ನಾವು ಅಡುಗೆ ಮಾಡುವ ಸಮಯದಲ್ಲಿ ಹೆಚ್ಚಾಗಿ ಕೆಲಸ ಸುಲಭವಾಗಿ ಆಗುವಂತಾದನ್ನ ಬಳಸಲು ಇಷ್ಟ ಪಡುತ್ತೀವಿ. ಕಷ್ಟ ಪಟ್ಟು ಕೆಲಸ ಮಾಡುವುದಕ್ಕಿಂತ ಸುಲಭವಾಗಿ ಕೆಲಸ ಆಗ್ಬೇಕು ಅಂದುಕೊಳ್ಳುತ್ತೀವಿ. ಹೀಗೆ ನಾವು ಕೆಲಸವನ್ನ ಸುಲಭವಾಗಿ ಮಾಡಿಕೊಳ್ಳ ಬಹುದುದಾದ ಕೆಲವು ಸರಳ ವಿಧಾನಗಳು ಅಥವಾ ವಿಷಯಗಳು ಇಲ್ಲಿವೆ
ನಾವು ಹಾಲು ಬಿಸಿಮಾಡುವಾಗ ಅಥವಾ ಟೀ ಮಾಡುವಾಗ ಅದು ಉಕ್ಕಿಬಿಡುತ್ತೆ, ಹಾಲು ಅಥವಾ ಟೀ ಉಕ್ಕಬಾರದು ಎಂದರೆ ನಾವು ಕಾಯಲು ಇಟ್ಟ ಪಾತ್ರೆಯಲ್ಲಿ ಯಾವುದಾದರು ಒಂದು ಚಿಕ್ಕ ಚಮಚವನ್ನು ಇಟ್ಟರೆ ಹಾಲು ಅಥವಾ ಟೀ ಉಕ್ಕುವುದಿಲ್ಲ, ಇದರಿಂದ ನಿಮ್ಮ ಗ್ಯಾಸ್ ಸ್ವಚ್ಛವಾಗಿರುತ್ತದೆ. ನಾವು ಚಪಾತಿ ಹಿಟ್ಟನ್ನ ನೀರು ಹಾಕಿ ಕಲಸುವಾಗ ಹಿಟ್ಟಿಗೆ ಸ್ವಲ್ಪ ಹಾಲು ಅಥವಾ ಮೊಸರನ್ನ ಹಾಕಿ ಕಲಸುವುದರಿಂದ ಚಪಾತಿ ಮೃದುವಾಗಿ, ಸಾಫ್ಟ್ ಆಗಿ ಇರುತ್ತವೆ.
ಇನ್ನು ನಾವು ದಿನಸಿಯನ್ನ ತರುವಾಗ ಒಂದು ತಿಂಗಳಿಗೆ ಸಾಕಾಗುವಷ್ಟು ಅಕ್ಕಿಯನ್ನು ತಂದು ಇಟ್ಟಿರುತ್ತೇವೆ ಆದರೆ ಅದರಲ್ಲಿ ಬೇಗ ಹುಳುಗಳಾಗಿ ಬಿಡುತ್ತವೆ, ಅದಕ್ಕೆ ಇನ್ನು ಮುಂದೆ ಅಕ್ಕಿ ಡಬ್ಬದಲ್ಲಿ ಒಂದೆರಡು ಬೇವಿನ ಎಲೆಗಳನ್ನ ಹಾಕಿಡುವುದರಿಂದ ಹುಳುಗಳು ಆಗುವುದಿಲ್ಲ. ಅಷ್ಟೇ ಅಲ್ಲದೆ ಮನೆಯಲ್ಲಿ ಸೊಳ್ಳೆಗಳು ಹೆಚ್ಚಾಗಿದ್ದರೆ ನಿಂಬೆಹಣ್ಣನ್ನ ಅರ್ಧಭಾಗವಾಗಿ ಕತ್ತರಿಸಿ ಅದಕ್ಕೆ ಲವಂಗವನ್ನ ಚುಚ್ಚಿ ಸೊಳ್ಳೆಗಳು ಬರುವ ಜಾಗದಲ್ಲಿ ಇಡುವುದರಿಂದ ನಿಂಬೆಹಣ್ಣಿನಲ್ಲಿರುವ ಸಿಟ್ರಿಕ್ ಆಸಿಡ್ ನ ವಾಸನೆಗೆ ಹಾಗೂ ಲವಂಗದ ವಾಸನೆಗೆ ಸೊಳ್ಳೆಗಳು ಬರುವುದಿಲ್ಲ. ಇದನ್ನ ಹೆಚ್ಚಾಗಿ ಸೊಳ್ಳೆಗಳು ಬರುವಂತಹ ಜಾಗದಲ್ಲಿ ಅಂದರೆ ಕಿಟಕಿಗಳ ಬಳಿ ಇಡುವುದು ಒಳ್ಳೆಯದು. ನಾವು ಅಡುಗೆ ಮನೆಯಲ್ಲಿ ಹೆಚ್ಚಾಗಿ ಬಳಸುವಂತಹ ತೊಗರಿ ಬೆಲೆಯಲ್ಲಿ ಹುಳುಗಳಾಗಬಾರದು ಎಂದರೆ, ತೊಗರಿ ಬೆಳೆಯ ಡಬ್ಬದಲ್ಲಿ ಒಂದೆರಡು ಒಣ ಮೆಣಸಿನ ಕಾಯಿಯನ್ನ ಹಾಕಿಡುವುದರಿಂದ ಹುಳುಗಳು ಬರುವುದಿಲ್ಲ.
ಅಡುಗೆ ಮನೆಯಲ್ಲಿ ಸಕ್ಕರೆ ಡಬ್ಬಕ್ಕೆ ಇರುವೆಗಳು ಹೆಚ್ಚಾಗಿ ಬರುತ್ತವೆ, ಈ ಇರುವೆಗಳಿಂದ ಮುಕ್ತಿ ಹೊಂದ ಬೇಕಾದರೆ ಸಕ್ಕರೆ ಡಬ್ಬದಲ್ಲಿ ಒಂದೆರಡು ಲವಂಗವನ್ನ ಹಾಕಿಡಿ. ಇನ್ನು ಅಡುಗೆ ಮನೆಯಲ್ಲಿನ ಹಸಿ ಮೆಣಸಿನ ಕಾಯಿ ಕೊಳೆತು ಹೋಗಬಾರದು ಎಂದರೆ ಹಸಿ ಮೆಣಸಿನ ಕಾಯಿಯ ತುಂಬು ಅಥವಾ ತೊಟ್ಟನ್ನ ತೆಗೆದು ಇಡುವುದರಿಂದ ತುಂಬಾ ದಿನಗಳವರೆಗೆ ಹಾಳಾಗದಂತೆ ಇರುತ್ತದೆ.
ನಾವು ಅಡುಗೆ ಮಾಡುವಾಗ ಕೈ ಸುಟ್ಟರೆ ಅದಕ್ಕೆ ನಾವು ಬೇಗ ತುಪ್ಪ ಅಥವಾ ಜೇನುತುಪ್ಪವನ್ನ ಹಚ್ಚುವುದರಿಂದ ಸುಟ್ಟ ಗಾಯದ ಉರಿ ಕಡಿಮೆಆಗುತ್ತೆ, ಬೊಬ್ಬೆ ಬರುವುದಿಲ್ಲ. ಹಾಗೂ ಅದರ ಕಲೆ ಕೂಡ ಉಳಿಯುವುದಿಲ್ಲ. ನಾವು ಸಿಹಿ ತಿಂಡಿಗಳಿಗೆ ಹೆಚ್ಚಾಗಿ ಏಲ್ಲಕ್ಕಿಯನ್ನ ಬಳಸುತ್ತೇವೆ, ಆದರೆ ಅದರ ಸಿಪ್ಪೆಯನ್ನ ಬಿಸಾಡುತ್ತೇವೆ ಅದರ ಬದಲು ಅದರ ಸಿಪ್ಪೆಯನ್ನ ಟೀ ಪುಡಿ ಡಬ್ಬದಲ್ಲಿ ಹಾಕಿ ಟೀ ಇದನ್ನು ಬಳಸುವುದರಿಂದ ಟೀ ರುಚಿ ಹೆಚ್ಚಾಗುತ್ತೆ.
ಇನ್ನು ನಾವುಗಳು ಬೆಳ್ಳುಳ್ಳಿಯನ್ನ ಬಿಡಿಸುವುದು ಸುಲಭ ಆದರೆ ಬಿಡಿಸಿದ ಬೆಳ್ಳುಳ್ಳಿಯ ಸಿಪ್ಪೆ ತೆಗೆಯುವುದು ಕಷ್ಟ, ಬೆಳ್ಳುಳ್ಳಿ ಸಿಪ್ಪೆ ತೆಗೆಯುವ ಸುಲಭ ವಿಧಾನ ಇಲ್ಲಿದೆ ನೋಡಿ, ಬಿಡಿಸಿದ ಬೆಳ್ಳುಳ್ಳಿಯನ್ನ ನೀರಿನಲ್ಲಿ ಹಾಕಿ ಐದು ನಿಮಿಷದ ನಂತರ ಬಿಡಿಸುವುದರಿಂದ ಸಿಪ್ಪೆ ಬೇಗ ಬಿಡುತ್ತದೆ, ಇದರಿಂದ ಉಗುರು ಸಹ ನೋವಾಗುವುದಿಲ್ಲ. ಈ ಅಡುಗೆ ಮನೆಯ ಸಾಮಾನ್ಯ ವಿಚಾರಗಳು ನಿಮಗೆ ಇಷ್ಟವಾಗಿದ್ದರೆ ನಿಮ್ಮ ಆತ್ಮೀಯರಿಗೂ ಕೂಡ ಹಂಚಿಕೊಳ್ಳಿ, ಇದರ ಉಪಯೋಗವನ್ನು ಪಡೆದುಕೊಳ್ಳಲಿ.