ತಂದೆಯ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೆ ಯಾವ ಯಾವ ಸಂದರ್ಭದಲ್ಲಿ ಪಾಲು ಸಿಗುವುದಿಲ್ಲ. ಆಸ್ತಿಯಲ್ಲಿ ಎಷ್ಟು ಪ್ರಕಾರಗಳಿವೆ ಯಾವ ರೀತಿಯ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೆ ಪಾಲು ಇರುತ್ತದೆ ಇಂತಹ ಹಲವು ಪ್ರಶ್ನೆಗಳಿಗೆ ಈ ಲೇಖನದಲ್ಲಿ ಮಾಹಿತಿಗಳಿವೆ ಹಾಗಾದರೆ ಆಸ್ತಿಗೆ ಸಂಬಂಧಿಸಿದಂತೆ ಒಂದಷ್ಟು ಮಾಹಿತಿಗಳನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ
ಆಸ್ತಿಯಲ್ಲಿ ಎರಡು ಪ್ರಕಾರವಿರುತ್ತದೆ ಮೊದಲನೆಯದು ಪಿತ್ರಾರ್ಜಿತ ಆಸ್ತಿ ಇದು ಮೂರು ತಲೆಮಾರಿನಿಂದ ಬಂದಿರುತ್ತದೆ. ಎರಡನೆಯದು ಸ್ವಯಾರ್ಜಿತ ಆಸ್ತಿ ತನ್ನ ಸ್ವಂತ ದುಡಿಮೆಯಿಂದ ಸಂಪಾದಿಸಿರುವ ಆಸ್ತಿಯನ್ನು ಸ್ವಯಾರ್ಜಿತ ಆಸ್ತಿ ಎನ್ನುತ್ತಾರೆ. ಹೆಣ್ಣು ಮಕ್ಕಳು ತವರಿನ ಆಸ್ತಿಯನ್ನು ಬಿಟ್ಟುಕೊಟ್ಟು ಕೆಲವು ದಿನಗಳ ನಂತರ ಆಸ್ತಿ ಬೇಕು ಎಂದು ಕೇಳಿದರೆ ತವರು ಮನೆಯ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೆ ಪಾಲು ಸಿಗುವುದಿಲ್ಲ. ಪಿತ್ರಾರ್ಜಿತ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೆ ಪಾಲು ಇರುತ್ತದೆ ಆದರೆ ಕೆಲವು ಸಂದರ್ಭದಲ್ಲಿ ಕಾನೂನು ಪ್ರಕಾರ ಆಸ್ತಿ ಸಿಗದೆ ಇರಬಹುದು.
ಆಸ್ತಿ ಪಾಲು ಮಾಡುವ ಸಂದರ್ಭದಲ್ಲಿ ನಡೆದ ಘಟನೆಯ ಆಧಾರವಾಗಿ ಆಗಿರಬಹುದು, ಈ ಹಿಂದೆ ಒತ್ತಡಕ್ಕೆ ಮಣಿದು ಹಕ್ಕು ಬಿಡುಗಡೆ ಮಾಡಿಕೊಂಡಿದ್ದರೆ, ವಾಸ್ತವ ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದ ಘಟನೆ ಆಧಾರವಾಗಿ ಆಗಿರಬಹುದು, ಹಿರಿಯರ ಆರೋಗ್ಯ ಕಾಳಜಿ ವಹಿಸಲು ಹೀಗೆ ಸೂಕ್ತ ಘಟನೆಗಳ ಆಧಾರದ ಮೇಲೆ ಹೆಣ್ಣು ಮಕ್ಕಳಿಗೆ ಆಸ್ತಿ ಕೊಡಬೇಕೋ ಬೇಡವೋ ಎಂದು ನಿರ್ಧಾರವಾಗುತ್ತದೆ ಆದರೆ ಸಾಮಾನ್ಯವಾಗಿ ಪಿತ್ರಾರ್ಜಿತ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೆ ಪಾಲು ಇದ್ದೆ ಇರುತ್ತದೆ.
ಆಸ್ತಿ ಈಗಾಗಲೆ ನೋಂದಣಿಯಾಗಿ ಬಹಳ ದಿನಗಳಾಗಿದ್ದರೆ ಅಣ್ಣ ತಮ್ಮಂದಿರು ಅವರವರ ಪಾಲನ್ನು ಈಗಾಗಲೆ ಅನುಭವಿಸುತ್ತಿದ್ದರೆ ಉಳುಮೆ ಮಾಡುತ್ತಿದ್ದರೆ ಹೆಣ್ಣು ಮಕ್ಕಳಿಗೆ ಪಾಲು ಸಿಗುವುದಿಲ್ಲ, 2005ಕ್ಕಿಂತ ಮೊದಲು ವಿಲೇವಾರಿಯಾದ ಆಸ್ತಿಯಲ್ಲಿ ಹೆಣ್ಣು ಮಕ್ಕಳು ಈಗ ಪಾಲು ಕೇಳಿದರೆ ಸಿಗುವುದಿಲ್ಲ. ಒಬ್ಬ ಹೆಣ್ಣು ಮಗಳು ತನ್ನ ತಂದೆಯ ಕುಟುಂಬದಲ್ಲಿ ಆಗುತ್ತಿರುವ ಆಸ್ತಿ ಹಂಚಿಕೆ ಸಂದರ್ಭದಲ್ಲಿ ಸುಮ್ಮನಿದ್ದು ಕೆಲವು ದಿನಗಳ ನಂತರ ಆಸ್ತಿಯಲ್ಲಿ ತನ್ನ ಪಾಲನ್ನು ಕೇಳಿದರೆ ಸಿಗುವುದಿಲ್ಲ ಕಾಲಮಿತಿ ಕಾಯ್ದೆ ಪ್ರಕಾರ ಇದಕ್ಕೆ ಒಪ್ಪಿಗೆ ಇಲ್ಲ, ಕಾಲಮಿತಿ ಕಾಯ್ದೆಯೊಳಗೆ ಮಾತ್ರ ಹೆಣ್ಣು ಮಕ್ಕಳು ಆಸ್ತಿಯ ಹಕ್ಕನ್ನು ಪಡೆಯಬಹುದು. ಆಸ್ತಿಯ ಮೇಲಿನ ಸಾಲವನ್ನು ತೀರಿಸಲು ಹೆಣ್ಣು ಮಕ್ಕಳು ಒಪ್ಪದೆ ಇದ್ದಾಗ ಅವರಿಗೆ ಆಸ್ತಿಯ ಮೇಲಿನ ಹಕ್ಕು ಇರುವುದಿಲ್ಲ.
ಇನ್ನು ಸ್ವಯಾರ್ಜಿತ ಆಸ್ತಿ ಯಾವುದೆ ವ್ಯಕ್ತಿ ತಾನು ಗಳಿಸಿದ ಆಸ್ತಿಯನ್ನು ಯಾರಿಗಾದರೂ ಕೊಡಬಹುದು ಅಥವಾ ಸಮನಾಗಿ ಹಂಚಬಹುದು ಅದು ಅವನ ವಿವೇಚನೆಗೆ ಒಳಪಟ್ಟಿರುತ್ತದೆ. ಸ್ವಯಾರ್ಜಿತ ಆಸ್ತಿ ಇದ್ದ ವ್ಯಕ್ತಿ ಆಸ್ತಿ ವಿಲೇವಾರಿ ಮಾಡದೆ ಮರಣ ಹೊಂದಿದರೆ ಆತನ ನಂತರ ಹೆಂಡತಿ ಮಕ್ಕಳಿಗೆ ಸಮನಾಗಿ ಹೋಗುತ್ತದೆ. ಆಸ್ತಿಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗೆ ವಕೀಲರನ್ನು ಸಂಪರ್ಕಿಸುವುದು ಒಳ್ಳೆಯದು. ಈ ಮಾಹಿತಿಯನ್ನು ಪ್ರತಿಯೊಬ್ಬರು ತಿಳಿದುಕೊಳ್ಳಬೇಕು.