Container House In Karnataka: ಬೆಳೆಯುತ್ತಿರುವ ಜನಸಂಖ್ಯೆಯಿಂದಾಗಿ ವಸತಿ, ಆಹಾರ ಉದ್ಯೋಗ ಇತ್ಯಾದಿಯ ಕೊರತೆ ಉಂಟಾಗುತ್ತಿದೆ. ಜನರಿಗೆ ಅವರು ಕನಸು ಕಂಡಂತಹ ಮನೆಯನ್ನು ಕಟ್ಟಿಸಲು ಸಾಧ್ಯವಾಗುತ್ತಿಲ್ಲ ಮೊದಲಿಗೆ ಜಾಗದ ಅಭಾವ ತುಂಬಾ ಇದೆ ನಾವು ಅಂದುಕೊಂಡಂತಹ ಜಾಗ ನಮಗೆ ಮನೆ ಕಟ್ಟಲು ಸಿಗುತ್ತಿಲ್ಲ.
ಬೆಳೆಯುತ್ತಿರುವ ಸಿಟಿ ಮಧ್ಯೆ ಇದ್ದ ದಂಪತಿಗಳು ಈಗ ಹಳ್ಳಿಯಲ್ಲಿ ಬಂದು ಕಂಟೇನರ್ (Container House) ಮನೆಯನ್ನು ಸ್ಥಾಪಿಸಿದ್ದಾರೆ ಇದು ಹಳ್ಳಿಯ ಜನಕ್ಕೆ ಆಶ್ಚರ್ಯ ತಂದಿದೆ ಮತ್ತು ಎಲ್ಲರೂ ಅದನ್ನು ನೋಡಲು ಉತ್ಸುಕರಾಗಿ ಹೋಗುತ್ತಿದ್ದಾರೆ. ದಂಪತಿಗಳಿಗೆ ಕೃಷಿಯಲ್ಲಿ ಆಸಕ್ತಿ ಇದ್ದು ಕೃಷಿ ಮಾಡಲೆಂದು 15 ಎಕರೆ ಜಮೀನು ಖರೀದಿಸಿದ್ದರು ಆದರೆ ಅವರಿಗೆ ಅಲ್ಲಿ ವಸತಿಯ ತೊಂದರೆ ಆಯಿತು ಯಾವುದೇ ರೀತಿಯ ಬಾಡಿಗೆ ಮನೆ ಸಿಗಲಿಲ್ಲ. ಆಗ ಅವರು ಕಂಟೇನರ್ ಮನೆ ಕಟ್ಟಲು ನಿರ್ಧರಿಸಿದರು.
ಮನೆ ಕಟ್ಟಿ ನೋಡು ಮದುವೆ ಮಾಡಿ ನೋಡು ಎನ್ನುವ ಗಾದೆ ಇದೆ ಮದುವೆಯಾದರೂ ಸ್ವಲ್ಪ ಖರ್ಚಿನಲ್ಲಿ ಸರಳವಾಗಿ ಮಾಡಬಹುದು ಆದರೆ ಮನೆ ಕಟ್ಟುವ ವಿಷಯ ಬಹಳ ಕಷ್ಟವಾದದ್ದು ಹಾಗೂ ಕಟ್ಟಲು ಬಹಳ ಸಮಯ ತೆಗೆದುಕೊಳ್ಳುತ್ತದೆ ಹಾಗಾಗಿ ಅವರು ಕಂಟೇನರ್ ಮನೆ ನಿರ್ಮಿಸುವ ಯೋಚನೆ ಮಾಡಿದರು. ನಗರದಲ್ಲಿದ್ದ ಕಂಟೇನರ್ ಮನೆ ಈಗ ಹಳ್ಳಿಗೂ ಬಂದಿದೆ.
ಎರಡು ಅಂತಸ್ತಿನ ಕಂಟೇನರ್ ಮನೆಯನ್ನು ಕಟ್ಟಿಕೊಂಡು ಕೃಷಿಯನ್ನು ಮಾಡಲು ಮುಂದಾಗಿದ್ದಾರೆ. ದಂಪತಿಗಳು ಇಂಜಿನಿಯರ್ಸ್ ಆಗಿದ್ದರು ಕೂಡ ಕೃಷಿಯ ಬಗ್ಗೆ ಆಸಕ್ತಿ ತೋರಿಸಿರುವುದು ಬಹಳ ಸಂತೋಷ ನೀಡುವಂತಹ ವಿಷಯ ಹಾಗೂ ತುಂಬಾ ಜನರಿಗೂ ಮಾದರಿ ಕೂಡ ಆಗಿದೆ. ಕೃಷಿ ಮಾಡಿದರೆ ಮಾತ್ರ ಮನುಷ್ಯನಿಗೆ ಆಹಾರ, ಅಂತಹ ರೈತನನ್ನು ಯಾವಾಗಲೂ ಗೌರವಿಸಿ. ಈ ರೀತಿಯ ಮನೆ ನಿರ್ಮಾಣ ನೀವು ಮಾಡಿಕೊಳ್ಳಬೇಕು ಅನ್ನೋದಾದರೆ ಹೆಚ್ಚಿನ ಮಾಹಿತಿಗೆ ಪುಷ್ಪಕ್ ನರಸಿಂಹನ್ ಅವರ ಮೊಬೈಲ್ ಸಂಖ್ಯೆ: 9663493831