ಗುರು ರಾಘವೇಂದ್ರ ಸ್ವಾಮಿಗಳನ್ನ ನಂಬಿ, ಅವರನ್ನು ಭಕ್ತಿಯಿಂದ ಆರಾಧಿಸಿದರೆ ಬದುಕಿನ ಎಂಥದ್ದೇ ಕಷ್ಟವಾದರೂ ಕಳೆದು ಹೋಗುತ್ತದೆ ಎಂದು ಹೇಳುತ್ತಾರೆ. ಇದು ನಿಜ ಎನ್ನುವಂಥ ಹಲವು ಘಟನೆಗಳು ಪವಾಡಗಳು ನಡೆದು ಬೆಳಕಿಗೆ ಬಂದಿದೆ. ಇದೀಗ ಚಿತ್ರದುರ್ಗದ ರಾಯರ ಮಠದಲ್ಲಿ ನಡೆದಿರುವ ಘಟನೆಯೊಂದು ವೈರಲ್ ಆಗಿದೆ..
ಬೆಂಗಳೂರಿನ ಯಲಹಂಕ ಮೂಲದ ಶ್ರೀಕಾಂತ್ ಹಾಗೂ ಅರುಣಾ ಹೆಸರಿನ ದಂಪತಿಗಳು ಶಿವಮೊಗ್ಗ ಇಂದ ಬೆಂಗಳೂರಿಗೆ ಬರುತ್ತಿದ್ದರು. ಇವರಿಗೆ ಇಬ್ಬರು ಮಕ್ಕಳು, ಸಾಗರ್ ಹಾಗೂ ತೇಜಸ್ವಿನಿ. ಇವರ ಮಗಳು ತೇಜಸ್ವಿನಿಗೆ ರಕ್ತನಾಳದ ಸಮಸ್ಯೆ ಇಂದ ಕಾಲುಗಳು ಸ್ವಾಧೀನ ಕಳೆದುಕೊಂಡಿದ್ದವು. ಕಳೆದ 6 ತಿಂಗಳಿನಿಂದ ಆಕೆಗೆ ಓಡಾಡಲು ಸಾಧ್ಯ ಆಗುತ್ತಿರಲಿಲ್ಲ. ಮಾರ್ಗಮಧ್ಯೆ ಇವರು ಚಿತ್ರದುರ್ಗದ ರಾಯರ ಮಠಕ್ಕೆ ತೆರಳಿದರು.
ರಾಯರ ಕೃಪೆಯಿಂದ ತಮ್ಮ ಮಕ್ಕಳಿಗೆ ಒಳ್ಳೆಯದಾಗಲಿ ಎನ್ನುವುದು ಅವರ ಆಸೆ ಆಗಿತ್ತು. ಅದೇ ರೀತಿ ಹೋದಾಗ, ತೇಜಸ್ವಿನಿ ರಾಯರಿಗೆ ಪ್ರದಕ್ಷಿಣೆ ಹಾಕಬೇಕು ಎಂದು ಅನ್ನಿಸಿತು. ತನ್ನ ತಾಯಿ ಬಳಿ ಇದೇ ಮಾತನ್ನು ಕೇಳಿದಳು, ಅಮ್ಮ ನನಗೆ ರಾಯರ ಮಠದಲ್ಲಿ ಪ್ರದಕ್ಷಿಣೆ ಹಾಕಬೇಕು ಅನ್ನಿಸುತ್ತಿದೆ ಎಂದು ಕೇಳಿದಳು. ಆಕೆಗೆ ಕಾಲು ಸ್ವಾಧೀನ ಇಲ್ಲ, ಹೇಗೆ ಪ್ರದಕ್ಷಿಣೆ ಹಾಕಲು ಸಾಧ್ಯವಾಗುತ್ತದೆ ಎಂದು ಎಲ್ಲರಲ್ಲೂ ಪ್ರಶ್ನೆ ಶುರುವಾಯಿತು. ಆದರೆ ಆಗಲೇ ನಡೆದಿದ್ದು ಗುರು ರಾಯರ ಪವಾಡ..
ತೇಜಸ್ವಿನಿ ಪ್ರದಕ್ಷಿಣೆ ಹಾಕಲು ಪ್ರಯತ್ನ ಪಟ್ಟಾಗ, ಅವಳಿಂದ ನಡೆಯಲು ಸಾಧ್ಯವಾಯಿತು. ರಾಯರಿಗೆ ಮೂರು ಸುತ್ತು ಪ್ರದಕ್ಷಿಣೆ ಹಾಕಿದ್ದಾಳೆ ತೇಜಸ್ವಿನಿ. ಈ ಘಟನೆ ಸುತ್ತಮುತ್ತಲಿನ ಜನರಿಗೆ ಹಾಗೂ ಆಕೆಯ ತಂದೆ ತಾಯಿಗೆ ಆಶ್ಚರ್ಯ ಹಾಗೂ ಸಂತೋಷ ತಂದಿದೆ. ನಂಬಿದವರನ್ನು ರಾಯರು ಎಂದಿಗೂ ಕೈಬಿಡುವುದಿಲ್ಲ ಎನ್ನುವುದು ಮತ್ತೊಮ್ಮೆ ಜನರ ಎದುರು ಕಂಡುಬಂದಿದೆ.