ಕಾರು ಎಂದರೆ ಯಾರಿಗೆ ತಾನೆ ಇಷ್ಟವಿಲ್ಲ. ಸಾಮಾನ್ಯವಾಗಿ ಜೀವನದಲ್ಲಿ ಒಂದು ಬಾರಿಯಾದರೂ ಕಾರನ್ನು ಖರೀದಿ ಮಾಡಬೇಕು ಎಂಬ ಬಯಕೆ ಎಲ್ಲರಿಗೂ ಇದ್ದೆ ಇರುತ್ತದೆ. ಈಗಿನ ದಿನಗಳಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಏರಿಕೆ ಆಗುತ್ತಿರುವುದರಿಂದ ಕಾರು ಖರೀದಿ ಮಾಡುವುದು ಕಡಿಮೆ ಆಗಿದೆ. ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಏರಿಕೆ ಆಗಿರುವ ಪ್ರಸ್ತುತ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಸಂಖ್ಯೆ ಜಾಸ್ತಿ ಆಗಿರುವುದರಿಂದ ಜನರು ಯಾವ ವಾಹನವನ್ನು ಖರೀದಿ ಮಾಡಬೇಕು ಎಂಬ ಸಮಸ್ಯೆಯಾಗಿದೆ.
ಹೀಗಿರುವಾಗ ದೇಶದಲ್ಲಿ ಅತಿ ಕಡಿಮೆ ಬೆಲೆಯ ಮತ್ತು ಒಂದುಬಾರಿ ಚಾರ್ಜ್ ಹಾಕಿದರೆ 300 ಕಿಲೋಮೀಟರ್ ಚಲಿಸುವ ಕಾರು ಬಿಡುಗಡೆಯಾಗಿದೆ ಇದು ಜನರ ಗಮನವನ್ನು ಸೆಳೆದಿದೆ ಎಂದು ಹೇಳಬಹುದು. ಹಾಗಾದರೆ ಈ ಕಾರು ಯಾವುದು ಮತ್ತು ಇದರ ಬೆಲೆ ಎಷ್ಟು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ಎಲೆಕ್ಟ್ರಿಕ್ ವಾಹನ ಪ್ರಿಯರಿಗೆ ಭರ್ಜರಿ ಸಿಹಿಸುದ್ದಿ ಬಂದಿದೆ. ಚೀನಾದ ಕಾರು ಉತ್ಪಾದಕ ವುಲಿಂಗ್ ಹಾಂಗ್‌ಗುವಾಂಗ್ ಜಗತ್ತಿನ ಅತ್ಯಂತ ಅಗ್ಗದ ಇವಿ ಕಾರನ್ನು ಬಿಡುಗಡೆ ಮಾಡಲಿದೆ. ನ್ಯಾನೋ ಹೆಸರಿನ ಈ ಕಾರನ್ನು ಟಾಟಾ ಮೋಟಾರ್ಸ್ ಉತ್ಪಾದಿಸಿರುವ ಅತ್ಯಂತ ಅಗ್ಗದ ಕಾರಿನಿಂದ ಸ್ಪೂರ್ತಿ ಪಡೆದು ನಿರ್ಮಿಸಿದೆ ಎಂದು ತಿಳಿದುಬಂದಿದೆ. ವುಲಿಂಗ್ ಹಾಂಗ್‌ಗುವಾಂಗ್ ನ ಅತ್ಯಂತ ಸಣ್ಣ ಮತ್ತು ಅತ್ಯಂತ ಅಗ್ಗದ ಕಾರು ಇದಾಗಿರಲಿದ್ದು ಆರಂಭಿಕ ಹಂತದಲ್ಲಿ 2.3 ಲಕ್ಷ ರೂಪಾಯಿಗೆ ಲಭ್ಯವಿರಬಹುದು ಎಂದು ವರದಿಗಳು ತಿಳಿಸುತ್ತಿವೆ.
ಟಿಯಾಂಜಿನ್ ಅಂತರರಾಷ್ಟ್ರೀಯ ಆಟೋ ಪ್ರದರ್ಶನದ 2021ರ ಅವತರಣಿಕೆಯಲ್ಲಿ ಈ ಕಾರನ್ನು ಪ್ರದರ್ಶಿಸಲಾಗಿದೆ. ಈ ಕಾರಿನಲ್ಲಿ ಇಬ್ಬರು ಪ್ರಯಾಣಿಕರು ಪ್ರಯಾಣಿಸಬಹುದು, ಈ ಕಾರು ಕಡಿಮೆ ವ್ಯಾಸದಲ್ಲಿ ತಿರುಗಬಲ್ಲದು ಎಂದು ಕಂಪನಿ ಹೇಳಿದೆ. ಇನ್ನು ಈ ಕಾರು ಕಡಿಮೆ ವೇಗದಲ್ಲಿ ಚಲಿಸಬೇಕಾದಂಥ ನಗರದ ರಸ್ತೆಗಳಿಗೆ ಹೇಳಿ ಮಾಡಿಸಿದಂತಿದೆ. ಲಿಥಿಯಂ ಅಯಾನ್ ಬ್ಯಾಟರಿ ಚಾಲಿತ ಕಾರು ಇದಾಗಿದ್ದು 2,497 ಮಿಮೀ ಉದ್ದ, 1,526 ಮಿಮೀ ಅಗಲ ಹಾಗೂ 1,616 ಮಿಮೀ ಎತ್ತರವಿದೆ. 85 ನ್ಯೂಟನ್ ಮೀಟರ್‌ನಷ್ಟು ಟಾರ್ಕ್ ಉತ್ಪಾದಿಸಬಲ್ಲ 33 ಪಿಎಸ್ ಎಲೆಕ್ಟ್ರಿಕ್ ಮೋಟರ್ ಹೊಂದಿರುವ ಈ ಕಾರು ಒಮ್ಮೆ ಚಾರ್ಜ್ ಮಾಡಿದರೆ 300 ಕಿಮೀ ಚಲಿಸಬಲ್ಲದು.
ವುಲಿನ್ ಹಾಂಗ್‌ಗುವಾಂಗ್‌ನ ಮಿನಿ ಹೆಸರಿನ ಇವಿ ಕಾರು ಈಗಾಗಲೆ ಒಂದು ಲಕ್ಷಕ್ಕೂ ಅಧಿಕ ಘಟಕಗಳು ಮಾರಾಟ ಕಂಡಿದ್ದು, ಚೀನಾದಲ್ಲಿ ಭಾರಿ ಹವಾ ಎಬ್ಬಿಸಿದೆ. ಇನ್ನೇನು ಕೆಲವೆ ದಿನಗಳಲ್ಲಿ ಮಾರುಕಟ್ಟೆಗೆ ಬರಲಿದ್ದು ಈ ಕಾರು ಗ್ರಾಹಕರ ಮನವನ್ನು ಸೆಳೆಯಲಿದೆ ಎಂದು ಹೇಳಬಹುದು. ಕಡಿಮೆ ಬೆಲೆ ಮತ್ತು ಒಂದು ಬಾರಿ ಚಾರ್ಜ್ ಮಾಡಿದರೆ ಅತಿ ಹೆಚ್ಚು ದೂರ ಕ್ರಮಿಸುವ ಕಾರಣ ಈ ಕಾರನ್ನು ಭಾರತದಲ್ಲಿ ಹೆಚ್ಚು ಜನರು ಖರೀದಿ ಮಾಡುತ್ತಾರೆ ಎಂದು ಅಂದಾಜು ಮಾಡಲಾಗಿದೆ.
ಒಟ್ಟಿನಲ್ಲಿ ಕಾರು ಖರೀದಿಸುವ ಆಸೆ ಇದ್ದು ಖರೀದಿಸುವಷ್ಟು ಹಣ ಇಲ್ಲವೆಂದು ಬೇಸರದಿಂದ ಕಾರು ಖರೀದಿಸುವ ನಿರ್ಧಾರವನ್ನು ಹಿಂತೆಗೆದುಕೊಂಡಿದ್ದರೆ ಹೊಸದಾಗಿ ಬಿಡುಗಡೆಯಾದ ಈ ಕಾರನ್ನು ಖರೀದಿಸಿ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ, ಕಾರು ಖರೀದಿಸುವ ಮನಸ್ಸಿರುವವರು ಈ ಕಾರನ್ನು ಖರೀದಿಸುವ ಮೂಲಕ ನಿಮ್ಮ ಕನಸನ್ನು ನನಸಾಗಿಸಿಕೊಳ್ಳಿ.
ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430