ಆಚಾರ್ಯ ಚಾಣಕ್ಯರು ನಿಮಗೆಲ್ಲರಿಗೆ ತಿಳಿದಿರುವ ಹಾಗೆ ಜಗದ್ವಿಖ್ಯಾತರು ಇದುವರೆಗೆ ಅವರು ಹೇಳಿರುವ ಮಾತುಗಳನ್ನು ಸುಳ್ಳು ಎನ್ನುವವರು ಯಾರು ಇಲ್ಲ ಯಾಕಂದ್ರೆ ಅವರ ಮಾತುಗಳೇ ಹಾಗೆ ಈಗಿನ ಜಗತ್ತಿನ ವಾಸ್ತವತೆಯನ್ನು ಅವರು ಅವರ ಮಾತುಗಳಲ್ಲಿ ಬಿಚ್ಚಿಟ್ಟಿದ್ದಾರೆ. ಪ್ರಪಂಚದ ಎಲ್ಲ ವಿಷಯಗಳಲ್ಲೂ ವಿಚಾರ ಧಾರೆಗಳನ್ನು ಕರಗತ ಮಾಡಿಕೊಂಡಂತಹ ಬಹಳ ಬುದ್ಧಿವಂತ ಚಾಣಾಕ್ಷ ಈ ಆಚಾರ್ಯ ಚಾಣಕ್ಯ ಅದಕ್ಕೇ ತಾನೇ ಅವರು ರಾಜ ಗುರುವಾಗಿದ್ದುದು ಹೀಗೆ ಹಲವಾರು ರೀತಿಯ ಸಂದೇಶಗಳನ್ನು ಜಗತ್ತಿಗೆ ನೀಡಿರುವ ಅವರು ಸ್ತ್ರೀಯರ ಬಗ್ಗೆ ಬಹಳ ಕಟುವಾದ ಸತ್ಯವನ್ನೂ ಕೂಡ ಬಿಚ್ಚಿಟ್ಟಿದ್ದಾರೆ, ಆ ಬಗ್ಗೆ ನಾವು ಕಲೆಹಾಕಿರುವ ಒಂದಷ್ಟು ಮಾಹಿತಿಯನ್ನು ನಿಮ್ಮಮುಂದಿಡ್ತೇವೆ ಬನ್ನಿ.
ಚಾಣಕ್ಯ ನೀತಿಯ ಪ್ರಕಾರ ಸ್ತ್ರೀಯ ಗುಣ ಹೇಗಿರುತ್ತದೆಂದು ನೋಡುವುದಾದರೆ ಸ್ತ್ರೀಯು ಒಬ್ಬನೊಡನೆ ಮಾತನಾಡುತ್ತಿದ್ದರೆ ಇನ್ನೊಬ್ಬನನ್ನು ನೋಡುತ್ತಾ ಇರುತ್ತಾಳೆ, ಮತ್ತೊಬ್ಬನನ್ನು ಹೃದಯದಲ್ಲಿ ಚಿಂತಿಸುತ್ತಾ ಇರುತ್ತಾಳೆ. ಸ್ತ್ರೀಯು ಒಬ್ಬನನ್ನೇ ಪ್ರೀತಿಸಲು ಸಾಧ್ಯವೇ ಇಲ್ಲ, ಇದು ಆಚಾರ್ಯ ಚಾಣಕ್ಯ ಹೇಳಿರುವ ಮಾತು ಕೇಳಲು ಬಹಳ ಕಟುವಾಗಿದ್ದರು ನಾವಿದನ್ನು ನಂಬಲೇಬೇಕು.
ಅಷ್ಟೇ ಅಲ್ಲದೆ ಎಂತಹ ಸ್ತ್ರೀಯನ್ನು ಮದುವೆಯಾಗಬೇಕೆಂಬುದನ್ನು ಕೂಡ ಅವರ ಮಾತುಗಳಲ್ಲಿ ಸ್ಪಷ್ಟಪಡಿಸಿದ್ದಾರೆ ಅದನ್ನು ನೋಡುವುದಾದರೆ,ಚಾಣಕ್ಯ ನೀತಿಯ ಪ್ರಕಾರ ಬುದ್ಧಿಶಾಲಿಯಾದವನು ಅಷ್ಟೇನೂ ರೂಪಸಿ ಅಲ್ಲದಿದ್ದರೂ ಅಂಗವಿಕಲೆಯಾದರೂ ಉತ್ತಮ ಮನೆತನದ ಕನ್ಯೆಯನ್ನೇ ವಿವಾಹವಾಗಬೇಕು ಆದರೆ ತನಗಿಂತ ಕೆಳಮಟ್ಟದ ಕುಟುಂಬದಿಂದ ಬಂದಂತಹ ಹೆಣ್ಣನ್ನು ಅವಳು ಸುಂದರಿಯಾದರೂ ಸಹ ವಿವಾಹವಾಗಬಾರದು ಸಾಮಾಜಿಕ ಸಮಾನ ಸ್ಕಂದರ ನಡುವೆ ಮಾತ್ರ ವಿವಾಹ ಯೋಗ್ಯವಾದದ್ದು ಇದು ಆಚಾರ್ಯ ಚಾಣಕ್ಯರು ಎಂತಹ ಹುಡುಗಿಯನ್ನು ಮದುವೆಯಾಗಬೇಕು ಎಂಬುದರ ಬಗ್ಗೆ ಹೇಳಿರುವ ಮಾತಾಯಿತು
ಅಲ್ಲದೇ ಚಾಣಕ್ಯರು ಪತ್ನಿಯು ಹೇಗಿರಬೇಕು ಎಂಬುದರ ಬಗ್ಗೆಯೂ ಅವರ ಮಾತುಗಳಲ್ಲಿ ಸ್ಪಷ್ಟಪಡಿಸಿದ್ದಾರೆ, ಅದೇನೆಂದರೆ ದುಷ್ಟಳಾದ ಹೆಂಡತಿ ತೋರಿಕೆಯ ಸ್ನೇಹಿತ ವಾಚಾಳಿ ಸೇವಕ ಮತ್ತು ಹಾವಿರುವ ಮನೆಯಲ್ಲಿ ವಾಸ ಮಾಡುವುದು ಇವು ಸಾವಿಗೆ ಸಮಾನವಾದವು ಮತ್ತು ಪತ್ನಿಯಾದವಳು ಪವಿತ್ರಳು ಪತಿವ್ರತೆಯೂ ಪತಿಗೆ ಇಷ್ಟವಾಗುವಂತೆ ನಡೆದುಕೊಳ್ಳುವವಳೇ ನಿಜವಾದ ಸತಿ. ಹೌದು ಚಾಣಕ್ಯನ ಪ್ರಕಾರ ಇದು ಸತ್ಯಕ್ಕೆ ಬಹಳ ಹತ್ತಿರವಾದ ಮಾತು ಯಾಕಂದ್ರೆ ಗಂಡನಿಗೆ ಇಷ್ಟವಾಗದ ರೀತಿ ನಡೆದುಕೊಳ್ಳುವ ಹೆಂಡತಿ ಇದ್ದರೆಷ್ಟೂ ಬಿಟ್ಟರೆಷ್ಟೂ ಇನ್ನೂ ಪವಿತ್ರವಲ್ಲದ ಪತಿವ್ರತೆಯೂ ಅಲ್ಲದ ಹೆಂಡತಿ ಹೇಗೆ ತಾನೇ ಗಂಡನಿಗೆ ಇಷ್ಟವಾಗುವಂತೆ ನಡೆದುಕೊಂಡಾಳು.
ಹೀಗೆ ನೋಡುವುದಾದರೆ ಆಚಾರ್ಯ ಚಾಣಕ್ಯರನ್ನು ನಾವು ಸ್ತ್ರೀ ದ್ವೇಷಿ ಎನ್ನಬೇಕಾಗುತ್ತದೆ, ಆದರೇ ಚಾಣಕ್ಯರು ಸ್ತ್ರೀ ದ್ವೇಷಿಯಲ್ಲ ಅದು ನಿಜಾಂಶವಷ್ಟೇ ಅಷ್ಟೇ ಅಲ್ಲದೇ ಒಬ್ಬ ಗಂಡನಾದವನು ತನ್ನ ಪತ್ನಿಯನ್ನ ಹೇಗೆ ನೋಡಿಕೊಳ್ಳಬೇಕು ಎಂಬುದರ ಬಗ್ಗೆಯೂ ಸಹ ಚಾಣಕ್ಯ ಹೇಳಿದ್ದಾರೆ. ಚಾಣಕ್ಯ ನೀತಿಯ ಪ್ರಾಕಾರ ಪತ್ನಿಯ ಮನಸ್ಸನ್ನು ನೋಯಿಸದೇ ಆಕೆಯಿಂದ ಪಡೆಯು ಸುಖವೇ ನಿಜವಾದ ಸುಖವೆಂದು ಮತ್ತು ಆಕೆ ನೀಡುವ ಊಟವೆ ಮೃಷ್ಟಾನ್ನವೆಂದು ತಿಳಿದು ಮತ್ತು ಆಕೆಯಿಂದ ಅತಿಯಾದ ಸುಖವನ್ನು ಅಪೇಕ್ಷಿಸುವುದು ಕೂಡ ಅಪಾಯಕಾರಿ ಇದೆ ರೀತಿ ಅಧ್ಯಯನ ಜಪ ದಾನ ಈ ವಿಷಯಗಳ ಬಗ್ಗೆ ಸಾಕು ಸಾಕೆಂಬ ಭಾವನೆಯನ್ನು ಉನ್ನತಿಯನ್ನು ಬಯಸುವ ಮನುಷ್ಯ ಎಂದಿಗೂ ಹೊಂದಲಾರ ಎಂದು ಆಚಾರ್ಯ ಚಾಣಕ್ಯ ಬಹಳ ಅರ್ಥ ಪೂರ್ಣವಾಗಿ ಸ್ಪಷ್ಟಪಡಿಸಿದ್ದಾರೆ.