ಕೃಷಿಕಾರ್ಯಗಳಲ್ಲಿ ಸದಾ ದುಡಿಮೆ ಮಾಡುವವರಿಂದಾಗಿಯೆ ಸಮಾಜದ ಎಲ್ಲ ವರ್ಗದ ಜನರು ಅನ್ನವನ್ನು ಊಟ ಮಾಡುತ್ತಾರೆ. ಎಲ್ಲರೂ ವ್ಯಾಪಾರಿಯಂತೆ ಲಾಭದ ಚಿಂತೆಯನ್ನು ಮಾಡುತ್ತಾ ಕುಳಿತರೆ ಸಮಾಜ ಅದೋಗತಿ ಅತ್ತ ಸಾಗಬಹುದು. ಕೃಷಿಯಲ್ಲಿ ಹೊಸ ಆವಿಷ್ಕಾರ ಮಾಡಿದ ಉಡುಪಿ ಜಿಲ್ಲೆಯ ಯುವಕ ಕೇವಲ ಐವತ್ತು ರೂಪಾಯಿ ವಿದ್ಯುತ್ತನ್ನ ಬಳಸಿ ಎರಡು ಸಾವಿರ ತೆಂಗಿನಕಾಯಿಯ ಸಿಪ್ಪೆಯನ್ನು ತೆಗೆಯಬಹುದಾದ ಯಂತ್ರವನ್ನು ಆವಿಷ್ಕರಿಸಿದ್ದಾರೆ.

ಕೃಷಿಗೆ ಕಾರ್ಮಿಕರ ಕೊರತೆಯನ್ನು ನೀಗಿಸಲು ಮನೆಯಲ್ಲಿ ಯಂತ್ರವನ್ನ ತಯಾರಿ ಮಾಡಿದ್ದಾರೆ ಈ ಯುವಕ. ಕೃಷಿಕರ ಪಾಲಿಗೆ ಆಶಾಕಿರಣವಾದ ಯುವಕನ ಕತೆ ನಿಜವಾಗಿಯೂ ರೋಮಾಂಚನಕಾರಿಯಾಗಿದೆ. ನಾವಿಂದು ನಿಮಗೆ ಚಿಕ್ಕವಯಸ್ಸಿನಲ್ಲಿಯೇ ಕೃಷಿಯಲ್ಲಿ ಸಾಧನೆ ಮಾಡಿದ ಯುವಕನ ಬಗ್ಗೆ ತಿಳಿಸಿಕೊಡುತ್ತೇವೆ ಇವರು ಮಿಶ್ರ ತೋಟಗಾರಿಕೆ ಬೆಳೆಗಳನ್ನು ಬೆಳೆದು ಸಾಧನೆಯನ್ನು ಮಾಡಿದ್ದಾರೆ.ತಮ್ಮ ತೋಟದಲ್ಲಿಯೇ ತೆಂಗಿನಕಾಯಿ ಸಿಪ್ಪೆ ತೆಗೆಯಲು ಯಂತ್ರವೊಂದನ್ನು ತಯಾರಿಸಿದ್ದಾರೆ.ಆ ಯಂತ್ರ ಹೇಗೆ ಕೆಲಸ ಮಾಡುತ್ತದೆ ಎಂಬುದರ ಬಗ್ಗೆ ನಾವಿಂದು ತಿಳಿದುಕೊಳ್ಳೋಣ.

ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಈದೂ ಗ್ರಾಮದ ನಿವಾಸಿಯಾದ ಶೈಲೇಶ್ ಮರಾಠ ಅನ್ನುವವರು ಈ ಯಂತ್ರವನ್ನು ತಯಾರಿಸಿ ತಮ್ಮ ಕೃಷಿ ಕಾರ್ಯಕ್ಕಾಗಿ ಉಪಯೋಗಿಸಿಕೊಂಡಿದ್ದಾರೆ. ಅವರು ತಮ್ಮ ಕೃಷಿ ತೋಟದಲ್ಲಿ ಏನೆಲ್ಲ ಬೆಳೆಯುತ್ತಾರೆ ಎಂದರೆ ಇವರ ನಾಲ್ಕು ಎಕರೆ ತೋಟದಲ್ಲಿ ಅಡಿಕೆ ತೆಂಗು ಬಾಳೆ ಹಾಗೆ ಜೇನು ರಬ್ಬರ್ ಕ್ಕೊಕ್ಕೊ ಕಾಳುಮೆಣಸು ಜಾಯಿಕಾಯಿ ಲವಂಗ ಏಲಕ್ಕಿ ಚಿಕ್ಕು ಮಾವು-ಹಲಸು ಅರಿಶಿಣವನ್ನು ಬೆಳೆಯುತ್ತಾರೆ. ಇವರಿಗೆ ಕೃಷಿ ಕಾರ್ಯಕ್ಕಾಗಿ ಕೆಲಸದವರ ಕೊರತೆ ಆಗುತ್ತಿತ್ತು ಅದರಿಂದ ತುಂಬಾ ನಷ್ಟ ಆಗುತ್ತಿತ್ತು. ಹಾಗಾಗಿ ಇವರು ತೆಂಗಿನಕಾಯಿ ಸಿಪ್ಪೆ ಸುಲಿಯುವ ಯಂತ್ರ ವನ್ನು ಕಂಡುಹಿಡಿಯುತ್ತಾರೆ.

ಮೊದಲು ಬಳಕೆ ಮಾಡಿದಂತಹ ಹಳೆಯ ಯಂತ್ರಗಳನ್ನು ಜೋಡಿಸಿ ಪ್ರಾಯೋಗಿಕವಾಗಿ ಒಂದು ಯಂತ್ರವನ್ನು ತಯಾರಿಸುತ್ತಾರೆ. ಅದು ಚೆನ್ನಾಗಿ ಕೆಲಸ ಮಾಡುವುದನ್ನು ಗಮನಿಸಿ ಇಂಡಸ್ಟ್ರಿಯಲ್ ಮೋಟಾರ್ ಗಳನ್ನು ತಂದು ಯಂತ್ರಗಳನ್ನ ತಯಾರಿಸುತ್ತಿದ್ದಾರೆ ಒಂದು ಯಂತ್ರವನ್ನು ತಯಾರಿಸುವುದಕ್ಕೆ ಇವರಿಗೆ ಸುಮಾರು ಇಪ್ಪತ್ತೈದು ಸಾವಿರ ರೂಪಾಯಿ ಖರ್ಚು ತಗಲುತ್ತದೆ. ಈ ಯಂತ್ರಕ್ಕೆ ಯಾವುದೇ ರೀತಿಯ ನಿರ್ವಹಣೆಯ ಅಗತ್ಯವಿಲ್ಲ ವರ್ಷಕ್ಕೆ ಒಂದು ಸಾರಿ ನೂರು ರೂಪಾಯಿಯ ಆಯಿಲ್ ಬದಲಾವಣೆ ಮಾಡಬಹುದು.

ಇವರು ಮತ್ತೊಂದು ಯಂತ್ರವನ್ನು ತಯಾರಿಸುತ್ತಿದ್ದಾರೆ ಅದಕ್ಕೆ ಯಾವುದೇ ರೀತಿಯ ಮೆಂಟೆನೆನ್ಸ್ ಮಾಡುವ ಅಗತ್ಯ ಇಲ್ಲ ಒಂದು ಸಾರಿ ಹೊಸ ಯಂತ್ರವನ್ನು ಅಳವಡಿಸಿಕೊಂಡರೆ ಅದಕ್ಕೆ ಏನಾದರು ಹಾನಿಯಾದಾಗ ಮಾತ್ರ ಎಣ್ಣೆಗಳನ್ನು ಬದಲಾಯಿಸಬೇಕು ಇಲ್ಲದಿದ್ದರೆ ಜೀವನಪರ್ಯಂತ ಬಳಸಬಹುದು. ಈ ಯಂತ್ರಕ್ಕೆ ನೂರಾ ಎಂಬತ್ತರಿಂದ ಎರಡು ನೂರಾ ಇಪ್ಪತ್ತು ವೋಲ್ಟೇಜ್ ವಿದ್ಯುತ್ ಬೇಕಾಗುತ್ತದೆ. ಯಂತ್ರವನ್ನ ಬಳಸುವುದಕ್ಕೆ ಒಂದು ಗಂಟೆಗೆ ಮುಕ್ಕಾಲ್ ಯೂನಿಟ್ ನಿಂದ ಒಂದು ಯೂನಿಟ್ ವಿದ್ಯುತ್ ಸಾಕಾಗುತ್ತದೆ.

ಅದರಲ್ಲಿ ಒಂದು ತಾಸಿಗೆ ಸುಮಾರು ಎರಡುನೂರಾ ಐವತ್ತು ತೆಂಗಿನಕಾಯಿಗಳ ಸಿಪ್ಪೆ ಸುಲಿಯಬಹುದು. ಯಂತ್ರ ಬಳಸುವುದು ರೂಢಿ ಆದಹಾಗೆ ದಿನಕ್ಕೆ ಒಂದೂವರೆ ಸಾವಿರದಿಂದ ಎರಡುಸಾವಿರ ತೆಂಗಿನಕಾಯಿಗಳ ಸಿಪ್ಪೆಯನ್ನು ತೆಗೆಯಬಹುದು. ಇವರು ತಯಾರಿಸುತ್ತಿರುವ ಯಂತ್ರವನ್ನು ದಿನಕ್ಕೆ ಹತ್ತು ಘಂಟೆಗಳ ಕಾಲ ಬಳಕೆ ಮಾಡಿದರೆ ಐವತ್ತು ರೂಪಾಯಿಯ ವಿದ್ಯುತ್ ಖರ್ಚು ತಗುಲಬಹುದು.

ಒಂದು ಸಾರಿ ಈ ಯಂತ್ರಕ್ಕೆ ಖರ್ಚನ್ನ ಹಾಕಿದರೆ ಮತ್ತೆ ಪದೇಪದೇ ಯಾವುದೇ ರೀತಿಯ ಖರ್ಚು ಬರುವುದಿಲ್ಲ ವರ್ಷಕ್ಕೆ ಒಂದು ಬಾರಿ ಸ್ವಚ್ಛಗೊಳಿಸಬೇಕು. ಸದ್ಯ ಇವರು ಕೇವಲ ತಮ್ಮ ಮನೆಯ ಬಳಕೆಗಾಗಿ ಮಾತ್ರ ಯಂತ್ರ ಬಳಸುತ್ತಿದ್ದಾರೆ ಯಾವುದೇ ರೀತಿಯ ಮಾರಾಟಕ್ಕೆ ಯಂತ್ರಗಳನ್ನು ತಯಾರಿಸಿಲ್ಲ ಮುಂದಿನ ದಿನಗಳಲ್ಲಿ ಸಾಧ್ಯವಾದರೆ ಮಾರಾಟಕ್ಕೆ ಯಂತ್ರಗಳನ್ನು ತಯಾರಿಸುವ ಉದ್ದೇಶವನ್ನು ಹೊಂದಿದ್ದಾರೆ. ಈಗಾಗಲೇ ಇವರು ಬೇರೆಬೇರೆ ಬಗೆಯ ಆರು ಯಂತ್ರಗಳನ್ನು ತಯಾರಿಸಿ ಕೊಟ್ಟಿದ್ದಾರೆ ಅವರಿಂದ ಒಳ್ಳೆಯ ಫಲಿತಾಂಶ ಕೇಳಿಬರುತ್ತಿದೆ ಎಂದು ಹೇಳಿದ್ದಾರೆ. ಅದನ್ನು ಗಮನಿಸಿ ಇವರು ಇನ್ನೂ ಕಡಿಮೆ ಖರ್ಚಿನಲ್ಲಿ ಕಡಿಮೆ ಭಾರವಿರುವ ಯಂತ್ರಗಳನ್ನು ತಯಾರಿಸುವುದಕ್ಕೆ ಆಲೋಚನೆ ಮಾಡುತ್ತಿದ್ದಾರೆ.

ಇವರು ತಮ್ಮ ತೋಟದಲ್ಲಿ ಮಿಶ್ರ ಬೆಳೆಗಳನ್ನು ಬೆಳೆಯುವುದರ ಜೊತೆಗೆ ಹಾಲಿನ ಉತ್ಪನ್ನಗಳ ಮಾರಾಟವನ್ನೂ ಮಾಡುತ್ತಾರೆ ತೋಟದಲ್ಲಿ ನೀರು ಇಂಗಿಸುವ ಕೃಷಿ ಹೊಂಡಗಳನ್ನು ನಿರ್ಮಿಸಿದ್ದಾರೆ. ಇವರು ಕಾರ್ಕಳ ತಾಲೂಕಿನಲ್ಲಿ ಇವರ ತಂಡದಿಂದ ಸುಮಾರು ಒಂದು ಸಾವಿರ ಗೋಬರ್ ಗ್ಯಾಸ್ ಗಳನ್ನು ನಿರ್ಮಿಸಿದ್ದಾರೆ ಅದರಿಂದಲೂ ಕೂಡ ಇವರಿಗೆ ಉತ್ತಮವಾದ ಫಲಿತಾಂಶ ಸಿಗುತ್ತಿದೆ. ಇದರ ಜೊತೆಗೆ ಜೇನುಕೃಷಿ ತರಬೇತಿಯನ್ನು ಕೂಡ ನೀಡುತ್ತಾರೆ.

ನಾಲ್ಕು ವರ್ಷದ ಹಿಂದೆ ಇವರು ತರಬೇತಿಯನ್ನು ಪಡೆದುಕೊಂಡಿದ್ದರು ಅದರ ಮುಖಾಂತರ ಮೊದಲು ಹದಿನಾಲ್ಕು ಜೇನುಪೆಟ್ಟಿಗೆಗಳನ್ನು ತಂದಿದ್ದರು ಅದರಿಂದ ಎಂಬತ್ತು ಕೆಜಿ ಜೇನುತುಪ್ಪ ಒಳ್ಳೆಯ ಬೆಲೆಗೆ ಮಾರಾಟವಾಗಿತ್ತು ಈಗ ಇವರ ಬಳಿ ನಲವತ್ತೆರಡು ಜೇನುಪೆಟ್ಟಿಗೆಗಳಿವೆ ವರ್ಷಕ್ಕೆ ಸುಮಾರು ಏಳುನೂರು ಬಾಟಲ್ ಗಳಷ್ಟು ಜೇನುತುಪ್ಪವನ್ನು ಮಾರಾಟ ಮಾಡುತ್ತಾರೆ. ತೋಟದಲ್ಲಿ ಅಜೋಲಾ ಎರೆಹುಳು ತೊಟ್ಟಿ ಕಾಂಪೋಸ್ಟ್ ಗೊಬ್ಬರ ತರಕಾರಿ ಎಲ್ಲಾ ಕೃಷಿ ವಿಧಗಳನ್ನು ಇವರ ತೋಟದಲ್ಲಿ ನೋಡಬಹುದು.

ಇವರು ಮಾಡುವ ಗೋ ಉತ್ಪನ್ನಗಳ ಬಗ್ಗೆ ತಿಳಿಯುವುದಾದರೆ ಬೆರಣಿಯನ್ನು ಮಾಡಿ ಅದನ್ನು ಅಗ್ನಿಹೋತ್ರಕ್ಕೆ ಬಳಸುತ್ತಾರೆ. ಗೋ ಬಸ್ಮ ತಯಾರಿಸಿ ಅದರಿಂದ ಸಾಬೂನು ಡಿಶ್ ವಾಶ್ ಪಿನೈಲ್ ಹೀಗೆ ಹತ್ತು ಹಲವು ವಸ್ತುಗಳನ್ನು ಮರಾಟ ಮಾಡುತ್ತಾರೆ ಇದರ ಜೊತೆಗೆ ಇನ್ನೂ ಹೆಚ್ಚಿನ ಉತ್ಪನ್ನಗಳನ್ನು ತಯಾರಿಸುವ ಯೋಜನೆಯನ್ನು ಹೊಂದಿದ್ದಾರೆ. ನೋಡಿದಿರಲ್ಲ ಸ್ನೇಹಿತರೆ ಶೈಲೇಶ್ ಮರಾಠ ಅವರು ತಮ್ಮ ಜಮೀನಿನಲ್ಲಿ ಯಾವೆಲ್ಲಾ ರೀತಿಯ ಮಿಶ್ರ ಬೆಳೆಗಳನ್ನು ಬೆಳೆಯುವುದರ ಜೊತೆಗೆ ತಮ್ಮ ಕೆಲಸಕ್ಕೆ ಬೇಕಾದ ಯಂತ್ರಗಳನ್ನು ಸ್ವತಹ ತಾವೇ ತಯಾರಿಸಿಕೊಂಡು ಅದರಲ್ಲಿ ಯಶಸ್ಸನ್ನು ಕಾಣುತ್ತಿದ್ದಾರೆ ಚಿಕ್ಕವಯಸ್ಸಿನಲ್ಲಿಯೇ ಕೃಷಿಯಲ್ಲಿ ಸಾಧನೆಯನ್ನು ಮಾಡಿದ ಇವರು ಇಂದಿನ ಯುವ ಕೃಷಿಕರಿಗೆ ಮಾದರಿಯಾಗಿದ್ದಾರೆ. Video Credit For Swayam times

ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!