ಮೇಷ ರಾಶಿ: ಈ ದಿನ ನೀವು ನಿಮ್ಮ ಮಕ್ಕಳ ವಿಷಯಕ್ಕೆ ಸಂಬಂಧಿಸಿದಂತೆ ನಿರಾಶೆಯನ್ನು ಹೊಂದುವ ಕಾರಣದಿಂದಾಗಿ ಸ್ವಲ್ಪ ಒತ್ತಡಕ್ಕೆ ಒಳಗಾಗುವಿರಿ. ಹೆಚ್ಚಿನ ಯೋಚನೆ ಮಾಡದೇ ಮಾಡುವ ಕೆಲಸದಲ್ಲಿ ನಿರತರಾಗಿ ಎಲ್ಲ ಒಳ್ಳಯದಾಗುತ್ತೆ
ವೃಷಭ ರಾಶಿ: ಈ ದಿನ ನೀವು ನಿಮ್ಮ ಮಾತಿನಲ್ಲಿ ಮಾಧುರ್ಯವನ್ನು ಹೊಂದುವುದು ಉತ್ತಮ. ಹಾಗಿದ್ದರೆ ಮಾತ್ರ ಜನರ ನಿಮ್ಮನ್ನು ಜನರು ಬೆಂಬಲಿಸುವರು.ನೀವು ಕೆಲಸ ಮಾಡುವ ಸ್ಥಳದಲ್ಲಿ ಸ್ವಲ್ಪ ಕಿರಿ ಕಿರಿ ಉಂಟಾಗಬಹುದು, ಜಾಸ್ತಿ ತಲೆ ಕೆಡಿಸಿಕೊಳ್ಳಬೇಡಿ ಎಲ್ಲ ಸರಿಹೋಗುತ್ತೆ.
ಮಿಥುನ ರಾಶಿ: ಈ ದಿನ ವಿದ್ಯಾರ್ಥಿಗಳು ಇಂದು ಯಾವುದಾದರು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ಗಳಿಸುವರು. ನೀವು ಹೂಡಿಕೆ ಮಾಡಬೇಕೆಂದಿದ್ದರೆ ಈ ದಿನ ಬಹಳ ಲಾಭದಾಯಕವಾಗಿರಲಿದೆ. ಒಟ್ಟಾರೆಯಾಗಿ ಮಿಥುನ ರಾಶಿಯವರಿಗೆ ಇವತ್ತು ಶುಭ ದಿನ ಆಗಿದೆ.
ಕಟಕ ರಾಶಿ: ಈ ದಿನ ಈ ರಾಶಿಗೆ ಸೇರಿದ ವಿದ್ಯಾರ್ಥಿಗಳ ಬೌದ್ಧಿಕ ಸಾಮರ್ಥ್ಯ ಈ ದಿನ ವೃದ್ಧಿಯಾಗುವುದು. ಇಂದು ಶಿವಲಿಂಗಕ್ಕೆ ಹಾಲನ್ನು ಅರ್ಪಿಸಿ. ಇನ್ನು ಈ ರಾಶಿಯವರಿಗೆ ಬಹುದಿನದ ಕೆಲಸ ಇವತ್ತು ಈಡೇರುವ ಸಾಧ್ಯತೆ ಹೆಚ್ಚಿದೆ.
ಸಿಂಹ ರಾಶಿ: ಈ ದಿನ ಮನೆಯಲ್ಲಿ ಪ್ರೀತಿ ಹೆಚ್ಚಾಗಲಿದೆ ಮತ್ತು ಮನೆಯ ಸದಸ್ಯರು ಉತ್ತಮ ಪದವಿಯನ್ನು ಪಡೆಯುವುದರೊಂದಿಗೆ ಸಂಬಳದಲ್ಲಿ ಹೆಚ್ಚಳವನ್ನು ಗಳಿಸುವರು. ನಿಮ್ಮ ಸಂಗಾತಿಯಿಂದ ಹೆಚ್ಚಿನ ಪ್ರೀತಿ ಪಡೆಯುತ್ತೀರಿ ಹಾಗೂ ಸಹಕಾರ ಸಹಕಾರ ಸಿಗಲಿದೆ.
ಕನ್ಯಾ ರಾಶಿ: ಈ ದಿನ ನಿಮ್ಮ ಮಕ್ಕಳಿಗೆ ಸಂಬಂಧಿಸಿದಂತೆ ಯಾವುದಾದರೂ ಹೊಸ ಕೆಲಸವನ್ನು ಮಾಡುವಲ್ಲಿ ನೀವು ಸಂತೋಷವನ್ನು ಹೊಂದುವಿರಿ. ನಿಮ್ಮ ಮಕ್ಕಳಿಂದ ನಿಮಗೆ ಸಿಹಿಸುದ್ದಿಕೇಳಿ ಬರಲಿದೆ. ಮಕ್ಕಳ ಮದುವೆ ವಿಚಾರದಲ್ಲಿ ಸಂತಸ ಉಂಟಾಗಲಿದೆ.
ತುಲಾ ರಾಶಿ: ಈ ದಿನ ಕೆಲವು ದಿನಗಳಿಂದ ವ್ಯಾಪಾರಕ್ಕೆ ಸಂಬಂಧಿಸಿದಂತೆ ಸಮಸ್ಯೆ ಎದುರಿಸುತ್ತಿದ್ದರೆ ಇಂದು ಎಲ್ಲಾ ಸಮಸ್ಯೆಗಳು ದೂರವಾಗುವುದು. ವ್ಯಾಪಾರ ವ್ಯವಹಾರ ಮಾಡುವವರಿಗೆ ಉತ್ತಮ ಲಾಭ ಆಗಲಿದೆ.
ವೃಶ್ವಿಕ ರಾಶಿ: ಈ ದಿನ ನೀವು ನಿಮ್ಮ ವ್ಯಾಪಾರಕ್ಕಾಗಿ ಯಾರಿಂದಲಾದರೂ ಸಾಲವನ್ನು ಪಡೆಯುವ ಬಗ್ಗೆ ಯೋಚಿಸುತಿದ್ದರೆ, ಸ್ವಲ್ಪ ಸಮಯ ಕಾಯುವುದು ಉತ್ತಮ. ಆತುರದಲ್ಲಿ ದುಡುಕಿ ಯಾವುದೇ ನಿರ್ಧಾರ ತಗೆದುಕೊಳ್ಳುವುದು ಅಷ್ಟೊಂದು ಸೂಕ್ತವಲ್ಲ.
ಧನಸ್ಸು ರಾಶಿ: ಇಂದು ನಿಮ್ಮ ಹಣವನ್ನು ಸಾಮಾಜಿಕ ಮತ್ತು ಧಾರ್ಮಿಕ ವಿಷಯಗಳಿಗಾಗಿ ಖರ್ಚು ಮಾಡುವಿರಿ. ನೀವು ಮಾಡುವಂತ ದಾನ ಹಾಗೂ ಸಹಾಯದಿಂದ ನಿಮ್ಮ ಕಷ್ಟಕ್ಕೆ ಸಹಕಾರ ಸಿಗಲಿದೆ.
ಮಕರ ರಾಶಿ: ಈ ದಿನ ಕೆಲಸವನ್ನು ಮಾಡುವ ಮಕರ ರಾಶಿಗೆ ಸೇರಿದ ಜನರು ಇಂದು ಯಾವುದೇ ರೀತಿಯ ವಿವಾದ ಮತ್ತು ಜಗಳಗಳಿಂದ ದೂರವಿರದಿದ್ದರೆ ನಿಮಗೆ ನಷ್ಟವಾಗುವ ಸಾಧ್ಯತೆ ಇದೆ. ಚಿಕ್ಕ ಚಿಕ್ಕ ವಿಷಯಗಳಿಗೂ ಮನಸ್ಸಿಗೆ ನೋವುಂಟಾಗಬಹುದು.
ಕುಂಭ ರಾಶಿ: ಇಂದು ಯಾವುದಾದರು ಕೆಲಸಕ್ಕಾಗಿ ಸರ್ಕಾರಿ ಅಧಿಕಾರಿಯ ಒಪ್ಪಿಗೆ ಬೇಕಾಗಿದ್ದರೆ, ಅದು ದೊರಕುವುದರಿಂದ ನಿಮ್ಮ ಸರ್ಕಾರಿ ಕೆಲಸ ಸುಲಭವಾಗಿ ಪೂರ್ಣಗೊಳ್ಳಲಿದೆ.
ಮೀನರಾಶಿ: ಈ ದಿನ ನೀವು ನಿಮ್ಮ ತಂದೆಯೊಂದಿಗೆ ಮಹತ್ವಪೂರ್ಣ ವಿಷಯದ ಬಗ್ಗೆ ಚರ್ಚೆಯನ್ನು ನಡೆಸುವಿರಿ. ನಿಮ್ಮ ಮನೆಯ ಯಾವುದಾದರೂ ಸದಸ್ಯರಿಗೆ ಇಂದು ವಿವಾಹ ಯೋಗ ಕೂಡಿ ಬರಲಿದೆ.