ಕರಿಬೇವು ಅಡುಗೆಯ ರುಚಿಯನ್ನು ಹೆಚ್ಚಿಸೋದು ಅಷ್ಟೇ ಅಲ್ದೆ ಉತ್ತಮ ಆರೋಗ್ಯದ ಗುಣಗಳನ್ನು ಹೊಂದಿದೆ. ಬಹಳಷ್ಟು ಜನ ಕರಬೇವನ್ನು ಊಟದಲ್ಲಿ ಪಕ್ಕಕ್ಕೆ ಸರಿಸಿ ಬಿಡುತ್ತಾರೆ, ಆದ್ರೆ ಅಂತಹ ತಪ್ಪನ್ನು ಮಾಡದೇ ಇರುವುದು ಉತ್ತಮ. ಯಾಕೆಂದರೆ ಕರಿಬೇವು ಸೇವನೆಯಿಂದ ಕಾನ್ಸರ್ ರೋಗ ನಿಮ್ಮ ಹತ್ತಿರ ಕೂಡ ಸುಳಿಯೋದಿಲ್ಲ ಅನ್ನೋದನ್ನ ಸಂಶೋಧಕರು ತಿಳಿಸಿದ್ದಾರೆ.
ಪುರುಷರಲ್ಲಿ ಹೆಚ್ಚಾಗಿ ಕಾಡುವಂತ ಪ್ರಾಸ್ಪೇಟ್ ಕ್ಯಾನ್ಸರ್ ಅನ್ನು ಕರಬೇವು ನಿವಾರಿಸುತ್ತದೆ ಅನ್ನೋದನ್ನ ಸಂಶೋಧನೆಯ ಮೂಲಗಳು ತಿಳಿಸಿವೆ, ಇದರಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕಬ್ಬಿನಾಂಶ ಹಾಗೂ ದೇಹಕ್ಕೆ ಬೇಕಾಗುವಂತ ಪೋಷಕಾಂಶಗಳನ್ನು ಕರಬೇವು ಒದಗಿಸುತ್ತದೆ. ಹಾಗಾಗಿ ಯಾವುದೇ ಅಡುಗೆಯಲ್ಲಿ ಕರಬೇವು ಇದ್ರೆ ಅದನ್ನ ತಿನ್ನದೇ ಸುಮ್ಮನಿರುವುದು ಆರೋಗ್ಯದ ದೃಷ್ಟಿಯಿಂದ ಒಳಿತಲ್ಲ.
ವಿಷ್ಯಕ್ಕೆ ಬರೋಣ ಕರಬೇವು ಕಾನ್ಸರ್ ನಿವಾರಣೆ ಮಾಡುವುದು ಹೇಗೆ ಅನ್ನೋದನ್ನ ತಿಳಿಯುವುದಾದರೆ ಕೊಲ್ಕತ್ತದಲ್ಲಿರುವಂತ ಭಾರತಿ ವಿಶ್ವವಿದ್ಯಾಲದ ಸಂಶೋಧನೆ ತಂಡವೊಂದು ಕಾನ್ಸರ್ ಬಗ್ಗೆ ಅಧ್ಯಯನ ನಡೆಸಿದೆ ಅದರಲ್ಲಿ ಹೇಳಿರುವಂತೆ ಕರಬೇವು ಎಲೆಗಳು ಮಹಾನೈನ್ ಎಂಬ ಅಂಶವನ್ನು ಹೊಂದಿದ್ದು ಇದು ಕಾನ್ಸರ್ ನಿಯಂತ್ರಿಸಬಲ್ಲ ಶಕ್ತಿ ಹೊಂದಿದೆ.
ಆದ್ದರಿಂದ ಪುರುಷರು ಕರಬೇವು ಬಳಸಿ ಸೇವನೆ ಮಾಡುವುದು ಅತಿ ಉತ್ತಮ ಇದು ಯಾವುದೇ ರೀತಿಯ ಅಡ್ಡ ಪರಿಣಾಮ ಬಿರೋದಿಲ್ಲ, ಕರಬೇವು ಕಾನ್ಸರ್ ಕಣಗಳನ್ನು ನಿಯಂತ್ರಿಸುವ ಗುಣ ಹೊಂದಿದೆ, ಇದರಲ್ಲಿ ‘ಮಹಾನೈನ್’ ಅಂಶ ಲ್ಯುಕೇಮಿಚಿಯ ಎಂಬ ಚರ್ಮ ರೋಗವನ್ನು ಕೂಡ ನಿಯಂತ್ರಿಸುತ್ತದೆ ಅನ್ನೋದನ್ನ ಸಂಶೋಧನೆ ತಿಳಿಸಿದೆ. ಆಗಾಗಿ ಕರಿಬೇವು ಸೇವನೆ ಮಾಡಿ ಉತ್ತಮ ಆರೋಗ್ಯವನ್ನು ಪಡೆದುಕೊಳ್ಳಿ. ನಿಮ್ಮ ಆತ್ಮೀಯರಿಗೂ ಕೂಡ ಇದನ್ನು ಹಂಚಿಕೊಳ್ಳಿ ಇದರ ಸದುಪಯೋಗವನ್ನು ಪಡೆದುಕೊಳ್ಳಲಿ.