ವಿದ್ಯಾರ್ಥಿಗಳಾದವರು ಓದಿನಲ್ಲಿ ಆಸಕ್ತಿ ಬೆಳೆಸಿಕೊಂಡಿರುತ್ತಾರೆ ಆದರೆ ಇಲ್ಲೊಬ್ಬ ವಿದ್ಯಾರ್ಥಿ ಕೃಷಿಯಲ್ಲಿ ಆಸಕ್ತಿ ಬೆಳೆಸಿಕೊಂಡು ದಾಳಿಂಬೆ ಪ್ಲಾಂಟೇಶನ್ ಮಾಡುತ್ತಾನೆ. ಅವನು ಹೇಗೆ ದಾಳಿಂಬೆ ಪ್ಲಾಂಟೇಶನ್ ಮಾಡಿದ್ದಾನೆ ಹಾಗೂ ಅದರ ಆದಾಯ ಖರ್ಚುವೆಚ್ಚಗಳ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ.

ಬೆಂಗಳೂರಿನ ದೇವನಹಳ್ಳಿಯ ಪವನ್ ಎಂಬ ವಿದ್ಯಾರ್ಥಿ ತನ್ನ 4 ಎಕರೆ ಜಮೀನಿನಲ್ಲಿ ಪೋಮೋಗ್ರನೇಟ್ ದಾಳಿಂಬೆ ಪ್ಲಾಂಟೇಶನ್ ಮಾಡಿದ್ದಾರೆ. ಅವರಿಗೆ ಕೃಷಿಯಲ್ಲಿ ಆಸಕ್ತಿ ಇತ್ತು ತಮ್ಮ 17ನೇ ವಯಸ್ಸಿಗೆ 2014 ರಲ್ಲಿ ಕೃಷಿ ಮಾಡುವುದರಲ್ಲಿ ನಿರತರಾದರು. ಇವರು ದಾಳಿಂಬೆ ಪ್ಲಾಂಟೇಶನ್ ಮಾಡಿದ ನಂತರ ಹಲವು ರೈತರು ಇವರ ಹತ್ತಿರ ಕೃಷಿಯ ಬಗ್ಗೆ ಮಾಹಿತಿ ತಿಳಿದುಕೊಂಡು ತಾವು ಕೂಡ ಪ್ಲಾಂಟೇಶನ್ ಮಾಡಿದ್ದಾರೆ. ಪವನ್ ಅವರು ಹಣ್ಣಿನ ಬೆಳೆಯ ಬಗ್ಗೆ ರಿಸರ್ಚ್ ಮಾಡಿ ದಾಳಿಂಬೆ ಪ್ಲಾಂಟೇಶನ್ ಪ್ರಾರಂಭಿಸಿದರು. ಅವರು ಮೊದಲು ತಮ್ಮ ಜಮೀನನ್ನು ಕ್ಲೀನ್ ಮಾಡಿಸಿ ಗುಂಡಿ ತೆಗೆದು ಗೊಬ್ಬರ, ಪರ್ಟಿಲೈಜರ್ ಹಾಕಿ ಮಿಕ್ಸ್ ಮಾಡಿ ನಂತರ ಪ್ಲಾಂಟೇಶನ್ ಮಾಡಿದರು. 18 ತಿಂಗಳಿಗೆ ಫಸಲು ಬಂದಿತು. ಪವನ್ ಅವರು 1,200 ದಾಳಿಂಬೆ ಗಿಡಗಳನ್ನು ನೆಟ್ಟಿದ್ದಾರೆ. ನಂತರ ಅವರು ಸಂಶೋಧನೆ ಮಾಡುತ್ತಾ ದಾಳಿಂಬೆ ಬಗ್ಗೆ ಮಾಹಿತಿಯನ್ನು ತಿಳಿದುಕೊಂಡಿದ್ದಾರೆ. ಪವನ್ ಅವರು ಗ್ರ್ಯಾವಲ್ ಎಂಬ ಜಾತಿಯ ದಾಳಿಂಬೆ ಗಿಡಗಳನ್ನು ಬೆಳೆಸಿದ್ದಾರೆ ಅವರು ಬೆಳೆದ ದಾಳಿಂಬೆ ಸ್ವೀಟ್ ಆಗಿರುತ್ತದೆ ಮತ್ತು ಹಣ್ಣು ಬ್ಲಡ್ ರೆಡ್ ಆಗಿರುತ್ತದೆ. 45 ಟನ್ ದಾಳಿಂಬೆ ಹಣ್ಣುಗಳು ಸಿಗುತ್ತದೆ, 38 ಲಕ್ಷ ಆದಾಯ ದೊರೆಯುತ್ತದೆ, 4 ಲಕ್ಷ ಖರ್ಚಾಗಿದೆ. ಅವರ ಪ್ಲಾಂಟೇಶನ್ ಗೆ ರಷ್ಯಾ, ಇಂಗ್ಲೆಂಡ್ ನಿಂದ ವಿಸಿಟ್ ಮಾಡಿದ್ದಾರೆ. ಹೊರಗಿನಿಂದ ಬಹಳಷ್ಟು ಜನರು ಬಂದು ಮಾಹಿತಿ ಕೇಳುತ್ತಿದ್ದರು ಇದರಿಂದ ಪವನ್ ಅವರಿಗೆ ಕೃಷಿಯ ಬಗ್ಗೆ ಹೆಚ್ಚಿನ ಆಸಕ್ತಿ ಬೆಳೆಯಿತು ಹಾಗೂ ಪವನ್ ಅವರು ತಾವು ಬೆಳೆದ ಬೆಳೆಯಿಂದ ಬೇರೆಯವರಿಗೂ ಸಹಾಯವಾಯಿತು ಎಂದು ಖುಷಿಪಟ್ಟರು.‌ ಪವನ್ ಅವರು ತಾವು ಬೆಳೆದ ದಾಳಿಂಬೆ ಹಣ್ಣುಗಳನ್ನು ರಿಲಯನ್ಸ್, ಮೆಟ್ರೋ, ಮೋರ್, ಸೂಪರ್ ಮಾರ್ಕೆಟ್ ಗಳಿಗೆ ಕೊಡುತ್ತಾರೆ.

ದಾಳಿಂಬೆ ಸೆನ್ಸಿಟಿವ್ ಇರುವುದರಿಂದ ಜಾಗರೂಕತೆಯಿಂದ ನೋಡಿಕೊಳ್ಳಬೇಕು. ಅವರು ನೀರನ್ನು ಡ್ರಿಪ್ ನಲ್ಲಿ ಸ್ಪ್ರೇ ಮಾಡುತ್ತಾರೆ. ದಾಳಿಂಬೆಗೆ ಮಳೆ ಇರಬಾರದು, ಉಷ್ಣಾಂಶ ಹೆಚ್ಚಿದ್ದರೆ ಒಳ್ಳೆಯದು. ಪವನ್ ಅವರು ತಮ್ಮ ಜಮೀನಿನಲ್ಲಿ ಕೃಷಿಹೊಂಡವನ್ನು ಮಾಡಿ ನೀರನ್ನು ಒದಗಿಸುತ್ತಿದ್ದಾರೆ‌. ದಾಳಿಂಬೆ ಹಣ್ಣಿಗೆ ಬೆಂಗಳೂರಿನಲ್ಲಿ ಮಾರ್ಕೆಟಿಂಗ್ ಚೆನ್ನಾಗಿದೆ. ಕರ್ನಾಟಕದಲ್ಲಿ ಸಾಕಷ್ಟು ದಾಳಿಂಬೆ ಬೆಳೆಯುತ್ತಿದ್ದರೂ ಮಹಾರಾಷ್ಟ್ರದಿಂದ ಆಮದು ಮಾಡಿಕೊಳ್ಳುತ್ತಾರೆ ಆದ್ದರಿಂದ ಇಲ್ಲಿ ಬೆಳೆದಿರುವ ದಾಳಿಂಬೆ ಹಣ್ಣುಗಳಿಗೆ ಮಾರ್ಕೆಟಿಂಗ್ ಉತ್ತಮವಾಗಿದೆ. ಕ್ವಾಲಿಟಿ ಮತ್ತು ಉತ್ತಮ ಸೈಜ್ ದಾಳಿಂಬೆ ಹಣ್ಣು ಬೆಳೆಯುವುದು ಮುಖ್ಯ ಇದರಿಂದಲೇ ಮಾರ್ಕೆಟಿಂಗ್ ಉತ್ತಮವಾಗಿರುತ್ತದೆ ಹೆಚ್ಚಿನ ಬೆಲೆಗೆ ಮಾರಾಟ ಆಗುತ್ತದೆ. ಸ್ವಲ್ಪ ಜಮೀನಿದ್ದರೂ ಕೃಷಿಯಲ್ಲಿ ಆಸಕ್ತಿ ಇರುವವರು ಯಾವುದೇ ಬೆಳೆಯನ್ನು ಬೆಳೆಯುವುದು ಒಳ್ಳೆಯದು, ಕೃಷಿ ಮಾಡಲು ಆಸಕ್ತಿ ಮುಖ್ಯ ಎಂದು ಪವನ್ ಅವರು ತಮ್ಮ ಅಭಿಪ್ರಾಯವನ್ನು ಹೇಳಿದ್ದಾರೆ. ಮನಸಿದ್ದರೆ ಮಾರ್ಗ ಎಂಬ ಮಾತಿನಂತೆ ವಿದ್ಯಾರ್ಥಿಯಾದವನು ದಾಳಿಂಬೆ ಬೆಳೆಯ ಕೃಷಿಯನ್ನು ಮಾಡಿ ಲಕ್ಷಲಕ್ಷ ಗಳಿಸಿ ಯಶಸ್ವಿಯಾಗಿದ್ದಾರೆ. ಈ ಮಾಹಿತಿಯನ್ನು ತಪ್ಪದೇ ಎಲ್ಲರಿಗೂ ತಿಳಿಸಿ ಪವನ್ ಅವರು ಮಾಡಿದ ಕೃಷಿ ಎಲ್ಲರಿಗೂ ಮಾದರಿಯಾಗಿದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!