಜಿಲ್ಲೆಗಳಲ್ಲಿ ರೈಲ್ವೆ ಸ್ಟೇಷನ್ ಗಳು ನವೀಕರಣಗೊಂಡು ಉನ್ನತ ಸೇವೆ ನೀಡಲು ರೆಡಿ ಆಗಿವೆ ಎಂದು ಹೇಳಬಹುದು.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!