ಪ್ರತಿದಿನ ಸ್ನಾನ ಮಾಡುವಾಗ ಕೆಲವರು ಬಿಸಿನೀರು ಬಳಸಿ ಸ್ನಾನ ಮಾಡುತ್ತಾರೆ, ಇನ್ನು ಕೆಲವರು ತಣ್ಣೀರ ಸ್ನಾನ ಮಾಡುವವರು ಇದ್ದಾರೆ, ಆದ್ರೆ ಇಂದಿನ ದಿನಗಳಲ್ಲಿ ಬಹಳಷ್ಟು ಜನ ಹೆಚ್ಚು ಬಿಸಿನೀರು ಬಳಸುತ್ತಾರೆ ಸ್ನಾನಕ್ಕೆ. ಆದ್ರೆ ಆರೋಗ್ಯದ ದೃಷ್ಟಿಯಿಂದ ವಾರದಲ್ಲಿ ಎರಡರಿಂದ ಮೂರು ಬಾರಿಯಾದರೂ ತಣ್ಣೀರ ಸ್ನಾನ ಮಾಡಬೇಕು ಅನ್ನೋದು ಅರೋಗ್ಯ ತಜ್ಞರ ಮಾತು. ಹಾಗಾದರೆ ತಣ್ಣೀರ ಸ್ನಾನದಿಂದ ದೇಹಕ್ಕೆ ಎಷ್ಟೆಲ್ಲ ಲಾಭವಿದೆ ಅನ್ನೋದನ್ನ ತಿಳಿಯೋಣ ಬನ್ನಿ.
ಪ್ರತಿದಿನ ತಣ್ಣೀರ ಸ್ನಾನ ಮಾಡಬೇಕು ಅನ್ನೊದೇನಿಲ್ಲ ಆದರೆ ಆರೋಗ್ಯದ ದೃಷ್ಟಿಯಿಂದ ವಾತಾವರಣದ ನಿಮಿತ್ತ ಅಂದರೆ ಚಳಿಗಾಲದಲ್ಲಿ ತಣ್ಣೀರ ಸ್ನಾನಮಾಡಲು ಆಗೋದಿಲ್ಲ ಹಾಗಾಗಿ ಯಾವ ಸಮಯದಲ್ಲಿ ತಣ್ಣೀರ ಸ್ನಾನ ಮಾಡಬೇಕು ಆನ್ನೋದನ್ನ ತಿಳಿದು ಸ್ನಾನ ಮಾಡಬೇಕಾಗುತ್ತದೆ. ಇನ್ನು ಕೆಲವರಿಗೆ ತಣ್ಣೀರ ಸ್ನಾನದಿಂದ ದೇಹದ ಮೇಲೆ ಬೇರೆಯ ರೀತಿಯ ಪರಿಣಾಮ ಬೀರಬಹದು ಆದ್ರೆ ಯಾರಿಗೆ ತಣ್ಣೀರ ಸ್ನಾನ ಆಗೋದಿಲ್ಲವೋ ಅವರು ತಣ್ಣೀರನ್ನು ಬಳಸುವ ಮುನ್ನ ಇದರ ಬಗ್ಗೆ ತಿಳಿದುಕೊಳ್ಳುವುದು ಉತ್ತಮ.
ತಣ್ಣೀರ ಸ್ನಾನದ ಪ್ರಯೋಜನವೇನು ಅನ್ನೋದನ್ನ ನೋಡುವುದಾದರೆ ಶೀತ ಜ್ವರ ಸೋಂಕಿನಿಂದ ದೂರ ಉಳಿಯಬಹುದಾಗಿದೆ, ಅಷ್ಟೇ ಅಲ್ದೆ ಕಾನ್ಸರ್ ನಂತಹ ಮಾರಕ ಕಾಯಿಲೆಗಳಿಗೆ ತಣ್ಣೀರು ರಾಮಬಾಣವಾಗಿದೆ. ರಕ್ತಸಂಚಲನಕ್ಕೆ ಸಹಕಾರಿ ಹೃದಯದ ಆರೋಗ್ಯಕ್ಕೆ ಪೂರಕವಾಗಿ ಕೆಲಸ ಮಾಡುತ್ತದೆ, ಇನ್ನು ದೇಹದ ಉಷ್ಣತೆಯನ್ನು ನಿಯಂತ್ರಿಸುವ ಜೊತೆಗೆ ಬೆವರು ಸಮಸ್ಯೆಯನ್ನು ನಿವಾರಿಸುತ್ತದೆ. ಉಸಿರಾಟದ ತೊಂದರೆ ಖಿನ್ನತೆ ನಿವಾರಿಸುವ ತಣ್ಣೀರು ದೇಹದ ತೂಕವನ್ನು ಇಳಿಸಲು ಸಹಕಾರಿ, ಅಷ್ಟೇ ಅಲ್ದೆ ಪುರುಷರಲ್ಲಿ ಫಲವತ್ತತೆಯನ್ನು ಹೆಚ್ಚಿಸುವುದು ಹೀಗೆ ಹತ್ತಾರು ಆರೋಗ್ಯಕಾರಿ ಲಾಭಗಳನ್ನು ತಣ್ಣೀರ ಸ್ನಾನದಿಂದ ಪಡೆದುಕೊಳ್ಳಬಹುದಾಗಿದೆ.