ದೇಹಕ್ಕೆ ಉತ್ತಮವಾದ ಆರೋಗ್ಯವನ್ನು ಕಾಪಾಡುವ ಹಣ್ಣುಗಳ ಸಾಲಿನಲ್ಲಿ ಬಾಳೆ ಹಣ್ಣು ಪ್ರಮುಖವಾಗಿದೆ ಮತ್ತು ಎಲ್ಲಾ ವಯೋಮಾನದವರೂ ಇಷ್ಟ ಪಡುವಂತಹ ಹಣ್ಣುಗಳಲ್ಲಿ ಇದೂ ಒಂದು ಅಲ್ಲದೇ ಈ ಹಣ್ಣಿಗೆ ನಮ್ಮ ಪುರಾಣಗಳಲ್ಲಿಯೂ ಸಹ ಅಷ್ಟೇ ಪ್ರಾಮುಖ್ಯತೆ ಇದ್ದು ಇದನ್ನು ಪುರಾಣಗಳ ಪ್ರಾಕಾರ ದೈವ ಫಲ ಅಥವಾ ಪೂರ್ಣ ಫಲ ಎಂದೂ ಕರೆಯಲಾಗುವುದು ಮತ್ತು ವರ್ಷದ ಎಲ್ಲಾ ಕಾಲಗಳಲ್ಲಿಯೂ ಸಹ ಸಿಗುವುದು ಬಾಳೆ ಹಣ್ಣಿನ ವಿಶೇಷವಾಗಿದೆ ಹಾಗೂ ಜಾತಿಯಲ್ಲಿ ವಿವಿಧ ಬಗೆಯ ಬಾಳೆ ಹಣ್ಣುಗಳನ್ನು ನಾವು ನೋಡುವುದಾದರೂ ಅದರಲ್ಲಿರುವ ಪೋಷಕಾಂಶಗಳಲ್ಲಿ ನಾವು ಯಾವುದೇ ರೀತಿಯ ವೈಶಿಷ್ಟ್ಯಗಳನ್ನು ಕಾಣಲಾಗುವುದಿಲ್ಲ ಮತ್ತು ಎಲ್ಲಾ ವಯೋಮಾನದವರು ಎಲ್ಲಾ ಸಮಯದಲ್ಲಿಯೂ ಸೇವಿಸಬಹುದಾದ ಮತ್ತು ಎಲ್ಲರ ಕೈಗೆಟಕುವ ಬೆಲೆಯಲ್ಲಿ ಈ ಹಣ್ಣು ವರ್ಷವಿಡೀ ಮಾರುಕಟ್ಟೆಯಲ್ಲಿ ದೊರೆಯುತ್ತದೆ
ಬಾಳೆ ಹಣ್ಣಿನಲ್ಲಿ ಅಧಿಕ ಪ್ರಮಾಣದ ಪೋಟಾಸಿಯಮ್ ಇದ್ದು ಇದು ಮೂಳೆ ಮತ್ತು ಹಲ್ಲುಗಳನ್ನು ಬಲಪಡಿಸುವಲ್ಲಿ ನೆರವಾಗುತ್ತದೆ ಮತ್ತು ಸೋಡಿಯಮ್ ಪ್ರಭಾವವನ್ನು ತಗ್ಗಿಸುತ್ತದೆ ಅಲ್ಲದೇ ಕ್ಯಾಲ್ಸಿಯಮ್ ನ ಸಾಂದ್ರತೆಯನ್ನು ಕಾಪಾಡಿಕೊಳ್ಳುವಲ್ಲಿ ಇದೂ ಸಹಾಯಾಕವಾಗಿದೆ ಅಲ್ಲದೇ ಬಾಳೆ ಹಣ್ಣಿನಲ್ಲಿ ಅತ್ಯುತ್ತಮವಾದ ನಾರಿನಾಂಶವಿರುವ ಕಾರಣ ಕರುಳಿನ ಕ್ರಿಯೆಗಳು ಸರಾಗವಾಗಿ ನಡೆಯುತ್ತವೆ ಮತ್ತು ಮಲಬದ್ಧತೆ ಸಮಸ್ಯೆ ಎಂದಿಗೂ ಬಾದಿಸಲಾರದು
ಬಾಳೆಹಣ್ಣು ಶಕ್ತಿಯ ಆಗರವಾಗಿರುವುದರಿಂದ ಈ ಹಣ್ಣುಗಳನ್ನು ಮಕ್ಕಳಿಗೆ ನಿಯಮಿತವಾಗಿ ಸೇವಿಸಲು ಕೊಡುವುದು ಒಳ್ಳೆಯದು ಇದರಲ್ಲಿ ಗ್ಲುಕೋಸ್ ಫೃಕ್ಟೋಸ್ ಮತ್ತು ನಾರಿನಾಂಶ ಅಧಿಕವಾಗಿದ್ದು ಈ ಹಣ್ಣನ್ನು ನಿಯಮಿತವಾಗಿ ಪ್ರತಿನಿತ್ಯ ಸೇವಿಸುತ್ತಾ ಬರುವುದರಿಂದ ದೇಹಕ್ಕೆ ಇದು ಶಕ್ತಿಯ ಜೊತೆಗೆ ಪೋಷಣೆಯನ್ನು ಒದಗಿಸುತ್ತದೆ ಅಲ್ಲದೇ ಬಾಳೆಹಣ್ಣಿನಲ್ಲಿರುವ ಅಧಿಕ ಕಬ್ಬಿಣದ ಅಂಶವೂ ಹಿಮೋಗ್ಲೋಬಿನ್ ತೀವ್ರತೆಯನ್ನು ಹೆಚ್ಚಿಸುತ್ತದೆ ಮತ್ತು ಅನಿಮಿಯಾದಿಂದ ಬಳಲುತ್ತಿರುವವರು ಇದನ್ನು ಸೇವಿಸುವುದು ಉತ್ತಮ ಎಂದು ಹೇಳಬಹುದಾಗಿದೆ
ದಿನಕ್ಕೊಂದು ಬಾಳೆಹಣ್ಣನ್ನು ಸೇವಿಸುವುದು ಜೀರ್ಣ ಕ್ರಿಯೆ ಸರಾಗವಾಗಿ ಆಗುವಲ್ಲಿ ಇದು ಬಹಳ ಸಹಾಯಕಾರಿಯಾಗಿರುತ್ತದೆ, ಬಾಳೆ ಹಣ್ಣಿನಲ್ಲಿ ಸೇಬು ಹಣ್ಣಿಗಿಂತಲೂ ಅಧಿಕ ಪೋಷಕಾಂಶಗಳಿದ್ದು ಮತ್ತು ಕೊಬ್ಬಿನಾಂಶವೂ ಕೂಡ ಸೆಬಿಗಿಂತಲೂ ಹೆರಳವಾಗಿದೆ ಆದ ಕಾರಣ ನಾವು ಬಾಳೆ ಹಣ್ಣನ್ನು ಒಂದು ಅಧ್ಬುತ ಹಣ್ಣು ಎಂದೇ ಪರಿಗಣಿಸಬಹುದಾಗಿದೆ ಮತ್ತು ಬಾಳೆ ಹಣ್ಣನ್ನು ನಿಯಮಿತವಾಗಿ ಪ್ರತಿನಿತ್ಯ ಸೇವಿಸುತ್ತಾ ಬರುವುದರಿಂದ ಇದು ದೇಹಕ್ಕೆ ಉತ್ತಮ ಪೋಷಕಾಂಶಗಳನ್ನು ಒದಗಿಸುವುದಲ್ಲದೆ ದೇಹದ ಫಿಟ್ನೆಸ್ಸ್ ಕಾಯ್ದುಕೊಳ್ಳುವಲ್ಲಿ ಬಹಳ ಸಹಾಯಾಕಾರಿಯಾಗುತ್ತದೆ