ಕರ್ನಾಟಕ ರಾಜ್ಯ ಸರ್ಕಾರ ಜನರ ಒಳಿತಿಗಾಗಿ ಹೊಸ ಹೂಸ ಯೋಜನೆ ಬಿಡುಗಡೆ ಮಾಡಿದೆ. ಕಂದಾಯ ಸಚಿವರಾದ ಕೃಷ್ಣಭೈರೇಗೌಡ ಅವರು ರಾಜ್ಯದ ಪೂರಾ ಇರುವ ರೈತರ ಒಳಿತಿಗಾಗಿ ಉತ್ತಮ ಉಡುಗೊರೆ ನೀಡಿದ್ದಾರೆ.

ಸ್ವಂತ ಜಮೀನು ಇಲ್ಲದೆ ಸರ್ಕಾರದ ಜಮೀನಿನಲ್ಲಿ ವ್ಯವಸಾಯ ಮಾಡುವ ರೈತಾಪಿ ವರ್ಗದ ಜನರಿಗೆ, ಬಗರ್ ಹುಕುಂ ಸಾಗುವಳಿ ಮಾಡುವವರಿಗೆ ಮತ್ತು ಅಕ್ರಮ ಸಕ್ರಮ ಯೋಜನೆ ಅರ್ಜಿ ಸಲ್ಲಿಸುವ ಜನರಿಗೆ ಕಂದಾಯ ಸಚಿವರು ಒಳ್ಳೆಯ ಸುದ್ದಿ ನೀಡಿದ್ದಾರೆ.

ಅಕ್ರಮ ಸಕ್ರಮ ಯೋಜನೆ ಕೆಳಗೆ ಜಾಮೀನು ಮತ್ತು ಪಾಣಿಯನ್ನು ರೈತರ ಹೆಸರಿಗೆ ವರ್ಗಾವಣೆ ಮಾಡುವ ಯೋಚನೆ ಇದ್ದರೆ, ಬಗರ್ ಹುಕುಂ ಸಾಗುವಳಿಗಾಗಿ ಕಾಯ್ತಾ ಇದ್ದರೆ ರಾಜ್ಯ ಸರ್ಕಾರ ಅಂತಹ ಅರ್ಹ ರೈತಾಪಿ ವರ್ಗದ ಜನರಿಗೆ ಶೀಘ್ರವೇ ಜಮೀನು ಮಂಜೂರು ಮಾಡುವ ಭರವಸೆಯನ್ನು ನೀಡಿದ್ದಾರೆ ಕಂದಾಯ ಸಚಿವರು.

ನಮೂನೆ 50, 53 ಹಾಗೂ 57ಕ್ಕೆ ಸಂಬಂಧ ಪಟ್ಟಂತೆ ಅಕ್ರಮ ಸಕ್ರಮಗೊಳಿಸಿ ಸಾಗುವಳಿ ಚೀಟಿ ನೀಡುವಂತೆ ಲಕ್ಷಾಂತರ ಮಂದಿ ಆರ್ಜಿ ಸಲ್ಲಿಸಿದ್ದಾರೆ. ಅದಕ್ಕೆಅರ್ಹ ರೈತಾಪಿ ವರ್ಗದ ಜನರಿಗೆ ಮಾತ್ರ ಜಮೀನು ಮಂಜೂರು ಮಾಡಬೇಕು ಎಂದು ಕೃಷ್ಣಭೈರೇಗೌಡ ಅವರು ಅದಕ್ಕೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಈ ಹಿಂದೆ ಬಗರ್ ಹುಕುಂ ಸಾಗುವಳಿ ಚೀಟಿ ನೀಡುವ ಸಮಯದಲ್ಲಿ ಅರ್ಹತೆ ಇಲ್ಲದ ಜನರಿಗೂ ಜಮೀನು ಮಂಜೂರು ಮಾಡಲಾಗಿದೆ. ನಿಯಮ ಮೀರಿ ಹೆಚ್ಚಿನ ಅಕ್ರಮ ನಡೆದು ಹೋಗಿದೆ ಎಂದು ಹೇಳಿದ ಕಂದಾಯ ಸಚಿವರು.

ಈ ಬಾರಿ ಆ ರೀತಿಯ ಯಾವ ತಪ್ಪು ಮರುಕಳಿಸಬಾರದು ಎಂದು ಅಧಿಕಾರಿಗಳಿಗೆ ಕಂದಾಯ ಸಚಿವರು ಎಚ್ಚರಿಕೆ ನೀಡಿದ್ದಾರೆ ಹಾಗೂ ಬಗರ್ ಹುಕುಂ ಸಭೆಯ ಬೈಯೋ ಮೆಟ್ರಿಕ್ ಹಾಜರಾತಿ ಕಡ್ಡಾಯವಾಗಿ ಪಡೆಯಬೇಕು ಎಂದು ತಾಕೀತು ಮಾಡಿದ್ದಾರೆ. ಬಗರ್ ಹುಕುಂ ಅರ್ಜಿ ವಿಲೇವಾರಿ ಸಮಯದಲ್ಲಿ  ಅಧಿಕಾರಿಗಳು ಯಾವುದೇ ಪ್ರಭಾವಿ ವ್ಯಕ್ತಿಗಳ ಮತ್ತು ರಾಜಕೀಯ ಪಕ್ಷದ ನಾಯಕರಿಗೆ ಅನುಕೂಲವಾಗುವಂತೆ ವರ್ತಿಸುವಂತೆ ಇಲ್ಲ. ಬಡವರಿಗೆ ಮತ್ತು ಅರ್ಹ ರೈತಾಪಿ ವರ್ಗದ ಜನರಿಗೆ ನ್ಯಾಯ ಒದಗಿಸಬೇಕು.

ಮುಂದಿನ 6 ಮಾಸಗಳಲ್ಲಿ ಅರ್ಹ ರೈತ ವರ್ಗದ ಜನರಿಗೆ ಸಾಗುವಳಿ ಚೀಟಿಯನ್ನು ನೀಡಬೇಕು ಅದರ ಜೊತೆಗೆ  ಹೊಸ ಸರ್ವೇ ನಂಬರ್ ಕೂಡ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿರುವ ಜನರಿಗೆ ಅಥವಾ ಸ್ವಂತ ಜಮೀನು ಇಲ್ಲದೆ ಸರ್ಕಾರಿ ಜಮೀನಿನಲ್ಲಿ ವ್ಯವಸಾಯ ಮಾಡುವ ಜನರಿಗೆ ಅವರ ಹೆಸರಿಗೆ ಪಾಣಿಯನ್ನು ವರ್ಗಾವಣೆ ಮಾಡಿ.

ಅಕ್ರಮ ಸಕ್ರಮ ಬಗರ್ ಹುಕುಂ ಸಾಗುವಳಿ ಯೋಜನೆ ಕೆಳಗೆ ಆಸ್ತಿ ವರ್ಗಾವಣೆ ಮಾಡಿಕೊಳ್ಳಲು ಅವಕಾಶ ನೀಡುವ ಮಹತ್ವದ ನಿರ್ಧಾರ ಕೈಗೊಂಡಿದೆ ರಾಜ್ಯ ಸರ್ಕಾರ. ಇನ್ನು ಇದರ ಬಗ್ಗೆ ಹೆಚ್ಚಿನ ಮಾಹಿತಿ ಮತ್ತು ವಿವರಗಳಿಗೆ ಗ್ರಾಮದ ಲೆಕ್ಕಾಧಿಕಾರಿಯನ್ನು ಸಂಪರ್ಕ ಮಾಡುವುದು ಉತ್ತಮ.

Leave a Reply

Your email address will not be published. Required fields are marked *