ಕರ್ನಾಟಕದ ಅನುಭವಿ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ರಾಬಿನ್‌ ಉತ್ತಪ್ಪ ಮುಂಬರುವ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಮೂರು ಬಾರಿ ಚಾಂಪಿಯನ್ಸ್‌ ಆದ ಚೆನ್ನೈ ಸೂಪರ್‌ ಕಿಂಗ್ಸ್‌ ಪರ ಆಡಲಿದ್ದಾರೆ. 13ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ನೀರಸ ಪ್ರದರ್ಶನ ತೋರಿದ್ದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಈಗಿನಿಂದಲೇ ಬಲಿಷ್ಠ ತಂಡ ಕಟ್ಟಲು ಭರ್ಜರಿ ಸಿದ್ದತೆ ನಡೆಸುತ್ತಿದೆ. ಇದರ ಭಾಗವಾಗಿ ಜನವರಿ 20ರಂದು ಸಿಎಸ್‌ಕೆ ಫ್ರಾಂಚೈಸಿ ಕೆಲ ಆಟಗಾರರಿಗೆ ಗೇಟ್‌ಪಾಸ್‌ ನೀಡಿದೆ. ಇದರ ಕುರಿತಾಗಿ ಹೆಚ್ಚಿನ ಮಾಹಿತಿಯನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

2021ರ ಐಪಿಎಲ್ ಆಟಗಾರರ ಹರಾಜಿಗೂ ಮುನ್ನ ಚೆನ್ನೈ ಸೂಪರ್‌ ಕಿಂಗ್ಸ್‌ ಫ್ರಾಂಚೈಸಿ ಕೊಡಗಿನ ಕುವರ ರಾಬಿನ್ ಉತ್ತಪ್ಪ ಅವರನ್ನು ತಮ್ಮ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಸಿಎಸ್‌ಕೆ ಫ್ರಾಂಚೈಸಿ ಯಶಸ್ವಿಯಾಗಿದೆ. ಐಪಿಎಲ್‌ 2021 ಟೂರ್ನಿಗೂ ಮುನ್ನ ಇರುವ ಆಟಗಾರರ ಮಾರಾಟದ ಅವಧಿಯಲ್ಲಿ ರಾಜಸ್ಥಾನ್‌ ರಾಯಲ್ಸ್‌ ತಂಡ ರಾಬಿನ್‌ ಉತ್ತಪ್ಪ ಅವರನ್ನು ಸಿಎಸ್‌ಕೆ ತಂಡಕ್ಕೆ ಮಾರಿದೆ. ಯುನೈಟೆಡ್‌ ಅರಬ್‌ ಎಮಿರೇಟ್ಸ್‌ ಆತಿಥ್ಯದಲ್ಲಿ ನಡೆದ ಐಪಿಎಲ್ 2020 ಟೂರ್ನಿಯಲ್ಲಿ 35 ವರ್ಷದ ಬಲಗೈ ಬ್ಯಾಟ್ಸ್‌ಮನ್‌ ರಾಯಲ್ಸ್‌ ಪರ ಆಡಿದ 12 ಪಂದ್ಯಗಳಿಂದ ಕೇವಲ 196 ರನ್‌ಗಳನ್ನು ಮಾತ್ರವೇ ಗಳಿಸಿದ್ದರು. ಈ ಮೂಲಕ ಮಿಲಿಯನ್ ಡಾಲರ್ ಕ್ರಿಕೆಟ್‌ ಟೂರ್ನಿಯಾದ ಐಪಿಎಲ್‌ ಟೂರ್ನಿಯ 14ನೇ ಆವೃತ್ತಿಯಲ್ಲಿ ಕನ್ನಡಿಗ ರಾಬಿನ್ ಉತ್ತಪ್ಪ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಕಣಕ್ಕಿಳಿಯಲಿದ್ದಾರೆ. ಆಲ್‌ ಕ್ಯಾಷ್ ಡೀಲ್‌ ಮೂಲಕ ಹರಾಜಿಗೂ ಮುನ್ನವೇ ರಾಜಸ್ಥಾನ ರಾಯಲ್ಸ್ ತಂಡದ ಬ್ಯಾಟ್ಸ್‌ಮನ್ ರಾಬಿನ್‌ ಉತ್ತಪ್ಪ ಅವರನ್ನು ತನ್ನ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಚೆನ್ನೈ ಮೂಲದ ಫ್ರಾಂಚೈಸಿ ಯಶಸ್ವಿಯಾಗಿದೆ.

35 ವರ್ಷದ ರಾಬಿನ್‌ ಉತ್ತಪ್ಪ ಈ ಮೊದಲು ಮುಂಬೈ ಇಂಡಿಯನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಪುಣೆ ವಾರಿಯರ್ಸ್ ಹಾಗೂ ಕೋಲ್ಕತ ನೈಟ್‌ ರೈಡರ್ಸ್‌ ತಂಡವನ್ನು ಪ್ರತಿನಿಧಿಸಿದ್ದರು. ರಾಯಲ್ಸ್‌ ತಂಡದ ಪರ ಆಡಿದ ಒಂದು ವರ್ಷ ಬಹಳಾ ಆನಂದಿಸಿದ್ದೇನೆ. ಫ್ರಾಂಚೈಸಿಯ ಭಾಗವಾಗಿದ್ದು ಅತ್ಯುತ್ತಮ ಅನುಭವ ನೀಡಿದೆ. ಇದೀಗ 2021ರ ಐಪಿಎಲ್‌ನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ಪರ ಆಡುವುದನ್ನು ಬಹಳಾ ಕಾತುರದಿಂದ ಎದುರು ನೋಡುತ್ತಿದ್ದೇನೆ,” ಎಂದು ರಾಬಿನ್‌ ಹೇಳಿಕೊಂಡಿದ್ದಾರೆ. ಉತ್ತಪ್ಪ ಸದ್ಯ ಸೈಯದ್‌ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯಲ್ಲಿ ಕೇರಳ ತಂಡದ ಪರ ಆಡುತ್ತಿದ್ದಾರೆ. ಇನ್ನು ಕಳೆದ ವರ್ಷ ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿ 3 ಕೋಟಿ ರುಪಾಯಿ ನೀಡಿ ರಾಬಿನ್ ಉತ್ತಪ್ಪ ಅವರನ್ನು ಖರೀದಿಸಿತ್ತು, ಇದೀಗ ಉತ್ತಪ್ಪ ಸಿಎಸ್‌ಕೆ ಜೆರ್ಸಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿ ಜತೆಗಿನ ಒಡನಾಟ ಅವಿಸ್ಮರಣೀಯವಾಗಿತ್ತು. ಇದೀಗ 2021ರ ಐಪಿಎಲ್‌ನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವನ್ನು ಪ್ರತಿನಿಧಿಸಲು ಉತ್ಸುಕನಾಗಿದ್ದೇನೆಂದು ರಾಬಿನ್ ಉತ್ತಪ್ಪ ಹೇಳಿದ್ದಾರೆ.

ಎಲ್ಲಾ 13 ಐಪಿಎಲ್ ಆವೃತ್ತಿಗಳನ್ನು ಪ್ರತಿನಿಧಿಸಿರುವ ಉತ್ತಪ್ಪ ಇದುವರೆಗೂ ಒಟ್ಟು 189 ಪಂದ್ಯಗಳನ್ನಾಡಿ 129.99ರ ಸ್ಟ್ರೈಕ್‌ರೇಟ್‌ನಲ್ಲಿ 24 ಅರ್ಧಶತಕ ಸಹಿತ 4607 ರನ್‌ ಬಾರಿಸಿದ್ದಾರೆ. ನಮ್ಮ ತಂಡದ ಭಾಗವಾಗಿದ್ದಾಗ ರಾಬಿನ್‌ ಸಲ್ಲಿಸಿದ ಸೇವೆಗೆ ನಾವು ಧನ್ಯವಾದ ಹೇಳಲು ಬಯಸುತ್ತೇವೆ. ನಾಗ್ಪುರ ಮತ್ತು ಗುವಾಹಟಿಯಲ್ಲಿ ನಡೆದ ತಮ್ಮ ತಂಡದ ಶಿಬಿರದಲ್ಲಿ ತಂಡದ ಸಾಮರ್ಥ್ಯ ಹೆಚ್ಚಿಸುವಲ್ಲಿ ಅವರು ನೆರವಾಗಿದ್ದರು. ಶಿಬಿರದಲ್ಲಿ ವಿಶ್ವಕಪ್‌ ವಿನ್ನರ್‌ಗಳು ನೀಡಿದ ಭಾಷಣದ ವೇಳೆ ರಾಬಿನ್‌ ಅವರ ಮಾತುಗಳು ನಮ್ಮೆಲ್ಲರಿಗೂ ಸ್ಫೂರ್ತಿ ನೀಡಿತ್ತು ಎಂದು ರಾಯಲ್ಸ್‌ ತಂಡದ ಸಿಒಒ ಜೇಕ್ ಲಶ್ ಮೆಕರಮ್ ಹೇಳಿದ್ದಾರೆ. ನಮ್ಮ ತಂಡದಲ್ಲಿ ಆರಂಭಿಕ ಬ್ಯಾಟ್ಸ್‌ಮನ್‌ಗಳ ಆಯ್ಕೆ ಹೆಚ್ಚಿದೆ. ಹೀಗಾಗಿ ಚೆನ್ನೈ ಸೂಪರ್‌ ಕಿಂಗ್ಸ್ ತಂಡ ಬೇಡಿಕೆ ಇಟ್ಟಾಗ ಇದು ಹಸ್ತಾಂತರಕ್ಕೆ ಉತ್ತಮ ಅವಕಾಶ ಎಂದು ಭಾವಿಸಿದೆವು. ಮುಂದಿನ ಆವೃತ್ತಿಯಲ್ಲಿ ಸಿಎಸ್‌ಕೆ ಪರ ರಾಬಿನ್ ಉತ್ತಮ ಆಟವಾಡಲಿ ಎಂದು ಹಾರೈಸುತ್ತೇವೆ,” ಎಂದಿದ್ದಾರೆ. ಇದೇ ವೇಳೆ ರಾಯಲ್ಸ್‌ ತಂಡ ಯುವ ವಿಕೆಟ್‌ಕೀಪರ್‌ ಬ್ಯಾಟ್ಸ್‌ಮನ್‌ ಸಂಜು ಸ್ಯಾಮ್ಸನ್‌ಗೆ ನಾಯಕನ ಪಟ್ಟ ನೀಡಿದೆ. 2014ರ ಐಪಿಎಲ್‌ ಟೂರ್ನಿಯಲ್ಲಿ ಕೆಕೆಆರ್ ಪರ 660 ರನ್‌ ಬಾರಿಸುವ ಮೂಲಕ ಆರೆಂಜ್‌ ಕ್ಯಾಪ್ ಜಯಿಸಿದ್ದ ಉತ್ತಪ್ಪ, ನೈಟ್‌ರೈಡರ್ಸ್‌ ತಂಡ ಎರಡನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಉತ್ತಪ್ಪ ಪ್ರಮುಖ ಪಾತ್ರವಹಿಸಿದ್ದರು.

Leave a Reply

Your email address will not be published. Required fields are marked *