ಕೌಟಿಲ್ಯ ಎಂದೇ ಪ್ರಸಿದ್ಧನಾದ ಚಾಣಕ್ಯ ಪ್ರಾಚೀನ ಭಾರತದ ಅದ್ವಿತೀಯ ಅರ್ಥಶಾಸ್ತ್ರಜ್ಞರಾಗಿದ್ದರು. ಮೌರ್ಯ ಸಾಮ್ರಾಜ್ಯ ಸ್ಥಾಪನೆಯಲ್ಲಿ ಚಾಣಕ್ಯನ ಪಾತ್ರ ಮಹತ್ವದ್ದಾಗಿದೆ. ವಿಷ್ಣುಗುಪ್ತ ಎಂಬುದು ಚಾಣಕ್ಯನ ನಿಜವಾದ ಹೆಸರು. ಚಣಕನ ಮಗನಾದ್ದರಿಂದ ಚಾಣಕ್ಯನೆಂದು ಹೆಸರು ಬಂದಿತೆಂದು ಹೇಳಲಾಗುತ್ತದೆ. ಚಾಣಕ್ಯರು ಅನೇಕ ವಿಚಾರಗಳನ್ನು ತಮ್ಮ ನೀತಿಯಲ್ಲಿ ಹೇಳಿದ್ದಾರೆ. ಅತ್ಯಂತ ಕ್ರೂರಿ ಮತ್ತು ವಿಷಕಾರಿ ಮತ್ತು ಗೊಂದಲಕ್ಕೊಳಗಾದ ಮಹಿಳೆಯರಿಂದ ಪುರುಷರು ದೂರವಿರಬೇಕೆಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ. ಆದ್ದರಿಂದ ನಾವು ಇಲ್ಲಿ ಇದರ ಬಗೆಗಿನ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ.
ವಿಷಕಾರಿಯೇ ಮನುಷ್ಯತ್ವ ಉಳ್ಳ ಮಹಿಳೆಯರಿಂದ ಪುರುಷರು ದೂರವಿರಬೇಕು ಎಂದು ಚಾಣಕ್ಯರು ಹೇಳುತ್ತಾರೆ. ಆದರೆ ಕಾಮದ ವಿಷಯದಲ್ಲಿ ಸಿಕ್ಕಿಬಿದ್ದ ಪುರುಷನು ಅಂತಹ ಮಹಿಳೆಯಿಂದ ದೂರವಿರುವುದು ಅಸಾಧ್ಯವಾಗಿದೆ. ಅಂತಹ ಪುರುಷನು ಮಹಿಳೆಯರನ್ನು ನೋಡದೆ ಇರುವುದಿಲ್ಲ. ಅವನು ಮಹಿಳೆಯನ್ನು ನೋಡಲು ಉತ್ಸುಕನಾಗಿರುತ್ತಾನೆ. ಮಹಿಳೆಯರನ್ನು ನೋಡುವ ಆಸೆಯಿಂದ ಅವನ ಕಣ್ಣುಗಳು ಯಾವಾಗಲೂ ಮಹಿಳೆಯರನ್ನೇ ಹುಡುಕುತ್ತಲೇ ಇರುತ್ತದೆ. ಈ ಪುರುಷರು ಮಹಿಳೆಯರನ್ನು ನೋಡಿದಾಕ್ಷಣ ಅವರ ಬಗ್ಗೆ ಕೆಟ್ಟ ಆಲೋಚನೆಗಳನ್ನು ಕೂಡ ಹೊಂದಿರುತ್ತಾನೆ. ಇಂತಹ ವ್ಯಕ್ತಿಯನ್ನು ಸ್ವರ್ಗದಲ್ಲೇ ಇರಿಸಿದರು ಅಥವಾ ನರಕದಲ್ಲೇ ಇರಿಸಿದರು ಅವನು ಯಾವಾಗಲೂ ಮಹಿಳೆಯರ ಉರಿಯುತ್ತಿರುವ ಜ್ವಾಲೆಯಲ್ಲಿ ಸುಡಲು ಸಿದ್ಧನಾಗಿರುತ್ತಾನೆ.
ಅಂತಹ ಮನುಷ್ಯನು ಕಲಿಕೆಯನ್ನು ಸರಿಯಾಗಿ ಸ್ವೀಕರಿಸಲು ಸಾಧ್ಯವಿಲ್ಲ ಅಥವಾ ಅವನು ತನ್ನ ಹೆತ್ತವರಿಗೆ ಸೇವೆ ಸಲ್ಲಿಸುವುದಿಲ್ಲ. ಅವನು ಕೇವಲ ತಮಾಷೆಯ ಮನೋ ಹವ್ಯಾಸವನ್ನು ಹೊಂದಿರುತ್ತಾನೆ. ಅಂತಹವನು ಯಾವಾಗಲು ಮಹಿಳೆಯರಿಂದ ದೂರವಿರಲು ಇಚ್ಚಿಸುವುದಿಲ್ಲ. ಅಂತಹ ಮನುಷ್ಯನಿಗೆ ಹಣವೂ ಕೂಡ ಸಂಪಾದಿಸಲು ಸಾಧ್ಯವಾಗುವುದಿಲ್ಲ ಮತ್ತು ತನ್ನ ಬುದ್ದಿ ಶಕ್ತಿಯನ್ನು ತಾನೇ ನಾಶಪಡಿಸಿಕೊಳ್ಳುತ್ತಾನೆ. ಇಂತಹ ವಿಕೃತ ಮನುಷ್ಯನು ತನ್ನ ಮನಸ್ಸನ್ನು ನಿಗ್ರಹಿಸಿಕೊಳ್ಳಲೆ ಬೇಕು ಮತ್ತು ಪುಣ್ಯ ಕಾರ್ಯವನ್ನು ಮಾಡಲೇಬೇಕು. ಚಾಣಕ್ಯರು ತಮ್ಮ ನೀತಿಯಲ್ಲಿ ಅಂತಹ ಕೆಳಮಟ್ಟದ ಪುರುಷರ ಬಗ್ಗೆ 4 ವಿವರಣೆಯನ್ನು ನೀಡಿದ್ದಾರೆ. ಮೊದಲನೆಯದಾಗಿ ಅತ್ಯಂತ ಬಡ ವ್ಯಕ್ತಿಯು ಮಹಿಳೆಯನ್ನು ಹೊಂದಲು ಬಯಸಬಾರದು.
ಏಕೆಂದರೆ ಹಣದ ಮೇಲಿನ ಆಸೆಯಿಂದ ಅವನ ಹೆಂಡತಿ ಇತರ ಪುರುಷನೊಂದಿಗೆ ದೈಹಿಕ ಸಂಪರ್ಕವನ್ನು ಕೂಡ ಇಚ್ಛಿಸುತ್ತಾಳೆ. ಎರಡನೆಯದಾಗಿ ಚಾಣಕ್ಯ ಹೇಳುವಂತೆ ವಯಸ್ಸಾದ ವ್ಯಕ್ತಿಯು ಮಹಿಳೆಯ ಆತ್ಮವನ್ನು ಸಂತೋಷಗೊಳಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ವೃದ್ಧರು ತಮ್ಮ ಜೀವನವನ್ನು ದೇವರ ಭಕ್ತಿಗೆ ಮುಡಿಪಾಗಿರಬೇಕು. ಮೂರನೆಯದಾಗಿ ಪುರುಷನು ನಪುಂಸಕ ಆಗಿದ್ದರೆ ಅವನು ಮಹಿಳೆಯನ್ನು ವಿವಾಹವಾಗಬಹುದು. ಅದು ಮಹಿಳೆಗೆ ಮಾಡುವಂತಹ ದ್ರೋಹವಾಗಿದೆ. ನಾಲ್ಕನೆಯದಾಗಿ ಬುದ್ದಿವಂತ ಪುರುಷನು ಕ್ರೂರ ಮತ್ತು ದುಷ್ಟ ಮಹಿಳೆಯನ್ನು ಮದುವೆಯಾಗಬಾರದು. ಈ ರೀತಿಯಾಗಿ ಚಾಣಕ್ಯರು ತಮ್ಮ ನೀತಿಯಲ್ಲಿ ವಿವರಿಸಿದ್ದಾರೆ.