ಕನ್ನಡ ಚಿತ್ರರಂಗದಲ್ಲಿ ಚಾಲೆಂಜಿಂಗ್ ಸ್ಟಾರ್ ಎಂದೇ ಬಿರುದಾಂಕಿತರಾಗಿರುವ ದರ್ಶನ್ ಕನ್ನಡ ಚಿತ್ರರಂಗದ ಪ್ರಮುಖ ನಟ ಮತ್ತು ನಿರ್ಮಾಪಕ. ಬಾಕ್ಸ್‌ಆಫೀಸ್ ಸುಲ್ತಾನ, ದಾಸ ಎಂದು ಅಭಿಮಾನಿಗಳಿಂದ ಪ್ರೀತಿಯಿಂದ ಕರೆಯಿಸಿಕೊಳ್ಳುವ ದರ್ಶನ್ ಕನ್ನಡ ಚಿತ್ರರಂಗದ ಹೆಸರಾಂತ ಪ್ರತಿಭೆ ತೂಗುದೀಪ ಶ್ರೀನಿವಾಸ್‌ರ ಹಿರಿಯ ಪುತ್ರ. ಸುಮಾರು ಎರಡು ದಶಕಗಳ ತಮ್ಮ ಸಿನಿಜೀವನದಲ್ಲಿ ಐವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ಕನ್ನಡ ಸಿನಿಪ್ರಿಯರ ನೆಚ್ಚಿನ ನಟನಾಗಿದ್ದಾರೆ.
ದರ್ಶನ್ ಅವರು 16 ಫೆಬ್ರವರಿ 1977 ದರ್ಶನ್ ತೂಗುದೀಪ ಭಾರತೀಯ ಚಿತ್ರೋದ್ಯಮದಲ್ಲಿ ನಟ, ನಿರ್ಮಾಪಕ ಮತ್ತು ವಿತರಕರಾಗಿದ್ದು, ಕನ್ನಡ ಚಲನಚಿತ್ರೋದ್ಯಮದಲ್ಲಿ ಪ್ರಧಾನವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನಟ ತೂಗುದೀಪ ಶ್ರೀನಿವಾಸ್ ಅವರ ಮಗ, ದರ್ಶನ್ ಅವರ ನಟನಾ ವೃತ್ತಿಯನ್ನು 1990 ರ ದಶಕದ ಮಧ್ಯಭಾಗದಲ್ಲಿ ಪ್ರಾರಂಭಿಸಿದರು. ಚಿತ್ರರಂಗ ಪ್ರವೇಶಿಸುವ ಮೊದಲು ಕಿರುತೆರೆ ಧಾರಾವಾಹಿಯೊಂದರಲ್ಲಿ ಅಭಿನಯಿಸಿದ್ದರು. 2001 ರಲ್ಲಿ ಬಿಡುಗಡೆಯಾದ ಮೆಜೆಸ್ಟಿಕ್ ಚಿತ್ರದ ಮೂಲಕ ನಾಯಕ ನಟನಾಗಿ ಪಾದಾರ್ಪಣೆ ಮಾಡಿದರು. ಇವರನ್ನು ಅಭಿಮಾನಿಗಳು ಪ್ರೀತಿಯಿಂದ ಡಿ ಬಾಸ್ ಎಂದು ಕರೆಯುತ್ತಾರೆ.
ಕರಿಯಾ, ನಮ್ಮ ಪ್ರೀತಿಯ ರಾಮು, ಕಲಾಸಿಪಾಳ್ಯ, ಗಜ, ಸಾರಥಿ ಮತ್ತು ಬುಲ್ ಬುಲ್ ನಂತಹ ವಾಣಿಜ್ಯಿಕವಾಗಿ ಯಶಸ್ವಿಯಾದ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಸಾರಥಿ ಮತ್ತು ಸಂಗೊಳ್ಳಿ ರಾಯಣ್ಣ ಚಿತ್ರದಲ್ಲಿನ ಅಭಿನಯಕ್ಕಾಗಿ ವಿಮರ್ಶಕರಿಂದ ಪ್ರಶಂಸೆಯನ್ನು ಪಡೆದರು ಮತ್ತು ಸಂಗೊಳ್ಳಿ ರಾಯಣ್ಣ ಚಿತ್ರದ ಅಭಿನಯಕ್ಕಾಗಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದಿದ್ದಾರೆ. ದರ್ಶನ್ ಚಲನಚಿತ್ರ ನಿರ್ಮಾಣ ಮತ್ತು ವಿತರಣೆಯಲ್ಲಿ ತೊಡಗಿದ್ದಾರೆ. ಅವರು 2006 ರಲ್ಲಿ ತೂಗುದೀಪ ಪ್ರೊಡಕ್ಷನ್ಸ್ ಎಂಬ ನಿರ್ಮಾಣ ಸಂಸ್ಥೆಯನ್ನು ಸ್ಥಾಪಿಸಿದರು. ಕನ್ನಡ ಚಿತ್ರರಂಗದ ಹೆಸರಾಂತ ಖಳನಾಯಕ ತೂಗುದೀಪ ಶ್ರೀನಿವಾಸ್ ಮತ್ತು ಮೀನ ತೂಗುದೀಪ ದಂಪತಿಗಳ ಹಿರಿಯ ಮಗನಾಗಿ ಹುಟ್ಟಿದರು. ಈಗ ಕನ್ನಡ ಚಿತ್ರರಂಗದ ಚಿತ್ರ ನಿರ್ಮಾಪಕರೊಲ್ಲಬ್ಬರಾಗಿದ್ದಾರೆ. ತೂಗುದೀಪ ಪ್ರೊಡಕ್ಷನ್ಸ್ ಅಡಿಯಲ್ಲಿ ಕನ್ನಡ ಚಲನಚಿತ್ರಗಳನ್ನು ನಿರ್ಮಿಸುತ್ತಿದ್ದಾರೆ.
ತೂಗುದೀಪ ಡಿಸ್ಟ್ರಿಬ್ಯೂಟರ್ಸ್ಸೋ ಅಡಿಯಲ್ಲಿ ಚಿತ್ರ ವಿತರಕರಾಗಿದ್ದಾರೆ. ತಮ್ಮದಿನಕರ್ ತೂಗುದೀಪ್ ನಿರ್ದೇಶಕರಾಗಿದ್ದಾರೆ. ದರ್ಶನ್ 2000ರಲ್ಲಿ ವಿಜಯಲಕ್ಷ್ಮೀ ಅವರನ್ನು ವಿವಾಹವಾದರು. ಅವರಿಗೆ ವಿನೇಶ್ ಹೆಸರಿನ ಗಂಡು ಮಗನಿದ್ದಾನೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಅಪಾರ ದೈವ ಭಕ್ತಿಯುಳ್ಳವರು. ಅದರಲ್ಲೂ ಮೈಸೂರಿನ ಚಾಮುಂಡೇಶ್ವರಿ ದೇವಿ ಎಂದರೆ ಅವರಿಗೆ ವಿಶೇಷ ಭಕ್ತಿ. ಹಬ್ಬ ಹರಿದಿನಗಳಲ್ಲಿ ಅಲ್ಲಿಗೆ ಭೇಟಿ ನೀಡಿ, ನಾಡದೇವತೆಗೆ ವಿಶೇಷ ಪೂಜೆ ಸಲ್ಲಿಸಿ ಬರುತ್ತಾರೆ. ನಿನ್ನೆ ತಾನೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಪತ್ನಿ ಹಾಗೂ ಮಗ ವಿನೀಶ್ ಜೊತೆ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿದ್ದಾರೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಾಣಿ ಪಕ್ಷಿಗಳಲ್ಲೂ ದೇವರನ್ನು ಕಾಣ್ತಾರೆ. ಅಯ್ಯಪ್ಪ ಮಾಲೆ ಧರಿಸೋದಿರಬಹುದು, ಆಗಾಗ ಮೈಸೂರಿನ ಚಾಮುಂಡಿ ಬೆಟ್ಟ ಹತ್ತಿ ದೇವಿಯ ದರ್ಶನ ಪಡೆಯೋದಿರಬಹುದು, ಅಷ್ಟೇ ಯಾಕೆ ತಾವು ಯಾವ ಗಾಡಿ ಹೊಸದಾಗಿ ಖರೀದಿ ಮಾಡಿದ್ರೂ, ಅದರ ಮೊದಲ ಪೂಜೆ ಆಗೋದೇ ಚಾಮುಂಡಿದೇವಿಯ ಸನ್ನಿಧಿಯಲ್ಲಿ. ದೇವರು ಅಂದ್ರೆ ದರ್ಶನ್‍ಗೆ ಅಷ್ಟು ಶ್ರದ್ಧೆ, ಭಕ್ತಿಯಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ದೈವಭಕ್ತ. ಮೈಸೂರಿಗೆ ಹೋದಾಗ ಚಾಮುಂಡಿಯ ದರ್ಶನ ಮಾಡದೇ ಇರಲ್ಲ. ಅವರು ಖರೀದಿಸುವ ಹೊಸ ಕಾರುಗಳು ಮೊದಲು ಪೂಜೆಯಾಗೊದೇ ಚಾಮುಂಡಿಯ ಸನ್ನಿಧಿಯಲ್ಲಿ.
ನಟ ದರ್ಶನ್ ತೂಗುದೀಪ ಮನೆಗೆ ಹೊಸ ಅತಿಥಿ ಆಗಮಿಸಿದ್ದು, ಚಾಲೆಂಜಿಂಗ್ ಸ್ಟಾರ್ ದರ್ಶನ್ ರೇಂಜ್ ರೋವರ್ ಡಿಫೆಂಡರ್ ಕಾರು ಖರೀದಿಸಿದ್ದಾರೆ. ಡಿಬಾಸ್ ದರ್ಶನ್‍ಗೆ ಕಾರ್ ಕ್ರೇಜ್ ಜಾಸ್ತಿ ಇದ್ದು, ಈಗಾಗಲೇ ಹಲವಾರು ಐಷಾರಾಮಿ ಕಾರುಗಳ ಒಡೆಯನಾಗಿರುವ ನಟ ದರ್ಶನ್ ಇದೀಗ ಮತ್ತೊಂದು ಐಷಾರಾಮಿ ಕಾರನ್ನು ಖರೀದಿಸಿದ್ದಾರೆ. ಒಂದು ಕೋಟಿಗೂ ಅಧಿಕ ಬೆಲೆಯ ಐಶಾರಾಮಿ ರೇಂಜ್ ರೋವರ್ ಡಿಫೆಂಡರ್ ಕಾರು ಖರೀದಿಸಿದ್ದಾರೆ. ಈಗಾಗಲೇ ಲ್ಯಾಂಬೋರ್ಗಿನಿ, ಜಾಗ್ವಾರ್, ಫಾರ್ಚೂನರ್, ಹಮ್ಮರ್ ಸೇರಿ ಸಾಕಷ್ಟು ಕಾರುಗಳು ನಟ ದರ್ಶನ್ ಬಳಿ ಇದೆ.