ಮಕ್ಕಳು ಅಂಗಡಿ ನೋಡಿದರೆ ಚಾಕಲೇಟ್ ಬೇಕು ಎಂದು ಹಠ ಹಿಡಿಯುತ್ತಾರೆ. ಹೈದ್ರಾಬಾದ್ ನಗರದಲ್ಲಿ ಅಂಗಡಿಯಲ್ಲಿ ಖರೀದಿಸಿದ ಚಾಕಲೇಟ್ ನಲ್ಲಿ ಹುಳು ಕಂಡುಬಂದಿದೆ. ಹಾಗಾದರೆ ಇದರ ಬಗ್ಗೆ ಸಂಪೂರ್ಣವಾಗಿ ಈ ಲೇಖನದಲ್ಲಿ ನೋಡೋಣ
ಕೆಲವು ಮನೆಗಳಲ್ಲಿ ಮಕ್ಕಳಿಗೆ ಕಂಡ ಕಂಡಲ್ಲಿ ಚಾಕಲೇಟ್ ಕೊಡಿಸುತ್ತಾರೆ. ತೆಲಂಗಾಣದ ಹೈದ್ರಾಬಾದ್ ಮೆಟ್ರೊ ನಿಲ್ದಾಣದ ಅಂಗಡಿಯಿಂದ ಖರೀದಿಸಿದ ಕ್ಯಾಡ್ಬರಿ ಡೈರಿ ಮಿಲ್ಕ್ ಚಾಕಲೇಟ್ ನಲ್ಲಿ ವ್ಯಕ್ತಿಯೊಬ್ಬರು ಜೀವಂತ ಹುಳು ತೇವಳುತ್ತಿರುವುದನ್ನು ನೋಡಿದ್ದಾರೆ. ಸೋಶಿಯಲ್ ಮೀಡಿಯಾ ಹ್ಯಾಂಡಲ್ ಎಕ್ಸ್ ನಲ್ಲಿ ವ್ಯಕ್ತಿ ಹಂಚಿಕೊಂಡ ಪೋಸ್ಟ್ ಪ್ರಕಾರ ಫೆಬ್ರವರಿ 9, 2024 ರಂದು ತೆಲಂಗಾಣದ ಅಂಗಡಿಯಲ್ಲಿ ಖರೀದಿಸಿದ ವ್ಯಕ್ತಿಗೆ ಚಾಕಲೇಟ್ ನಲ್ಲಿ ಹುಳು ಕಂಡುಬಂದಿದೆ.
ಹೈದ್ರಾಬಾದ್ ನಗರದ ಅಮೀರ್ ಪೇಟ್ ಮೆಟ್ರೊ ನಿಲ್ದಾಣದ ಬಳಿಯ ರತ್ನದೀಪ್ ರಿಟೇಲ್ ನಿಂದ 45 ರೂಪಾಯಿಗೆ ಖರೀದಿಸಿದ ಚಾಕಲೇಟ್ ಬಿಲ್ ನೊಂದಿಗೆ ರಾಬಿನ್ ಝಾಕಿಯಸ್ ಎಕ್ಸ್ ನಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಅವರು ಹಂಚಿಕೊಂಡಿರುವ ವಿಡಿಯೋದಲ್ಲಿ ಚಾಕಲೇಟ್ ನಲ್ಲಿ ಹುಳು ತೆವಳುತ್ತಿರುವುದನ್ನು ನೋಡಬಹುದು. ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋವನ್ನು ನೋಡಿದ ತಕ್ಷಣ ಜನರು ಪ್ರತಿಕ್ರಯಿಸಲು ಪ್ರಾರಂಭಿಸಿದರು ಈ ಮಧ್ಯೆ ಕಂಪನಿಯು ಪೋಸ್ಟ್ ಗೆ ಪ್ರತಿಕ್ರಿಯಿಸಿತು ಮತ್ತು ಚಾಕಲೇಟ್ ಖರೀದಿಯ ಬಗ್ಗೆ ಹೆಚ್ಚಿನ ವಿವರ ಕೊಡುವಂತೆ ಜಾಕಿಯಸ್ ಅವರು ವಿನಂತಿಸಿದರು.
ಈಗಿನ ಮಕ್ಕಳು ಹೆಚ್ಚು ಚಾಕ್ಲೆಟ್ ತಿನ್ನಲು ಇಷ್ಟಪಡುತ್ತಾರೆ ಅತಿಯಾದ ಚಾಕ್ಲೇಟ್ ಸೇವನೆಯಿಂದ ಹೊಟ್ಟೆ ನೋವು ಬರುತ್ತದೆ. ಈ ಪೋಸ್ಟ್ ನೋಡಿದ ಮೇಲೆ ಚಾಕ್ಲೆಟ್ ಖರೀದಿ ಮಾಡಲು ಪೋಷಕರು ಭಯಪಡುತ್ತಾರೆ. ಚಾಕಲೇಟ್ ತಿನ್ನಲು ಎಲ್ಲರಿಗೂ ಇಷ್ಟವಾಗುತ್ತದೆ ಆದರೆ ಅದರಲ್ಲಿ ಹುಳು ಇರುವುದನ್ನು ನೋಡಿದರೆ ಚಾಕಲೇಟ್ ತಿನ್ನುವುದಿರಲಿ ಖರೀದಿಸಲು ಮುಂದಾಗಲು ಜನ ಹೆದರುವ ಸಾಧ್ಯತೆ ಇದೆ. ಮುಂದಿನ ದಿನಗಳಲ್ಲಿ ನಿಮ್ಮ ಮಕ್ಕಳಿಗೆ ಚಾಕಲೇಟ್ ಖರೀದಿ ಮಾಡುವಾಗ ಎಚ್ಚರಿಕೆವಹಿಸಿ ಹಾಗೂ ಇತರರಿಗೂ ಈ ಮಾಹಿತಿಯನ್ನು ತಿಳಿಸಿ.