ಮನುಷ್ಯನ ಜೀವನದ ಪ್ರತಿಯೊಂದು ಹಂತದಲ್ಲೂ ಲಕ್ಷ್ಮಿ ದೇವಿಯುವು ಬಹಳ ಪ್ರಮುಖವಾದ ಪಾತ್ರವನ್ನು ವಹಿಸುತ್ತಾಳೆ. ನಮ್ಮ ಜೇವನದ ಹಲವು ಅವಶ್ಯಕತೆಗಳನ್ನ ಈಡೇರಿಸಿಕೊಳ್ಳಲು ನಮಗೆ ಲಕ್ಷ್ಮಿ ದೇವಿಯ ಅನುಗ್ರಹ ಇರಬೇಕು. ನಮ್ಮ ವ್ಯಾಪಾರ, ಶಿಕ್ಷಣ, ಅರೋಗ್ಯ, ಹೀಗೆ ಹಲವು ಸಮಸ್ಯೆಗಳಿಗೆ ಹಣವೇ ಅಂತಿಮ ಪರಿಹಾರವಾಗಿ ನಮ್ಮ ಜೀವನದಲ್ಲಿ ಗೋಚರಿಸುತ್ತದೆ. ಹೀಗಿರುವಾಗ ಲಕ್ಷೀದೇವಿಯನ್ನು ನಾವು ಸದಾ ಪೂಜಿಸುವುದು ಒಳ್ಳೆಯದು. ಹಾಗೂ ಸದಾ ಶುಭ್ರವಾದ ಬಟ್ಟೆಗಳನ್ನ ಧರಿಸುವುದು ಸೂಕ್ತ, ಇದರಿಂದ ನಮ್ಮ ದೇಹದಲ್ಲಿ ಸಕಾರಾತ್ಮಕ ಶಕ್ತಿ ಲಭಿಸುತ್ತವೆ.
ಇತ್ತೀಚಿನ ದಿನಗಳಲ್ಲಿ ಜನರು ನಮ್ಮನ್ನ ಗುರುತಿಸುವುದು, ನಮ್ಮ ಯೋಗ್ಯತೆಯನ್ನ ಅಲೆಯುವುದು ನಾವು ತೊಡುವ ಬಟ್ಟೆಗಳಿಂದಲೇ ಎಂಬುದು ಎಲ್ಲರಿಗು ಗೊತ್ತಿರುವ ವಿಷಯ. ಇಂತಹ ಸಂದರ್ಭದಲ್ಲಿ ನಾವು ತೊಡುವ ಬಟ್ಟೆಗಳು ಶುಭ್ರವಾಗು ಪ್ರತಿ ದಿನವು ಹೊಸದರಂತೆ ಕಾಣಬೇಕೆಂದರೆ, ಬಟ್ಟೆಗಳನ್ನೂ ತೊಳೆಯುವಾಗ ಇನ್ನು ಮುಂದೆ ಈ ವಿಧಾನವನ್ನ ಅನುಸರಿಸಿರಿ.
ನಾವು ಮನೆಯಲ್ಲಿ ಬಟ್ಟೆಗಳನ್ನ ಬೆಳಗಿನ ಸಮಯದಲ್ಲಿಯೇ ವಗೆಯಬೇಕು, ಅಥವಾ ತೊಳೆಯಬೇಕು, ಸಂಜೆಯ ಸಮಯದಲ್ಲಿ ಬಟ್ಟೆಗಳನ್ನ ತೊಳೆಯುವುದರಿಂದ ಲಕ್ಷ್ಮಿ ದೇವಿಯು ಮನೆಯಿಂದ ಹೊರಗೆ ಹೋಗುವ ಸಂಭವ ಹೆಚ್ಚಾಗಿರುತ್ತದೆ. ನಮ್ಮ ದೇಹದಲ್ಲಿನ ನಕ್ರಾತ್ಮಕ ಶಕ್ತಿಯು ಹೊರಗೆ ಹೋಗಲು ನಾವು ತೊಟ್ಟ ಬಟ್ಟೆಗಳನ್ನು ಶುಭ್ರವಾಗಿ ಸ್ವಚ್ಛವಾಗಿ ತೊಳೆಯಬೇಕು. ಇದರಿಂದ ನಮ್ಮ ದೇಹದಲ್ಲಿನ ನಕಾರಾತ್ಮಕ ಶಕ್ತಿಯು ಹೊರಗೆ ಹೋಗುತ್ತದೆ.
ಬಟ್ಟೆಗಳನ್ನ ತೊಳೆಯುವಾಗ ನಾವು ಸೋಪಿನ ಪುಡಿಯನ್ನ ಬೆರೆಸಿ ಬಟ್ಟೆಯನ್ನ ನೆನೆಸಿಡುತ್ತೇವೆ, ಇದರ ಜೊತೆಗೆ ಸ್ವಲ್ಪ ಪ್ರಮಾಣದ ಉಪ್ಪನ್ನು ಹಾಕಿ ನೆನೆಸಿಡುವುದರಿಂದ ನಮ್ಮ ಬಟ್ಟೆಯಲ್ಲಿರುವ ನಕಾರಾತ್ಮಕ ಶಕ್ತಿ ಹೊರಗೆ ಹೋಗುತ್ತದೆ, ಮತ್ತು ಬಟ್ಟೆಗಳು ಸಹ ಶುಭ್ರವಾಗುತ್ತವೆ. ಹೀಗೆ ಮಾಡುವುದರಿಂದ ನಮ್ಮ ಬಟ್ಟೆಗಳು ಪ್ರತಿದಿನವೂ ಹೊಸದರಂತೆ ಕಂಗೊಳಿಸುತ್ತವೆ.