ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಗಗನಕ್ಕೇರುತ್ತಿದೆ. ಇದರ ನಡುವೆ ಎಲೆಕ್ಟ್ರಿಕ್ ವಾಹನಗಳ ಬಗ್ಗೆ ಜನರಲ್ಲಿ ಆಸಕ್ತಿ ಹೆಚ್ಚಾಗುತ್ತಿದೆ. ಇದನ್ನೇ ಈಗ ದೇಶದ ಪ್ರಮುಖ ವಾಹನ ತಯಾರಿಕಾ ಕಂಪೆನಿಗಳು ಬಂಡವಾಳ ಮಾಡಿಕೊಳ್ಳಲು ಮುಂದಾಗಿದ್ದು, ಅದರಂತೆ ಹೊಸ ಮಾದರಿಯ ಎಲೆಕ್ಟ್ರಿಕ್ ವಾಹನಗಳನ್ನು ಪರಿಚಯಿಸುತ್ತಿದೆ. ಇದೀಗ ಬಜಾಜ್ ಕಂಪೆನಿ ಕೂಡ ಮಹತ್ವದ ಹೆಜ್ಜೆಯನ್ನಿಟ್ಟಿದ್ದು, ಹಲವು ನಗರಗಳಲ್ಲಿ ತನ್ನ ನೂತನ ಎಲೆಕ್ಟ್ರಿಕ್ ಸ್ಕೂಟರ್‌ನ ಬುಕ್ಕಿಂಗ್ ಆರಂಭಿಸಿದೆ.
ಈ ಹಿಂದೆ ದೆಹಲಿಯಲ್ಲಿ ನಡೆದ ಲಾಂಚಿಂಗ್ ಕಾರ್ಯಕ್ರಮದಲ್ಲಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಮತ್ತು ಎನ್‌ಐಟಿಐ ಆಯೋಗ್ ಸಿಇಒ ಅಮಿತಾಭ್ ಕಾಂತ್ ಹಸಿರು ನಿಶಾನೆ ತೋರಿಸುವ ಮೂಲಕ ಹೊಸ ಸ್ಕೂಟರ್ಗೆ ಚಾಲನೆ ನೀಡಿದರು. ಹೊಸದಾಗಿ ಬಂದ ಈ ಬಜಾಜ್ ಎಲೆಕ್ಟ್ರಿಕ್ ಸ್ಕೂಟರ್ ನ ಬಗ್ಗೆ ನಾವು ಈ ಲೇಖನದಲ್ಲಿ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ.
2006 ರಲ್ಲಿ ಉತ್ಪಾದನೆಯನ್ನು ನಿಲ್ಲಿಸಲಾಗಿದ್ದ ಚೇತಕ್ ಸ್ಕೂಟರ್ ಅನ್ನು ಎಲೆಕ್ಟ್ರಿಕ್ ಮಾದರಿಯಲ್ಲಿ ಬಜಾಜ್ ಈಗ ಮತ್ತೆ ರಸ್ತೆಗಿಳಿಸಿದೆ. ಇದೀಗ ಅಧಿಕೃತ ಬಜಾಜ್ ಇ-ಸ್ಕೂಟರ್ ಬುಕ್ಕಿಂಗ್ ಆರಂಭಿಸಿರುವುದಾಗಿ ಬಜಾಜ್ ಆಟೋ ಆಡಳಿತ ನಿರ್ದೇಶಕ ರಾಜೀವ್ ಬಜಾಜ್ ತಿಳಿಸಿದ್ದಾರೆ. ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಗೆ ಸ್ಟ್ಯಾಂಡರ್ಡ್ 5-15 ಎಎಂಪಿ ಎಲೆಕ್ಟ್ರಿಕಲ್ ಔಟ್ ಲೆಟ್ಗಳಲ್ಲಿ ಬ್ಯಾಟರಿ ಚಾರ್ಜ್ ಮಾಡಬಹುದಾಗಿದೆ.
ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಆಕರ್ಷಕ ವಿನ್ಯಾಸವನ್ನು ಹೊಂದಿದ್ದು ಸದ್ಯ ಎರಡು ಮಾಡೆಲ್ಗಳಲ್ಲಿ ಬುಕ್ಕಿಂಗ್ಗೆ ಲಭ್ಯವಿದೆ ಅದರಂತೆ ಗ್ರಾಹಕರು ಎಂಟ್ರಿ-ಲೆವೆಲ್ ಅರ್ಬನ್ ಮಾಡೆಲ್ ಮತ್ತು ಟಾಪ್-ಎಂಡ್ ಪ್ರೀಮಿಯಂ ಮಾಡೆಲ್ಗಳಲ್ಲಿ ಬುಕ್ ಮಾಡಿಕೊಳ್ಳಬಹುದು. ಬಜಾಜ್ ಕಂಪೆನಿಯು ತನ್ನ ಬ್ರ್ಯಾಂಡ್ ವ್ಯಾಲ್ಯೂ ವನ್ನು ಹೆಚ್ಚಿಸಿದ್ದ ಜನಪ್ರಿಯ ಬಜಾಜ್ ಚೇತಕ್ನ್ನು ಎಲೆಕ್ಟ್ರಿಕ್ ಮಾಡೆಲ್ನಲ್ಲಿ ಇತ್ತೀಚೆಗೆ ರಿ ಲಾಂಚ್ ಮಾಡಿತ್ತು. ಇದಾಗ್ಯೂ ಇ-ಸ್ಕೂಟರ್ ಕೆಲ ನಗರಗಳಿಗೆ ಸೀಮಿತವಾಗಿತ್ತು.
ಆದರೆ ಇದೀಗ ಕಂಪನಿಯು ಮೂರು ಹೊಸ ನಗರಗಳಲ್ಲಿ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್‌ನ ಬುಕ್ಕಿಂಗ್ ಆರಂಭಿಸಿದೆ. ಇವುಗಳಲ್ಲಿ ಮೈಸೂರು, ಮಂಗಳೂರು ಮತ್ತು ಔರಂಗಾಬಾದ್ ಸೇರಿವೆ. ಅಂದರೆ ನೀವು ಈ ಮೂರು ನಗರಗಳಲ್ಲಿದ್ದರೆ, ಬಜಾಜ್ ಇ-ಸ್ಕೂಟರ್ ಅನ್ನು ಕಂಪೆನಿಯ ಅಧಿಕೃತ ವೆಬ್ಸೈಟ್ ಮೂಲಕ ಬುಕ್ ಮಾಡಬಹುದು.
ಬಜಾಜ್ ಆಟೋಮೊಬೈಲ್ಸ್ 2022 ರ ವೇಳೆಗೆ ಬಜಾಜ್ ಚೇತಕ್ ಸ್ಕೂಟರ್‌ನ ಡೆಲಿವರಿಯನ್ನು 22 ಭಾರತೀಯ ನಗರಗಳಿಗೆ ವಿಸ್ತರಿಸಲು ಯೋಜನೆ ರೂಪಿಸಿದೆ. ಮುಂದಿನ ಕೆಲವು ತಿಂಗಳುಗಳಲ್ಲಿ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ನ್ನು ಚೆನ್ನೈ ಮತ್ತು ಹೈದರಾಬಾದ್‌ನಲ್ಲಿ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದೆ.
ಭಾರತೀಯ ಮಾರುಕಟ್ಟೆಯಲ್ಲಿ ಇರುವ ಎಲೆಕ್ಟ್ರಿಕ್ ಸ್ಕೂಟರ್ಗಳಾದ ಟಿವಿಎಸ್ ಐಕ್ಯೂಬ್, ಅಥರ್ 450 ಎಕ್ಸ್ ಮತ್ತು ಓಲಾ ಇ-ಸ್ಕೂಟರ್ ಜೊತೆಗೆ ಬಜಾಜ್ ಚೇತಕ್ ಎಲೆಕ್ಟ್ರಿಕ್ ಭರ್ಜರಿ ಸ್ಪರ್ಧೆಯೊಡ್ಡುವ ನಿರೀಕ್ಷೆಯಿದೆ. ಓಲಾ ಎಲೆಕ್ಟ್ರಿಕ್ ಸ್ಕೂಟರ್ಗೆ ಜನರಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ. ಇದರ ಬೆನ್ನಲ್ಲೇ ಬಜಾಜ್ ಕೂಡ ಪ್ರಮುಖ ನಗರಗಳಲ್ಲಿ ಬುಕ್ಕಿಂಗ್ ಆರಂಭಿಸುತ್ತಿರುವುದು ವಿಶೇಷ.
ಇದರಲ್ಲಿ ಲಿ-ಅಯಾನ್ ಇಂಟೆಲಿಜೆಂಟ್ ಬ್ಯಾಟರಿ ಮ್ಯಾನೇಜ್ಮೆಂಟ್ ಸಿಸ್ಟಂ ಬಳಸಲಾಗಿದೆ. ಇದು ಚಾರ್ಜ್ ಕಂಟ್ರೋಲ್ ಮಾಡುವುದಲ್ಲದೆ, ಡಿಸ್ ಚಾರ್ಜ್ ಅನ್ನು ನಿರ್ವಹಣೆ ಮಾಡಲಿರುವುದು ವಿಶೇಷ. ಅಷ್ಟೇ ಅಲ್ಲದೆ ಗ್ರಾಹಕರಿಗೆ ಈ ಸ್ಕೂಟರ್ನ್ನು ಮನೆಯಲ್ಲಿಯೇ ಚಾರ್ಚ್ ಮಾಡಿಕೊಳ್ಳುವ ಅವಕಾಶವನ್ನು ಬಜಾಜ್ ಒದಗಿಸಲಿದೆ ಎಂದು ವರದಿ ತಿಳಿಸಿದೆ. ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಆಕರ್ಷಕ ವಿನ್ಯಾಸವನ್ನು ಹೊಂದಿದೆ.
ಸದ್ಯ ಎರಡು ಮಾಡೆಲ್ಗಳಲ್ಲಿ ಬುಕ್ಕಿಂಗ್ಗೆ ಲಭ್ಯವಿದ್ದು, ಅದರಂತೆ ಗ್ರಾಹಕರು ಎಂಟ್ರಿ-ಲೆವೆಲ್ ಅರ್ಬನ್ ಮಾಡೆಲ್ ಮತ್ತು ಟಾಪ್-ಎಂಡ್ ಪ್ರೀಮಿಯಂ ಮಾಡೆಲ್ಗಳಲ್ಲಿ ಬುಕ್ ಮಾಡಿಕೊಳ್ಳಬಹುದು. ಈ ಇಎಲೆಕ್ಟ್ರಾನಿಕ್ ಸ್ಕೂಟರ್ 3.8 ಕಿ.ವ್ಯಾಟ್ ಪವರ್ ಮತ್ತು 4.1 ಕಿ.ವ್ಯಾಟ್ ಗರಿಷ್ಠ ಎಲೆಕ್ಟ್ರಿಕ್ ಮೋಟರ್ ಹೊಂದಿರಲಿದೆ. ಸ್ಕೂಟರ್‌ನಲ್ಲಿ ನೀಡಲಾದ ವಿಶೇಷ ಆಟೋಮ್ಯಾಟಿಕ್ ಟ್ರಾನಿಮಿಷನ್ ಇದ್ದು, ಇದು ಹಿಂದಿನ ಚಕ್ರಗಳಿಗೆ ಹೆಚ್ಚಿನ ಪವರ್ ಒದಗಿಸಲಿದೆ. ಇನ್ನು ಈ ಸ್ಕೂಟರ್ 3kWh ಲಿಥಿಯಂ-ಐಯಾನ್ ಬ್ಯಾಟರಿಯನ್ನು ನೀಡಲಾಗಿದೆ.
ಬಜಾಜ್ ಚೇತಕ್ ಇ-ಸ್ಕೂಟರ್‌ನ ಬ್ಯಾಟರಿ ಸಂಪೂರ್ಣವಾಗಿ ಚಾರ್ಜ್ ಆಗಲು ಸುಮಾರು 5 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಹಾಗೆಯೇ ವೇಗದ ಚಾರ್ಜಿಂಗ್ ಕೇವಲ ಒಂದು ಗಂಟೆಯಲ್ಲಿ 25 ಪ್ರತಿಶತದವರೆಗೆ ಚಾರ್ಜ್ ಮಾಡಬಹುದು. ಇನ್ನು ಎಲೆಕ್ಟ್ರಿಕ್ ಸ್ಕೂಟರ್‌ನ ಬ್ಯಾಟರಿ ಅವಧಿಯು 70,000 ಕಿ.ಮೀ ಅಥವಾ 7 ವರ್ಷಗಳವರೆಗೆ ಇರಲಿದೆ. ಈ ಬ್ಯಾಟರಿಗಳ ಮೇಲೆ ಕಂಪನಿಯು 3 ವರ್ಷಗಳ ಅಥವಾ 50,000 ಕಿ.ಮೀ ವರೆಗೆ ಖಾತರಿ ನೀಡಲಿದೆ.
ಒಂದು ಬಾರಿ ಪೂರ್ಣ ಚಾರ್ಜಿಂಗ್ ಮಾಡಿದ ಬಳಿಕ ಇಕೊ ಸ್ಪೋರ್ಟ್ ಮೋಡ್‌ನಲ್ಲಿ ಈ ಸ್ಕೂಟರ್ 95 ಕಿ.ಮೀ ಮೈಲೇಜ್ ನೀಡಲಿದೆ. ಹಾಗೆಯೇ ಸ್ಪೋರ್ಟ್ ಮೋಡ್‌ನಲ್ಲಿ 85 ಕಿ.ಮೀ ವ್ಯಾಪ್ತಿಯನ್ನು ಕ್ರಮಿಸಬಹುದು. ಬಜಾಜ್ ಚೇತಕ್ ಇಎಲೆಕ್ಟ್ರಾನಿಕ್ ಸ್ಕೂಟರ್ನ್ನು 2 ಸಾವಿರ ರೂಪಾಯಿ ನೀಡಿ ಬುಕ್ಕಿಂಗ್ ಮಾಡಿಕೊಳ್ಳಬಹುದು. ಹಾಗೆಯೇ ಇದರ ಪುಣೆ ಎಕ್ಸ್ ಶೋ ರೂಂ ಬೆಲೆ 1,42,998 ರೂ. (ಅರ್ಬನ್ ಮಾಡೆಲ್) ಮತ್ತು 1,44,987 ರೂ. (ಪ್ರೀಮಿಯಂ ಮಾಡೆಲ್).
ಇನ್ನು ಈ ಸ್ಕೂಟರ್ ಆರು ಬಣ್ಣಗಳಲ್ಲಿ ಲಭ್ಯವಿರಲಿದ್ದು, ಗ್ರಾಹಕರ ಅಭಿರುಚಿಗೆ ತಕ್ಕಂತಹ ಬಣ್ಣಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದರೆ, ನೂತನ ಚೇತಕ್ನಲ್ಲಿ ಪ್ರಕಾಶಮಾನವಾದ ಸ್ವಿಚ್‌ಗಿಯರ್, ಗ್ಲೋವ್‌ಬಾಕ್ಸ್, ರಿಕ್ಟ್ರೆಬಲ್ ಹುಕ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್, ಕೀಲೆಸ್ ಇಗ್ನಿಷನ್, ರಿಯರ್ ಟೈಮ್ ಬ್ಯಾಟರಿ ಲೆವೆಲ್ ಇಂಡಿಕೇಟರ್, ಮುಂದಿನ ಚಕ್ರದಲ್ಲಿ ಡಿಸ್ಕ್ ಬ್ರೇಕ್‌ಗಳನ್ನು ಒಳಗೊಂಡಿರಲಿದೆ.