ನನಗೆ ನನ್ನ ಮಗನೇ ಶಕ್ತಿ, ಸ್ಪೂರ್ತಿ. ಚಿರು ಎಲ್ಲಾ ನನ್ನ ಕೈಯಿಂದ ಮಾಡಿಸಿದ್ದಾರೆ. ಚಿರು ಅಗಲಿಕೆಯ ನೋವು ಮರೆಯೋದು ಅಸಾಧ್ಯ. ಮಗನನ್ನು ನೋಡಿದರೆ ಚಿರು ಕಾಣಿಸುತ್ತಿದ್ದಾರೆಂದು ನಟಿ ಮೇಘನಾ ರಾಜ್ ಅವರು ಹೇಳಿದ್ದರು. ಮಗುವಿನ ತೊಟ್ಟಿಲ ಶಾಸ್ತ್ರದ ಸಂದರ್ಭದಲ್ಲಿ ಹಲವು ದಿನಗಳ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಮೇಘನಾ ರಾಜ್ ಅವರು, ಈ ಸಮಯದಲ್ಲಿ ಕಷ್ಟದ ಸಮಯವನ್ನು ಹೇಗೆ ಎದುರಿಸಬೇಕು ಎಂದುದನ್ನು ನಾನು ಚಿರುವಿನಿಂದ ಕಲಿತೆ. ಚಿರು ಅಂದ್ರೆ ನನ್ನ ಹ್ಯಾಪಿನೆಸ್. ಮಗನ ಆಗಮನ ಡಬಲ್ ಸಂಭ್ರಮ ಬಂದಿದೆ ಎಂದು ಹೇಳಿದ್ದಾರೆ. ಜನರು ನನ್ನನ್ನು, ಚಿರು ಹಾಗೂ ನಮ್ಮ ಕುಟುಂಬವನ್ನು ಮನೆಯವರಂತೆಯೇ ನೋಡಿಕೊಂಡಿದ್ದಾರೆ. ಇದೀಗ ನಾನು ಸ್ಟ್ರಾಂಗ್ ಇದ್ದೀನೋ, ಇಲ್ಲವೋ ಗೊತ್ತಿಲ್ಲ. ಆದರೆ, ಎಲ್ಲರೂ ಸ್ಟ್ರಾಂಗ್ ಆಗಿದ್ದೀನಿ ಎಂದು ಹೇಳುತ್ತಿದ್ದಾರೆ. ಆದರೆ, ನನಗೆ ನನ್ನ ಮಗನೇ ಶಕ್ತಿ. ಇದೆಲ್ಲವನ್ನೂ ಚಿರು ನನ್ನ ಕೈಯಲ್ಲಿ ಮಾಡಿಸುತ್ತಿದ್ದಾರೆ. ಮಗನನ್ನು ನೋಡಿದವರೆಲ್ಲೂ ಚಿರು ಜೆರಾಕ್ಸ್ ಎಂದೇ ಹೇಳುತ್ತಿದ್ದಾರೆಂದು ಖುಷಿಪಟ್ಟಿದ್ದಾರೆ.
ಜೂನಿಯರ್ ಚಿರುವಿನ ತೊಟ್ಟಿಲು ಶಾಸ್ತ್ರವನ್ನು ಜೆ.ಪಿ. ನಗರದ ಮೇಘನಾ ರಾಜ್ರ ಮನೆಯಲ್ಲಿ ತೊಟ್ಟಿಲು ಶಾಸ್ತ್ರವನ್ನು ನೆರವೇರಿಸಲಾಗಿತ್ತು. ಕೇವಲ ಕುಟುಂಬಸ್ಥರು ಹಾಗೂ ಹಿತೈಷಿಗಳ ಸಮ್ಮುಖದಲ್ಲಿ ಸರಳವಾಗಿ ನಡೆಸಲಾಗಿದೆ. ತೊಟ್ಟಿಲು ಶಾಸ್ತ್ರಕ್ಕೆ ಮೇಘನಾ ಮನೆಗೆ ಚಿರಂಜೀವಿ ಸರ್ಜಾರ ಅಜ್ಜಿ ಲಕ್ಷ್ಮೀ ದೇವಮ್ಮ ಹಾಗೂ ತಾಯಿ ಅಮ್ಮಾಜಿ ಕೂಡ ಆಗಮಿಸಿದ್ದರು. ಮೇಘನಾ ರಾಜ್ ಅವರು ಹೇಳುವಂತೆ ಅವರು ಮತ್ತು ಚಿರು ಯಾವಾಗಲೂ ಮಗುವಿನ ವಿಚಾರಕ್ಕೆ ಹೆಣ್ಣು ಮಗುವೋ ಅಥವಾ ಗಂಡು ಮಗು ಆಗುವುದೋ ಎಂದು ಜಗಳ ಮಾಡಿಕೊಳ್ಳುತ್ತಿದ್ದರು ಮೇಘನಾ ರಾಜ್ ಅವರು ಚಿರು ಅವರು ‘ನೋಡು ಗಂಡು ಮಗುವೇ ಆಗೋದು’ ಎನ್ನುತ್ತಿದ್ದರು. ನಾನು ‘ಇಲ್ಲ ಹೆಣ್ಣು ಮಗು ಆಗುತ್ತದೆ’ ಎನ್ನುತ್ತಿದ್ದೆ. ಕೊನೆಗೆ ಚಿರು ಹೇಳಿದಂತೆ ಗಂಡು ಮಗು ಆಗಿದೆ. ‘ನಾನು ಫೀನಿಕ್ಸ್ ಇದ್ದಂತೆ, ಬೂದಿಮುಂಚಿದ ಕೆಂಡದಂತೆ’ ಎಂದು ಚಿರು ಯಾವಾಗಲೂ ಹೇಳುತ್ತಿದ್ದರು. ಯಾಕೆ ಹೀಗೆ ಹೇಳುತ್ತಿದ್ದರು ಅಂತ ಗೊತ್ತಿಲ್ಲ. ಈಗ ಮಗು ರೂಪದಲ್ಲಿ ಮತ್ತೆ ಬಂದಿದ್ದಾರೆ. ಅವರು ನಿಜಕ್ಕೂ ಫೀನಿಕ್ಸ್ ಬರ್ಡ್ ಎಂದು ಹೇಳಿದ್ದಾರೆ.
ಚಿರು ಈಸ್ ಸೆಲೆಬ್ರೇಷನ್ ಎನ್ನುವ ಮೇಘನಾ, ಏನೇ ಸಮಸ್ಯೆ ಬಂದರೂ ಎದುರಿಸೋಣ ಎನ್ನುತ್ತಿದ್ದರು ಚಿರು. ನೀವು ಯಾವುದೇ ಪತ್ರಿಕಾಗೋಷ್ಟಿಯಲ್ಲಿ ನೋಡಿದರೂ ಚಿರು ನಗುತ್ತಲೇ ಇರುತ್ತಿದ್ದರು. ಹೀಗಾಗಿ ಚಿರು ಕುಟುಂಬಕ್ಕೆ ಸಂಬಂಧಿಸಿದಂತೆ ಏನೇ ನಡೆದರೂ ಅದೊಂದು ರೀತಿ ಸೆಲೆಬ್ರೇಷನ್. ಚಿರು ಅಂದರೆ ಯಾವಾಗಲೂ ಹ್ಯಾಪಿನೆಸ್. ಅವರ ಸೆಲೆಬ್ರೆಷನ್ ನನ್ನ ಮಗನ ಮೂಲಕ ಮುಂದುವರಿಯುತ್ತದೆ. ಚಿರು ನೋಡಲು ಸಾವಿರಾರು ಮಂದಿ ಬಂದಿದ್ದರು. ಚಿರು ನಟ, ಸ್ಟಾರ್, ನೂರಾರು ಸಿನಿಮಾ ಮಾಡಿದ್ದಾರೆ ಅಂತ ಬಂದಿದ್ದಲ್ಲ. ಚಿರು ಒಳ್ಳೆಯ ವ್ಯಕ್ತಿ ಎಂದುಕೊಂಡು ಬಂದಿದ್ದರು. ಫ್ಯಾನ್ ಕ್ರೇಜ್ನಿಂದ ಬಂದಿಲ್ಲ, ವ್ಯಕ್ತಿತ್ವ ನೋಡಿ ಬಂದಿದ್ದು. ನನ್ನ ಮಗನೂ ಹೀಗೆ ಒಳ್ಳೆಯ ವ್ಯಕ್ತಿಯಾಗಬೇಕು. ಅವನು ಸಿನಿಮಾ ಹೀರೋ ಆಗಲಿ, ಬ್ಯುಸಿನೆಸ್ಮ್ಯಾನ್ ಆಗಲಿ. ಚಿರು ರೀತಿ ಒಳ್ಳೆಯ ವ್ಯಕ್ತಿಯಾಗಿ ಬೆಳೆಯಲಿ. ಇಷ್ಟೆಲ್ಲ ನಾನು ಏನೇ ವಾಸ್ತವಾಗಿ, ಪ್ರಾಕ್ಟಿಕಲ್ಲಾಗಿ ಮಾತನಾಡಿದರೂ ಚಿರು ಬದುಕಿರಬೇಕು ಅಂತ ತುಂಬಾ ಅನಿಸುತ್ತದೆ. ಅವನು ಇದ್ದು ಈ ಸಂಭ್ರಮ ನೋಡಿದ್ದರೆ ಖಂಡಿತ ಕುಣಿದುಬಿಡುತ್ತಿದ್ದೆ. ಈಗ ನನ್ನ ಬೆನ್ನೆಲುಬು ನನ್ನ ಅಪ್ಪ- ಅಮ್ಮ. ಹೆತ್ತವರ ಪ್ರೀತಿ, ಮಗನ ಸ್ಫೂರ್ತಿ, ಚಿರು ನೆನಪುಗಳು, ಸಿನಿಮಾ ನಟನೆ ಎಂಬ ಭವಿಷ್ಯದ ದಾರಿಯೇ ನನ್ನ ಮುಂದೆ ನಡೆಸಲಿದೆ. ಇಲ್ಲಿಂದ ನನ್ನ ಜೀವನದಲ್ಲಿ ಹೊಸ ಅಧ್ಯಾಯ ಶುರುವಾಗಿದೆ. ಈ ಅಧ್ಯಾಯದಲ್ಲಿ ನಾನು, ನನ್ನ ಮಗು, ಚಿರು ಮತ್ತು ಸಿನಿಮಾ ಇರುತ್ತದೆ. ಮಗು ನೋಡಿದಾಗಲೆಲ್ಲ ಚಿರು ನೆನಪಾಗುತ್ತಾನೆ. ಚಿರು ಕಂಡ ಕನಸು ನಾನು ನನ್ನ ಮಗನ ಮೂಲಕ ನನಸು ಮಾಡುತ್ತೇನೆ ಎಂದು ಹೇಳಿದ ಮೇಘನಾ ರಾಜ್ ಅವರ ಮಗ , ಜೂನಿಯರ್ ಚಿರು ಅವರ ಮುದ್ದಾದ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದ್ದು, ಜೂನಿಯರ್ ಚಿರು ವಿಡಿಯೋ ನೋಡಿ ಚಿರು ಹಾಗೂ ಮೇಘನಾ ಅಭಿಮಾನಿಗಳು ಫುಲ್ ಖುಷ್.