ರೈತನಿಗೆ ಕೃಷಿಯಿಂದ ತುಂಬಾ ಮುಖ್ಯ ಇದರಿಂದಲೇ ರೈತ ತನ್ನ ಜೀವನವನ್ನು ನಡೆಸುತ್ತಾನೆ. ಆದರೆ ಇತ್ತೀಚಿನ ದಿನಗಳಲ್ಲಿ ರೈತರು ಕೋಟಿಗಟ್ಟಲೆ ಸಂಪಾದನೆ ಮಾಡುತ್ತಿದ್ದಾರೆ ಎಂದರೆ ನಂಬಲಾಗದ ವಿಷಯ ಎನ್ನುಬಹುದು. ಈ ಲೇಖನದ ಮೂಲಕ ಒಬ್ಬ ರೈತನ ಸಣ್ಣ ಜಾಗದಲ್ಲಿ ಕೃಷಿಯನ್ನು ಮಾಡಿ ವರ್ಷಕ್ಕೆ ಹೇಗೆ ಯಾವ ರೀತಿಯಲ್ಲಿ 60ಲಕ್ಷ ರೂಪಾಯಿ ಸಂಪಾದನೆ ಮಾಡುತ್ತಿದ್ದಾನೆ ಎನ್ನುವುದರ ಬಗ್ಗೆ ತಿಳಿದುಕೊಳ್ಳೋಣ.
ಈತನ ಹೆಸರು ಪರ್ವೀನ್. ಈತ ಒಂದು ವಿಧವಾದ ಅಣಬೆಗಳನ್ನು ಬೆಳೆಸುತ್ತಾನೆ ಅಣಬೆ ಹೆಸರು ಕಾರ್ಡಿಸೆಸ್ ಸಿನೆನ್ಸಿಸ್. ಇದರಿಂದ ಈತ ವರ್ಷಕ್ಕೆ ಲಕ್ಷಗಟ್ಟಲೆ ಸಂಪಾದನೆ ಮಾಡುತ್ತಿದ್ದಾನೆ. ಅಣಬೆಗಳಲ್ಲಿ ತುಂಬಾ ವಿಧಗಳಿದ್ದು ಅದರಲ್ಲಿ ಈತ ಬೆಳೆಸುತ್ತಿದ್ದ ಈ ವಿಧದ ಅಣಬೆ ತುಂಬಾ ದುಬಾರಿಯಾಗಿದೆ. ಸಾಮಾನ್ಯವಾಗಿ ಇದನ್ನು ವೈಲ್ಡ್ ಮಶ್ರೂಮ್ ಎಂತಲೂ ಕರೆಯುತ್ತಾರೆ. ಇದನ್ನುಬೆಳೆಯಲು ಎಕರೆಗಟ್ಟಲೆ ಜಾಗ ಬೇಕು ಅಂತ ಏನು ಇಲ್ಲ ಒಂದು ಸಣ್ಣ ರೂಮಿನಲ್ಲಿ ಸಹ ಇದನ್ನು ಬೆಳೆಯಬಹುದು. ಪರ್ವೀನ್ ಅವರ ಪ್ರಕಾರ ಇದನ್ನು ಬೆಳೆಯಲು 10:10 ರ ರೂಮ್ ಇದ್ದರೂ ಸಾಕು. ಇಷ್ಟು ಸಣ್ಣ ರೂಮಿನಲ್ಲಿ ಅಣಬೆಯನ್ನು ಬೆಳೆಸಿ ವರ್ಷಕ್ಕೆ 10,00,000 ಆದಾಯವನ್ನೂ ಗಳಿಸುತ್ತಿದ್ದಾರೆ. ಪರ್ವೀನ್ ಪ್ರಕಾರ ಅಣಬೆಯನ್ನು ಯಾರು ಬೇಕಿದ್ದರೂ ಸಣ್ಣ ರೂಮಿನಲ್ಲಿಯೂ ಬೆಳೆಯಬಹುದು. ಹಾಗೂ ಇದಕ್ಕೆಲ್ಲ ಕೆಲವೊಂದಿಷ್ಟು ಸಲಕರಣೆಗಳು ಬೇಕಿರುವುದರಿಂದ ಹಾಗೂ ಬೆಳೆಯುವಂತಹ ರೂಮನ್ನು ಲ್ಯಾಬ್ ತರ ತಯಾರಿ ಮಾಡಬೇಕಿರುವುದರಿಂದ ಸಾಮಾನ್ಯವಾಗಿ ಏಳರಿಂದ ಎಂಟು ಲಕ್ಷ ಖರ್ಚು ಬೀಳಬಹುದು ಅನ್ನೋದು ಪರ್ವೀನ್ ಅನಿಸಿಕೆ.
ಈ ಅಣಬೆ ಮೂರು ತಿಂಗಳಿಗೆ 5 ಕೆಜಿ ಬೆಳೆಯುತ್ತದೆ ವರ್ಷಕ್ಕೆ 25 ಕೆಜಿ ಅಣಬೆ ಬೆಳೆಯುತ್ತದೆ. ಮಾರ್ಕೆಟ್ ನಲ್ಲಿ ಅಣಬೆ ಬೆಲೆ ಒಂದು ಕೆಜಿಗೆ ಒಂದೂವರೆಯಿಂದ ಎರಡು ಲಕ್ಷದವರೆಗೂ ಇದೆ. ಇದರಿಂದಾಗಿ ಪರ್ವೀನ್ ಲಕ್ಷಗಟ್ಟಲೆ ಸಂಪಾದನೆ ಮಾಡುತ್ತಿದ್ದಾರೆ. ಮೊದಲು ಪರ್ವೀನ್ ಬಳಿ ಒಂದು ಚಿಕ್ಕ ಜಾಗ ಇದ್ದು, ಇದರಿಂದ ಅವರ ಜೀವನ ನಡೆಸಲು ತುಂಬಾ ಕಷ್ಟವಾಗುತ್ತಿತ್ತು. ನಂತರ ಈ ವೈಲ್ಡ್ ಮಶ್ರೂಮ್ ಗಳ ಬಗ್ಗೆ ತಿಳಿದುಕೊಂಡು ಅದರ ಕುರಿತಾಗಿ ಆಸಕ್ತಿ ಗಳಿಸಿಕೊಂಡರು. ಇದರಿಂದಲೇ ಅವರು ಈಗ ಲಕ್ಷಗಟ್ಟಲೆ ಆದಾಯವನ್ನೂ ಗಳಿಸುತ್ತಿದ್ದಾರೆ.