Congress guarantee: ಕಾಂಗ್ರೆಸ್ ಸರ್ಕಾರ ನೀಡಿರುವಂತಹ ಐದು ಗ್ಯಾರಂಟಿಯಲ್ಲಿ (Congress guarantee) ನಾಲ್ಕು ಯೋಜನೆಗೆ ಅರ್ಜಿ ಸಲ್ಲಿಸಲು ಲಿಂಕ್ ಬಿಟ್ಟಿದ್ದಾರೆ ಹಾಗೂ ಅನ್ನಭಾಗ್ಯ ಯೋಜನೆಗೆ ಯಾವುದೇ ರೀತಿ ಅರ್ಜಿ ಸಲ್ಲಿಸುವುದು ಇರುವುದಿಲ್ಲ. ಮೊದಲಿಗೆ ಗೂಗಲ್ ಗೆ ಹೋಗಿ http://sevasindhugs1.karnataka.gov.in ಈ ವೆಬ್ಸೈಟ್ ಲಿಂಕ್ ಮೇಲೆ ಒತ್ತಿ. ನಂತರ ಹೋಂ ಪೇಜ್ ಸಿಗುತ್ತದೆ ಅಲ್ಲಿ ಸರ್ಕಾರ ಜಾರಿಗೊಳಿಸಿರುವ ಈ ನಾಲ್ಕು ಯೋಜನೆಯ ಹೆಸರು ಇದೆ ನಿಮಗೆ ಯಾವ ಯೋಜನೆಗೆ ಅರ್ಜಿ ಸಲ್ಲಿಸಬೇಕು ಆ ಹೆಸರಿನ ಮೇಲೆ ಕ್ಲಿಕ್ ಮಾಡಬೇಕು

ಗೃಹ ಜ್ಯೋತಿ ಯೋಜನೆಯ ನೋಂದಣಿ ಪ್ರಕ್ರಿಯು ಜೂನ್ 18ರಿಂದ ಪ್ರಾರಂಭಗೊಂಡಿದೆ ಹಾಗೂ ಗ್ರಹಲಕ್ಷ್ಮಿ ಯೋಜನೆ, ನೋಂದಣಿ ಪ್ರಕ್ರಿಯೆ ಶೀಘ್ರದಲ್ಲಿ ಪ್ರಾರಂಭಗೊಳ್ಳುತ್ತದೆ. ಶಕ್ತಿ ಯೋಜನೆಯ, ಯುವ ನಿಧಿ ನೊಂದಣಿ ಕೂಡ ಶೀಘ್ರದಲ್ಲಿ ಪ್ರಾರಂಭವಾಗುತ್ತದೆ. ಅರ್ಜಿ ಪ್ರಾರಂಭವಾದ ನಂತರ ಅರ್ಜಿ ಸಲ್ಲಿಸಬಹುದು ಅಲ್ಲಿಯತನಕ ಯಾವುದೇ ರೀತಿ ಅರ್ಜಿ ಸಲ್ಲಿಸಲು ಆಗುವುದಿಲ್ಲ.

ನೀವು ಮೊಬೈಲ್ ಮೂಲಕವೇ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು ನಿಮಗೆ ಹಾಕಲು ಬರದಿದ್ದರೆ ಸಹಾಯಕ್ಕಾಗಿ ನೀವು ಗ್ರಾಮ್ ಒನ್, ಸೇವಾ ಸಿಂಧು ಕಚೇರಿಗೆ ಭೇಟಿ ನೀಡಿ ಅಲ್ಲಿ ಕೂಡ ಉಚಿತವಾಗಿ ಅರ್ಜಿಯನ್ನು ಸಲ್ಲಿಸಬಹುದು. ಇದನ್ನೂ ಓದಿ Free Bus Scheme: ಉಚಿತ ಪ್ರಯಾಣ ಸೌಲಭ್ಯ ಪಡೆಯಲು ಸ್ಮಾರ್ಟ್ ಕಾರ್ಡ್ ಪಡೆಯುವ ಸುಲಭ ವಿಧಾನ

Leave a Reply

Your email address will not be published. Required fields are marked *